Kannada News Lifestyle Relationship tips never share these Three things with your best friend after marriage
Relationship: ಮದುವೆಯ ನಂತರ ಸ್ನೇಹಿತರೊಂದಿಗೆ ಈ ಮೂರು ವಿಚಾರಗಳನ್ನು ಹಂಚಿಕೊಳ್ಳಬೇಡಿ
ಮದುವೆಯ ನಂತರ ನಿಮ್ಮ ವೈಯಕ್ತಿಕ ವಿಚಾರವನ್ನು ಎಂದಗೂ ಹಂಚಿಕೊಳ್ಳಬೇಡಿ. ಒಂದೊಮ್ಮೆ ಹಂಚಿಕೊಂಡರೆ ಜೀವನದಲ್ಲಿ ದೊಡ್ಡ ತಪ್ಪು ಮಾಡಿದಂತಾಗುತ್ತದೆ ಎಂದು ಪ್ರಸಿದ್ಧ ಐರಿಶ್ ಕವಿ ಆಸ್ಕರ್ ವೈಲ್ಡ್ ಹೇಳುತ್ತಾರೆ.
ಮದುವೆಯ ನಂತರ ಸ್ನೇಹಿತರೊಂದಿಗೆ ವೈಯಕ್ತಿಕ ವಿಚಾರಗಳನ್ನು ಹಂಚಿಕೊಳ್ಳಲೇಬೇಡಿ
ಎಲ್ಲಕ್ಕಿಂತ ಪವಿತ್ರವಾದ ಬಂಧವೆಂದರೆ ಸ್ನೇಹ. ಈ ಸ್ನೇಹವು ತಂದೆ-ತಾಯಿ ಮತ್ತು ಮಕ್ಕಳ ನಡುವೆ, ಸಹೋದರರ ನಡುವೆ ಮತ್ತು ಗಂಡ-ಹೆಂಡತಿಯ ನಡುವೆಯು ಇದ್ದೇ ಇರುತ್ತದೆ. ಕೆಲವರ ಸ್ನೇಹ ಹೇಗಿರುತ್ತದೆ ಎಂದರೆ ತಮ್ಮ ನಡುವೆ ನಡೆಯುವ ಎಲ್ಲಾ ವಿಷಯಗಳನ್ನು ಚಾಚು ತಪ್ಪದೆ ಒಪ್ಪಿಸುವಷ್ಟರ ಮಟ್ಟಿಗೆ ಸ್ನೇಹ ಇರುತ್ತದೆ. ಇದು ಅಪಾಯ ಎಂದು ಪ್ರಸಿದ್ಧ ಐರಿಶ್ ಕವಿ ಆಸ್ಕರ್ ವೈಲ್ಡ್ ಹೇಳುತ್ತಾರೆ. ಸ್ನೇಹ ಎಷ್ಟೇ ಗಟ್ಟಿಯಾಗಿದ್ದರೂ ಮದುವೆಯ ನಂತರ ಅದರ ಮಾದರಿ ಸ್ವಲ್ಪ ಬದಲಾಗುತ್ತದೆ. ವೈವಾಹಿಕ ಜೀವನದಲ್ಲಿ ತುಂಬಾ ಕಾರ್ಯನಿರತರಾಗಲು ಪ್ರಾರಂಭಿಸುತ್ತಾರೆ. ಅದರಂತೆ ಸ್ನೇಹಿತರೊಂದಿಗೆ ಕಳೆಯುವ ಸಮಯ ಕಡಿಮೆಯಾಗುತ್ತದೆ, ಆದರೂ ಒಂದಷ್ಟು ಮಂದಿ ತಮ್ಮ ವೈಯಕ್ತಿಕ ವಿಷಯಗಳನ್ನು ಆತ್ಮೀಯ ಗೆಳೆಯರೊಂದಿಗೆ ಹಂಚಿಕೊಳ್ಳುತ್ತಾರೆ. ಅಂತಹ ತಪ್ಪು ಮಾಡಬೇಡಿ ಎಂದು ಆಸ್ಕರ್ ವೈಲ್ಡ್ ಹೇಳುತ್ತಾರೆ. ಹಾಗಿದ್ದರೆ ಅವರು ಹೇಳುವಂತೆ ನಿಮ್ಮ ಸ್ನೇಹಿತರಿಗೆ ನೀವು ಯಾವ ವೈಯಕ್ತಿಕ ವಿಷಯಗಳನ್ನು ಹೇಳಬಾರದು ಎಂಬುದನ್ನು ನೋಡೋಣ.
ಮದುವೆಯ ನಂತರ ವೈಯಕ್ತಿಕ ಫೋಟೋಗಳು, ವಿಡಿಯೋಗಳು, ಮೆಸೆಜ್ ಚಾಟ್‌ಗಳು ಸೇರಿದಂತೆ ತಮ್ಮ ವೈಯಕ್ತಿಕ ಜೀವನವನ್ನು ಪ್ರತಿಯೊಬ್ಬರೂ ಖಾಸಗಿಯಾಗಿಟ್ಟುಕೊಳ್ಳಬೇಕು. ಕುಟುಂಬದ ಅನೇಕ ವಿಷಯಗಳನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳಬಾರದು. ಸ್ನೇಹಿತ ಅಥವಾ ಸ್ನೇಹಿತೆ ಎಷ್ಟೇ ಸ್ಪೆಷಲ್ ಆಗಿದ್ದರೂ ಹಂಚಿಕೊಳ್ಳಬಾರದು. ಪ್ರತಿಯೊಂದು ಸಂಬಂಧಕ್ಕೂ ಅದರ ಮಿತಿ ಇರುತ್ತದೆ. ನಿಮ್ಮ ಸ್ನೇಹಿತರೊಂದಿಗೆ ನಿಮ್ಮ ಸಂಗಾತಿಯ ಫೋಟೋಗಳು, ವೀಡಿಯೊಗಳು, ಚಾಟ್‌ಗಳು ಅಥವಾ ಸಂದೇಶಗಳನ್ನು ಎಂದಿಗೂ ಹಂಚಿಕೊಳ್ಳಬೇಡಿ. ವೈಯಕ್ತಿಕ ಜೀವನದಲ್ಲಿ ಯಾವುದೂ ಖಾಸಗಿಯಾಗಿಲ್ಲದಿದ್ದರೆ ಸಂಬಂಧದ ಪ್ರಾಮುಖ್ಯತೆ ಕಳೆದುಹೋಗುತ್ತದೆ.
ಮದುವೆಯ ನಂತರ ಹುಡುಗನಾಗಲಿ ಅಥವಾ ಹುಡುಗಿಯಾಗಲಿ ಅನೇಕರು ತಮ್ಮ ಅತ್ತೆಯ ಮಾತನ್ನು ಕೇಳಲು ಇಷ್ಟಪಡುವುದಿಲ್ಲ. ಮದುವೆಯ ನಂತರ ನಿಮ್ಮ ಸಂಬಂಧಿಕರು ನಿಮ್ಮ ಕುಟುಂಬದ ಭಾಗವಾಗುತ್ತಾರೆ ಎಂಬುದನ್ನು ನೆನಪಿಡಿ. ನಿಮ್ಮ ಅಭಿಪ್ರಾಯಗಳು ಅವರ ಅಭಿಪ್ರಾಯಗಳೊಂದಿಗೆ ಹೊಂದಿಕೆಯಾಗದಿದ್ದರೂ ಸಹ ಸಂಬಂಧಗಳ ಬಗ್ಗೆ ಹೊರಗೆ ಎಲ್ಲಿಯೂ ಹೇಳಬೇಡಿ. ಕೆಲವರು ತಮ್ಮ ಮನಸ್ಸನ್ನು ಹಗುರಗೊಳಿಸಲು ಸ್ನೇಹಿತರೊಂದಿಗೆ ಹೇಳುತ್ತಾರೆ. ಆದರೆ ಭಾವನಾತ್ಮಕವಾಗಿ ನಿರ್ಲಿಪ್ತರಾಗಿ ಹೀಗೆ ಮಾಡುವುದರಿಂದ ನಿಮಗೆ ಹಾನಿಯಾಗಬಹುದು. ನಿಮ್ಮ ಸಂಗಾತಿಯ ಕುಟುಂಬವನ್ನು ನೀವು ಗೌರವಿಸದಿದ್ದರೆ ನಿಮ್ಮ ಸಂಗಾತಿಯು ಅದನ್ನು ಅವಮಾನವೆಂದು ಪರಿಗಣಿಸುತ್ತಾರೆ. ನಂತರ ಸಂಬಂಧದಲ್ಲಿ ಬಿರುಕು ಮೂಡಬಹುದು.
ಮದುವೆಯ ನಂತರ ನಿಮ್ಮ ಸಂಗಾತಿ ನಿಮ್ಮನ್ನು ತಮ್ಮವರೆಂದು ಪರಿಗಣಿಸುತ್ತಾರೆ ಮತ್ತು ಅವರ ಹಿಂದಿನ ರಹಸ್ಯಗಳನ್ನು ಹಂಚಿಕೊಳ್ಳುತ್ತಾರೆ. ಈ ವಿಚಾರವನ್ನು ಸ್ನೇಹಿತರಿಗೆ ಹೇಳಲು ಪ್ರಾರಂಭಿಸಿದರೆ ಸಂಗಾಯಿಯು ನಿಮ್ಮ ಮೇಲೆ ಇಟ್ಟ ನಂಬಿಕೆ ಹುಸಿಯಾಗಿದೆ ಎಂಬ ಭಾವಿಸುತ್ತಾರೆ. ಸ್ನೇಹ ಎಷ್ಟೇ ಸ್ಪೆಷಲ್ ಆಗಿರಲಿ ಹಿಂದಿನ ರಹಸ್ಯವನ್ನು ಯಾರಿಗೂ ಹೇಳದೆ ಇರುವುದು ಉತ್ತಮ.