Virat Kohli: ಒಂದು ಲೀಟರ್ಗೆ 4 ಸಾವಿರ ರೂ! ವಿರಾಟ್ ಕೊಹ್ಲಿ ಕುಡಿಯುವ ಕಪ್ಪು ನೀರಿನ ವಿಶೇಷತೆಗಳೇನು?
TV9 Web | Updated By: ಝಾಹಿರ್ ಯೂಸುಫ್
Updated on:
Aug 24, 2021 | 10:01 PM
Virat Kohli Drinks Black Water: ಸದಾ ಫಿಟ್ ಆಗಿರಲು ಬಯಸುವ ಆಟಗಾರರು ಹಾಗೂ ಸೆಲೆಬ್ರಿಟಿಗಳು ಇತ್ತೀಚಿನ ದಿನಗಳಲ್ಲಿ ಬ್ಲ್ಯಾಕ್ ವಾಟರ್ ಕುಡಿಯುತ್ತಿದ್ದಾರೆ. ಈ ವಾಟರ್ ಬೆಲೆ ಪ್ರತಿ ಲೀಟರ್ಗೆ ಸುಮಾರು 3 ಸಾವಿರದಿಂದ 4 ಸಾವಿರ ರೂ.
1 / 6
ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಫಿಟ್ನೆಸ್ ಫ್ರೀಕ್ ಎಂಬುದರಲ್ಲಿ ಅನುಮಾನವಿಲ್ಲ. ಪ್ರತಿದಿನ ಎರಡು ಮೂರು ತಾಸುಗಳ ಕಾಲ ವರ್ಕೌಟ್ ಮಾಡುವ ರನ್ ಮೆಷಿನ್ ತಮ್ಮ ಫಿಟ್ನೆಸ್ ಕಾಪಾಡಿಕೊಳ್ಳಲು ಆಹಾರ ಪದ್ಧತಿಗಳಲ್ಲಿ ಹಲವು ಬದಲಾವಣೆ ಮಾಡಿಕೊಂಡಿದ್ದಾರೆ.
2 / 6
ಅದರಂತೆ ಇದೀಗ ಕೊಹ್ಲಿ ಸಾಮಾನ್ಯ ನೀರು ಕುಡಿಯುವುದಿಲ್ಲ ಎಂಬ ವಿಚಾರ ಬಹಿರಂಗವಾಗಿದೆ. ಬದಲಾಗಿ ತಮ್ಮ ಫಿಟ್ನೆಸ್ ಅನ್ನು ಕಾಪಾಡಿಕೊಳ್ಳಲು ಬ್ಲ್ಯಾಕ್ ವಾಟರ್ ಅಥವಾ ಕಪ್ಪು ನೀರಿನ ಮೊರೆ ಹೋಗುತ್ತಾರೆ.
3 / 6
ಸದಾ ಫಿಟ್ ಆಗಿರಲು ಬಯಸುವ ಆಟಗಾರರು ಹಾಗೂ ಸೆಲೆಬ್ರಿಟಿಗಳು ಇತ್ತೀಚಿನ ದಿನಗಳಲ್ಲಿ ಬ್ಲ್ಯಾಕ್ ವಾಟರ್ ಕುಡಿಯುತ್ತಿದ್ದಾರೆ. ಈ ವಾಟರ್ ಬೆಲೆ ಪ್ರತಿ ಲೀಟರ್ಗೆ ಸುಮಾರು 3 ಸಾವಿರದಿಂದ 4 ಸಾವಿರ ರೂ.
4 / 6
ಈ ವಾಟರ್ನಲ್ಲಿ ನೈಸರ್ಗಿಕ-ಕಪ್ಪು ಕ್ಷಾರೀಯ ಅಂಶವಿದ್ದು, ಇದು ದೇಹವನ್ನು ಯವಾಗಲೂ ಹೈಡ್ರೇಟ್ ಆಗಿರಲು ಸಹಾಯ ಮಾಡುತ್ತದೆ. ಹಾಗೆಯೇ ಈ ನೀರಿನಲ್ಲಿ pH (ಹೈಡ್ರೋಜನ್ ಸಾಮರ್ಥ್ಯ) ಪ್ರಮಾಣ ಕೂಡ ಅಧಿಕವಾಗಿರುತ್ತದೆ. ಇದು ರೋಗನಿರೋಧಕ ಶಕ್ತಿಯನ್ನು ಸುಧಾರಿಸುತ್ತದೆ ಮತ್ತು ಸದಾ ಫಿಟ್ ಆಗಿರಲು ಸಹಾಯ ಮಾಡುತ್ತದೆ.
5 / 6
ಇನ್ನು ಈ ನೀರನ್ನು ನಿಯಮಿತವಾಗಿ ಕುಡಿಯುವುದರಿಂದ ಚರ್ಮದ ಆರೋಗ್ಯ ಕೂಡ ಸುಧಾರಿಸುತ್ತದೆ. ಇದರ ಜೊತೆಗೆ ತೂಕವನ್ನು ನಿಯಂತ್ರಣದಲ್ಲಿರಿಸುತ್ತದೆ. ಇವೆಲ್ಲಕ್ಕಿಂತ ಮುಖ್ಯವಾಗಿ ಬ್ಲ್ಯಾಕ್ ವಾಟರ್ ಕುಡಿಯುವುದರಿಂದ ಖಿನ್ನತೆಯನ್ನು ಕಡಿಮೆ ಮಾಡಬಹುದು ಎಂದು ನಂಬಲಾಗಿದೆ. ಈ ಎಲ್ಲಾ ಕಾರಣದಿಂದ ಬ್ಲ್ಯಾಕ್ ವಾಟರ್ ತುಂಬಾ ದುಬಾರಿ.
6 / 6
ಪ್ರಸ್ತುತ ಕ್ರಿಕೆಟ್ ಅಂಗಳದ ಕಿಂಗ್ ಎನಿಸಿಕೊಂಡಿರುವ ವಿರಾಟ್ ಕೊಹ್ಲಿ ತಮ್ಮ ಫಿಟ್ನೆಸ್ಗಾಗಿ ವಿಶೇಷ ಕಾಳಜಿವಹಿಸುತ್ತಿದ್ದು, ಹೀಗಾಗಿ ಸಾಮಾನ್ಯ ನೀರಿನ ಬದಲು ಬ್ಲ್ಯಾಕ್ ವಾಟರ್ ಮೊರೆ ಹೋಗುತ್ತಿದ್ದಾರೆ. ಇದೀಗ ಇಂಗ್ಲೆಂಡ್ ವಿರುದ್ದದ ಟೆಸ್ಟ್ ಸರಣಿ ಅಭ್ಯಾಸದ ವೇಳೆ ಕೊಹ್ಲಿ ಕೈಯಲ್ಲಿ ಕಪ್ಪು ನೀರಿನ ಬಾಟಲ್ ಕಾಣಿಸಿಕೊಂಡ ಬೆನ್ನಲ್ಲೇ ಬ್ಲ್ಯಾಕ್ ವಾಟರ್ ಬಗ್ಗೆಗಿನ ಚರ್ಚೆಗಳು ಶುರುವಾಗಿದೆ.