Lava Idli Trend: ಲಾವಾ ಇಡ್ಲಿ ಟ್ರೆಂಡಿಂಗ್, ಆದರೆ ಇದು ಆಹಾರ ಪ್ರಿಯರ ಮೆಚ್ಚುಗೆ ಪಡೆದಿಲ್ಲ ಯಾಕೆ?

ನೀವು ಬೆಳಗ್ಗಿನ ಉಪಹಾರದ ಬಗ್ಗೆ ಯೋಚಿಸಿದಾಗ, ದಕ್ಷಿಣ ಭಾರತದ ಭಕ್ಷ್ಯಗಳು ತಕ್ಷಣವೇ ನೆನಪಿಗೆ ಬರುತ್ತವೆ. ಇಡ್ಲಿ, ದೋಸೆ ಮತ್ತು ಅಪ್ಪಮ್‌ಗಳು ದೇಶದಾದ್ಯಂತ ಆಹಾರ ಪ್ರಿಯರ ಜನಪ್ರಿಯ ಆಯ್ಕೆಯಾಗಿದೆ.

Lava Idli Trend: ಲಾವಾ ಇಡ್ಲಿ ಟ್ರೆಂಡಿಂಗ್, ಆದರೆ ಇದು ಆಹಾರ ಪ್ರಿಯರ ಮೆಚ್ಚುಗೆ ಪಡೆದಿಲ್ಲ ಯಾಕೆ?
Lava Idli Image Credit source: social Media
Follow us
ಅಕ್ಷಯ್​ ಪಲ್ಲಮಜಲು​​
|

Updated on:Jan 31, 2023 | 7:16 PM

ನೀವು ಬೆಳಗ್ಗಿನ ಉಪಹಾರದ ಬಗ್ಗೆ ಯೋಚಿಸಿದಾಗ, ದಕ್ಷಿಣ ಭಾರತದ ಭಕ್ಷ್ಯಗಳು ತಕ್ಷಣವೇ ನೆನಪಿಗೆ ಬರುತ್ತವೆ. ಇಡ್ಲಿ, ದೋಸೆ ಮತ್ತು ಅಪ್ಪಮ್‌ಗಳು ದೇಶದಾದ್ಯಂತ ಆಹಾರ ಪ್ರಿಯರ ಜನಪ್ರಿಯ ಆಯ್ಕೆಯಾಗಿದೆ. ಕಾಲಾನಂತರದಲ್ಲಿ ಈ ಕ್ಲಾಸಿಕ್ ಭಕ್ಷ್ಯಗಳು ಹಲವಾರು ರೂಪಾಂತರಗಳಿಗೆ ಒಳಗಾಗಿವೆ. ಈ ಕೆಲವು ರೂಪಾಂತರಗಳು ಜನಪ್ರಿಯವಾದರೆ, ಇನ್ನು ಕೆಲವು ಆಹಾರ ಪ್ರಿಯರನ್ನು ಮೆಚ್ಚಿಸಲು ವಿಫಲವಾಗಿದೆ. ಇದಕ್ಕೆ ಒಂದು ನಿದರ್ಶನವೆಂದರೆ ಲಾವಾ ಇಡ್ಲಿ. ಇದು ಪ್ರಸ್ತುತ ಇಂಟರ್‌ನೆಟ್‌ನಲ್ಲಿ ವೈರಲ್ ಆಗುತ್ತಿರುವ ಭಕ್ಷ್ಯವಾಗಿದೆ.

ಇದು ಇಡ್ಲಿ ಮತ್ತು ಗೋಲ್ಗಪ್ಪಗಳ ಸಂಯೋಜನೆಯಾಗಿದೆ. ಈ ಪಾಕವಿಧಾನವನ್ನು ತೋರಿಸುವ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ. ಇದನ್ನು ಗ್ರೀಸ್ ಮಾಡಿದ ಅಚ್ಚುಗಳು ಅಥವಾ ಬಟ್ಟಲುಗಳಿಗೆ ಇಡ್ಲಿ ಹಿಟ್ಟನ್ನು ಸೇರಿಸಿ ನಂತರ ಸಾಂಬರ್‌ನಿಂದ ತುಂಬಿಸಿದ ಗೊಲ್ಗಪ್ಪವನ್ನು ಅದರ ಮಧ್ಯ ಹಾಕಿ ಅದರ ಮೇಲೆ ಮತ್ತೊಮ್ಮೆ ಹಿಟ್ಟನ್ನು ಸುರಿಯಲಾಗುತ್ತದೆ. ಹೀಗೆ ಮಾಡಿಟ್ಟ ಲಾವಾ ಇಡ್ಲಿಯನ್ನು 8 ರಿಂದ 10 ನಿಮಿಷಗಳ ಕಾಲ ಹಬೆಯಲ್ಲಿ ಬೇಯಿಸಲಾಗುತ್ತದೆ.

ಇದನ್ನು ಓದಿ: Food Cravings: ತೂಕ ಕಳೆದುಕೊಳ್ಳಲು ಪ್ರಯತ್ನಿಸುತ್ತಿದ್ದರೆ ಈ ಟಿಪ್ಸ್ ಫಾಲೋ ಮಾಡಿ

ಈ ಒಂದು ಭಕ್ಷ್ಯವು ಆಹಾರಪ್ರಿಯರನ್ನು ಮೆಚ್ಚಿಸುವಲ್ಲಿ ವಿಫಲವಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಅನೇಕ ಜನರು ಈ ಲಾವಾ ಇಡ್ಲಿ ರೆಸಿಪಿಗೆ ಟೀಕೆಯನ್ನು ಮಾಡಿದ್ದಾರೆ. ಒಬ್ಬ ಸಾಮಾಜಿಕ ಬಳಕೆದಾರ ‘ಈ ಇಡ್ಲಿಯನ್ನು ಯಾರು ಮಾಡಿದ್ದಾರೋ ಅವರು ಶಿಕ್ಷೆಗೆ ಅರ್ಹರು. ಇಲ್ಲಿ ಇಡ್ಲಿಗೆ ಅಥವಾ ಗೋಲ್ಗಪ್ಪಕ್ಕೆ ನ್ಯಾಯ ಸಿಕ್ಕಿಲ್ಲ ಎಂದು ಟೀಕೆ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ಈ ಲಾವಾ ಇಡ್ಲಿ ವಿಡಿಯೋವನ್ನು ಶೇರ್ ಮಾಡುತ್ತಾ ‘ನನ್ನೊಳಗೆ ಏನೋ ಸತ್ತು ಹೋಯಿತು’ ಎಂದು ಹೇಳಿದ್ದಾರೆ. ಹೀಗೆ ಈ ಲಾವಾ ಇಡ್ಲಿ ಅನೆಕ ಜನರ ಟೀಕೆಗೆ ಗುರಿಯಾಗಿದೆ. ಆಹಾರ ಪ್ರಿಯರನ್ನು ಮೆಚ್ಚಿಸುವಲ್ಲಿ ಈ ಭಕ್ಷ್ಯ ವಿಫಲವಾಗಿದೆ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:16 pm, Tue, 31 January 23

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್