ಹುಳ, ಕೀಟ ಬಾಧೆಯಿಂದ ಅಕ್ಕಿಯನ್ನು ರಕ್ಷಿಸುವುದು ಹೇಗೆ? ಇಲ್ಲಿದೆ ನೋಡಿ

| Updated By: Rakesh Nayak Manchi

Updated on: Oct 01, 2022 | 5:17 PM

ದೀರ್ಘಕಾಲದವರೆಗೆ ಅಕ್ಕಿಯನ್ನು ಇಟ್ಟರೆ ಅದರಲ್ಲಿ ಹುಳು, ಕೀಟಗಳು ಬೆಳೆಯುತ್ತವೆ. ಇವುಗಳಿಂದ ಅಕ್ಕಿಯನ್ನು ರಕ್ಷಿಸಲು ಸರಳ ವಿಧಾನಗಳು ಹೀಗಿವೆ.

ಹುಳ, ಕೀಟ ಬಾಧೆಯಿಂದ ಅಕ್ಕಿಯನ್ನು ರಕ್ಷಿಸುವುದು ಹೇಗೆ? ಇಲ್ಲಿದೆ ನೋಡಿ
ಹುಳ, ಕೀಟ ಬಾಧೆಯಿಂದ ಅಕ್ಕಿಯನ್ನು ರಕ್ಷಿಸುವ ವಿಧಾನ
Follow us on

ಅಕ್ಕಿ ನಮ್ಮ ದೈನಂದಿನ ಆಹಾರದ ಭಾಗವಾಗಿದೆ. ಇಂತಹ ಅಕ್ಕಿಯನ್ನು ಹಲವಾರು ದಿನಗಳವರೆಗೆ ಸಂಗ್ರಹಿಸಿದರೆ ಅದರಲ್ಲಿ ಹುಳುಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಅಂತಹ ಪರಿಸ್ಥಿತಿಯಲ್ಲಿ ಅಕ್ಕಿಯನ್ನು ಬಳಸಲು ಅನೇಕರು ಹಿಂದೇಟು ಹಾಕುತ್ತಾರೆ. ಕೋಳಿ ಸಾಕುವವರಿದ್ದರೆ ಅಂತಹ ಅಕ್ಕಿಯನ್ನು ಕೋಳಿಗಳಿಗೆ ಹಾಕಿ ಮುಗಿಸುತ್ತಾರೆ. ಅದಾಗ್ಯೂ ನೀವು ಅಕ್ಕಿಯಿಂದ ಹುಳುಗಳನ್ನು ತೆಗೆದು ಮತ್ತೆ ಬಳಕೆ ಮಾಡುವುದು ತುಂಬಾ ಸುಲಭ. ಹಾಗಿದ್ದರೆ ಅಕ್ಕಿಯಿಂದ ಹುಳುಗಳನ್ನು ಹೇಗೆ ತೆಗೆದುಹಾಕಬಹುದು ಮತ್ತು ಅಕ್ಕಿಯಲ್ಲಿ ಹುಳುಗಳು ಆಗದಂತೆ ದೀರ್ಘಕಾಲದವರೆಗೆ ಸಂಗ್ರಹಿಸಬಹುದು ಹೇಗೆ ಎಂಬುದನ್ನು ತಿಳಿಯೋಣ.

ಅಕ್ಕಿ ಹುಳುಗಳನ್ನು ಈ ರೀತಿ ತೆಗೆದುಹಾಕಿ

ಅಕ್ಕಿಯನ್ನು ದೀರ್ಘಕಾಲ ಸಂಗ್ರಹಿಸಿದರೆ ಅವುಗಳಲ್ಲಿ ಹುಳುಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ನೀವು ದೀರ್ಘಕಾಲದವರೆಗೆ ಅಕ್ಕಿಯನ್ನು ಸಂಗ್ರಹಿಸಲು ಬಯಸಿದರೆ ಇದಕ್ಕಾಗಿ ಲವಂಗದ ಎಲೆಗಳನ್ನು ಅಕ್ಕಿಯೊಂದಿಗೆ ಹಾಕಿ. ಇದಲ್ಲದೇ ಅಕ್ಕಿಯಲ್ಲಿ ಲವಂಗಗಳನ್ನು ಕೂಡ ಹಾಕಬಹುದು. ಕೀಟಗಳನ್ನು ಅಕ್ಕಿಯಿಂದ ದೂರವಿರಿಸಲು ನೀವು ಬೆಂಕಿಕಡ್ಡಿಗೆ ಕಾಗದವನ್ನು ಸುತ್ತಿ ಅಕ್ಕಿಯಲ್ಲಿ ಹಾಕಬಹುದು. ಅನ್ನದಲ್ಲಿ ಕ್ರಿಮಿಕೀಟಗಳು ಜಾಸ್ತಿ ಇದ್ದರೆ ಅಕ್ಕಿಯನ್ನು ಬಿಸಿಲಿನಲ್ಲಿ ಇಡಬೇಕು. ಹೀಗೆ ಮಾಡುವುದರಿಂದ ಹುಳುಗಳು ತಾನಾಗಿಯೇ ಹೊರಬರುತ್ತವೆ.

ಅಕ್ಕಿಯನ್ನು ಪಾರದರ್ಶಕ ಪಾತ್ರೆಯಲ್ಲಿ ತೊಳೆಯಿರಿ

ಅಕ್ಕಿಯನ್ನು ತೊಳೆಯಲು ಯಾವಾಗಲೂ ಪಾರದರ್ಶಕ ಪಾತ್ರೆಯನ್ನು ಬಳಸಿ. ಇತ್ತೀಚಿನ ದಿನಗಳಲ್ಲಿ ಅಕ್ಕಿಯನ್ನು ಸ್ವಚ್ಛಗೊಳಿಸಲು ಪಾತ್ರೆಗಳೂ ಮಾರುಕಟ್ಟೆಗೆ ಬರುತ್ತವೆ. ಅಕ್ಕಿ ತೊಳೆಯುವಾಗ ಬಿಸಿ ನೀರನ್ನು ಬಳಸಿ. ಈ ರೀತಿ ಮಾಡುವುದರಿಂದ ಅಕ್ಕಿಯಲ್ಲಿ ಆಕಸ್ಮಿಕವಾಗಿ ಉಳಿದಿರುವ ಅಕ್ಕಿ ಹುಳುಗಳು ಸಾಯುತ್ತವೆ.

ಮತ್ತಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:17 pm, Sat, 1 October 22