Solar Eclipse 2022: ಸೂರ್ಯಗ್ರಹಣದ ಸಂದರ್ಭದಲ್ಲಿ ಏನು ಮಾಡಬೇಕು? ಏನು ಮಾಡಬಾರದು?

| Updated By: ಸುಷ್ಮಾ ಚಕ್ರೆ

Updated on: Apr 28, 2022 | 7:51 PM

Surya Grahan Date: ಏಪ್ರಿಲ್ 30ರಂದು ಭಾಗಶಃ ಸೂರ್ಯಗ್ರಹಣವು ಮಧ್ಯಾಹ್ನ 12:15ಕ್ಕೆ ಪ್ರಾರಂಭವಾಗುತ್ತದೆ. ಸಂಜೆ 4 ಗಂಟೆಯವರೆಗೆ ಸೂರ್ಯಗ್ರಹಣ ಇರುತ್ತದೆ. ಜನರು ಸೂರ್ಯಗ್ರಹಣದ ಸಮಯದಲ್ಲಿ ಮಾಡಬೇಕಾದ ಮತ್ತು ಮಾಡಬಾರದ ವಿಷಯಗಳು ಇಲ್ಲಿವೆ.

Solar Eclipse 2022: ಸೂರ್ಯಗ್ರಹಣದ ಸಂದರ್ಭದಲ್ಲಿ ಏನು ಮಾಡಬೇಕು? ಏನು ಮಾಡಬಾರದು?
ಸೂರ್ಯ ಗ್ರಹಣ
Follow us on

ನವದೆಹಲಿ: ಈ ವರ್ಷದ ಮೊದಲ ಸೂರ್ಯಗ್ರಹಣವು  (Surya Grahan) ಏಪ್ರಿಲ್ 30ರಂದು ನಡೆಯಲು ಸಿದ್ಧವಾಗಿದೆ. 2022ರ ಮೊದಲ ಸೂರ್ಯಗ್ರಹಣ ಇದಾಗಿದೆ. ಈ ವರ್ಷದ ಮೊದಲ ಸೂರ್ಯಗ್ರಹಣ (Solar Eclipse) ಸಂಭವಿಸಿದ 15 ದಿನಗಳ ನಂತರ, ಈ ವರ್ಷದ ಮೊದಲ ಚಂದ್ರಗ್ರಹಣ ಕೂಡ ನಡೆಯಲಿದೆ. ಚಂದ್ರ ಗ್ರಹಣವು ಮೇ 16ರಂದು ಸಂಭವಿಸಲಿದೆ. ಹಿಂದೂ ಪುರಾಣಗಳ ಪ್ರಕಾರ, ಜನರು ಸೂರ್ಯಗ್ರಹಣದ ಸಮಯದಲ್ಲಿ ಮಾಡಬೇಕಾದ ಮತ್ತು ಮಾಡಬಾರದ ವಿಷಯಗಳು ಇಲ್ಲಿವೆ.

ಏಪ್ರಿಲ್ 30ರಂದು ಭಾಗಶಃ ಸೂರ್ಯಗ್ರಹಣವು ಮಧ್ಯಾಹ್ನ 12:15ಕ್ಕೆ ಪ್ರಾರಂಭವಾಗುತ್ತದೆ. ಸಂಜೆ 4 ಗಂಟೆಯವರೆಗೆ ಸೂರ್ಯಗ್ರಹಣ ಇರುತ್ತದೆ. ಆದರೆ, ಭಾರತದಲ್ಲಿ ಸೂರ್ಯಗ್ರಹಣ ಗೋಚರಿಸುವುದಿಲ್ಲ. ದಕ್ಷಿಣ, ಪಶ್ಚಿಮ ಅಮೆರಿಕಾ, ಪೆಸಿಫಿಕ್ ಅಟ್ಲಾಂಟಿಕ್ ಮತ್ತು ಅಂಟಾರ್ಕ್ಟಿಕಾದಲ್ಲಿ ವಾಸಿಸುವ ಜನರು ಸೂರ್ಯಗ್ರಹಣವನ್ನು ವೀಕ್ಷಿಸಬಹುದು.

 

ಸೂರ್ಯ ಗ್ರಹಣ ಎಂದರೇನು?:
ಸೂರ್ಯಗ್ರಹಣವು ಭೂಮಿ ಮತ್ತು ಸೂರ್ಯನ ನಡುವೆ ಚಂದ್ರ ಬಂದಾಗ ನಡೆಯುವ ಸೂರ್ಯ ಗ್ರಹಣ ಸಂಭವಿಸುತ್ತದೆ. ಈ ವೇಳೆ ಚಂದ್ರನ ನೆರಳು ಭೂಮಿಯ ಮೇಲೆ ಬೀಳುತ್ತದೆ. ಮಾಧ್ಯಮ ವರದಿಗಳ ಪ್ರಕಾರ, ಗ್ರಹಣ ಸಮಯದಲ್ಲಿ ಸೂರ್ಯನ ಶೇ. 54ರಷ್ಟು ಮಾತ್ರ ನಿರ್ಬಂಧಿಸಲಾಗುತ್ತದೆ.

ನಾಸಾದ ನೇರ ಪ್ರಸಾರದ ಮೂಲಕ ಸೂರ್ಯಗ್ರಹಣವನ್ನು ವೀಕ್ಷಿಸಬಹುದು ಮತ್ತು ನಾಸಾದ ಯೂಟ್ಯೂಬ್ ಚಾನೆಲ್‌ನಲ್ಲಿ ನೇರಪ್ರಸಾರ ಮಾಡಲಾಗುವುದು. ನಾಸಾದ ಪ್ರಕಾರ, ಚಂದ್ರನು ಸೂರ್ಯ ಮತ್ತು ಭೂಮಿಯ ನಡುವೆ ಚಲಿಸಿದಾಗ ಸೂರ್ಯಗ್ರಹಣ ಸಂಭವಿಸುತ್ತದೆ. ಆಗ ಭೂಮಿಯ ಮೇಲೆ ನೆರಳು ಬೀಳುತ್ತದೆ. ಕೆಲವು ಪ್ರದೇಶಗಳಲ್ಲಿ ಸೂರ್ಯನ ಬೆಳಕನ್ನು ಸಂಪೂರ್ಣವಾಗಿ ಅಥವಾ ಭಾಗಶಃ ನಿರ್ಬಂಧಿಸಲಾಗುತ್ತದೆ. ಭಾಗಶಃ ಗ್ರಹಣದ ಸಮಯದಲ್ಲಿ, ಚಂದ್ರನು ಸೂರ್ಯನನ್ನು ಸಂಪೂರ್ಣವಾಗಿ ಆವರಿಸುವುದಿಲ್ಲ. ಯಾರೋ ಕಚ್ಚಿ ಒಂದು ತುಂಡನ್ನು ತೆಗೆದ ಹಾಗೆ ಕಾಣುವ ಅರ್ಧಚಂದ್ರಾಕಾರದ ಆಕಾರ ಕಂಡುಬರುತ್ತದೆ.

 

ಭಾಗಶಃ ಸೌರ ಗ್ರಹಣ ಯಾವಾಗ ಗೋಚರವಾಗುತ್ತದೆ?:
ಏಪ್ರಿಲ್ 30ರ ಭಾಗಶಃ ಸೂರ್ಯಗ್ರಹಣವು ಏಪ್ರಿಲ್ 30ರಿಂದ ಮೇ 1ರ ಮಧ್ಯರಾತ್ರಿಯಲ್ಲಿ ಪ್ರಾರಂಭವಾಗುತ್ತದೆ. ಕೋಲ್ಕತ್ತಾದ ಸಂಸದ ಬಿರ್ಲಾ ಪ್ಲಾನೆಟೋರಿಯಂ ಪ್ರಕಾರ, ಭಾಗಶಃ ಗ್ರಹಣವು 12:15ಕ್ಕೆ ಪ್ರಾರಂಭವಾಗುತ್ತದೆ ಮತ್ತು ಬೆಳಗ್ಗೆ 4:07ಕ್ಕೆ ಕೊನೆಗೊಳ್ಳುತ್ತದೆ.

 

ಭಾಗಶಃ ಸೌರ ಗ್ರಹಣವು ಎಲ್ಲಿ ಗೋಚರಿಸುತ್ತದೆ?:
ಚಿಲಿ, ಅರ್ಜೆಂಟೀನಾ, ಉರುಗ್ವೆಯ ಹೆಚ್ಚಿನ ಭಾಗಗಳು, ಪಶ್ಚಿಮ ಪರಾಗ್ವೆ, ನೈಋತ್ಯ ಬೊಲಿವಿಯಾ, ಆಗ್ನೇಯ ಪೆರು ಮತ್ತು ನೈಋತ್ಯ ಬ್ರೆಜಿಲ್‌ನಲ್ಲಿ ಈ ಭಾಗಶಃ ಸೂರ್ಯಗ್ರಹಣ ಗೋಚರಿಸುತ್ತದೆ. ಇದು ಅಂಟಾರ್ಕ್ಟಿಕಾದ ವಾಯುವ್ಯ ಕರಾವಳಿಯ ಭಾಗಗಳಲ್ಲಿ, ಫಾಕ್ಲ್ಯಾಂಡ್ ದ್ವೀಪಗಳು ಸೇರಿದಂತೆ ದಕ್ಷಿಣ ಅಮೆರಿಕಾದ ಆಗ್ನೇಯ ಕರಾವಳಿಯ ಅಟ್ಲಾಂಟಿಕ್ ಸಾಗರದಲ್ಲಿ ಮತ್ತು ದಕ್ಷಿಣ ಪೆಸಿಫಿಕ್ ಮಹಾಸಾಗರ ಮತ್ತು ದಕ್ಷಿಣ ಮಹಾಸಾಗರದ ಹೆಚ್ಚಿನ ಭಾಗಗಳಲ್ಲಿ ಕಾಣಿಸಿಕೊಳ್ಳುತ್ತದೆ.

 

ಇದು ಭಾರತದಲ್ಲಿ ಗೋಚರಿಸುತ್ತದೆಯೇ?:
ಇಲ್ಲ. 2022ರ ಮೊದಲ ಭಾಗಶಃ ಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ.

 

ಸೂರ್ಯಗ್ರಹಣದ ಸಮಯದಲ್ಲಿ ಏನು ಮಾಡಬೇಕು?:
– ಸೂರ್ಯಗ್ರಹಣದ ಸಮಯದಲ್ಲಿ ಜನರು ಶಿವನ ಮಂತ್ರವನ್ನು ಪಠಿಸಬೇಕು.

– ಸೂರ್ಯಗ್ರಹಣ ಮುಗಿದ ನಂತರ ಸ್ನಾನ ಮಾಡಿ.

– ಸೂರ್ಯ ಗ್ರಹಣ ಮುಗಿದ ನಂತರ ಜನರು ಮನೆಯನ್ನು ಸ್ವಚ್ಛಗೊಳಿಸಬೇಕು.

– ಗ್ರಹಣ ಮುಗಿದ ನಂತರ ಮನೆಯಲ್ಲಿ ಗಂಗಾಜಲವನ್ನು ಸಿಂಪಡಿಸಬೇಕು.

– ಸೂತಕದ ಅವಧಿಯಲ್ಲಿ ಗರ್ಭಿಣಿಯರು ಮನೆಯೊಳಗೆ ಇರಬೇಕು.

 

ಸೂರ್ಯಗ್ರಹಣದ ಸಮಯದಲ್ಲಿ ಏನು ಮಾಡಬಾರದು?:
– ಜನರು ಸೂರ್ಯಗ್ರಹಣದ ಸಮಯದಲ್ಲಿ ಆಹಾರವನ್ನು ಬೇಯಿಸುವುದು ಮತ್ತು ತಿನ್ನುವುದು ನಿಷೇಧ ಎನ್ನಲಾಗುತ್ತದೆ.

– ಜನರು ಎಂದಿಗೂ ಗ್ರಹಣವನ್ನು ಬರಿಗಣ್ಣುಗಳಿಂದ ನೋಡಬಾರದು ಎಂದು ಸಲಹೆ ನೀಡಲಾಗುತ್ತದೆ.

– ಗ್ರಹಣದ ಸಮಯದಲ್ಲಿ ಮಲಗಬಾರದು.

– ಸೂರ್ಯಗ್ರಹಣದ ಮೊದಲು ಜನರು ತುಳಸಿ ಎಲೆಗಳನ್ನು ನೀರು ಮತ್ತು ಆಹಾರದಲ್ಲಿ ಹಾಕಬೇಕು.

– ಗ್ರಹಣದ ಸಮಯದಲ್ಲಿ ಅನೇಕ ಜನರು ತೀಕ್ಷ್ಣವಾದ ವಸ್ತುವನ್ನು ಬಳಸುವುದಿಲ್ಲ.

ಇದನ್ನೂ ಓದಿ: Solar Eclipse 2022: ಏ. 30ರಂದು ಈ ವರ್ಷದ ಮೊದಲ ಸೂರ್ಯಗ್ರಹಣ; ಈ ಸ್ಥಳಗಳಲ್ಲಿ ಭಾಗಶಃ ಸೂರ್ಯಗ್ರಹಣ ಗೋಚರ

Solar Eclipse 2022 ಏಪ್ರಿಲ್ 30ರಂದು ವರ್ಷದ ಮೊದಲ ಸೂರ್ಯಗ್ರಹಣ; ಇದು ಭಾರತದಲ್ಲಿ ಗೋಚರಿಸುತ್ತದೆಯೇ?