ಸೂರ್ಯಗ್ರಹಣ ಸಂಭವಿಸುವ ದಿನವೇ ಶನಿ ಅಮಾವಾಸ್ಯೆ; ಈ ದಿನದ ಮಹತ್ವವೇನು? ಶನಿ ದೋಷದಿಂದ ಮುಕ್ತಿ ಪಡೆಯಲು ಇಲ್ಲಿದೆ ಸೂತ್ರ

ಶನಿವಾರವನ್ನು ಭಗವಾನ್ ಶನಿ ದೇವರಿಗೆ ಅರ್ಪಿಸಲಾಗಿದೆ. ಹಾಗೂ ಹಿಂದೂ ಧರ್ಮಗ್ರಂಥಗಳಲ್ಲಿ ಅಮವಾಸ್ಯೆಯ ತಿಥಿಯನ್ನು ಪೂರ್ವಜರಿಗೆ ಸಮರ್ಪಿಸಲಾಗಿದೆ. ಪೂರ್ವಜರಿಗೆ ಸಂಬಂಧಿಸಿದ ಯಾವುದೇ ಕೆಲಸವನ್ನು ಮಾಡಲು ಈ ದಿನಾಂಕವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇದರೊಂದಿಗೆ ಪೂಜೆ, ಸ್ನಾನ, ದಾನ ಇತ್ಯಾದಿಗಳ ವಿಶೇಷ ಮಹತ್ವವಿದೆ.

ಸೂರ್ಯಗ್ರಹಣ ಸಂಭವಿಸುವ ದಿನವೇ ಶನಿ ಅಮಾವಾಸ್ಯೆ; ಈ ದಿನದ ಮಹತ್ವವೇನು? ಶನಿ ದೋಷದಿಂದ ಮುಕ್ತಿ ಪಡೆಯಲು ಇಲ್ಲಿದೆ ಸೂತ್ರ
ಶನಿ
Follow us
TV9 Web
| Updated By: ಆಯೇಷಾ ಬಾನು

Updated on: Dec 04, 2021 | 7:28 AM

ಶನಿ ಸೂರ್ಯ ದೇವನ ಪುತ್ರ. ಆದ್ರೆ ಗ್ರಂಥಗಳ ಪ್ರಕಾರ ಇವರಿಬ್ಬರದ್ದು ಹೊಂದಾಣಿಕೆಯಾಗದ ಸಂಬಂಧ. ಶನಿ ಅಮಾವಾಸ್ಯೆಯು ವರ್ಷದ ಕೊನೆಯ ಸೂರ್ಯಗ್ರಹಣದಂದೇ ಬರುತ್ತದೆ. ಕಾರ್ತಿಕ ಮಾಸದ ಕೃಷ್ಣ ಪಕ್ಷದ ಅಮಾವಾಸ್ಯೆಯಂದು ಸೂರ್ಯ ಗ್ರಹಣ ಇದೆ. ವಿಶೇಷ ಎಂದರೆ ಈ ಬಾರಿ ಅಮಾವಾಸ್ಯೆ ಶನಿವಾಸ ಬಂದಿರುವುದರಿಂದ ಇದು ಶನಿ ಅಮಾವಾಸ್ಯೆ ಆಗಿದೆ. ಶನಿವಾರವನ್ನು ಭಗವಾನ್ ಶನಿ ದೇವರಿಗೆ ಅರ್ಪಿಸಲಾಗಿದೆ. ಹಾಗೂ ಹಿಂದೂ ಧರ್ಮಗ್ರಂಥಗಳಲ್ಲಿ ಅಮವಾಸ್ಯೆಯ ತಿಥಿಯನ್ನು ಪೂರ್ವಜರಿಗೆ ಸಮರ್ಪಿಸಲಾಗಿದೆ. ಪೂರ್ವಜರಿಗೆ ಸಂಬಂಧಿಸಿದ ಯಾವುದೇ ಕೆಲಸವನ್ನು ಮಾಡಲು ಈ ದಿನಾಂಕವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇದರೊಂದಿಗೆ ಪೂಜೆ, ಸ್ನಾನ, ದಾನ ಇತ್ಯಾದಿಗಳ ವಿಶೇಷ ಮಹತ್ವವಿದೆ.

ತರ್ಪಣ ಧಾರ್ಮಿಕ ನಂಬಿಕೆಯ ಪ್ರಕಾರ ಅಮವಾಸ್ಯೆಯ ದಿನದಂದು ನದಿ ಸ್ನಾನ ಮಾಡಿ ದಾನ ಇತ್ಯಾದಿಗಳಿಂದ ಪಾಪಗಳು ನಿವಾರಣೆಯಾಗಿ ಮುಕ್ತಿ ದೊರೆಯುತ್ತದೆ. ಪೂರ್ವಜರ ಆತ್ಮತೃಪ್ತಿಗಾಗಿ ಅಮವಾಸ್ಯೆ ತಿಥಿಯಂದು ತರ್ಪಣ, ಪಿಂಡದಾನ ಮತ್ತು ಶ್ರಾದ್ಧ ಆಚರಣೆಗಳನ್ನು ಸಹ ಮಾಡಲಾಗುತ್ತದೆ. ಜಾತಕದಲ್ಲಿದ್ದರೆ, ಪಿತ್ರಾ ದೋಷ ನಿವಾರಣೆಗೆ ಈ ದಿನವನ್ನು ಮಂಗಳಕರವೆಂದು ಪರಿಗಣಿಸಲಾಗಿದೆ. ಈ ಅಮಾವಾಸ್ಯೆಯಂದು ಮಧ್ಯಾಹ್ನ ಸುಮಾರು 12 ಗಂಟೆಗೆ ಪೂರ್ವಜರಿಗೆ ಧೂಪ-ಧ್ಯಾನವನ್ನು ಮಾಡಬೇಕು. ಇದಕ್ಕಾಗಿ ಹಸುವಿನ ಸಗಣಿ ಸುಟ್ಟು ಹೊಗೆ ಬರುವುದು ನಿಂತಾಗ ಸುಟ್ಟ ಸಗಣಿಗೆ ಬೆಲ್ಲ-ತುಪ್ಪ ಹಾಕಿ ಧೂಪ ಹಾಕಬೇಕು. ಅಗತ್ಯವಿರುವ ಜನರಿಗೆ ಸಾಮರ್ಥ್ಯಕ್ಕೆ ಅನುಗುಣವಾಗಿ ದಾನ ಮಾಡಿ.

ದಾನ ಪಂಚಾಂಗದಲ್ಲಿ ಅಮಾವಾಸ್ಯೆ ದಿನಕ್ಕೆ ವಿಶೇಷ ಮಹತ್ವವಿದೆ. ಈ ದಿನ ಬಡವರಿಗೆ ದಾನ ಮಾಡುವುದರಿಂದ ವಿಶೇಷ ಪುಣ್ಯ ಪ್ರಾಪ್ತಿಯಾಗುತ್ತದೆ. ಶನಿಯನ್ನು ಬಡವರ ನಾರಾಯಣ ಎಂದೂ ಕರೆಯುತ್ತಾರೆ. ಆದ್ದರಿಂದ ಶನಿಯು ಬಡವರ ಸೇವೆಯಿಂದ ಸಂತೋಷಗೊಳ್ಳುತ್ತಾನೆ. ಹೀಗಾಗಿ ಈ ದಿನ ಬಡವರ ಸೇವೆ ಮಾಡಿ

ಶನಿದೇವನ ಆರಾಧನೆ ಮಾಡಿ ಅಮಾವಾಸ್ಯೆ ಮತ್ತು ಶನಿವಾರದ ಸಂಯೋಜನೆಯಿಂದಾಗಿ ಇದನ್ನು ಶನಿಶ್ಚರಿ ಅಮಾವಾಸ್ಯೆ ಎಂದು ಕರೆಯಲಾಗುವುದು. ಈ ದಿನದಂದು ಶನಿದೇವನ ವಿಶೇಷ ಪೂಜೆಯನ್ನು ಮಾಡುವುದರಿಂದ ಶನಿ ಸಾಡೆ ಸತಿ ಮತ್ತು ತೊಂದರೆಗಳಿಂದ ಮುಕ್ತಿ ಪಡೆಯಬಹುದು. ಅಮಾವಾಸ್ಯೆಯಂದು ಸಾಸಿವೆ ಎಣ್ಣೆಯನ್ನು ದಾನ ಮಾಡಿ. ಓಂ ಶನಿಶ್ಚರಾಯ ನಮಃ ಎಂಬ ಮಂತ್ರವನ್ನು ಕನಿಷ್ಠ 108 ಬಾರಿ ಜಪಿಸಿ. ಅರಳಿ ಮರದ ಕೆಳಗೆ ಸಾಸಿವೆ ಎಣ್ಣೆಯ ದೀಪವನ್ನು ಬೆಳಗಿಸಿ. ಕಪ್ಪು ಎಳ್ಳು, ಕರಿಬೇವು, ಕಪ್ಪು ಬಟ್ಟೆ ಮತ್ತು ಕಪ್ಪು ಕಂಬಳಿ ಇತ್ಯಾದಿಗಳನ್ನು ಸಾಮರ್ಥ್ಯಕ್ಕೆ ಅನುಗುಣವಾಗಿ ಅಗತ್ಯವಿರುವವರಿಗೆ ದಾನ ಮಾಡಿ.

ಹನುಮಾನ್ ಪೂಜೆ ಮಾಡಿ ಭಗವಾನ್ ಭೋಲೇನಾಥನನ್ನು ಮತ್ತು ಹನುಮಾನ್‌ ದೇವನನ್ನು ಪೂಜಿಸುವುದರಿಂದ ಶನಿಗೆ ಸಂಬಂಧಿಸಿದ ಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆ ಎನ್ನುವ ನಂಬಿಕೆಗಳಿವೆ. ಶಿವ ಮತ್ತು ಹನುಮಂತನ ಕೃಪೆಯುಳ್ಳವರ ಮೇಲೆ ಶನಿಯು ತನ್ನ ಕೆಟ್ಟ ದೃಷ್ಟಿಯನ್ನು ಹಾಕಲಾರ. ಹೀಗಾಗಿ ಶನಿವಾರದಂದು ಹನುಮಾನ್ ಪೂಜೆಗೂ ವಿಶೇಷ ಮಹತ್ವವಿದೆ.

ಇದನ್ನೂ ಓದಿ: Shani Mantra: ಶನಿಯ ಈ ಮಂತ್ರಗಳನ್ನು ಪಠಿಸಿದರೆ ಎಲ್ಲಾ ಶನಿ ದೋಷಗಳು ದೂರವಾಗುತ್ತವೆ

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ