
ಆಧ್ಯಾತ್ಮಿಕತೆ (Spirituality) ಇಲ್ಲದೆ ಮಾನವ ಜೀವನ ಅಪೂರ್ಣ ಎಂದು ಹೇಳಲಾಗುತ್ತದೆ. ಜೀವನವನ್ನು ನಿರ್ಮಿಸಲು ಮೂಲ ತತ್ವವೇ ಆಧ್ಯಾತ್ಮಿಕತೆ. ಆಧ್ಯಾತ್ಮಿಕತೆಯು ಒಬ್ಬ ಮನುಷ್ಯನಿಗೆ ಒಳಗಿನಿಂದ ಆತ್ಮ ವಿಶ್ವಾಸ ಮತ್ತು ಮಾನಸಿಕ ಶಕ್ತಿಯನ್ನು ನೀಡುತ್ತದೆ. ಇದು ಮಾನಸಿಕ ಆರೋಗ್ಯವನ್ನು ಸುಧಾರಿಸುವುದಲ್ಲದೆ, ದೈಹಿಕ ಆರೋಗ್ಯದ ಮೇಲೂ ಉತ್ತಮ ಪರಿಣಾಮ ಬೀರುತ್ತದೆ. ಆಧ್ಯಾತ್ಮಿಕತೆಯ ಮೂಲಕ, ನಾವು ನಮ್ಮ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರಬಹುದು ಮತ್ತು ಒತ್ತಡವನ್ನು ಕಡಿಮೆ ಮಾಡಬಹುದು. ಧ್ಯಾನ ಮಾಡುವುದು, ದೇವಸ್ಥಾನಗಳಿಗೆ ಭೇಟಿ ನೀಡುವುದರಿಂದ ಹಿಡಿದು ಮಂತ್ರ ಪಠಣೆಗಳವರೆಗೆ ಧಾರ್ಮಿಕ, ಆಧ್ಯಾತ್ಮಿಕ ಅಭ್ಯಾಸಗಳನ್ನು (Spiritual practices) ಪಾಲಿಸುವುದರಿಂದ ಏನೆಲ್ಲಾ ಆರೋಗ್ಯ ಪ್ರಯೋಜನಗಳು ಲಭಿಸುತ್ತವೆ ಎಂಬುದನ್ನು ನೋಡೋಣ ಬನ್ನಿ.
ಧ್ಯಾನ: ನಮ್ಮ ಮಾನಸಿಕ ಆರೋಗ್ಯವನ್ನು ಸುಧಾರಿಸುವಲ್ಲಿ ಧ್ಯಾನವು ಪ್ರಮುಖ ಪಾತ್ರ ವಹಿಸುತ್ತದೆ. ನಿಯಮಿತ ಧ್ಯಾನವು ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಮನಸ್ಸನ್ನು ಶಾಂತವಾಗಿರಿಸುತ್ತದೆ. ಅಲ್ಲದೆ ಧ್ಯಾನವು ಏಕಾಗ್ರತೆಯನ್ನು ಹೆಚ್ಚಿಸಲು, ಕೆಲಸದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ. ಇದಲ್ಲದೆ, ಧ್ಯಾನವು ಸ್ವಯಂ ನಿಯಂತ್ರಣವನ್ನು ಹೆಚ್ಚಿಸಿ ಜೀವನದಲ್ಲಿ ಸಮತೋಲನವನ್ನು ತರುತ್ತದೆ.
ಮಂತ್ರ ಪಠಣೆ: ಮಂತ್ರಗಳು ಬಹಳ ಶಕ್ತಿಶಾಲಿ. ಗಾಯತ್ರಿ ಮಂತ್ರದಂತಹ ಮಂತ್ರಗಳನ್ನು ಪಠಿಸುವುದರಿಂದ ಮಾನಸಿಕ ಶಾಂತಿ ಲಭಿಸುತ್ತದೆ. ಇದು ನಮ್ಮೊಳಗಿನ ನಕಾರಾತ್ಮಕ ಶಕ್ತಿಯನ್ನು ಸಹ ತೆಗೆದು ಹಾಕುತ್ತದೆ. ಹಾಗಾಗಿ ಮಾನಸಿಕ ನೆಮ್ಮದಿಗಾಗಿ ಮಂತ್ರಗಳನ್ನು ಪಠಿಸಿ.
ಭಜನೆ: ಭಜನೆ ಹಾಡುವುದು ಅಥವಾ ಕೇಳುವುದು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಹೌದು ಭಜನೆ ಹಾಡುವುದು ಮತ್ತು ಕೇಳುವುದರಿಂದ ಮನಸ್ಸಿಗೆ ಶಾಂತಿ ಲಭಿಸುವುದಲ್ಲದೆ ಇದು ಸಕಾರಾತ್ಮಕವಾಗಿ ಯೋಚಿಸಲು ಸಹಾಯ ಮಾಡುತ್ತದೆ. ಅಲ್ಲದೆ ಭಜನೆಯ ಸಕಾರಾತ್ಮಕ ಕಂಪನಗಳು ಆತಂಕವನ್ನು ನಿವಾರಿಸುತ್ತದೆ ಜೊತೆಗೆ ಖಿನ್ನತೆಯನ್ನು ಸಹ ನಿವಾರಣೆ ಮಾಡುತ್ತದೆ.
ದೇವಾಲಯಗಳಿಗೆ ಭೇಟಿ ನೀಡುವುದು: ದೇವಾಲಯಕ್ಕೆ ಭೇಟಿ ನೀಡುವುದರಿಂದಲೂ ಹಲವು ಪ್ರಯೋಜನಗಳನ್ನು ಪಡೆಯಬಹುದು. ದೇವಾಲಯಗಳ ವಾತಾವರಣ ಶಾಂತಿಯುತ ಮತ್ತು ಸಕಾರಾತ್ಮಕವಾಗಿರುವುದರಿಂದ ಇದು ನಮ್ಮ ಆತಂಕ ಮತ್ತು ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮತ್ತು ದೇವಸ್ಥಾನದ ಗಂಟೆ ಶಬ್ಧ, ಪಾರ್ಥನೆಗಳು ಮನಸ್ಸಿಗೆ ಶಾಂತಿಯನ್ನು ಒದಗಿಸುತ್ತದೆ.
ಇದನ್ನೂ ಓದಿ: ಚಾಣಕ್ಯರು ಹೇಳ್ತಾರೆ ಯಾವತ್ತಿಗೂ ಇಂತಹ ಜನರಿಗೆ ಸಹಾಯ ಮಾಡಬಾರದೆಂದು
ಹೋಮ: ಹೋಮದಂತಹ ಧಾರ್ಮಿಕ ಕಾರ್ಯಗಳು ಸಹ ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ. ಇದು ನಕಾರಾತ್ಮಕ ಶಕ್ತಿ ಶಕ್ತಿಯನ್ನು ದೂರ ಮಾಡುತ್ತದೆ, ಮನಸ್ಸಿನ ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡಿ ಮನಸ್ಸಿಗೆ ನೆಮ್ಮದಿಯನ್ನು ಒದಗಿಸುತ್ತದೆ.
ಪ್ರಾಣಾಯಾಮ: ಪ್ರತಿದಿನ ಸ್ವಲ್ಪ ಸಮಯ ಪ್ರಾಣಾಯಾಮ ಮಾಡುವುದರಿಂದ ಆರೋಗ್ಯ ವೃದ್ಧಿಸುತ್ತದೆ. ಇದು ಮನಸಿಕ ಆರೋಗ್ಯವನ್ನು ಮಾತ್ರವಲ್ಲದೆ, ದೈಹಿಕ ಆರೋಗ್ಯವನ್ನೂ ಸುಧಾರಿಸುತ್ತದೆ. ಹೌದು ಇದು ಒತ್ತಡವನ್ನು ಕಡಿಮೆ ಮಾಡಲು, ನಿದ್ರೆಯನ್ನು ಸುಧಾರಿಸಲು, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಕಾರಿಯಾಗಿದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ