ಪರಸ್ಪರ ನಂಬಿಕೆ ಇಲ್ಲದಿದ್ದಾಗ ಪ್ರೀತಿ ಹುಟ್ಟಿದ್ದಷ್ಟೇ ವೇಗವಾಗಿ ಸಂಬಂಧಗಳು ಕಡಿದುಬೀಳುತ್ತವೆ. ಪ್ರೀತಿ ಮಾಡಿದ ಬಳಿಕ ಅವರನ್ನೇ ಮದುವೆಯಾದರೆ ಅದು ಜೀವನದ ಅತ್ಯುತ್ತಮ ಕ್ಷಣವಾಗುತ್ತದೆ. ಅದೇ ಪ್ರೀತಿಸಿದವರನ್ನು ಬಿಟ್ಟು ಬೇರೆಯವರನ್ನು ಮದುವೆಯಾದಾಗ ಅತೀ ನೋವಿನ ಕ್ಷಣ ಅದಾಗಿರುತ್ತದೆ.
ಭಾರತದಲ್ಲಿ ಮದುವೆಯ ನಂತರವೇ ಸಂಬಂಧವನ್ನು ಯಶಸ್ವಿ ಎಂದು ಪರಿಗಣಿಸುತ್ತಾರೆ, ಆದರೆ ಹಾಗೆ ಯೋಚಿಸುವುದು ತಪ್ಪು. ಕೆಲವೊಮ್ಮೆ ದಂಪತಿ ಭಾವನಾತ್ಮಕವಾಗಿ ತುಂಬಾ ಹತ್ತಿರವಿದ್ದರೂ ಸಹ ಕೆಲವು ಕಾರಣಗಳಿಗಾಗಿ ಸಂಬಂಧವನ್ನು ಅಂತ್ಯಗೊಳಿಸಬೇಕಾಗುತ್ತದೆ.
ಸಂಬಂಧ ಮುರಿದ ಬಳಿಕ ಜೀವನವು ಸಂಪೂರ್ಣವಾಗಿ ಬದಲಾಗುತ್ತದೆ. ಕೆಲವರು ತಮ್ಮ ಜೀವನವನ್ನು ವ್ಯರ್ಥ ಮಾಡಿಕೊಳ್ಳುತ್ತಾರೆ, ಇನ್ನೂ ಕೆಲವರು ಜೀವನಕ್ಕೆ ಒಳ್ಳೆಯ ದಾರಿಯನ್ನು ಕಂಡುಕೊಂಡು ಮುನ್ನುಗ್ಗುತ್ತಾರೆ. ಹಾಗಾದರೆ ಹುಡುಗಿಯರು ಬ್ರೇಕ್ ಅಪ್ ಬಳಿಕ ಏನು ಮಾಡುತ್ತಾರೆ ಎನ್ನುವ ಕುತೂಹಲಕಾರಿ ವಿಚಾರವನ್ನು ನಿಮ್ಮ ಮುಂದಿಡುತ್ತಿದ್ದೇವೆ.
-ಮೊದಲು ಸಂಗಾತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಬ್ಲಾಕ್ ಮಾಡುತ್ತಾರೆ
-ಸಂಬಂಧ ಮುರಿದುಬಿದ್ದ ಬಳಿಕ ಸಂಗಾತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಮೊದಲು ಬ್ಲಾಕ್ ಮಾಡುತ್ತಾರೆ, ಅದು
-ಮೊಬೈಲ್ ನಂಬರ್ನಿಂದ ಹಿಡಿದು, ಟ್ವಿಟ್ಟರ್, ಫೇಸ್ಬುಕ್, ಇನ್ಸ್ಟಾಗ್ರಾಂ ಸೇರಿದಂತೆ ಯಾವುದೇ ಜಾಲತಾಣವಿರಬಹುದು.
-ಹಾಗೆಯೇ ಸಂಗಾತಿ ಜತೆಗಿದ್ದ ಫೋಟೋಗಳನ್ನು ಮೊದಲು ಡಿಲೀಟ್ ಮಾಡುತ್ತಾಳೆ.
-ಹಳೆಯ ಬಾಯ್ಫ್ರೆಂಡ್ ಇದ್ದರೆ ಅವರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಾರೆ. ಆದರೆ ಕೆಲವೊಮ್ಮೆ ಈ ನಿರ್ಧಾರವು ತೊಂದರೆಗೊಳಗಾಗಬಹುದು.
-ಸಂಬಂಧ ಮುರಿದು ಬೀಳಲು ಕಾರಣವೇನೆಂದು ತಲೆಕೆಡಿಸಿಕೊಳ್ಳುತ್ತಾಳೆ
ನಮ್ಮ ಸಂಬಂಧ ಮುರಿದು ಬೀಳಲು ಏನು ಕಾರಣವಿರಬಹುದು ಎಂದು ತಲಕೆಡಿಸಿಕೊಳ್ಳುತ್ತಾಳೆ.
-ಹಾಗೆಯೇ ತನ್ನ ಸಂಗಾತಿ ಬೇರೆ ಹುಡುಗಿಯೊಂದಿಗೆ ಸಂಪರ್ಕದಲ್ಲಿರಬಹುದು ಎನ್ನುವ ಅನುಮಾನವೂ ಮೂಡುತ್ತದೆ.
– ಸಂತೋಷವಾಗಿರಲು ಹಲವು ಮಾರ್ಗಗಳನ್ನು ಕಂಡುಕೊಳ್ಳುತ್ತಾಳೆ
-ಹುಡುಗಿಯರಾಗಿರಲಿ ಅಥವಾ ಹುಡುಗರಾಗಿರಲಿ, ಪ್ರೀತಿ ಕೊನೆಗೊಂಡಾಗ, ಪ್ರತಿಯೊಬ್ಬರೂ ಸಂತೋಷವಾಗಿರಲು ಮಾರ್ಗಗಳನ್ನು ಹುಡುಕಲು ಪ್ರಾರಂಭಿಸುತ್ತಾರೆ.
-ಸಂಬಂಧದ ಅಂತ್ಯದ ಆಘಾತವು ವ್ಯಕ್ತಿಯನ್ನು ಖಿನ್ನತೆ ಅಥವಾ ಒತ್ತಡಕ್ಕೆ ತಳ್ಳಬಹುದು, ಹುಡುಗಿಯರು ತಮ್ಮ ಸ್ನೇಹಿತರ ಜತೆ ಸಮಯ ಕಳೆಯಲು ತಮ್ಮ ಭಾವನೆಗಳನ್ನು ಹಂಚಿಕೊಳ್ಳಲು ಪ್ರಯತ್ನಿಸುತ್ತಾರೆ. ಇದರಿಂದ ಮನಸ್ಸನ್ನು ಸ್ವಲ್ಪ ಹಗುರ ಮಾಡಿಕೊಳ್ಳುತ್ತಾರೆ.
-ನೋವನ್ನು ಹೋಗಲಾಡಿಸಲು ಹುಡುಗಿಯರು ತಿರುಗಾಡುತ್ತಾರೆ, ಶಾಪಿಂಗ್ ಮಾಡುತ್ತಾರೆ, ಟಿವಿ ನೋಡುತ್ತಾ ಸಮಯ ಕಳೆಯುತ್ತಾರೆ ಅದು ಅವರಿಗೆ ಸಂತೋಷವನ್ನು ನೀಡುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ