ದೇಶದಲ್ಲಿ ಈಗ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಸ್ಮಾರ್ಟ್‌ಫೋನ್ ಬಳಕೆದಾರರಿದ್ದಾರೆ. ಜಾಗತಿಕವಾಗಿ ಭಾರತ, ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಎರಡನೇ ಸ್ಥಾನದಲ್ಲಿದೆ. ಸದ್ಯದ ಪರಿಸ್ಥಿತಿಯಲ್ಲಿ ಜನರು ಊಟ- ತಿಂಡಿ ಬೇಕಾದರೂ ಬಿಟ್ಟಿರುತ್ತಾರೆ ಇಂಟರ್‌ನೆಟ್ ಮತ್ತು ಸ್ಮಾರ್ಟ್‌ಫೋನ್ ಮಾತ್ರ ಬಿಟ್ಟಿರಲು ಸಾಧ್ಯವಿಲ್ಲ ಎನ್ನುವ ಮನಸ್ಥಿತಿಯಲ್ಲಿದ್ದಾರೆ. ಇದರ ಬಳಕೆಯು ಜನರನ್ನು ಸಾಮಾಜಿಕ ಮಾಧ್ಯಮಕ್ಕೆ ವ್ಯಸನಿಯನ್ನಾಗಿ ಮಾಡಿದೆ. ಇಂದಿನ ಡಿಜಿಟಲ್ ಯುಗದಲ್ಲಿ, ಸಾಮಾಜಿಕ ಮಾಧ್ಯಮ ಜೀವನದ ಪ್ರಮುಖ ಭಾಗವಾಗಿದೆ. ಯುವ ಪೀಳಿಗೆ ಇದರಲ್ಲಿಯೇ ಗಂಟೆಗಟ್ಟಲೆ ಸಮಯ ಕಳೆಯುತ್ತಿದ್ದಾರೆ, ಸ್ನೇಹಿತರು ಮತ್ತು ಕುಟುಂಬದೊಂದಿಗೆ ಮಾತುಕತೆ, ಮಾಹಿತಿ, ಮನರಂಜನೆಗಾಗಿ ಇದನ್ನು ಹೆಚ್ಚಾಗಿ ಬಳಸುತ್ತಿದ್ದಾರೆ. ಆದರೆ ಇದರಿಂದ ಕೆಟ್ಟ ಪರಿಣಾಮಗಳಿವೆ ಎಂಬುದು ನಿಮಗೆ ತಿಳಿದಿದೆಯೇ, ವಿಶೇಷವಾಗಿ ಮಾನಸಿಕ ಆರೋಗ್ಯದ ವಿಷಯಕ್ಕೆ ಬಂದಾಗ ಸಾಮಾಜಿಕ ಮಾಧ್ಯಮವು ಯುವ ಜನರಲ್ಲಿ ಒತ್ತಡಕ್ಕೆ ಪ್ರಮುಖ ಕಾರಣವಾಗಬಹುದು ಎಂದು ಅಧ್ಯಯನಗಳು ತಿಳಿಸಿವೆ.
ಜನರು ಈ ರೀತಿಯಲ್ಲಿ ಹೆಚ್ಚು ಸಮಯ ಕಳೆದಾಗ, ಕೆಲಸ, ಅಧ್ಯಯನ, ಸ್ನೇಹ ಮತ್ತು ಕುಟುಂಬದವರೊಂದಿಗೆ ಬೆರೆಯುವುದು, ಇನ್ನಿತರ ಚಟುವಟಿಕೆಗಳಿಂದ ಸಂಪರ್ಕ ಕಡಿದುಕೊಳ್ಳಲು ಪ್ರಾರಂಭಿಸುತ್ತಾರೆ. ಇಂತಹ ನಿರ್ಧಾರಗಳು ಅವರನ್ನು ಒಂಟಿಯನ್ನಾಗಿ ಮಾಡುತ್ತದೆ ಇದರಿಂದ ಅವರು ಮಾನಸಿಕ ಒತ್ತಡಕ್ಕೆ ಗುರಿಯಾಗುತ್ತಾರೆ. ಕೆಲವೊಮ್ಮೆ ನಾವು ಇತರರು ಸಂತೋಷವಾಗಿರುವುದನ್ನು ನೋಡಿ ಅಥವಾ ಅವರ ಜೀವನ ಶೈಲಿಯಂತೆ ಇರಬೇಕೆಂದು ಬಯಸುತ್ತೇವೆ, ನಮ್ಮ ಮನಸ್ಸಿಗೆ ಇಂತಹ ವಿಷಯಗಳನ್ನು ನಿಯಂತ್ರಿಸುವುದು ಕಷ್ಟವಾಗುತ್ತದೆ. ಕ್ರಮೇಣ ಯುವ ಜನತೆ ತಮ್ಮನ್ನು ಇತರರೊಂದಿಗೆ ಹೋಲಿಸಿಕೊಳ್ಳಲು ಪ್ರಾರಂಭಿಸುತ್ತಾರೆ, ಇದು ಅವರಿಗೆ ಅವರ ಮೇಲೆ ಕೀಳರಿಮೆ ಹುಟ್ಟಿಕೊಳ್ಳುವಂತೆ ಮಾಡುತ್ತದೆ ಇದರಿಂದ ಒತ್ತಡಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚು.
ಡಾ. ಕುಮಾರ್ ಅವರು ಹೇಳುವ ಪ್ರಕಾರ ಇಂದು ಯುವ ಜನತೆ ತಡರಾತ್ರಿಯವರೆಗೆ ಸ್ಮಾರ್ಟ್‌ಫೋನ್ ಬಳಸುತ್ತಾರೆ, ಇದರಿಂದಾಗಿ ಅವರ ದೈನಂದಿನ ವ್ಯವಸ್ಥೆಯು ಅಸ್ತವ್ಯಸ್ತವಾಗುತ್ತದೆ ಎಂದು ಹೇಳುತ್ತಾರೆ. ರಾತ್ರಿ ತಡವಾಗಿ ಮಲಗುವುದರಿಂದ ನಿದ್ರೆ ಸಾಕಾಗುವುದಿಲ್ಲ, ಇದು ನಮಗೆ ಕಿರಿಕಿರಿಯನ್ನುಂಟು ಮಾಡುತ್ತದೆ ಫೇಸ್ ಬುಕ್, ಇನ್ಸ್ಟಾಗ್ರಾಮ್ ಮತ್ತು ವಾಟ್ಸಾಪ್ನಂತಹ ಸಾಮಾಜಿಕ ಮಾಧ್ಯಮಗಳನ್ನು ತಡರಾತ್ರಿಯವರೆಗೆ ಬಳಸುವುದರಿಂದ ಕಣ್ಣುಗಳಲ್ಲಿ ನಿದ್ರೆಗೆ ಕಾರಣವಾದ ಮೆಲೋಟೋನಿಯಂ ಹಾರ್ಮೋನ್ ಬಿಡುಗಡೆಯಾಗುವುದನ್ನು ತಡೆಯುತ್ತದೆ. ಹಾಗಾಗಿ ತಡರಾತ್ರಿ ಸಾಮಾಜಿಕ ಮಾಧ್ಯಮವನ್ನು ಬಳಸುವುದರಿಂದ ನಿದ್ರೆಯ ಕೊರತೆ ಉಂಟಾಗುತ್ತದೆ, ಇದು ಆಯಾಸ, ಕಿರಿಕಿರಿ ಮತ್ತು ಏಕಾಗ್ರತೆಯ ಕೊರತೆಗೆ ಕಾರಣವಾಗುತ್ತದೆ, ಇದರಿಂದ ಒತ್ತಡ ಅನುಭವಿಸಬೇಕಾಗುತ್ತದೆ. ಅನೇಕ ಬಾರಿ ಯುವ ಜನತೆ ತಿಳಿದೋ ತಿಳಿಯದೆಯೋ ಸಾಮಾಜಿಕ ಮಾಧ್ಯಮದಲ್ಲಿ ಆನ್ಲೈನ್ ಕಿರುಕುಳ ಮತ್ತು ಬೆದರಿಕೆಗಳನ್ನು ಎದುರಿಸಬೇಕಾಗುತ್ತದೆ, ಇದು ಅವರಲ್ಲಿ ಮಾನಸಿಕ ಒತ್ತಡವನ್ನು ಸೃಷ್ಟಿಸುತ್ತದೆ.
ಇದನ್ನೂ ಓದಿ: ನಿಮ್ಮ ಗರ್ಲ್ ಫ್ರೆಂಡ್ ಮಾತು ಮಾತಿಗೂ ಕಣ್ಣೀರು ಹಾಕ್ತಾರ? ಹಾಗಾದ್ರೆ ಇಂತವರ ಬಗ್ಗೆ ತಜ್ಞರು ಹೇಳಿದ ರಹಸ್ಯ ಇಲ್ಲಿದೆ
* ಒಂದು ದಿನದಲ್ಲಿ ಎಷ್ಟು ಸಮಯ ಸಾಮಾಜಿಕ ಮಾಧ್ಯಮವನ್ನು ವೀಕ್ಷಿಸಲು ಬಯಸುತ್ತೀರಿ ಎಂಬುದನ್ನು ನಿರ್ಧರಿಸಿ. ಬಳಿಕ ಅದನ್ನು ಸರಿಯಾಗಿ ಪಾಲಿಸಿ.
* ಕುಟುಂಬ ಮತ್ತು ಸ್ನೇಹಿತರೊಂದಿಗೆ ಹೆಚ್ಚಿನ ಸಮಯ ಕಳೆಯಿರಿ.
* ಜನರು ಹೆಚ್ಚಾಗಿ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಕಷ್ಟಗಳನ್ನು ಹಂಚಿಕೊಳ್ಳುವ ಬದಲು ಸುಖ, ಸಂತೋಷದ ವಿಷಯಗಳನ್ನು ಎಲ್ಲರಿಗೂ ಕಾಣುವಂತೆ ಹಂಚಿಕೊಳ್ಳುತ್ತಾರೆ, ಆದ್ದರಿಂದ ನಿಮ್ಮನ್ನು ಇತರರೊಂದಿಗೆ ಹೋಲಿಸಿಕೊಳ್ಳುವುದನ್ನು ತಪ್ಪಿಸಿ.
* ನಿಮಗೆ ತೊಂದರೆ ನೀಡುವ ಅಥವಾ ಕಿರಿಕಿರಿ ಉಂಟುಮಾಡುವ ಸುದ್ದಿ ಮತ್ತು ಪೋಸ್ಟ್ ಗಳನ್ನು ಓದುವುದು ಮತ್ತು ನೋಡುವುದನ್ನು ತಪ್ಪಿಸಿ.
ಮತ್ತಷ್ಟು ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ