Stridhan law in IPC: ಅಮೂಲ್ಯವಾದ ಸ್ತ್ರೀಧನ ಮಹಿಳೆಯರಿಗೆ ಆಪತ್ಬಾಂಧವ -ಏನೆಲ್ಲಾ ಹಕ್ಕುಗಳಿವೆ ತಿಳಿದುಕೊಳ್ಳಿ

ಅಮೂಲ್ಯವಾದ ಸ್ತ್ರೀಧನ ಎಂಬುದು ಆಕೆಯ ವಿಶೇಷ ಆಸ್ತಿ ಎಂದು ಪರಿಗಣಿಸಲಾಗುತ್ತದೆ. ಅವಳ ವೈವಾಹಿಕ ಸಂಬಂಧದಲ್ಲಿ ಆರ್ಥಿಕ ಭದ್ರತೆ ಮತ್ತು ಸ್ವಾತಂತ್ರ್ಯವನ್ನು ಒದಗಿಸುವ ಉದ್ದೇಶವನ್ನು ಹೊಂದಿದೆ ಎಂದು ಇತ್ತೀಚಿನ ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಮಹಿಳೆಯು ತನ್ನ ಗಂಡನಿಗೆ ಯಾವುದೇ ಕೊಡುಗೆಯನ್ನು ನೀಡಿದರೂ ಅದನ್ನು ಸಾಲದ ರೂಪದಲ್ಲಿ ಹಿಂದಿರುಗಿಸಬೇಕು ಎಂದೂ ಪ್ರತಿಪಾದಿಸುತ್ತದೆ. ಅಷ್ಟರಮಟ್ಟಿಗೆ ಸ್ತ್ರೀಧನಕ್ಕೆ ಕೋರ್ಟ್​ ಮಾನ್ಯತೆ ಕಲ್ಪಿಸಿದೆ.

Stridhan law in IPC: ಅಮೂಲ್ಯವಾದ ಸ್ತ್ರೀಧನ ಮಹಿಳೆಯರಿಗೆ ಆಪತ್ಬಾಂಧವ -ಏನೆಲ್ಲಾ ಹಕ್ಕುಗಳಿವೆ ತಿಳಿದುಕೊಳ್ಳಿ
ಮಹಿಳೆಯರಿಗೆ ಆಪದ್ಭಾಂದವ ವಾಗುವ ಸ್ತ್ರಿಧನ ಹಕ್ಕುಗಳು

Updated on: May 25, 2024 | 1:17 PM

ಸ್ತ್ರೀಧನ ಎಂಬುದು ಮಹಿಳೆಯು ತನ್ನ ಮದುವೆಯ ಮೊದಲು, ಮದುವೆಯ ಸಮಯದಲ್ಲಿ, ಹೆರಿಗೆಯ ಸಮಯದಲ್ಲಿ ಅಥವಾ ವಿಧವೆಯಾದ ಸಮಯದಲ್ಲಿ, ಪ್ರಾಥಮಿಕವಾಗಿ ಆಕೆಯ ಪೋಷಕರು, ಸಂಬಂಧಿಕರು ಅಥವಾ ಅತ್ತೆ-ಮಾವನ ಕಡೆಯಿಂದ ಪಡೆಯುವ ಆಭರಣ, ಉಡುಗೊರೆಗಳು, ಹಣ, ಹೂಡಿಕೆಗಳು, ಉತ್ತರಾಧಿಕಾರ, ಗಳಿಕೆಗಳು ಮತ್ತು ಅಥವಾ ಆಸ್ತಿಯನ್ನು ಉಲ್ಲೇಖಿಸುತ್ತದೆ. ಮದುವೆಯಾದ ಮೇಲೆ ವಧು ತನ್ನ ಗಂಡನ ಕುಟುಂಬದ ಚರಾಸ್ತಿಯನ್ನು ಪಡೆದರೆ, ಅದು ಅವಳ ಸ್ತ್ರೀಧನವಾಗುತ್ತದೆ. ಗಂಡನಾದವನಿಗೆ ತನ್ನ ಹೆಂಡತಿಯ ಸ್ತ್ರೀಧನದ (ಮಹಿಳೆಯ ಆಸ್ತಿ) ಮೇಲೆ ಯಾವುದೇ ನಿಯಂತ್ರಣವಿರುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಇತ್ತೀಚಿನ ತೀರ್ಪಿನಲ್ಲಿ ಮಹಿಳೆಗೆ ಕಲ್ಪಿಸಿರುವ ಆಸ್ತಿಯ ಮೇಲಿನ ಹಕ್ಕು ವಿಷಯದಲ್ಲಿ ದೃಢವಾಗಿ ಗುರುತಿಸಿದೆ. ಇದು ಆಕೆಯ ವಿಶೇಷ ಆಸ್ತಿ ಎಂದು ಪರಿಗಣಿಸಲಾಗುತ್ತದೆ ಮತ್ತು ಅವಳ ವೈವಾಹಿಕ ಸಂಬಂಧದಲ್ಲಿ ಆರ್ಥಿಕ ಭದ್ರತೆ ಮತ್ತು ಸ್ವಾತಂತ್ರ್ಯವನ್ನು ಒದಗಿಸುವ ಉದ್ದೇಶವನ್ನು ಹೊಂದಿದೆ ಎಂದು ಸ್ಪಷ್ಟವಾಗಿ ಉಲ್ಲೇಖಸಲಾಗಿದೆ. ಈ ತೀರ್ಪು ಮಹಿಳೆಯ ವಿವಾಹದ ಮೊದಲು ಮತ್ತು ನಂತರದ ಆಸ್ತಿಯ ಮೇಲೆ ಆಕೆಯ ಸಂಪೂರ್ಣ ಅಧಿಕಾರವನ್ನು ಬಲಪಡಿಸುತ್ತದೆ. ಮಹಿಳೆಯು ತನ್ನ ಗಂಡನಿಗೆ ಯಾವುದೇ ಕೊಡುಗೆಯನ್ನು ನೀಡಿದರೂ ಅದನ್ನು ಸಾಲದ ರೂಪದಲ್ಲಿ ಹಿಂದಿರುಗಿಸಬೇಕು ಎಂದೂ ಪ್ರತಿಪಾದಿಸುತ್ತದೆ. ಅಷ್ಟರಮಟ್ಟಿಗೆ ಸ್ತ್ರೀಧನಕ್ಕೆ ಕೋರ್ಟ್​ ಮಾನ್ಯತೆ ಕಲ್ಪಿಸಿದೆ. ಸುಪ್ರೀಂಕೋರ್ಟ್​ ಇಂತಹ ತೀರ್ಪು ನೀಡುವುದಕ್ಕೆ ಕಾರಣೀಭೂತವಾದ ಪ್ರಕರಣವಾದರೂ ಏನು ಎಂಬುದನ್ನು ನೋಡಿದಾಗ… ಕೇರಳದ ಹಿಂದೂ ವಿವಾಹಿತ ಮಹಿಳೆಯೊಬ್ಬರು ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿಯೊಂದನ್ನು ಸಲ್ಲಿಸಿದ್ದರು. ತನ್ನ ಪತಿ ಮಾಡಿದ್ದ ಸಾಲವನ್ನು ತೀರಿಸಲು 89 ಪವನ್ ಚಿನ್ನ ಮತ್ತು 2 ಲಕ್ಷ ರೂ. ನೀಡಿದ್ದೆ. ಅದನ್ನು ವಾಪಸ್​ ಕೊಡಿಸಬೇಕು ಎಂದು ಕೋರಿದ್ದರು. ಅದರಂತೆ ಕೌಟುಂಬಿಕ...

Published On - 11:27 am, Sat, 25 May 24

ಪೂರ್ಣ ಸುದ್ದಿಯನ್ನು ಓದಲು Tv9 ಆ್ಯಪ್ ಡೌನ್​ಲೋಡ್ ಮಾಡಿ

ಎಕ್ಸ್​ಕ್ಲೂಸಿವ್ ಸುದ್ದಿಗಳ ಅನ್​ಲಿಮಿಟೆಡ್ ಆಕ್ಸೆಸ್ Tv9 ಆ್ಯಪ್​ನಲ್ಲಿ ಮುಂದುವರೆಯಿರಿ