ಜೇನುತುಪ್ಪವು ಹೃದಯದ ಆರೋಗ್ಯವನ್ನು ಕಾಪಾಡುವುದರ ಜೊತೆಗೆ ಹಲವಾರು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಇಂತಹ ಸಿಹಿಯಾದ ಜೇನು ತಯಾರಿಸುವ ರೈತರಲ್ಲಿ ಒಬ್ಬರಾದ ರಾಜಸ್ಥಾನದ ಕೋಟಾದ ರೈತ ನರೇಂದ್ರ ಮಾಲವ್. ಇವರು ಜೇನುಸಾಕಣೆಯಲ್ಲಿ ಪರಿಣತರಾಗಿದ್ದು ಅದರಲ್ಲಿಯೇ ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ಈ ಕಾರ್ಯಕ್ಕೆ ಅವರು ಗೌರವ, ಪ್ರಶಂಸೆಗಳ ಜತೆಗೆ ಲಕ್ಷಗಟ್ಟಲೆ ಲಾಭ ಗಳಿಸುತ್ತಾರೆ. ಈ ಯಶಸ್ವಿ ರೈತ ಕೋಟಾ ಮೂಲದ ನರೇಂದ್ರ ಮಾಲವ್ ಕೃಷಿ ವಿಜ್ಞಾನ ಕೇಂದ್ರದಿಂದ ಕೋಟಾದಲ್ಲಿ ಜೇನುಸಾಕಣೆ ತರಬೇತಿಯನ್ನು ಪಡೆದು 2004ರಲ್ಲಿ ಜೇನುಸಾಕಣೆಯನ್ನು ಪ್ರಾರಂಭಿಸಿದರು. ಅವರು ಜೇನುತುಪ್ಪದ ಜೊತೆಗೆ ಜೇನುನೊಣಗಳನ್ನು ಮಾರಾಟ ಮಾಡುತ್ತಾರೆ. ಜೇನು ಮಾರಾಟಕ್ಕಿಂತ ಜೇನುನೊಣಗಳನ್ನು ಮಾರಾಟ ಮಾಡುವುದರಿಂದ ಹೆಚ್ಚಿನ ಲಾಭ ಬರುತ್ತದೆ ಎಂದು ಅವರು ಹೇಳುತ್ತಾರೆ.
ಮಾಲವ್ ತನ್ನ ಜೇನುಸಾಕಣೆ ವ್ಯವಹಾರವನ್ನು ಪ್ರಾರಂಭಿಸಲು ಕೇವಲ 10,000 ರೂ. ತೊಡಿಗಿಸಿದ್ದರಂತೆ. ಈಗ ಮಾಲವ್ ಮತ್ತು ಅವರ ಸಹೋದರ ಮಹೇಂದ್ರ ಮಾಳವ್ ಇಬ್ಬರೂ ಜೇನು ಸಾಕಣೆದಾರರಾಗಿದ್ದು, ವರ್ಷಕ್ಕೆ ದೊಡ್ಡ ಮೊತ್ತವನ್ನು ಗಳಿಸುತ್ತಿದ್ದಾರೆ. ಕೋಟಾದಲ್ಲಿ ಜೇನುಸಾಕಣೆಯ ಸೀಸನ್ 8 ತಿಂಗಳವರೆಗೆ ಇರುತ್ತದೆ. ಬಳಿಕ ಅದೇ ಜಾಗದಲ್ಲಿ ಸಾಸಿವೆ ಮತ್ತು ಕೊತ್ತಂಬರಿ ಬೆಳೆಗಳು ಬೆಳೆಯುತ್ತಾರೆ.
ಮಾಲವ್ ಅವರಿಗೆ ಜೇನುಸಾಕಣೆಯಿಂದ ವಾರ್ಷಿಕ ಆದಾಯ 25 ಲಕ್ಷ ರೂ. ಇದರ ಜತೆಗೆ ಏಳೆಂಟು ಮಂದಿ ಉದ್ಯೋಗಿಗಳನ್ನು ನೇಮಿಸಿಕೊಂಡಿದ್ದು, ಜೇನು ಪೆಟ್ಟಿಗೆಗಳನ್ನು ಹೊಲಗಳಲ್ಲಿ ಇರಿಸುವ ಮೂಲಕ ಜೇನುನೊಣಗಳನ್ನು ಕೂರಿಸಲಾಗುತ್ತದೆ ಎಂದು ಮಾಲವ್ ತಮ್ಮ ಕೆಲಸದ ಬಗ್ಗೆ ವಿವರಿಸಿದ್ದು. ಪ್ರಸ್ತುತ, ಮಾಲವ್ 1300 ಜೇನುನೊಣಗಳ ಪೆಟ್ಟಿಗೆ ಹೊಂದಿದ್ದು ಒಂದು ಪೆಟ್ಟಿಗೆ ವರ್ಷಕ್ಕೆ 7 ರಿಂದ 8 ಬಾರಿ ಹಾಗೂ ಅದರಲ್ಲಿ ಪ್ರತಿ ವರ್ಷ 25 ರಿಂದ 30 ಕೆಜಿ ಜೇನುತುಪ್ಪವನ್ನು ಉತ್ಪಾದಿಸಲಾಗುತ್ತದೆ. ಅಲ್ಲದೆ ಅವರು ಶುದ್ಧ ಜೇನುತುಪ್ಪದ ಜೊತೆಗೆ ಫೆನ್ನೆಲ್, ಕೊತ್ತಂಬರಿ, ಸಾಸಿವೆಯ ಜೇನುತುಪ್ಪವನ್ನು ಒಳಗೊಂಡಂತೆ ಹಲವಾರು ವಿಧದ ಜೇನುತುಪ್ಪವನ್ನು ತಯಾರಿಸುತ್ತಾರೆ.
ಇದನ್ನೂ ಓದಿ: ಕೃಷಿ ಜೊತೆಗೆ ಉಪಕಸಬುಗಳಿಂದ ಭರ್ಜರಿ ಲಾಭ: ಜೇನು ಕೃಷಿ ಮಾಡುವ ಮೂಲಕ ಮಾದರಿಯಾದ ಚಿತ್ರದುರ್ಗ ರೈತ
ಜೇನು ಸಾಕಾಣಿಕೆಗೆ ಹೆಚ್ಚಿನ ನಿರ್ವಹಣೆಯ ಅಗತ್ಯವಿದೆ ಎಂದು ಮಾಲವ್ ಹೇಳುತ್ತಾರೆ. ಹೆಚ್ಚು ನಿರ್ವಹಣೆಯೊಂದಿಗೆ ಮಾತ್ರ ಒಳ್ಳೆಯ ಆರ್ಥಿಕ ಫಲಿತಾಂಶ ಸಾಧಿಸಲು ಸಾಧ್ಯವಾಗುತ್ತದೆ. ಜೇನು ಸಾಕಾಣಿಕೆ ಉದ್ಯಮದ ಕುರಿತು ಮಾರ್ಗದರ್ಶನ ನೀಡಿದ ನರೇಂದ್ರ ಮಾಳವ್ ಅವರು ಜೇನುಸಾಕಣೆ ಉದ್ಯಮವನ್ನು ರಚಿಸಲು ನಿರ್ಧರಿಸಿದರೆ, ಅವರು 25 ರಿಂದ 50 ಪೆಟ್ಟಿಗೆಗಳನ್ನು ನೀಡುವ ಮೂಲಕ ಮೊದಲು 25 ರಿಂದ 30 ಸಾವಿರ ರೂಪಾಯಿಗಳನ್ನು ಹೂಡಿಕೆ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.