Quick and Easy Recipes: ಆರೋಗ್ಯಕರ ಓಟ್ಸ್ ದೋಸೆ ರೆಸಿಪಿ ಇಲ್ಲಿದೆ
ನೀವು ಸಾಮಾನ್ಯವಾಗಿ ಮನೆಯಲ್ಲಿ ಮಾಡುವ ಅಕ್ಕಿ ದೋಸೆಯ ಬದಲಾಗಿ ಆರೋಗ್ಯಕರ ಓಟ್ಸ್ ದೋಸೆಯನ್ನು ತಯಾರಿಸಬಹುದಾಗಿದೆ. ಈ ಆರೋಗ್ಯಕರ ಪಾಕವಿಧಾನವನ್ನು ಮಧ್ಯಾಹ್ನ ಮತ್ತು ರಾತ್ರಿಯ ಊಟಕ್ಕೆ ಮಾಡಬಹುದು.
ಒಟ್ಸ್ನಲ್ಲಿ ಕ್ಯಾಲ್ಸಿಯಂ, ಪೊಟ್ಯಾಷಿಯಂ, ವಿಟಮಿನ್ ಬಿ ಮತ್ತು ಮೆಗ್ನಿಷಿಯಂ ಅಂಶ ಸಮೃದ್ಧವಾಗಿದ್ದು, ಇದು ಜೀರ್ಣ ಕ್ರಿಯೆಗೆ ಸಹಕಾರಿಯಾಗಿದೆ. ಆದ್ದರಿಂದ ನಿಮ್ಮ ಆಹಾರದಲ್ಲಿ ಓಟ್ಸ್ ಬಳಸುವುದರಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಕಾಣಬಹುದು. ನೀವು ಸಾಮಾನ್ಯವಾಗಿ ಮನೆಯಲ್ಲಿ ಮಾಡುವ ಅಕ್ಕಿ ದೋಸೆಯ ಬದಲಾಗಿ ಆರೋಗ್ಯಕರ ಓಟ್ಸ್ ದೋಸೆಯನ್ನು ತಯಾರಿಸಬಹುದಾಗಿದೆ. ಈ ಆರೋಗ್ಯಕರ ಪಾಕವಿಧಾನವನ್ನು ಮಧ್ಯಾಹ್ನ ಮತ್ತು ರಾತ್ರಿಯ ಊಟಕ್ಕೆ ಮಾಡಬಹುದು. ಇದು ತುಂಬಾ ಆರೋಗ್ಯಕರ ಖಾದ್ಯವಾಗಿದ್ದು, ನಿಮ್ಮ ದೇಹದ ತೂಕ ಹೆಚ್ಚಾಗದಂತೆ ನೋಡಿಕೊಳ್ಳುತ್ತದೆ. ಈ ಓಟ್ಸ್ ದೋಸೆಯನ್ನು ಕೆಲವೇ ನಿಮಿಷಗಳಲ್ಲಿ ತಯಾರಿಸಬಹುದು.
ಓಟ್ಸ್ ದೋಸೆ ರೆಸಿಪಿ:
ಓಟ್ಸ್ ದೋಸೆ ರೆಸಿಪಿಗೆ ಬೇಕಾಗುವ ಸಾಮಾಗ್ರಿಗಳು:
1 ಕಪ್ ಓಟ್ಸ್ 1/2 ಕಪ್ ಅಕ್ಕಿ ಹಿಟ್ಟು 1/2 ಕಪ್ ರವೆ 2 ಕತ್ತರಿಸಿದ ಈರುಳ್ಳಿ 1 ಚಮಚ ಕರಿ ಮೆಣಸು ರುಚಿಗೆ ತಕ್ಕಷ್ಟು ಉಪ್ಪು 2 ಕಪ್ ಮಜ್ಜಿಗೆ 3 ಕತ್ತರಿಸಿದ ಹಸಿ ಮೆಣಸಿನಕಾಯಿ 1 ಚಮಚ ಜೀರಿಗೆ
ಇದನ್ನೂ ಓದಿ: ಲಾವಾ ಇಡ್ಲಿ ಟ್ರೆಂಡಿಂಗ್, ಆದರೆ ಇದು ಆಹಾರ ಪ್ರಿಯರ ಮೆಚ್ಚುಗೆ ಪಡೆದಿಲ್ಲ ಯಾಕೆ?
ಓಟ್ಸ್ ದೋಸೆ ಮಾಡುವ ವಿಧಾನ:
ಹಂತ 1 ಓಟ್ಸ್ ಪುಡಿಮಾಡಿ:
ಮೊದಲಿಗೆ ಓಟ್ಸ್ನ್ನು ಮಿಕ್ಸಿ ಜಾರ್‌ನಲ್ಲಿ ಹಾಕಿ ಮತ್ತು ಒರಟಾಗಿ ಪುಡಿ ಮಾಡಿಕೊಳ್ಳಿ. ನಂತರ ಈ ಪುಡಿಯನ್ನು ಒಂದು ಬಟ್ಟಲಿಗೆ ಹಾಕಿ ಮತ್ತು ಮಜ್ಜಿಗೆ, ರವೆ, ಅಕ್ಕಿ ಹಿಟ್ಟು ಮತ್ತು ಉಪ್ಪು ಸೇರಿಸಿ. ಈ ಎಲ್ಲಾ ಪದಾರ್ಥಗಳನ್ನು ಸರಿಯಾಗಿ ಮಿಶ್ರಣ ಮಾಡಿ.
ಹಂತ 2 ಹಿಟ್ಟನ್ನು ತಯಾರಿಸಿ:
ನಂತರ, ಜೀರಿಗೆ ಮತ್ತು ಕಾಳು ಮೆಣಸುಗಳನ್ನು ಪ್ರತ್ಯೇಕವಾಗಿ ರುಬ್ಬಿಕೊಳ್ಳಿ ಮತ್ತು ಅವುಗಳನ್ನು ಈಗಾಗಲೇ ತಯಾರಿಸಿದ ಹಿಟ್ಟಿಗೆ ಸೇರಿಸಿ. ನಂತರ ಬಾಣಲೆಯಲ್ಲಿ ಕತ್ತರಿಸಿದ ಈರುಳ್ಳಿ ಮತ್ತು ಹಸಿ ಮೆಣಸಿನಕಾಯಿಗಳನ್ನು ಸೇರಿಸಿ ಮತ್ತು ಮಿಶ್ರಣವನ್ನು ಚೆನ್ನಾಗಿ ಬೆರೆಸಿ. ಈಗ, ನಾನ್-ಸ್ಟಿಕ್ ಪ್ಯಾನ್ ತೆಗೆದುಕೊಂಡು ಮಧ್ಯಮ ಉರಿಯಲ್ಲಿ ಬಿಸಿ ಮಾಡಿ. ತವಾ ಸಾಕಷ್ಟು ಬಿಸಿಯಾದ ನಂತರ, ಒಂದು ಲೋಟ ಹಿಟ್ಟನ್ನು ಸುರಿಯಿರಿ. ನೀವು ಸಾಮಾನ್ಯವಾಗಿ ಮಾಡುವ ರೀತಿಯಲ್ಲಿಯೇ ದೋಸೆ ತಯಾರಿಸಿ. ಈಗ ಆರೋಗ್ಯಕರ ಓಟ್ಸ್ ದೋಸೆಯನ್ನು ಟೊಮೆಟೊ ಚಟ್ನಿಯೊಂದಿಗೆ ಸವಿಯಿರಿ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: