ಹಣ್ಣುಗಳು ಮತ್ತು ತರಕಾರಿಗಳು: ಮಾವು ಮತ್ತು ಕಲ್ಲಂಗಡಿಗಳಲ್ಲಿ ನಾರಿನಂಶ ಹೆಚ್ಚಿದ್ದು, ಸಕ್ಕರೆ ಅಂಶ ಕಡಿಮೆಯಿರುತ್ತದೆ. ಹಾಗೆಯೇ ನೀರಿನಂಶ ಹೆಚ್ಚಾಗಿರುತ್ತದೆ. ಊಟಕ್ಕೂ ಮುನ್ನ ಈ ಹಣ್ಣುಗಳನ್ನು ಸೇವಿಸುವುದು ಉತ್ತಮ. ಪಪ್ಪಾಯಿಯು ಒಟ್ಟಾರೆ ಜೀರ್ಣಕ್ರಿಯೆಗೆ ಸಹಾಯಕವಾಗಿದೆ. ಸೌತೆಕಾಯಿ ಸಲಾಡ್ ಮೊದಲಾದವುಗಳು ಕೂಡ ಉತ್ತಮ ಆಯ್ಕೆ.
ಸೀತಾಫಲವು ನಿಮ್ಮ ದೇಹವನ್ನು ಹೈಡ್ರೇಟೆಡ್ ಆಗಿಡುವ ಮತ್ತೊಂದು ಹಣ್ಣು. ಹಾಗೆಯೇ ವಿಟಮಿನ್ ಎ, ಡಿ, ಬಿ-6, ಕಬ್ಬಿಣ, ಮೆಗ್ನೀಸಿಯಮ್ ಮತ್ತು ನಾರುಗಳಂತಹ ಹೆಚ್ಚಿನ ಪೋಷಕಾಂಶಗಳನ್ನು ಹೊಂದಿರುವ ಕಲ್ಲಂಗಡಿಯು ಮಲಬದ್ಧತೆಯಂತಹ ಕಾಯಿಲೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಹೀಗಾಗಿ ಬೇಸಿಗೆಗೆ ತಕ್ಕುದಾದ ಹಣ್ಣು ಮತ್ತು ತರಕಾರಿಗಳನ್ನು ಹೆಚ್ಚಾಗಿ ಸೇವಿಸಿ.