Tea Tree Oil for Skin: ಒಣ ಹಾಗೂ ಸೂಕ್ಷ್ಮ ತ್ವಚೆಯ ಆರೋಗ್ಯ ಕಾಪಾಡಲು ಈ ಕ್ರಮವನ್ನು ಅನುಸರಿಸಿ

|

Updated on: Feb 01, 2023 | 10:49 AM

ಸೂಕ್ಷ್ಮ ತ್ವಚೆಯನ್ನು ಹೊಂದಿರುವವರು ಪ್ರತಿ ಬಾರಿ ಯಾವುದೇ ಸೌಂದರ್ಯ ವರ್ಧಕಗಳನ್ನು ಬಳಸುವಾಗ ಎಚ್ಚರದಿಂದಿರುವುದು ಅಗತ್ಯವಾಗಿದೆ. ಯಾಕೆಂದರೆ ಒಣ ತ್ವಚೆ ಹಾಗೂ ಸೂಕ್ಷ್ಮ ತ್ವಚೆಗಳು ವೇಗವಾಗಿ ಹಾನಿಗೊಳ್ಳುತ್ತದೆ. ಆದ್ದರಿಂದ ತ್ವಚೆಗೆ ಸಂಬಂಧಪಟ್ಟಂತೆ ತಜ್ಞರು ಕೆಲವು ಪರ್ಯಾಯ ಚಿಕಿತ್ಸೆಯನ್ನು ಹಂಚಿಕೊಂಡಿದ್ದಾರೆ.

Tea Tree Oil for Skin: ಒಣ ಹಾಗೂ ಸೂಕ್ಷ್ಮ ತ್ವಚೆಯ ಆರೋಗ್ಯ ಕಾಪಾಡಲು ಈ ಕ್ರಮವನ್ನು ಅನುಸರಿಸಿ
ಸಾಂದರ್ಭಿಕ ಚಿತ್ರ
Image Credit source: Healthline
Follow us on

ಸೂಕ್ಷ್ಮ ತ್ವಚೆಯನ್ನು ಹೊಂದಿರುವವರು ಪ್ರತಿ ಬಾರಿ ಯಾವುದೇ ಸೌಂದರ್ಯ ವರ್ಧಕಗಳನ್ನು ಬಳಸುವಾಗ ಎಚ್ಚರದಿಂದಿರುವುದು ಅಗತ್ಯವಾಗಿದೆ. ಯಾಕೆಂದರೆ ಒಣ ತ್ವಚೆ ಹಾಗೂ ಸೂಕ್ಷ್ಮ ತ್ವಚೆಗಳು ವೇಗವಾಗಿ ಹಾನಿಗೊಳ್ಳುತ್ತದೆ. ಆದ್ದರಿಂದ ತ್ವಚೆಗೆ ಸಂಬಂಧಪಟ್ಟಂತೆ ತಜ್ಞರು ಕೆಲವು ಪರ್ಯಾಯ ಚಿಕಿತ್ಸೆಯನ್ನು ಹಂಚಿಕೊಂಡಿದ್ದಾರೆ. ತ್ವಚೆ ಮತ್ತು ಸೌಂದರ್ಯ ಉತ್ಪನ್ನಗಳ ವಿಷಯಕ್ಕೆ ಬಂದಾಂಗ ಟೀ ಟ್ರೀ ಆಯಿಲ್ ಪ್ರಮುಖವಾದುದು. ಇದು ನಿಮ್ಮ ತ್ವಚೆಗೆ ಬೇಕಾಗುವ ಎಲ್ಲಾ ಪೋಷಣೆಯನ್ನು ನೀಡುತ್ತದೆ. ಟೀ ಟ್ರೀ ಎಣ್ಣೆಯನ್ನು ಸಾಮಾನ್ಯವಾಗಿ ಶ್ಯಾಂಪೂ, ಪೇಸ್​ವಾಶ್​ಗಳ ತಯಾರಿಕೆಯಲ್ಲಿ ಬಳಸುತ್ತಾರೆ. ಇದರ ಜತೆಗೆ ನಿಮ್ಮ ಸೌಂದರ್ಯವರ್ದಕವಾಗಿ ಟೀ ಟ್ರೀ ಎಣ್ಣೆ ಕೆಲಸ ಮಾಡುವುದರಲ್ಲಿ ಅನುಮಾನವಿಲ್ಲ. ವಿಶೇಷವಾಗಿ ಮೊಡವೆಗಳ ಸಮಸ್ಯೆಯಿಂದ ಬಳಲುತ್ತಿರುವವರು ಇದು ಒಂದು ಉತ್ತಮ ಔಷಧಿಯಾಗಿದೆ. ಆಸ್ಟ್ರೇಲಿಯಾದ ಈಶಾನ್ಯದಲ್ಲಿ ಸ್ಥಳೀಯವಾಗಿ ಟೀ ಟ್ರೀ ಬೆಳೆಯಲಾಗುತ್ತದೆ. ಇದು ಬ್ಯಾಕ್ಟೀರಿಯಾ ವಿರೋಧಿ, ಶಿಲೀಂಧ್ರನಾಶಕ ಮತ್ತು ಉರಿಯೂತದ ಗುಣಲಕ್ಷಣಗಳ ಕಾರಣದಿಂದಾಗಿ ಸಾಂಪ್ರದಾಯಿಕ ಔಷಧದಲ್ಲಿ ಮತ್ತು ಕೆಲವು ಪರಿಸ್ಥಿತಿಗಳಲ್ಲಿ ಸ್ಥಳೀಯ ಔಷಧಿಗಳಲ್ಲಿ ಬಳಸಲಾಗುತ್ತದೆ.

ಡರ್ಮಾ ಆರ್ಟ್ಸ್ ಕ್ಲಿನಿಕ್‌ನ ಚರ್ಮರೋಗ ತಜ್ಞ ಡಾ.ಮಿತ್ರಾ ಅಮಿರಿ ಹೇಳುವಂತೆ ಟೀ ಟ್ರೀ ಎಣ್ಣೆ ಬಳಸಿ ತಯಾರಿಸಿದ ಫೇಸ್ ವಾಶ್ ಮತ್ತು ಸೀರಮ್‌ಗಳಂತಹ ಉತ್ಪನ್ನಗಳು ಕೆಲವೊಮ್ಮೆ ಶುಷ್ಕತೆ, ತುರಿಕೆ ಮತ್ತು ಕೆಂಪು ಬಣ್ಣವನ್ನು ಉಂಟುಮಾಡಬಹುದು. ಆದ್ದರಿಂದ, ಈ ಉತ್ಪನ್ನಗಳನ್ನು ಸಂಪೂರ್ಣ ಮುಖದ ಮೇಲೆ ಹಚ್ಚುವ ಮೊದಲು ವಿಶೇಷವಾಗಿ ಶುಷ್ಕ ಮತ್ತು ಅಥವಾ ಸೂಕ್ಷ್ಮ ಚರ್ಮ ಹೊಂದಿರುವವರು, ಇದರ ಬಗ್ಗೆ ತಿಳಿದುಕೊಂಡು ಬಳಸುವುದು ಅಗತ್ಯ ಎಂದು ಹೇಳುತ್ತಾರೆ. ಆದ್ದರಿಂದ ಟೀ ಟ್ರೀ ಎಣ್ಣೆಯನ್ನು ಬಳಸುವ ಸರಿಯಾದ ಕ್ರಮದ ಬಗ್ಗೆ ಡಾ.ರಿಂಕಿ ಕಪೂರ್ ವಿವರಿಸುತ್ತಾರೆ. ಟೀ ಟ್ರೀ ಆಯಿಲ್ ನಿಮ್ಮ ತ್ವಚೆಯ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಅತಿಯಾಗಿ ಬಳಸಿದರೆ ಅದು ನಿಮ್ಮ ಚರ್ಮವನ್ನು ಹಾನಿಗೊಳಿಸುತ್ತದೆ ಎಂದು ಹೇಳುತ್ತಾರೆ.

ಇದನ್ನೂ ಓದಿ: ಮೊಟ್ಟೆಯನ್ನು ಈ ಆಹಾರದೊಂದಿಗೆ ಸೇವಿಸಬೇಡಿ, ಇದು ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು

ಟೀ ಟ್ರೀ ಆಯಿಲ್ ಬಳಸುವ ಸರಿಯಾದ ಕ್ರಮ:

  • ನಿಮ್ಮ ಮುಖದಲ್ಲಿ ಮೊಡವೆಗಳಿದ್ದು, ನೀವು ಟೀ ಟ್ರೀ ಆಯಿಲ್ ಮುಖಕ್ಕೆ ಬಳಸುವುದಾದರೆ, ಚರ್ಮದ ಮೇಲೆ ಉಜ್ಜಬೇಡಿ. ಮೊಡವೆಗಳಿರುವ ಪ್ರದೇಶಕ್ಕೆ ನಿಧಾನವಾಗಿ ಹಚ್ಚಿ.
  • ಟೀ ಟ್ರೀ ಆಯಿಲ್ ಹಚ್ಚಿದ ಮೇಲೆ ಆದರ ಮೇಲೆ ಬೇರೆ ಯಾವುದೇ ಉತ್ಪನ್ನಗಳನ್ನು ಮುಖಕ್ಕೆ ಹಚ್ಚಬೇಡಿ.
    ವ್ಯಾಯಾಮ ಅಥವಾ ದೇಹವು ತುಂಬಾ ದಣಿದಿದ್ದಾಗ ಹಚ್ಚದಿರಿ. ಬದಲಾಗಿ ನೀವು ಸ್ವಲ್ಪ ವಿಶ್ರಾಂತಿಯನ್ನು ಪಡೆದುಕೊಂಡು ದೇಹವು ತಂಪಾಗುವವರೆಗೆ ಕಾಯಿರಿ ಹಾಗೂ ಮತ್ತೆ ಹಚ್ಚಿ.
  • ಟೀ ಟ್ರೀ ಎಣ್ಣೆಯನ್ನು ರೆಟಿನಾಲ್, ಲ್ಯಾಕ್ಟಿಕ್ ಆಮ್ಲ ಅಥವಾ ಗ್ಲೈಕೋಲಿಕ್ ಆಮ್ಲದಂತಹ ಇತರ ಮೊಡವೆ ಚಿಕಿತ್ಸೆಗಳೊಂದಿಗೆ ಬಳಸಬೇಡಿ.

ನೀವು ಟೀ ಟ್ರೀ ಆಯಿಲ್ ಬದಲಾಗಿ ಚರ್ಮಕ್ಕೆ ಬಳಸಬಹುದಾದ ಎಣ್ಣೆಗಳು:

  • ನೀವು ಟೀ ಟ್ರೀ ಎಣ್ಣೆಗೆ ಬದಲಾಗಿ ನಿಮ್ಮ ತ್ವಚೆಯ ರಕ್ಷಣೆಗಾಗಿ ಬೇವಿನ ಎಣ್ಣೆಯನ್ನು ಬಳಸುವುದು, ಉತ್ತಮ ಪರ್ಯಾಯ ಮಾರ್ಗವಾಗಿದೆ.
  • ಅರಿಶಿನ ಎಣ್ಣೆಯು ಅಲರ್ಜಿ-ವಿರೋಧಿ, ಬ್ಯಾಕ್ಟೀರಿಯಾ ವಿರೋಧಿ, ಸೂಕ್ಷ್ಮಣು ವಿರೋಧಿ ಹಾಗೂ ಶಿಲೀಂಧ್ರ, ಆಂಟಿವೈರಸ್​​​ ಹಾಗೂ ಮೊಡವೆಗಳ ಚಿಕಿತ್ಸೆಗೆ ಬಳಸಬಹುದು.
  • ದಾಲ್ಚಿನ್ನಿ ಎಣ್ಣೆಯು ಅದರ ಉರಿಯೂತದ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ. ಆದ್ದರಿಂದ ನೀವು ಟೀ ಟ್ರೀ ಆಯಿಲ್ ಬದಲಾಗಿ ಪರ್ಯಾಯವಾಗಿ ದಾಲ್ಚಿನ್ನಿ ಎಣ್ಣೆಯನ್ನು ಬಳಸಬಹುದಾಗಿದೆ.
  • ರೋಸ್ಮರಿ ತೈಲಗಳು ಸಹ ಉತ್ತಮ ಆಯ್ಕೆಯಾಗಿದೆ. ಆದ್ದರಿಂದ ಟೀ ಟ್ರೀ ಆಯಿಲ್ ಬದಲಾಗಿ ಪರ್ಯಾಯವಾಗಿ ರೋಸ್ಮರಿ ತೈಲವನ್ನು ಬಳಸಬಹುದಾಗಿದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: 

Published On - 10:47 am, Wed, 1 February 23