ಸಾಂದರ್ಭಿಕ ಚಿತ್ರ
ಇಲಿಗಳು (Rats) ಮನೆಗೆ ನುಗ್ಗಿದರೆ ಸಾಕು ತರಕಾರಿಗಳು ಮಾಯವಾಗುತ್ತವೆ, ಬಟ್ಟೆಗಳು ಪೀಸ್ಪೀಸ್ ಆಗುತ್ತವೆ. ಹಂಚಿನ ಮನೆಯಾಗಿದ್ದರೆ ಅಡುಗೆ ಮನೆಯಲ್ಲಿ ಅಥವಾ ಸ್ಟಾಕ್ ರೂಮ್ನಲ್ಲಿ ಯಾವುದಾದರೊಂದು ವಸ್ತು ತೆಗೆದರೆ ಸಾಕು ಇಲಿಯೊಂದು ಛಂಗನೇ ಹಾರಿ ಹೋಗುತ್ತದೆ. ಈ ವೇಳೆ ಹುಡುಯಿಯರಾದರೆ ಅಥವಾ ಮಹಿಳೆಯರಾದರೆ ಭಯದಿಂದ ಕೈಯಲ್ಲಿದ್ದ ಡಬ್ಬವನ್ನು ಕೆಳಗೆ ಬಿಡುವ ಸ್ಥಿತಿ. ಇಲಿಗಳ ಕಾಟ ತಾಳಲಾಗದೆ ಅಯ್ಯೋ ಏನಪ್ಪಾ ಮಾಡುವುದು ಈಗ ಎಂದು ಅಂದುಕೊಳ್ಳುವವರಿಗೆ ಇಲಿಗಳ ಕಾಟ ತಪ್ಪಿಸುವುದು ಹೇಗೆ ಎಂದು ತಿಳಿಸುತ್ತೇವೆ. ಈ ಸುದ್ದಿಯನ್ನು ಸಂಪೂರ್ಣವಾಗಿ ಓದಿ.
ಇದನ್ನೂ ಓದಿ: ಮಳೆಗಾಲದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಹೇಗೆ? ತಜ್ಞರ ಸಲಹೆ ಏನು? ಇಲ್ಲಿದೆ ಮಾಹಿತಿ
- ಈರುಳ್ಳಿಯ ವಾಸನೆ ಅಂದರೆ ಇಲಿಗಳಿಗೆ ಆಗಿಬರುವುದಿಲ್ಲ, ಏಕೆಂದರೆ ಅದು ಅವುಗಳಿಗೆ ವಿಷಕಾರಿಯಾಗಿದೆ. ಇಲಿಗಳು ಓಡಾಡುವ ಜಾಗದಲ್ಲಿ ಈರುಳ್ಳಿಯನ್ನು ಸುಲಿದು ಇಡಬಹುದು. ಅದಾಗ್ಯೂ ಪ್ರತಿದಿನ ಈರುಳ್ಳಿಯನ್ನು ಬದಲಾಯಿಸುತ್ತಿರಬೇಕು.
- ಇಲಿಗಳು ಮತ್ತು ಕೀಟಗಳನ್ನು ನಿವಾರಿಸಲು ಕೆಂಪು ಮೆಣಸಿನಕಾಯಿ ಅನ್ನು ಬಹಳ ಹಿಂದಿನಿಂದಲೂ ಬಳಸಲಾಗುತ್ತದೆ. ಇಲಿಗಳು ಎಲ್ಲಿಂದ ಬರುತ್ತವೆ ಮತ್ತು ಅವುಗಳ ಅಡಗುದಾಣ ಎಲ್ಲಿದೆಯೋ ಅಲ್ಲಿಗೆ ಕೆಂಪು ಮೆಣಸಿನಕಾಯಿಯ ಪುಡಿಯನ್ನು ಸಿಂಪಡಿಸಿ.
- ಇಲಿಗಳನ್ನು ಕೊಲ್ಲಲು ಬೆಳ್ಳುಳ್ಳಿ ಪರಿಣಾಮಕಾರಿಯಾಗಿದೆ. ಬೆಳ್ಳುಳ್ಳಿಯನ್ನು ಸಣ್ಣದಾಗಿ ಕೊಚ್ಚಿದ ನೀರಿನಲ್ಲಿ ಮಿಶ್ರಣ ಮಾಡಿ. ಅಥವಾ ಬೆಳ್ಳುಳ್ಳಿಯ ಮೊಗ್ಗುಗಳನ್ನು ಅವುಗಳು ಬರುವ ಜಾಗದಲ್ಲಿ ಇಡಬಹುದು.
- ಇಲಿಗಳನ್ನು ಓಡಿಸಲು ಲವಂಗ ಅಥವಾ ಲವಂಗದ ಎಣ್ಣೆಯನ್ನು ಸಹ ಬಳಸಬಹುದು. ಲವಂಗದ ಮೊಗ್ಗುಗಳನ್ನು ಮಸ್ಲಿನ್ ಬಟ್ಟೆಯಲ್ಲಿ ಸುತ್ತಿ ಅಲ್ಲಿ ಇಲ್ಲಿ ಇಟ್ಟುಕೊಳ್ಳಿ. ಲವಂಗದ ಎಣ್ಣೆಯನ್ನು ಸಹ ಅದೇ ರೀತಿಯಲ್ಲಿ ಬಳಸಬಹುದು.
- ಪುದೀನಾ ವಾಸನೆಯನ್ನು ಇಲಿಗಳು ಸಹಿಸುವುದಿಲ್ಲ. ಹೀಗಾಗಿ ಕಾಟನ್ ಉಣ್ಣೆಯಲ್ಲಿ ಪುದೀನಾ ಹಾಕಿ ಇಲಿಗಳು ಓಡಾಡುವ ಜಾಗದಲ್ಲಿ ಬಿಡಿ. ಇಲಿಗಳು ಸ್ವತಃ ಓಡಿಹೋಗಲು ಪ್ರಾರಂಭಿಸುತ್ತವೆ.
ಗಮನಿಸಿ: ಸಲಹೆಗಳು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಅರ್ಹ ವೈದ್ಯಕೀಯ ಅಭಿಪ್ರಾಯಕ್ಕೆ ಯಾವುದೇ ರೀತಿಯಲ್ಲಿ ಪರ್ಯಾಯವಾಗಿಲ್ಲ. ಹೆಚ್ಚಿನ ವಿವರಗಳಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ವೈದ್ಯರನ್ನು ಸಂಪರ್ಕಿಸಿ. ಈ ಮಾಹಿತಿಯ ಹೊಣೆಯನ್ನು ಟಿವಿ9 ಹೇಳಿಕೊಳ್ಳುವುದಿಲ್ಲ.
ಇದನ್ನೂ ಓದಿ: High Uric Acid: ಯೂರಿಕ್ ಆಸಿಡ್ ಮಟ್ಟ ಹೆಚ್ಚಾದರೆ ತೊಂದರೆ ನಿಶ್ಚಿತ, ಯೂರಿಕ್ ಆಸಿಡ್ ಮಟ್ಟ ಕಡಿಮೆ ಮಾಡಲು ಇಲ್ಲಿವೆ ಕೆಲವು ಸಲಹೆಗಳು