AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shani Mantra: ಶನಿಯ ಈ ಮಂತ್ರಗಳನ್ನು ಪಠಿಸಿದರೆ ಎಲ್ಲಾ ಶನಿ ದೋಷಗಳು ದೂರವಾಗುತ್ತವೆ

ಶನಿಯ ದೃಷ್ಟಿ ಜನರ ಮೇಲೆ ಬಿದ್ದರೆ ಅವರ ಜೀವನದಲ್ಲಿ ಕೆಡಕಾಗುತ್ತೆ ಎನ್ನುತ್ತಾರೆ. ಸದ್ಯ ನಾವಿಂದು ಶನಿ ದೋಷವನ್ನು ಹೋಗಲಾಡಿಸಲು ಹಾಗೂ ಶನಿಯ ಕೃಪೆಗೆ ಪಾತ್ರವಾಗುವ ಕೆಲವು ಮಂತ್ರಗಳನ್ನು ತಿಳಿಸುತ್ತಿದ್ದೇವೆ.

Shani Mantra: ಶನಿಯ ಈ ಮಂತ್ರಗಳನ್ನು ಪಠಿಸಿದರೆ ಎಲ್ಲಾ ಶನಿ ದೋಷಗಳು ದೂರವಾಗುತ್ತವೆ
ಶನಿ
Follow us
TV9 Web
| Updated By: shivaprasad.hs

Updated on: Oct 16, 2021 | 7:48 AM

ಸೂರ್ಯ ಮತ್ತು ಛಾಯಾ ಪುತ್ರ ಶನಿ ನ್ಯಾಯ ಮತ್ತು ಕರ್ಮದ ಅಧಿಪತಿ. ಕರ್ಮ ಫಲದಾತ ಶನಿ ಕಂಡರೆ ಜನರಿಗೆ ಭಕ್ತಿಗಿಂತ ಭಯವೇ ಹೆಚ್ಚು. ಶನಿಯ ದೃಷ್ಟಿ ಜನರ ಮೇಲೆ ಬಿದ್ದರೆ ಅವರ ಜೀವನದಲ್ಲಿ ಕೆಡಕಾಗುತ್ತೆ ಎನ್ನುತ್ತಾರೆ. ಸದ್ಯ ನಾವಿಂದು ಶನಿ ದೋಷವನ್ನು ಹೋಗಲಾಡಿಸಲು ಹಾಗೂ ಶನಿಯ ಕೃಪೆಗೆ ಪಾತ್ರವಾಗುವ ಕೆಲವು ಮಂತ್ರಗಳನ್ನು ತಿಳಿಸುತ್ತಿದ್ದೇವೆ.

ಶನಿ ಬೀಜ ಮಂತ್ರ ಓಂ ಪ್ರಾಂ ಪ್ರೀಂ ಪ್ರೌಂ ಸಃ ಶನೈಶ್ಚರಾಯ ನಮಃ ಓಂ ಐಂಗ್‌ ಹ್ರಿಂಗ್‌ ಶ್ರೀಂಗ್‌ ಶಂಗ್‌ ಶನೈಶ್ಚರಾಯ ನಮಃ ಓಂ ಓಂ ಹಿಂ ಶಂ ಶನಯೇ ನಮಃ ಓಂ ಶಂ ಶನೈಶ್ಚರಾಯ ನಮಃ

ಈ ಮಂತ್ರದ ಉಪಯೋಗ ಶನಿ ಬೀಜ ಮಂತ್ರವು ತುಂಬಾ ಶಕ್ತಿಯುತವಾಗಿದೆ. ಎಲ್ಲಾ ದುಃಖಗಳನ್ನು ಮತ್ತು ಸಮಸ್ಯೆಗಳನ್ನು ತೆಗೆದುಹಾಕಲು ಈ ಮಂತ್ರ ಸಹಾಯ ಮಾಡುತ್ತದೆ. ಯಾವುದೇ ಕೆಟ್ಟದ್ದನ್ನು ತಪ್ಪಿಸಲು ಮತ್ತು ಸಂತೋಷದಾಯಕ ಮತ್ತು ಸಂತೃಪ್ತಿಯ ಜೀವನವನ್ನು ನಡೆಸಲು ಈ ಮಂತ್ರವನ್ನು ಜಪಿಸಬೇಕು. ಶನಿವಾರ ಶುಕ್ಲ ಪಕ್ಷದಲ್ಲಿ ಈ ಮಂತ್ರವನ್ನು ಪಠಿಸಬಹುದು ಮತ್ತು ಅದನ್ನು 1, 3, 9, 27 ಅಥವಾ 108 ಬಾರಿ ಪಠಿಸಬಹುದು.

ಶನಿ ಏಕಾಶರಿ ಮಂತ್ರ “ಓಂ ಶಂ ಶನೈಶ್ಚರಾಯ ನಮಃ”

ಈ ಮಂತ್ರದ ಉಪಯೋಗ ಯಾವ ವ್ಯಕ್ತಿಯ ಜಾತಕದಲ್ಲಿ ಶನಿ ಮಹಾದಶಾ, ಶನಿ ಸಾಡೇಸಾತಿ ಅಥವಾ ದುರ್ಬಲ ಶನಿಯನ್ನು ಪರಿಹರಿಸಲು ಏಕಾಶರಿ ಮಂತ್ರದ ದೈನಂದಿನ ಪಠಣ ಬಹಳ ಪರಿಣಾಮಕಾರಿಯಾಗಿದೆ. ಈ ಶನಿ ದೇವ್ ಮಂತ್ರವನ್ನು 108 ಬಾರಿ ನಿಯಮಿತವಾಗಿ ಪಠಿಸುವುದರಿಂದ ನಿಮ್ಮ ಜೀವನದಲ್ಲಿ ಹೆಚ್ಚಿನ ಸಂಪತ್ತು, ಸಮೃದ್ಧಿಯನ್ನು ಮತ್ತು ಆರ್ಥಿಕ ಸದೃಢತೆಯನ್ನು ತರುತ್ತದೆ.

ಶನಿ ಗಾಯತ್ರಿ ಮಂತ್ರ “ಓಂ ಶನೈಶ್ಚರಾಯ ವಿದ್ಮಹೇ ಸೂರ್ಯಪುತ್ರಾಯ ಧೀಮಹೀ ತನ್ನೋ ಮಂದಃ ಪ್ರಚೋದಯಾತ್‌”

ಈ ಮಂತ್ರದ ಉಪಯೋಗ ಈ ಮಂತ್ರವನ್ನು ಜಪಿಸುವುದರಿಂದ ಜೀವನದಲ್ಲಿ ಅನಗತ್ಯ ಅಡೆತಡೆಗಳನ್ನು ಎದುರಿಸಲು ಶಕ್ತಿ ಮತ್ತು ಧೈರ್ಯ ಸಿಗುತ್ತದೆ.

ಸಾಡೇಸಾತಿ ಶನಿ ಮಂತ್ರ “ಶ್ರೀ ನೀಲಾಂಜನ ಸಮಾಭಾಸಂ ರವಿ ಪುತ್ರಂ ಯಮಾಗ್ರಜಂ ಛಾಯಾ ಮಾರ್ತಾಂಡ ಸಂಭೂತಾಂ ತಂ ನಮಾಮಿ ಶನೈಶ್ಚರಂ”

ಮತ್ತು ”ಓಂ ಶನ್ನೋದೇವಿರಾಭಿಷ್ಟಯ ಆಪೋ ಭವಂತು ಪಿತಯೇ ಶನ್ಯೋರಭಿಸ್ತವಂತು ನಃ, ಓಂ ಶಂ ಶನೈಶ್ಚರಾಯ ನಮಃ”

ಈ ಮಂತ್ರದ ಉಪಯೋಗ ಈ ಶನಿ ಮಂತ್ರವು ಕುಟುಂಬದಲ್ಲಿ ಶಾಂತಿಯನ್ನು ತರುತ್ತದೆ. ಹಾಗೂ ಎಲ್ಲಾ ಕಾಯಿಲೆಗಳನ್ನು ನಿವಾರಿಸುತ್ತದೆ ಮತ್ತು ಕುಂಡಲಿಯಲ್ಲಿನ ಕಾಳ ಸರ್ಪ ದೋಷವನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ.

ದಶರಥ ಶನಿ ಸ್ತೋತ್ರ “ಅಸ್ಯ ಶ್ರೀ ಶನೈಶ್ಚರ ಸ್ತೋತ್ರಸ್ಯ ದಶರಥ ಋಷಿಃ ಶನೈಶ್ಚರೋ ದೇವತಾ ತ್ರಿಷ್ಟುಪ್ ಛಂದಃ ಶನೈಶ್ಚರ ಪ್ರೀತ್ಯರ್ಥಂ ಜಪೇ ವಿನಿಯೋಗಃ ದಶರಥ ಉವಾಚಃ ಕೋಣೋ ಅಂತಕೋ ರೌದ್ರಯಮೋಥ ಬಭ್ರುಃ ಕೃಷ್ಣಃ ಶನಿಃ ಪಿಂಗಲ ಮಂದ ಸೌರಿ ನಿತ್ಯಂ ಸ್ಮೃತೋಯೋ ಹರತೇ ಚ ಪೀಡಾಂ ತಸ್ಮೈನಮಃ ಶ್ರೀ ರವಿನಂದನಾಯ ”

ಈ ಮಂತ್ರದ ಉಪಯೋಗ ಕೋಪೋದ್ರಿಕ್ತನಾದ ಶನಿಯನ್ನು ಸಮಾಧಾನಗೊಳಿಸಲು, ಶನಿಯ ಆಶೀರ್ವಾದವನ್ನು ಪಡೆಯಲು ಈ ಮಂತ್ರವನ್ನು ಪಠಿಸಲಾಗುತ್ತದೆ.

ಶನಿ ವೈದಿಕ ಮಂತ್ರ ” ಓಂ ಶನ್ನೋ ದೇವಿರಭಿಷ್ಟ್ದಾಪೋ ಭವಂತು ಪಿತಯೇ”

ಈ ಮಂತ್ರದ ಉಪಯೋಗ ಶನಿ ದೇವನು ಸೂರ್ಯ ದೇವರ ಮಗ. ಶನಿ ದೇವ ಅವರ ಈ ವೈದಿಕ ಮಂತ್ರವನ್ನು ಶುದ್ಧ ಹೃದಯ, ಮನಸ್ಸು ಮತ್ತು ಆತ್ಮದಿಂದ ಜಪಿಸುವುದರಿಂದ ನಿಮ್ಮ ಪಾಪಗಳಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಗಣೇಶನಿಗೆ ಕೈ ಮುಗಿದ ಸೈಫ್​ ಅಲಿ ಖಾನ್​ ವಿರುದ್ಧ ಒಂದು ವರ್ಗದ ನೆಟ್ಟಿಗರು ಗರಂ; ಹಬ್ಬದ ನಡುವೆ ಟ್ರೋಲ್​​