Shoulder Pain: ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಪರಿಹಾರಕ್ಕಾಗಿ ಇಲ್ಲಿದೆ ಸುಲಭ ಉಪಾಯ

| Updated By: preethi shettigar

Updated on: Aug 25, 2021 | 7:31 AM

ಸಾಮಾನ್ಯವಾಗಿ ಭುಜದ ನೋವು 6 ತಿಂಗಳಿಗೂ ಹೆಚ್ಚು ಕಾಲ ಮುಂದುವರೆದರೆ ದೀರ್ಘಕಾಲ ಸಮಸ್ಯೆ ಎಂದು ಪರಿಗಣಿಸಲಾಗುತ್ತದೆ. ಅತಿಯಾದ ನೋವು, ಊತ, ಮರಗಟ್ಟುವಿಕೆ, ಜುಮ್ ಎನಿಸುವುದು ಹೀಗೆ ಸಮಸ್ಯೆಗಳು ಭುಜದ ನೋವಿನ ಲಕ್ಷಣವಾಗಿರಬಹುದು.

Shoulder Pain: ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಪರಿಹಾರಕ್ಕಾಗಿ ಇಲ್ಲಿದೆ ಸುಲಭ ಉಪಾಯ
ಸಾಂದರ್ಭಿಕ ಚಿತ್ರ
Follow us on

ಸಾಮಾನ್ಯವಾಗಿ ಭುಜದ ನೋವಿನ ಸಮಸ್ಯೆ ಆಗಾಗ ಕಾಡುತ್ತಿರಬಹುದು. ಕೆಲಸದ ಒತ್ತಡದ ನಡುವೆ ಈ ಕೆಲವು ವಿಷಯಗಳನ್ನು ಹೆಚ್ಚು ನಿರ್ಲಕ್ಷಿಸುತ್ತೇವೆ. ಆದರೆ ಸಣ್ಣ ಸಣ್ಣ ಸಮಸ್ಯೆಗಳು ಭಾರೀ ಕಿರಿ ಕಿರಿ ಉಂಟು ಮಾಡುತ್ತವೆ. ಅದರಲ್ಲಿ ಭುಜದ ನೋವಿನ ಸಮಸ್ಯೆಯೂ ಒಂದು. ಭುಜದ ನೋವು ಮೊದಲಿಗೆ ಕಾಣಿಸಿಕೊಂಡಾಗಲೇ ಪರಿಹಾರ ಕಂಡುಕೊಳ್ಳಿ. ಇಲ್ಲದೇ ಹೋದರೆ ಪದೇ ಪದೇ ಸಮಸ್ಯೆ ಕಾಡುತ್ತಲೇ ಇರುತ್ತದೆ. ನಿಮಗಾಗಿಯೇ ಕೆಲವು ಟಿಪ್ಸ್​ಗಳು ಈ ಕೆಳಗಿನಂತಿವೆ.

ಸಾಮಾನ್ಯವಾಗಿ ಭುಜದ ನೋವು 6 ತಿಂಗಳಿಗೂ ಹೆಚ್ಚು ಕಾಲ ಮುಂದುವರೆದರೆ ದೀರ್ಘಕಾಲ ಸಮಸ್ಯೆ ಎಂದು ಪರಿಗಣಿಸಲಾಗುತ್ತದೆ. ಅತಿಯಾದ ನೋವು, ಊತ, ಮರಗಟ್ಟುವಿಕೆ, ಜುಮ್ ಎನಿಸುವುದು ಹೀಗೆ ಸಮಸ್ಯೆಗಳು ಭುಜದ ನೋವಿನ ಲಕ್ಷಣವಾಗಿರಬಹುದು. ಯಾವುದೇ ಕಾರಣಕ್ಕೂ ಸಹ ಇಂತಹ ಸಮಸ್ಯೆಯನ್ನು ಸಣ್ಣ ಸಮಸ್ಯೆಯೆಂದು ಪರಿಗಣಿಸಬೇಡಿ. ಇದೇ ನಿಮಗೆ ಮುಂದೊಂದು ದಿನ ದೊಡ್ಡ ಸಮಸ್ಯೆಯಾಗಿ ಕಾಡಬಹುದು.

ಎದೆಯ ಭಾಗವನ್ನು ಹಿಗ್ಗಿಸುವಿಕೆಯ ವ್ಯಾಯಾಮ
ನಿಮ್ಮ ಬಲಗೈಯನ್ನು ಬಲ ಭಾಗದ ಸೊಂಟದ ಕಡೆಗೆ ಇರಿಸಿಕೊಳ್ಳಿ. ನಂತರ ಕೈಯನ್ನು ಮುಂದಕ್ಕೆ ವಿಸ್ತರಿಸಿ. ಬಳಿಕ ನಿಮ್ಮ ಎಡಗೈಯನ್ನು ಮೊಣಕೈ ಹಿಂದೆ ಎಳೆಯಿರಿ. ನಿಮಗೆ ಭುಜದ ನೋವು ಇದ್ದರೆ ಅಸ್ವಸ್ಥತೆಯನ್ನು ದೂರ ಮಾಡಲು ಇದು ಸಹಾಯ ಮಾಡುತ್ತದೆ. ಜತೆಗೆ ಬಿಗಿಯಾದ ಸ್ನಾಯುಗಳು ಸಡಿಲಗೊಳ್ಳುತ್ತವೆ. ಪ್ರತಿನಿತ್ಯ ಈ ಅಭ್ಯಾಸವನ್ನು ರೂಢಿಯಲ್ಲಿಟ್ಟುಕೊಳ್ಳಿ.

ಕುತ್ತಿಗೆ ವ್ಯಾಯಾಮ
ಈ ವ್ಯಾಯಾಮವು ಕುತ್ತಿಗೆ ಮತ್ತು ಭುಜದ ನರವನ್ನು ಸಡಿಲಗೊಳಿಸುತ್ತದೆ. ಕುತ್ತಿಗೆಯ ಭಾಗವನ್ನು ನಿಧಾನವಾಗಿ ಸುತ್ತಲೂ ತಿರುಗಿಸುವುದು ಅಂದರೆ, ಕುತ್ತಿಯನ್ನು ಮುಂದಕ್ಕೆ, ಬಲಭಾಗಕ್ಕೆ, ಹಿಂದಕ್ಕೆ ಮತ್ತು ಎಡಭಾಗಕ್ಕೆ ಬಾಗಿಸುವುದು. ಇದರಿಂದ ಭುಜದ ನೋವು ಬಹುಬೇಗ ವಾಸಿಯಾಗುತ್ತದೆ. ಪ್ರತಿನಿತ್ಯ ಬೆಳಿಗ್ಗೆ ಎದ್ದ ತಕ್ಷಣ ಮತ್ತು ಸಂಜೆಯ ವೇಳೆ ಈ ವ್ಯಾಯಾಮ ಮಾಡುವ ಅಭ್ಯಾಸ ರೂಢಿಯಲ್ಲಿಟ್ಟುಕೊಳ್ಳಿ.

ಎದೆಯ ಭಾಗ ವಿಸ್ತರಣೆ
ನಿಮ್ಮ ಎರಡು ಕೈಗಳನ್ನು ಹಿಂದಕ್ಕೆ ಕಟ್ಟಿ. ಎದೆಯ ಭಾಗ ನೇರವಾಗಿರಲಿ. ಬಳಿಕ ಮೇಲಕ್ಕೆ ನೋಡುತ್ತಾ ಭುಜವನ್ನು ಹಿಗ್ಗಿಸಿ ಮತ್ತು ಭುಜ ಭಾಗವನ್ನು ಹಿಂದಕ್ಕೆ ಬಾಗಿಸಲು ಪ್ರಯತ್ನಿಸಿ. ಹಾಗೆಯೇ 30 ಸೆಕೆಂಡುಗಳ ಕಾಲ ನಿಲ್ಲಲು ಪ್ರಯತ್ನಿಸಿ. ಇದು ನಿಮ್ಮ ಭುಜದ ನೋವಿನ ಪರಿಹಾರಕ್ಕೆ ಸಹಾಯಕವಾಗಿದೆ.

ಭುಜದ ನೋವು ದೈನಂದಿನ ಜೀವನದಲ್ಲಿ ಅಸ್ವಸ್ಥತೆಯನ್ನು ಉಂಟು ಮಾಡುತ್ತದೆ. ನೋವನ್ನು ಕಡಿಮೆ ಮಾಡಿಕೊಳ್ಳಲು ವ್ಯಾಯಾಮದಿಂದ ಮಾತ್ರ ಸಾಧ್ಯ. ಸದೃಢ ಮನಸ್ಸಿನಿಂದ ಪ್ರತಿನಿತ್ಯವೂ ಏಕಾಗ್ರತೆಯಿಂದ ವ್ಯಾಯಾಮ ಮಾಡುವ ಅಭ್ಯಾಸ ಮಾಡಿಕೊಳ್ಳಿ. ಪ್ರತಿನಿತ್ಯವೂ ಸಹ ಬೇಗ ಏಳುವ ಅಭ್ಯಾಸ ಆರೋಗ್ಯಕ್ಕೆ ಒಳ್ಳೆಯದು.

ಇದನ್ನೂ ಓದಿ:

Workouts After Long Break: ತಿಂಗಳುಗಳ ಕಾಲ ವಿರಾಮ ತೆಗೆದುಕೊಂಡು ಮತ್ತೆ ವ್ಯಾಯಾಮ ಮಾಡಲು ಈ ನಿಯಮಗಳನ್ನು ಪಾಲಿಸಿ

Yoga Benefits: ಪಚನ ಕ್ರಿಯೆ ಸರಿಯಾಗಲು ಯಾವ ಸಮಯ ವ್ಯಾಯಾಮಕ್ಕೆ ಉತ್ತಮ?

(Suffering from should pain know about these exercise )