ಯೋಗ(Yoga)ವು ಮನುಷ್ಯನ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸಿದೆ. ಯೋಗ ಎಂಬುದು ಇವತ್ತು ನಿನ್ನೆಯದಲ್ಲ ಪುರಾಣ ಕಾಲಗಳಿಂದಲೂ ಚಾಲ್ತಿಯಲ್ಲಿದೆ. ಹಾಗಾದರೆ ಖಾಲಿ ಹೊಟ್ಟೆಯಲ್ಲಿ ಯೋಗ ಮಾಡುವುದು ಆರೋಗ್ಯಕ್ಕೆ ಒಳ್ಳೆಯದೋ ಅಥವಾ ಕೆಟ್ಟದ್ದೋ ಎಂಬುದರ ಬಗ್ಗೆ ತಜ್ಞರು ನೀಡಿರುವ ಮಾಹಿತಿಯನ್ನು ನಾವಿಲ್ಲಿ ನೀಡುತ್ತಿದ್ದೇವೆ.
ಬೆಳಗ್ಗೆ ಬೇಗ ಎದ್ದು ಖಾಲಿ ಹೊಟ್ಟೆಯಲ್ಲಿ ಯೋಗ ಮಾಡುವುದರಿಂದ ಉಸಿರಾಟ ಸರಾಗವಾಗುತ್ತದೆ. ಆದರೆ ಪ್ರತಿಯೊಬ್ಬರ ದೇಹವೂ ವಿಭಿನ್ನವಾಗಿದ್ದು, ಬೇರೆ ರೀತಿಯಲ್ಲೇ ಪ್ರತಿಕ್ರಿಯಿಸುತ್ತದೆ. ನೀವು ನಿಮ್ಮ ದೇಹವು ಏನು ಹೇಳಲು ಬಯಸುತ್ತಿದೆ ಎಂಬುದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು.
ಕಳೆದ ಒಂದೂವರೆ ವರ್ಷದಲ್ಲಿ ನಮಗೆ ಈ ಕೋವಿಡ್-19 ವೈರಸ್ ಹಾವಳಿಯಿಂದಾಗಿ ಸಂಭವಿಸಿದ ಸಾವು ನೋವುಗಳನ್ನು ನೋಡಿದಾಗ ಆರೋಗ್ಯವು ನಮಗೆ ಎಷ್ಟು ಮುಖ್ಯವಾಗಿದೆ ಎನ್ನುವುದು ಚೆನ್ನಾಗಿ ಮನದಟ್ಟಾಗಿರುತ್ತದೆ.
ಆರೋಗ್ಯವೇ ಭಾಗ್ಯ ಎಂಬ ಮಾತಿನಂತೆ ಕೋವಿಡ್ ನಂತರ ಪ್ರತಿಯೊಬ್ಬರೂ ಆರೋಗ್ಯದತ್ತ ಹೆಚ್ಚಿನ ಕಾಳಜಿಯನ್ನು ವಹಿಸುತ್ತಿದ್ದಾರೆ. ನಮ್ಮ ದೇಹವನ್ನು ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಹೇಗೆ ಅಂತ ಆಲೋಚನೆ ಮಾಡಿದರೆ, ನಮಗೆ ಮೊದಲು ನೆನಪಾಗುವುದೇ ಈ ಯೋಗಾಭ್ಯಾಸ ಎಂದರೆ ಅತಿಶಯೋಕ್ತಿಯಲ್ಲ.
ನಿರ್ಧಿಷ್ಟ ಸಮಯ ನಿಗದಿಪಡಿಸಿಕೊಳ್ಳಿ
ಯೋಗವನ್ನು ಮಾಡಲು ಒಂದು ನಿರ್ದಿಷ್ಟವಾದಂತಹ ಸಮಯವನ್ನು ನಿಗದಿಪಡಿಸಿಕೊಳ್ಳಿ ಮತ್ತು ಹೆಚ್ಚಾಗಿ ನಿಮ್ಮ ದೇಹವು ಚೆನ್ನಾಗಿ ವಿಶ್ರಾಂತಿ ತೆಗೆದುಕೊಂಡ ನಂತರ, ಎಂದರೆ ಬೆಳಿಗ್ಗೆ ಮಾಡುವುದು ಉತ್ತಮ. ಬೆಳಿಗ್ಗೆ ಯೋಗಾಭ್ಯಾಸವನ್ನು ಮಾಡಲು ಆಗದಿದ್ದರೆ ಸಂಜೆ ಮಾಡುವುದು ಉತ್ತಮವಾಗಿದೆ.
ಖಾಲಿ ಹೊಟ್ಟೆಯಲ್ಲಿ ಯೋಗ ಮಾಡಿದರೆ ಒಳ್ಳೆಯದು
ನೀವು ಯೋಗಾಭ್ಯಾಸವನ್ನು ಖಾಲಿ ಹೊಟ್ಟೆಯಲ್ಲಿ ಮಾಡಿದರೆ ತುಂಬಾ ಒಳ್ಳೆಯದು. ಯಾವಾಗಾದರೂ ಊಟವನ್ನು ಸೇವಿಸಿದರೂ ಎರಡು ಗಂಟೆಗಳ ನಂತರ ಯೋಗಾಭ್ಯಾಸವನ್ನು ಮಾಡಿರಿ. ಯೋಗಾಭ್ಯಾಸವನ್ನು ಮಾಡುವಾಗ ನೆಲದ ಮೇಲೆ ಹಾಗೆಯೇ ಕುಳಿತು ಮಾಡುವುದಕ್ಕಿಂತ ಒಂದು ಚಾಪೆಯನ್ನು ಅಥವಾ ಹೊದಿಕೆಯನ್ನು ನೆಲದ ಮೇಲೆ ಹಾಸಿಕೊಂಡು ಅದರ ಮೇಲೆ ಯೋಗಾಭ್ಯಾಸವನ್ನು ಮಾಡಿರಿ.
ಮೊಬೈಲ್ ಹತ್ತಿರವಿಟ್ಟುಕೊಳ್ಳುವುದು ಬೇಡ
ಯೋಗ ಮಾಡುವಾಗ ನಿಮ್ಮ ಗಮನವನ್ನು ಕೇಂದ್ರೀಕರಿಸುವುದು ತುಂಬಾ ಅವಶ್ಯಕವಾಗಿದೆ.ಉತ್ತಮ ಫಲಿತಾಂಶಕ್ಕಾಗಿ ನೀವು ಯೋಗಾಭ್ಯಾಸವನ್ನು ಆರಂಭಿಸುವ ಮೊದಲು ಸೂರ್ಯ ನಮಸ್ಕಾರ ಮಾಡಿ. ಇದರಿಂದ ನಿಮ್ಮ ದೇಹದಲ್ಲಿ ರಕ್ತ ಪರಿಚಲನೆಯೂ ಸುಗಮವಾಗುತ್ತದೆ.
ನೀವು ಯೋಗಾಭ್ಯಾಸವನ್ನು ಮಾಡುವಾಗ ನಿಮಗೆ ಯಾವುದೇ ರೀತಿಯ ಅಡಚಣೆಗಳು ಆಗದಂತೆ ನೋಡಿಕೊಳ್ಳಲು ನಿಮ್ಮ ಮೊಬೈಲ್ ಅನ್ನು ಪಕ್ಕದ ಕೋಣೆಯಲ್ಲಿ ಇರಿಸಿ ಅಥವಾ ಸ್ವಿಚ್ಆಫ್ ಮಾಡಿರಿ.
ಉಸಿರಾಟದ ಮೇಲೆ ಗಮನವಿರಲಿ
ನೀವು ಯಾವುದಾದರೂ ಗಂಭೀರವಾದ ಗಾಯದಿಂದ ಅಥವಾ ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಂಡಿದ್ದರೆ ನೀವು ನಿಮ್ಮ ವೈದ್ಯರನ್ನು ಭೇಟಿ ಮಾಡಿ ಸೂಕ್ತವಾದ ಸಲಹೆ ಪಡೆದುಕೊಂಡು ಬಳಿಕ ಯೋಗಾಭ್ಯಾಸವನ್ನು ಮಾಡುವುದು ಉತ್ತಮ. ಯೋಗಾಭ್ಯಾಸವನ್ನು ತುಂಬಾ ಗಂಭೀರವಾಗಿ ಮಾಡಲು ನಿಮ್ಮ ಉಸಿರಾಟದ ಮೇಲೆ ನೀವು ನಿಮ್ಮ ಗಮನವನ್ನು ಕೇಂದ್ರೀಕರಿಸುವುದು ಒಳ್ಳೆಯದು.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ