Popcorn for weight loss: ಪಾಪ್ ಕಾರ್ನ್ ತಿನ್ನುವುದರಿಂದ ತೂಕ ಕಳೆದುಕೊಳ್ಳಲು ಸಾಧ್ಯವೇ? ತಜ್ಞರ ಸಲಹೆ ಇಲ್ಲಿದೆ
ಸಾಮಾನ್ಯವಾಗಿ ಸಿನಿಮಾ ನೋಡುವ ಸಮಯದಲ್ಲಂತೂ ಪಾಪ್ ಕಾರ್ನ್ ಬೇಕೇ ಬೇಕು. ಆದರೆ ಪಾಪ್ ಕಾರ್ನ್ ತಿನ್ನುವುದರಿಂದ ತೂಕ ಇಳಿಸಬಹುದಾ? ಈ ಕುರಿತು ಆರೋಗ್ಯ ತಜ್ಞರು ಹೇಳುವುದೇನು? ಇಲ್ಲಿದೆ ವಿವರ.
ಸಾಮಾನ್ಯವಾಗಿ ಸಿನಿಮಾ ನೋಡುವ ಸಮಯದಲ್ಲಂತೂ ಪಾಪ್ ಕಾರ್ನ್(Popcorn) ಬೇಕೇ ಬೇಕು. ಆದರೆ ಪಾಪ್ ಕಾರ್ನ್ ತಿನ್ನುವುದರಿಂದ ತೂಕ ಇಳಿಸಬಹುದಾ? ಈ ಕುರಿತು ಆರೋಗ್ಯ ತಜ್ಞರು ಹೇಳುವುದೇನು? ಇಲ್ಲಿದೆ ವಿವರ. ತೂಕ ಇಳಿಸಿಕೊಳ್ಳಲು ಬಯಸುವವರು ಸಾಮಾನ್ಯವಾಗಿ ಯಾವ ಆಹಾರ ಸೇವಿಸಬೇಕು ಹಾಗೂ ಸೇವಿಸಿಬಾರದು ಎಂಬ ಸಾಕಷ್ಟು ಗೊಂದಲದಲ್ಲಿರುತ್ತಾರೆ. ನೀವು ನಿಮ್ಮ ತೂಕ ಕಳೆದುಕೊಳ್ಳುವ ಆಹಾರ ಕ್ರಮದಲ್ಲಿ ಪಾಪ್ ಕಾರ್ನ್ನ್ನು ಸೇರಿಸಿಕೊಳ್ಳಬಹುದು ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ. ಏಕೆಂದರೆ ಇದರಲ್ಲಿ ಫೈಬರ್‌ನ ಅತ್ಯುತ್ತಮ ಮೂಲವಾಗಿ ಕಾರ್ಯನಿರ್ವಹಿಸುತ್ತದೆ. ಇದಲ್ಲದೇ ಪಾಪ್ಕಾರ್ನ್ನ್ನು ಜೋಳದಿಂದ ತಯಾರಿಸಲಾಗುತ್ತದೆ. ಫೈಬರ್‌ನ ಮೂಲವಾಗಿದ್ದು ಜೊತೆಗೆ ಕಡಿಮೆ ಕ್ಯಾಲೋರಿಯನ್ನು ಹೊಂದಿದೆ.
ಪಾಪ್‌ಕಾರ್ನ್‌ನಲ್ಲಿರುವ ಫೈಬರ್ ಅಂಶವು ಕಾರ್ಬೋಹೈಡ್ರೇಟ್ ಚಯಾಪಚಯವನ್ನು ಸಕ್ಕರೆಯಾಗಿ ನಿಧಾನಗೊಳಿಸುತ್ತದೆ, ಆದ್ದರಿಂದ, ಇನ್ಸುಲಿನ್ ಪ್ರತಿಕ್ರಿಯೆಯನ್ನು ಕಡಿಮೆ ಮಾಡುತ್ತದೆ. ಪಾಪ್‌ಕಾರ್ನ್ ಮಧುಮೇಹಿಗಳಿಗೆ ಮತ್ತು ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಉತ್ತಮ ಆಹಾರವಾಗಿದೆ ಎಂದು ದೆಹಲಿಯ ಪೌಷ್ಟಿಕತಜ್ಞರಾದ ಶಿಲ್ಪಾ ಅರೋರಾ ಸಲಹೆ ನೀಡುತ್ತಾರೆ. ಜೊತೆಗೆ ಪಾಪ್‌ಕಾರ್ನ್ ಕೊಬ್ಬಿನ ಅಂಶವನ್ನು ಹೊಂದಿರುವ ತಿಂಡಿ ಅಲ್ಲ ಮತ್ತು ತೂಕ ನಷ್ಟಕ್ಕೆ ಸಾಕಷ್ಟು ಆರೋಗ್ಯಕರವಾಗಿದೆ. ಆದರೆ ನೀವು ಹೆಚ್ಚು ಬೆಣ್ಣೆ ಅಥವಾ ಚೀಸ್ ಹೊಂದಿರುವ ಪಾಪ್‌ಕಾರ್ನ್ ತಿನ್ನಬೇಡಿ ಎಂದು ಪೌಷ್ಟಿಕತಜ್ಞರು ಎಚ್ಚರಿಸುತ್ತಾರೆ. ಸಾಕಷ್ಟು ಬೆಣ್ಣೆ ಅಥವಾ ತುಪ್ಪ ಬಳಸಿ ತಯಾರಿಸಿದ ಪಾಪ್‌ಕಾರ್ನ್ ನಿಮ್ಮ ನಾಲಿಗೆಗೆ ಸಾಕಷ್ಟು ರುಚಿಯನ್ನು ನೀಡಿದರೂ ಸಹ, ವಿಶೇಷವಾಗಿ ತೂಕ ಕಳೆದುಕೊಳ್ಳಲು ಬಯಸುವವರು ಇದನ್ನು ಸೇವಿಸಬೇಡಿ ಎಂದು ಹೇಳುತ್ತಾರೆ.
ಇದನ್ನೂ ಓದಿ: ಒಣ ಹಾಗೂ ಸೂಕ್ಷ್ಮ ತ್ವಚೆಯ ಆರೋಗ್ಯ ಕಾಪಾಡಲು ಈ ಕ್ರಮವನ್ನು ಅನುಸರಿಸಿ
ಮುಂಬೈ ಮೂಲದ ಮತ್ತೊಂದು ಪೌಷ್ಟಿಕತಜ್ಞರಾದ ಕರಿಷ್ಮಾ ಚಾವ್ಲಾ ಪಾಪ್‌ಕಾರ್ನ್ ತಿನ್ನುವುದರಿಂದಾಗುವ ಪ್ರಯೋಜನಗಳ ಕುರಿತು ಹೇಳಿದ್ದಾರೆ. ಪಾಪ್ಕಾರ್ನ್ನ್ನು ಉತ್ತಮ ಪ್ರಮಾಣದ ಫೈಬರ್‌ನೊಂದಿಗಿನ ಸಂಪೂರ್ಣ ಧಾನ್ಯವೆಂದು ಪರಿಗಣಿಸಲಾಗುತ್ತದೆ. ಆದರೆ ಅದನ್ನು ಒಂದೇ ಬಾರಿ ಅತಿಯಾಗಿ ತಿನ್ನುವುದು ಇನ್ಸುಲಿನ್ ಸ್ಪೈಕ್‌ಗೆ ಕಾರಣವಾಗುತ್ತದೆ. ಜೊತೆಗೆ ಕರುಳಿನ ಆರೋಗ್ಯದ ಮೇಲೂ ಕೆಟ್ಟ ಪರಿಣಾಮ ಬೀರಬಹುದು ಮತ್ತು ಇದು ಉರಿಯೂತಕ್ಕೆ ಕಾರಣವಾಗಬಹುದು. ಆದ್ದರಿಂದ ಅತಿಯಾಗಿ ತಿನ್ನುವುದನ್ನು ತಪ್ಪಿಸಬೇಕು ಎಂದು ಅವರು ಹೇಳಿದ್ದಾರೆ. ಪಾಪ್‌ಕಾರ್ನ್‌ನಲ್ಲಿ ಉಪ್ಪು, ಬೆಣ್ಣೆ ಅಥವಾ ಕ್ಯಾರಮೆಲ್ ಇಲ್ಲದಿದ್ದಲ್ಲಿ, ತೂಕ ಇಳಿಸುವ ಆಹಾರದಲ್ಲಿ ಖಂಡಿತವಾಗಿಯೂ ಸಣ್ಣ ಪ್ರಮಾಣದಲ್ಲಿ ಸೇವಿಸಬಹುದು ಎಂದು ಹೇಳುತ್ತಾರೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 12:00 pm, Wed, 1 February 23