Rice vs Chapati: ಅನ್ನ, ಚಪಾತಿ ಇವುಗಳಲ್ಲಿ ಯಾವುದು ಆರೋಗ್ಯಕ್ಕೆ ಒಳ್ಳೆಯದು?

|

Updated on: Nov 02, 2024 | 5:58 PM

ಪ್ರಸ್ತುತ ದಿನಗಳಲ್ಲಿ, ಅಕ್ಕಿಯ ಬಳಕೆಯನ್ನು ಸಂಪೂರ್ಣವಾಗಿ ಕಡಿಮೆ ಮಾಡಲಾಗುತ್ತಿದೆ. ಜನ ಹೆಚ್ಚಾಗಿ ಚಪಾತಿ ತಿನ್ನಲು ಆಸಕ್ತಿ ತೋರಿಸುತ್ತಿದ್ದಾರೆ. ಮಧ್ಯಾಹ್ನ ಅನ್ನ ತಿಂದರೆ. ಸಂಜೆ, ಚಪಾತಿ ಸೇವನೆ ಮಾಡುತ್ತಾರೆ. ಏಕೆಂದರೆ ಇದರಲ್ಲಿ ಕ್ಯಾಲೊರಿಗಳು ಕಡಿಮೆ ಇರುತ್ತವೆ. ಈ ಕಾರಣದಿಂದಾಗಿ ತೂಕ ಹೆಚ್ಚಾಗುವುದಿಲ್ಲ ಎಂದು ನಂಬಲಾಗಿದೆ. ಆದರೆ ಕೆಲವು ವೈದ್ಯರು ಚಪಾತಿ ತಿನ್ನುವುದು ಆರೋಗ್ಯಕರವಲ್ಲ ಎಂದು ಹೇಳುತ್ತಾರೆ. ಹಾಗಾದರೆ ಅನ್ನ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದೇ ಅಥವಾ ಚಪಾತಿ ತಿನ್ನುವುದು ಒಳ್ಳೆಯದೇ? ಇವೆರಡರಲ್ಲಿ ಯಾವುದು ಹೆಚ್ಚು ಆರೋಗ್ಯಕರ? ತಜ್ಞರು ಏನು ಹೇಳುತ್ತಾರೆ ಎಂಬುದರ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.

Rice vs Chapati: ಅನ್ನ, ಚಪಾತಿ ಇವುಗಳಲ್ಲಿ ಯಾವುದು ಆರೋಗ್ಯಕ್ಕೆ ಒಳ್ಳೆಯದು?
ಸಾಂದರ್ಭಿಕ ಚಿತ್ರ
Follow us on

ಅನ್ನ ಮತ್ತು ಚಪಾತಿ ಸಾಮಾನ್ಯವಾಗಿ ನಾವು ಪ್ರತಿದಿನ ಸೇವನೆ ಮಾಡುವ ಆಹಾರಗಳಲ್ಲಿ ಒಂದಾಗಿದೆ. ಕರ್ನಾಟಕದ ಜನ ಹೆಚ್ಚಾಗಿ ಅನ್ನವನ್ನು ಸೇವನೆ ಮಾಡುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ, ಸಕ್ಕರೆ, ಬಿಪಿ ಮತ್ತು ಅನ್ನ ತಿನ್ನುವುದರಿಂದ ತೂಕ ಹೆಚ್ಚಾಗುತ್ತದೆ ಎಂದುಕೊಂಡು ಜನರು ಚಪಾತಿಯನ್ನು ಸೇವನೆ ಮಾಡಲು ಪ್ರಾರಂಭಿಸಿದ್ದಾರೆ. ಮಧ್ಯಾಹ್ನ ಅನ್ನ ತಿಂದರೆ. ಸಂಜೆ, ಚಪಾತಿ ಸೇವನೆ ಮಾಡುತ್ತಾರೆ. ಏಕೆಂದರೆ ಇದರಲ್ಲಿ ಕ್ಯಾಲೊರಿಗಳು ಕಡಿಮೆ ಇರುತ್ತವೆ. ಈ ಕಾರಣದಿಂದಾಗಿ ತೂಕ ಹೆಚ್ಚಾಗುವುದಿಲ್ಲ ಎಂದು ನಂಬಲಾಗಿದೆ. ಆದರೆ ಕೆಲವು ವೈದ್ಯರು ಚಪಾತಿ ತಿನ್ನುವುದು ಆರೋಗ್ಯಕರವಲ್ಲ ಎಂದು ಹೇಳುತ್ತಾರೆ. ಹಾಗಾದರೆ ಅನ್ನ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದೇ ಅಥವಾ ಚಪಾತಿ ತಿನ್ನುವುದು ಒಳ್ಳೆಯದೇ? ಇವೆರಡರಲ್ಲಿ ಯಾವುದು ಹೆಚ್ಚು ಆರೋಗ್ಯಕರ? ತಜ್ಞರು ಏನು ಹೇಳುತ್ತಾರೆ ಎಂಬುದರ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.

ಚಪಾತಿ:

ಚಪಾತಿಗಳನ್ನು ಅನ್ನಕ್ಕಿಂತ ಹೆಚ್ಚು ಸೇವನೆ ಮಾಡುವುದಕ್ಕೆ ಕಾರಣ ಅದು ನಮ್ಮ ಹಸಿವನ್ನು ನಿಯಂತ್ರಿಸುತ್ತದೆ. ಏಕೆಂದರೆ ಚಪಾತಿಗಳಲ್ಲಿ ಫೈಬರ್ ಅಧಿಕವಾಗಿರುತ್ತದೆ. ಇದು ನಿಮಗೆ ಬೇಗನೆ ಹಸಿವಾಗುವುದನ್ನು ತಡೆಯುತ್ತದೆ. ಇದಲ್ಲದೆ, ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು, ಬಿಪಿ ಹೆಚ್ಚಾಗದಂತೆ ಮತ್ತು ತೂಕವನ್ನು ನಿಯಂತ್ರಣದಲ್ಲಿಡಲು ಚಪಾತಿಗಳನ್ನು ಸೇವಿಸಲಾಗುತ್ತದೆ. ಜೊತೆಗೆ ದೈಹಿಕ ಚಟುವಟಿಕೆ ಮಾಡಲು ಸಾಧ್ಯವಾಗದವರು ಚಪಾತಿಗಳನ್ನು ಸೇವನೆ ಮಾಡುತ್ತಾರೆ.

ಅನ್ನ:

ಪ್ರತಿನಿತ್ಯ ಅನ್ನ ತಿನ್ನುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ಇದರಲ್ಲಿ ಕಾರ್ಬೋಹೈಡ್ರೇಟ್ ಗಳು ಅಧಿಕವಾಗಿರುತ್ತವೆ. ಅನ್ನ ಜೀರ್ಣವಾಗಲು ಬಹಳ ಸಮಯ ತೆಗೆದುಕೊಳ್ಳುತ್ತದೆ. ಇದು ಹಸಿವನ್ನು ಹೆಚ್ಚಿಸುತ್ತದೆ. ಆದರೆ ಸ್ವಲ್ಪ ತಿನ್ನುವವರಿಗೆ ಇದು ತುಂಬಾ ಒಳ್ಳೆಯದು. ಅತಿಯಾಗಿ ಅನ್ನ ಸೇವಿಸಿದರೆ ಬಿಪಿ, ಸಕ್ಕರೆ, ಅಧಿಕ ತೂಕ ಮತ್ತು ಹಾರ್ಮೋನುಗಳ ಅಸಮತೋಲನಕ್ಕೆ ಕಾರಣವಾಗಬಹುದು.

ಇದನ್ನೂ ಓದಿ: ರಾತ್ರಿ ನಿದ್ರೆ ಕಡಿಮೆ ಮಾಡಿದರೆ ಬೇಗನೆ ಹೃದಯಾಘಾತವಾಗುತ್ತದೆ

ಯಾವುದು ಉತ್ತಮ?

ಅನ್ನ ಮತ್ತು ಚಪಾತಿ ಎರಡೂ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ನೀವು ತಿನ್ನುವ ರೀತಿ ಮುಖ್ಯವಾಗುತ್ತದೆ. ಇದಲ್ಲದೆ, ಅನ್ನವನ್ನು ಬಹಳ ಕಡಿಮೆ ಪ್ರಮಾಣದಲ್ಲಿ ಸೇವನೆ ಮಾಡುವುದು ನಮ್ಮ ಆರೋಗ್ಯಕ್ಕೆ ಒಳ್ಳೆಯದು. ಅದಲ್ಲದೆ ಅಕ್ಕಿಯಿಂದ ಉತ್ತಮ ಪೋಷಕಾಂಶಗಳೂ ಸಿಗುತ್ತವೆ. ಬಿಳಿ ಅಕ್ಕಿ ಮಾತ್ರವಲ್ಲದೆ ಕಂದು ಅಕ್ಕಿ, ಕ್ವಿನೋವಾ, ಕಚ್ಚಾ ಅಕ್ಕಿ, ಪಾಲಿಶ್ ಮಾಡದ ಅಕ್ಕಿಯನ್ನು ಸಹ ಸೇವನೆ ಮಾಡಬಹುದು.

(ಗಮನಿಸಿ: ಈ ಮಾಹಿತಿಗೆ ಅನುಗುಣವಾಗಿ ವಿವರಗಳನ್ನು ಒದಗಿಸಲಾಗಿದೆ, ಹೆಚ್ಚಿನ ಮಾಹಿತಿಗೆ ನಿಮ್ಮ ವೈದ್ಯರನ್ನು ಸಂಪರ್ಕಿಸಿ.)

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ