Self Love: ಸದಾ ಬೇರೊಬ್ಬರ ಖುಷಿಯನ್ನೇ ನಿರೀಕ್ಷಿಸಬೇಡಿ, ಮೊದಲು ನಿಮ್ಮನ್ನು ನೀವು ಪ್ರೀತಿಸಿ
ಸದಾ ಬೇರೊಬ್ಬರಿಗೆ ಖುಷಿಯನ್ನೇ ನಿರೀಕ್ಷಿಸುವ ನೀವು ನಿಮ್ಮ ಖುಷಿ ಯಾವುದರಲ್ಲಿದೆ ಎಂದು ಕಂಡುಕೊಳ್ಳುವುದನ್ನೇ ಮರೆತಿರುತ್ತೀರಿ. ಯಾರದ್ದೋ ಕಾಳಜಿ ಮಾಡುವುದರ ಜತೆಗೆ ನಿಮ್ಮ ಆರೈಕೆಗೂ ನೀವು ಗಮನಕೊಡಲೇಬೇಕು.
ಸದಾ ಬೇರೊಬ್ಬರಿಗೆ ಖುಷಿಯನ್ನೇ ನಿರೀಕ್ಷಿಸುವ ನೀವು ನಿಮ್ಮ ಖುಷಿ ಯಾವುದರಲ್ಲಿದೆ ಎಂದು ಕಂಡುಕೊಳ್ಳುವುದನ್ನೇ ಮರೆತಿರುತ್ತೀರಿ. ಯಾರದ್ದೋ ಕಾಳಜಿ ಮಾಡುವುದರ ಜತೆಗೆ ನಿಮ್ಮ ಆರೈಕೆಗೂ ನೀವು ಗಮನಕೊಡಲೇಬೇಕು. ವಿಶೇಷವಾಗಿ ಕೋವಿಡ್ -19 ಸಾಂಕ್ರಾಮಿಕದ ಮಧ್ಯೆ, ಅನಿಶ್ಚಿತತೆ, ಬದಲಾದ ದೈನಂದಿನ ದಿನಚರಿಗಳು, ಆರ್ಥಿಕ ಒತ್ತಡ ಮತ್ತು ಸಾಮಾಜಿಕ ಪ್ರತ್ಯೇಕತೆಯ ನಡುವೆ ಜೀವನದಲ್ಲಿ ನಡೆಯುತ್ತಿರುವ ಸವಾಲುಗಳನ್ನು ನಿಭಾಯಿಸುವ ನಮ್ಮ ಸಾಮರ್ಥ್ಯವನ್ನು ಕೊಂಚ ಹೆಚ್ಚಿದೆ.
ನಿಮ್ಮ ದಿನವು ವ್ಯಾಯಾಮ, ಕೆಲಸ, ಆರೈಕೆ, ವಿರಾಮ ಇವೆಲ್ಲವನ್ನೂ ಒಳಗೊಂಡಿರುಬೇಕು. -ಓದುವುದು ಸ್ವಯಂ-ಆರೈಕೆಯ ಉತ್ತಮ ಮಾರ್ಗವಾಗಿದೆ ಮತ್ತು ಪುಸ್ತಕಗಳನ್ನು ಓದಲು ಮತ್ತು ಆನಂದಿಸಲು ಒಂದು ಜಾಗವನ್ನು ನೀವು ಸೃಷ್ಟಿಸಬೇಕು. -ತ್ವಚೆಯ ಆರೋಗ್ಯವನ್ನು ಕಾಪಾಡಿಕೊಳ್ಳಿ ಇದರಿಂದ ನಿಮ್ಮ ದೇಹ ಮತ್ತು ಮನಸ್ಸನ್ನು ಪುನರುಜ್ಜೀವನಗೊಳಿಸಲು ನೆರವಾಗುತ್ತದೆ. – ನಿಮ್ಮ ದೇಹಕ್ಕೆ ಎಣ್ಣೆ ಬಳಸಿ ಹಿತವಾದ ಮಸಾಜ್ ಮಾಡಿ. -ಮಳೆ ಮತ್ತು ತಾಪಮಾನದಲ್ಲಿನ ಹಠಾತ್ ಬದಲಾವಣೆಯಿಂದಾಗಿ ಆಗಾಗ ಆರೋಗ್ಯಕ್ಕೆ ಸಂಬಂಧಿಸಿದ ಬಹಳಷ್ಟು ಸಮಸ್ಯೆಗಳನ್ನು ಉಂಟುಮಾಡುತ್ತದೆ – ನೀರನ್ನು ಕುದಿಸಿ ಕುಡಿಯಬೇಕು -ರಸ್ತೆ ಬದಿಯಲ್ಲಿ ಕತ್ತರಿಸಿದ ಹಣ್ಣುಗಳು, ಪಾನೀಯಗಳು ಮತ್ತು ಆಹಾರಗಳು ಕಲುಷಿತಗೊಳ್ಳುವ ಸಾಧ್ಯತೆಯಿದೆ. – ಶೀತ ವಾತಾವರಣದಲ್ಲಿ ವೈರಲ್ ಸೋಂಕುಗಳು ಹೆಚ್ಚಾಗಿ ಕಂಡುಬರುತ್ತವೆ, ಆದ್ದರಿಂದ ಕೈ ನೈರ್ಮಲ್ಯ ತಂತ್ರಗಳನ್ನು ಅನುಸರಿಸುವುದು, ಸಾಮಾಜಿಕ ಅಂತರವನ್ನು ಅನುಸರಿಸುವುದು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ಗಳನ್ನು ಧರಿಸುವುದು ಸ್ವಲ್ಪ ಮಟ್ಟಿಗೆ ನಿಮ್ಮನ್ನು ರಕ್ಷಿಸಬಹುದು. -ಆಹಾರ ಸೇವಿಸುವ ಮೊದಲು ಮತ್ತು ನಂತರ ಕೈ ತೊಳೆಯುವುದು, ವೈಯಕ್ತಿಕ ನೈರ್ಮಲ್ಯ, ಆರೋಗ್ಯಕರ ಸರಿಯಾಗಿ ಬೇಯಿಸಿದ ಊಟ, ತರಕಾರಿಗಳು ಮತ್ತು ಹಣ್ಣುಗಳನ್ನು ತಿನ್ನುವುದು ಮುಂತಾದ ಆರೋಗ್ಯಕರ ಅಭ್ಯಾಸಗಳು ಸೋಂಕನ್ನು ತಡೆಯಲು ಸಹಾಯ ಮಾಡುತ್ತದೆ.