Skin Care Tips: ಚರ್ಮವು ಕನ್ನಡಿಯಂತೆ ಹೊಳೆಯಲು ಮನೆಯಲ್ಲೇ ಈ ಸಿಂಪಲ್​​ ಫೇಸ್ ಪ್ಯಾಕ್​​​​ ತಯಾರಿಸಿ

|

Updated on: Jul 20, 2024 | 7:13 PM

ಕನ್ನಡಿಯಂತಹ ಹೊಳೆಯುವ ಚರ್ಮವನ್ನು ಪಡೆಯಲು ನೀವು ಯಾವುದೇ ಕ್ರೀಮ್‌ಗಳನ್ನು ಬಳಸಬೇಕಾಗಿಲ್ಲ. ಅಡುಗೆ ಮನೆಯಲ್ಲಿ ಲಭ್ಯವಿರುವ ಕೆಲ ಪದಾರ್ಥಗಳಿಂದ ತಯಾರಿಸಿದ ಫೇಸ್ ಪ್ಯಾಕ್‌ಗಳನ್ನು ಬಳಸುವುದರಿಂದ ನಿಮ್ಮ ಚರ್ಮವು ಕನ್ನಡಿಯಂತೆ ಹೊಳೆಯುತ್ತದೆ.

Skin Care Tips: ಚರ್ಮವು ಕನ್ನಡಿಯಂತೆ ಹೊಳೆಯಲು ಮನೆಯಲ್ಲೇ ಈ ಸಿಂಪಲ್​​ ಫೇಸ್ ಪ್ಯಾಕ್​​​​ ತಯಾರಿಸಿ
Follow us on

ನಮ್ಮ ತ್ವಚೆಯ ಆರೈಕೆಯು ನಮ್ಮ ದೈಹಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸುಷ್ಟೇ ಮುಖ್ಯ. ಚರ್ಮದ ಆರೈಕೆ ಬಣ್ಣಕ್ಕೆ ಸಂಬಂಧಿಸಿದ್ದಲ್ಲ, ಬದಲಾಗಿ ಆರೋಗ್ಯಕ್ಕೆ ಸಂಬಂಧಿಸಿದೆ. ಪುರುಷರು ಮತ್ತು ಮಹಿಳೆಯರು ಇಬ್ಬರೂ ತಮ್ಮ ಚರ್ಮದ ಬಗ್ಗೆ ಪ್ರತಿದಿನ ಕಾಳಜಿ ವಹಿಸಬೇಕು. ರೇಷ್ಮೆಯಂತಹ ಚರ್ಮವನ್ನು ಪಡೆಯಲು ನೀವು ಯಾವುದೇ ಕ್ರೀಮ್‌ಗಳನ್ನು ಬಳಸಬೇಕಾಗಿಲ್ಲ. ಗೃಹೋಪಯೋಗಿ ವಸ್ತುಗಳು ಮಾತ್ರ ಸಾಕು. ಈ ಪದಾರ್ಥಗಳಿಂದ ತಯಾರಿಸಿದ ಫೇಸ್ ಪ್ಯಾಕ್‌ಗಳನ್ನು ಬಳಸುವುದರಿಂದ ನಿಮ್ಮ ಚರ್ಮವು ಕನ್ನಡಿಯಂತೆ ಹೊಳೆಯುತ್ತದೆ.

ಹಾಲು ಮತ್ತು ನಿಂಬೆ ರಸ ಫೇಸ್ ಮಾಸ್ಕ್:

ಒಂದು ಬಟ್ಟಲಿನಲ್ಲಿ 2 ಚಮಚ ಹಾಲು ಮತ್ತು 1 ಚಮಚ ನಿಂಬೆ ರಸವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಅದರಲ್ಲಿ ಸಣ್ಣ ಹತ್ತಿ ಉಂಡೆಯನ್ನು ಅದ್ದಿ ಮುಖ, ಕೈ ಮತ್ತು ಪಾದಗಳಿಗೆ ಹಚ್ಚಿಕೊಳ್ಳಿ. 15 ನಿಮಿಷಗಳ ಕಾಲ ಒಣಗಲು ಬಿಡಿ ಮತ್ತು ಸೋಪ್ ಬಳಸದೆ ನೀರಿನಿಂದ ಮಾತ್ರ ತೊಳೆಯಿರಿ. ಉತ್ತಮ ಫಲಿತಾಂಶಕ್ಕಾಗಿ ವಾರಕ್ಕೊಮ್ಮೆ ಇದನ್ನು ಮಾಡಿ.

ಆವಕಾಡೊ ಮತ್ತು ಆಲಿವ್ ಎಣ್ಣೆಯ ಫೇಸ್ ಪ್ಯಾಕ್:

1 ಅವಕಾಡೊವನ್ನು ಮಿಕ್ಸರ್ ಜಾರ್‌ಗೆ ಹಾಕಿ ಪೇಸ್ಟ್‌ಗೆ ರುಬ್ಬಿಕೊಳ್ಳಿ. ಪೇಸ್ಟ್ಗೆ 1 ಚಮಚ ಆಲಿವ್ ಎಣ್ಣೆ ಮತ್ತು 2 ಹನಿ ಜೇನುತುಪ್ಪವನ್ನು ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ 20 ನಿಮಿಷಗಳ ಕಾಲ ಒಣಗಲು ಬಿಡಿ ಮತ್ತು ತಣ್ಣೀರಿನಿಂದ ಮುಖವನ್ನು ತೊಳೆಯಿರಿ. ದ್ವಿಗುಣ ಫಲಿತಾಂಶವನ್ನು ಪಡೆಯಲು ವಾರದಲ್ಲಿ 2 ಬಾರಿ ಈ ಪ್ರಕ್ರಿಯೆಯನ್ನು ಮಾಡಿ.

ಅಲೋವೆರಾ ಜೆಲ್, ಜೇನು ಫೇಸ್ ಪ್ಯಾಕ್:

ಅಲೋವೆರಾ ಎಲೆಯಿಂದ ಜೆಲ್ ಅನ್ನು ಹೊರತೆಗೆಯಿರಿ. ಮಿಕ್ಸಿಂಗ್ ಜಾರ್ ಗೆ ಜೆಲ್ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ. ಹಾಗೆಯೇ 2 ಹನಿ ಜೇನುತುಪ್ಪವನ್ನು ಬೆರೆಸಿ ಮುಖಕ್ಕೆ ಹಚ್ಚಿಕೊಳ್ಳಿ. 10-15 ನಿಮಿಷಗಳ ಕಾಲ ನೆನೆಸಿ. ನಂತರ ಯಾವುದೇ ಸೋಪ್ ಬಳಸದೆ ಕೇವಲ ನೀರಿನಿಂದ ನಿಮ್ಮ ಮುಖವನ್ನು ತೊಳೆಯಿರಿ. ವಾರಕ್ಕೆ 2 ಬಾರಿ ಮಾಡಿ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ