Relationship: ಸಂಗಾತಿ ನಿಮ್ಮನ್ನು ನಿರ್ಲಕ್ಷಿಸುತ್ತಿದ್ದಾರಾ? ಕೋಪ ದೂರ ಮಾಡಿ ಸಂಬಂಧ ಉಳಿಸಿಕೊಳ್ಳುವುದು ಹೇಗೆ?

| Updated By: ನಯನಾ ರಾಜೀವ್

Updated on: Aug 04, 2022 | 2:52 PM

ಪ್ರತಿಯೊಂದು ಸಂಬಂಧಕ್ಕೂ ತನ್ನದೇ ಆದ ಮುಖಗಳಿರುತ್ತವೆ, ಸಂಬಂಧದಲ್ಲಿ ಪ್ರೀತಿ, ಕೋಪ, ಜಗಳ, ಭಿನ್ನಾಭಿಪ್ರಾಯ ಎಲ್ಲವೂ ಸಾಮಾನ್ಯ.

Relationship: ಸಂಗಾತಿ ನಿಮ್ಮನ್ನು ನಿರ್ಲಕ್ಷಿಸುತ್ತಿದ್ದಾರಾ? ಕೋಪ ದೂರ ಮಾಡಿ ಸಂಬಂಧ ಉಳಿಸಿಕೊಳ್ಳುವುದು ಹೇಗೆ?
Relationship
Follow us on

ಪ್ರತಿಯೊಂದು ಸಂಬಂಧಕ್ಕೂ ತನ್ನದೇ ಆದ ಮುಖಗಳಿರುತ್ತವೆ, ಸಂಬಂಧದಲ್ಲಿ ಪ್ರೀತಿ, ಕೋಪ, ಜಗಳ, ಭಿನ್ನಾಭಿಪ್ರಾಯ ಎಲ್ಲವೂ ಸಾಮಾನ್ಯ.
ನಿಮ್ಮ ಸಂಗಾತಿ ನಿಮ್ಮನ್ನು ನಿರ್ಲಕ್ಷಿಸುತ್ತಿದ್ದಾರೆಯೇ?, ನಿಮ್ಮೊಂದಿಗೆ ಅವರಿಗೆ ಮಾತನಾಡಲು ಇಷ್ಟವಿಲ್ಲವೇ? ನೀವು ಪಕ್ಕದಲ್ಲೇ ಇದ್ದರೂ ನಿಮ್ಮ ಬಳಿ ಮಾತನಾಡುತ್ತಿಲ್ಲವೇ? ಅಂತಹ ಸಂಗಾತಿ ಜತೆಗೆ ನೀವು ಹೇಗೆ ವರ್ತಿಸಬೇಕು ಎಂಬುದರ ಕುರಿತು ಕೆಲವು ಸಲಹೆಗಳನ್ನು ಇಲ್ಲಿ ನೀಡಲಾಗಿದೆ.

ನಿಮ್ಮ ಸಂಗಾತಿ ನಿಮ್ಮ ಯಾವುದೇ ಮಾತಿಗೆ ಸರಿಯಾಗಿ ಪ್ರತಿಕ್ರಿಯಿಸುತ್ತಿಲ್ಲವೆಂದಾದರೆ ಇದು ಹೀಗೆಯೇ ಮುಂದುವರೆದರೆ ಇದು ಆತ, ಆಕೆಯ ಮಾನಸಿಕ ಆರೋಗ್ಯದ ಮೇಲೆ ಪರಿಣಾಮವನ್ನು ಬೀರುತ್ತದೆ. ಪ್ರತಿಕ್ರಿಯಿಸದಿರುವುದು ದೀರ್ಘಾವಧಿಯಲ್ಲಿ ಸಂಬಂಧವನ್ನು ಹಾಳುಮಾಡುತ್ತದೆ.

ಸಂಬಂಧದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಮೊದಲು ಈ ಸಮಸ್ಯೆಗಳನ್ನು ಪರಿಹರಿಸುವುದು ಬಹಳ ಮುಖ್ಯ. ಒಂದೊಮ್ಮೆ ನಿಮ್ಮ ಸಂಗಾತಿ ನಿಮ್ಮ ಯಾವ ಮಾತಿಗೂ ಸರಿಯಾಗಿ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದಾದರೆ ಅಷ್ಟಕ್ಕೆ ನೀವು ಸುಮ್ಮನಿರಬೇಡಿ, ಅಥವಾ ಬೇಸರಗೊಳ್ಳುವ ಅಗತ್ಯವೂ ಇಲ್ಲ. ಸಮಸ್ಯೆ ಏನಿದೆ ಎಂಬುದನ್ನು ಅರಿಯಲು ಪ್ರಯತ್ನಿಸಿ.

ಮುರಿದ ಸಂಬಂಧವನ್ನು ಸರಿಪಡಿಸಲು ಸಂವಹನವು ಮುಖ್ಯವಾದ ಮಾರ್ಗವಾಗಿದೆ, ಆದರೆ ನೀವು ನಿರಾಶೆ ಮತ್ತು ನೋವನ್ನು ಪಕ್ಕಕ್ಕೆ ತಳ್ಳಿ ಪರಿಸ್ಥಿತಿಯನ್ನು ಎದುರಿಸುವುದು ಹೇಗೆ ಎಂಬುದರ ಕುರಿತು ಆಲೋಚಿಸಬೇಕು.

ಶಾಂತವಾಗಿರಿ: ನಿಮ್ಮ ಸಂಗಾತಿಗೆ ಸ್ಪಂದಿಸದ ಕಾರಣ ಅವರಿಗೆ ಏನಾದರೂ ಶಿಕ್ಷೆ ನೀಡಬೇಕು ಎಂದು ಅಲೋಚಿಸಬೇಡಿ, ನೀವು ಬಯಸಿದ್ದಕ್ಕೆ ವಿರುದ್ಧವಾಗಿ ನಿಮ್ಮ ಸಂಗಾತಿ ನಡೆದುಕೊಂಡಾಗ ಅವರಿಗೂ ಇದೇ ರೀತಿ ನೋವನ್ನು ನೀಡುತ್ತೇನೆ ಎಂದು ಹೋಗಬೇಡಿ ನಿಮ್ಮ ನಾಲಿಗೆ ಹಾಗೂ ಉದ್ವೇಗವನ್ನು ಹಿಡಿತದಲ್ಲಿಟ್ಟುಕೊಳ್ಳಿ. ಮಾತಿನ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಿ.

ನಿಮ್ಮನ್ನು ನೀವು ಪರೀಕ್ಷಿಸಿಕೊಳ್ಳಿ: ನಮ್ಮಲ್ಲಿ ಪ್ರತಿಯೊಬ್ಬರಿಗೂ ನ್ಯೂನತೆಗಳಿವೆ. ನಿಮ್ಮ ನಡವಳಿಕೆಯನ್ನು ಕೂಡ ನೀವು ಗಮನಿಸಬೇಕು, ಯಾಕೆಂದರೆ ಒಂದೇ ಕೈನಲ್ಲಿ ಚಪ್ಪಾಳೆ ಸಾಧ್ಯವಿಲ್ಲ, ನಿಮ್ಮ ಸಂಗಾತಿ ಹಾಗೆ ನಡೆದುಕೊಳ್ಳಲು ನೀವೂ ಕೂಡ ಕಾರಣಕರ್ತರಾಗಿರುತ್ತೀರಿ.
ನಿಮ್ಮ ಸಂವಹನಗಳಲ್ಲಿ ಸ್ಪಷ್ಟವಾಗಿರಿ: ನಾವು ಏನು ಹೇಳಲು ಪ್ರಯತ್ನಿಸುವುದನ್ನು ಜನರು ಅರ್ಥ ಮಾಡಿಕೊಳ್ಳುತ್ತಾರೆ ಎಂದುಕೊಳ್ಳುವುದು ತಪ್ಪು, ನಮ್ಮ ಮಾತು ಅವರಿಗೆ ಬೇರೆಯೇ ರೀತಿಯಲ್ಲಿ ಕಾಣಿಸಬಹುದು.

ದ್ವೇಷ ಬೇಡ: ಸಂಗಾತಿ ಸರಿಯಾಗಿ ಪ್ರತಿಕ್ರಿಯಿಸದಿದ್ದರೆ ಕೋಪಗೊಳ್ಳುವುದು ಅವರ ಮೇಲೆ ದ್ವೇಷ ಸಾಧಿಸುವುದನ್ನು ಮಾಡಬೇಡಿ.
ಸಂಗಾತಿಯ ಮನಸ್ಸನ್ನು ಪ್ರೀತಿಯಿಂದ ಗೆಲ್ಲಬೇಕೆ ಹೊರತು ದ್ವೇಷದಿಂದಲ್ಲ.

ಮಾತು ಮುಂದುವರಿಸಿ: ಸಂಗಾತಿ ಕೋಪ ಮಾಡಿಕೊಂಡಿದ್ದಾರೆ ಎಂದು ನೀವು ಕೂಡ ಕೋಪ ಮಾಡಿಕೊಂಡು ಒಂದು ಮೂಲೆಗೆ ಹೋಗಿ ಕುಳಿತುಕೊಳ್ಳುವುದಲ್ಲ, ಕಾರಣಗಳನ್ನು ಕೇಳಿ, ಮಾತು ಮುಂದುವರೆಸಿ, ಅವರನ್ನು ಗೌರವದಿಂದ ನೋಡಿಕೊಳ್ಳಿ. ದೀರ್ಘಕಾಲದ ಕಾಲ ಮಾತನಾಡದೇ ಇದ್ದರೆ ಸಮಸ್ಯೆಗೆ ಪರಿಹಾರ ದೊರೆತದು, ಸಂಬಂಧ ಮುರಿದುಬೀಳಬಹುದು.