VIDEO: ಬಾಲ್ಗಿಂತ ದೂರ ಸಾಗಿದ ರಿಷಭ್ ಪಂತ್ ಬ್ಯಾಟ್
IPL 2025 PBKS vs LSG: ಐಪಿಎಲ್ ಸೀಸನ್-18 ರ 54ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ ತಂಡ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ 236 ರನ್ ಕಲೆಹಾಕಿದರೆ, ಲಕ್ನೋ ಸೂಪರ್ ಜೈಂಟ್ಸ್ 199 ರನ್ಗಳಿಸಲಷ್ಟೇ ಶಕ್ತರಾದರು.
IPL 2025: ಇಂಡಿಯನ್ ಪ್ರೀಮಿಯರ್ ಲೀಗ್ನ 54ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ (LSG) ವಿರುದ್ಧ ಪಂಜಾಬ್ ಕಿಂಗ್ಸ್ (PBKS) ತಂಡ ಜಯ ಸಾಧಿಸಿದೆ. ಧರ್ಮಶಾಲಾದ ಹೆಚ್ಪಿಸಿಎ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 236 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಲಕ್ನೋ ಸೂಪರ್ ಜೈಂಟ್ಸ್ ತಂಡವು 20 ಓವರ್ಗಳಲ್ಲಿ 199 ರನ್ಗಳಿಸಲಷ್ಟೇ ಶಕ್ತರಾಗಿದ್ದರು. ಈ ಮೂಲಕ 37 ರನ್ಗಳಿಂದ ಸೋಲೊಪ್ಪಿಕೊಂಡಿದೆ.
ಇನ್ನು ಈ ಪಂದ್ಯದಲ್ಲೂ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ರಿಷಭ್ ಪಂತ್ ತನ್ನ ಬ್ಯಾಟ್ ಅನ್ನು ಗಾಳಿಯಲ್ಲಿ ತೇಲಿ ಬಿಟ್ಟು ವಿಕೆಟ್ ಒಪ್ಪಿಸಿದ್ದಾರೆ. ಅಝ್ಮತುಲ್ಲಾ ಒಮರ್ಝಾಹಿ ಎಸೆದ 8ನೇ ಓವರ್ನಲ್ಲಿ ಪಂತ್ ಭರ್ಜರಿ ಹೊಡೆತಕ್ಕೆ ಮುಂದಾಗಿದ್ದರು. ಆದರೆ ಬ್ಯಾಟ್ ಲೆಗ್ ಸೈಡ್ನತ್ತ ಸಾಗಿದರೆ, ಬಾಲ್ ಆಫ್ ಸೈಡ್ನತ್ತ ಸಾಗಿತು. ಅತ್ತ ಕಡೆಯಿಂದ ಓಡಿ ಬಂದು ಶಶಾಂಕ್ ಸಿಂಗ್ ಚೆಂಡನ್ನು ಹಿಡಿಯುವ ಮೂಲಕ ರಿಷಭ್ ಪಂತ್ಗೆ ಪೆವಿಲಿಯನ್ ಹಾದಿ ತೋರಿಸಿದರು.
ಕೊಡಗಿನಲ್ಲಿ ಮಳೆ ಆರ್ಭಟ: ಭಾಗಮಂಡಲದ ತ್ರಿವೇಣಿ ಸಂಗಮ ಮತ್ತೆ ಜಲಾವೃತ!
ಮೂರೇ ದಿನಗಳಲ್ಲಿ ಕೆಆರ್ಎಸ್ ಡ್ಯಾಂಗೆ ಬಂತು 6 ಟಿಎಂಸಿ ನೀರು!
ಕಬಿನಿ ಜಲಾಶಯ ಸಂಪೂರ್ಣ ಭರ್ತಿ: ಡ್ಯಾಂ ಮುಂಭಾಗವೇ ಇರುವ ಸೇತುವೆ ಮುಳುಗಡೆ
‘ಉಪೇಂದ್ರ ಕೂಡ ಚುನಾವಣೆ ಸ್ಪರ್ಧಿಸಬೇಕು’; ಇಂಗಿತ ವ್ಯಕ್ತಪಡಿಸಿದ ಪ್ರಿಯಾಂಕಾ

