India vs England 3rd Test: ಪಿಚ್ ನೋಡಿ ಕೊಹ್ಲಿಗೆ ಶಾಕ್: ತಂಡದಲ್ಲಿ ಪ್ರಮುಖ ಬದಲಾವಣೆ ಸಾಧ್ಯತೆ
India vs England 3rd Test: 'ನಮ್ಮ ಉತ್ತಮ ಪ್ರದರ್ಶನಕ್ಕೆ ಆರಂಭಿಕರೇ ದೊಡ್ಡ ಕಾರಣ. ಕೆಎಲ್ ರಾಹುಲ್ ಮತ್ತು ರೋಹಿತ್ ಶರ್ಮಾ ಮಾಡಿದ ಬ್ಯಾಟಿಂಗ್ ನಿಜವಾಗಿಯೂ ಅದ್ಭುತವಾಗಿದೆ.
India vs England 3rd Test: ಭಾರತ-ಇಂಗ್ಲೆಂಡ್ (India vs England) ನಡುವಣ ಮೂರನೇ ಟೆಸ್ಟ್ ಪಂದ್ಯವು ಬುಧವಾರ ಲೀಡ್ಸ್ನ ಹೆಡಿಂಗ್ಲೆ ಮೈದಾನದಲ್ಲಿ ನಡೆಯಲಿದೆ. ಮೊದಲೆರಡು ಪಂದ್ಯಗಳಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ಟೀಮ್ ಇಂಡಿಯಾ (Team India) ಪಂದ್ಯವನ್ನು ಗೆದ್ದರೆ ಸರಣಿ ಸೋಲಿನಿಂದ ಪಾರಾಗಬಹುದು. ಅತ್ತ ಆತಿಥೇಯ ಇಂಗ್ಲೆಂಡ್ (England) ತಂಡ ಸರಣಿ ಗೆಲ್ಲಬೇಕಿದ್ದರೆ ಮೂರನೇ ಪಂದ್ಯದಲ್ಲಿ ಟೀಮ್ ಇಂಡಿಯಾ (India) ಗೆಲುವನ್ನು ತಡೆಯಲೇಬೇಕು. ಹೀಗಾಗಿ ಲೀಡ್ಸ್ನಲ್ಲಿ ನಡೆಯಲಿರುವ ಈ ಪಂದ್ಯವನ್ನು ಕೂತೂಹಲಕ್ಕೆ ಕಾರಣವಾಗಿದೆ. ಈ ನಡುವೆ ಅಭ್ಯಾಸದ ವೇಳೆ ಹೆಡಿಂಗ್ಲೆ ಮೈದಾನದ ಪಿಚ್ ಪರಿಶೀಲಿಸಿರುವ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ (Virat Kohli) ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೊಹ್ಲಿ, ಪಿಚ್ ಮೇಲ್ಮೈ ವಿಚಾರವನ್ನು ಬಹಿರಂಗಪಡಿಸಿದ್ದು, ಹೆಡಿಂಗ್ಲೆ ಪಿಚ್ ನಾವು ಅಂದುಕೊಂಡಂತೆ ಇಲ್ಲ ಎಂದಿದ್ದಾರೆ.
ನಾವು ಹೆಡಿಂಗ್ಲೆ ಪಿಚ್ನಲ್ಲಿ ಹುಲ್ಲು ಇರುತ್ತೆ ಎಂದು ನಿರೀಕ್ಷಿಸಿದ್ದೆವು. ಆದರೆ ಪಿಚ್ ಸಂಪೂರ್ಣ ಒಣ ಮೇಲ್ಮೈಯನ್ನು ಹೊಂದಿದೆ. ಇದನ್ನು ನಾವು ನಿರೀಕ್ಷಿಸಿರಲಿಲ್ಲ ಎಂದು ವಿರಾಟ್ ಕೊಹ್ಲಿ ತಿಳಿಸಿದ್ದಾರೆ. ಟೀಮ್ ಇಂಡಿಯಾ 19 ವರ್ಷಗಳ ಬಳಿಕ ಇದೇ ಮೊದಲ ಬಾರಿ ಹೆಡಿಂಗ್ಲೆ ಮೈದಾನದಲ್ಲಿ ಆಡಲಿದ್ದು, ಹೀಗಾಗಿ ಪ್ರಸ್ತುತ ತಂಡದಲ್ಲಿರುವ ಯಾವೊಬ್ಬ ಆಟಗಾರನಿಗೂ ಇಲ್ಲಿನ ಪಿಚ್ ಬಗ್ಗೆ ಹೆಚ್ಚಿನ ಮಾಹಿತಿ ಇರಲಿಲ್ಲ. ಇದೀಗ ನಾಯಕ ವಿರಾಟ್ ಕೊಹ್ಲಿಯ ನಿರೀಕ್ಷೆ ಕೂಡ ಹುಸಿಯಾಗಿದ್ದು, ಹೀಗಾಗಿ ತಂಡದಲ್ಲಿ ಪ್ರಮುಖ ಬದಲಾವಣೆ ಮಾಡುವ ಸಾಧ್ಯತೆಯಿದೆ.
ಈ ಬಗ್ಗೆ ಮಾತನಾಡಿರುವ ಕೊಹ್ಲಿ, ನಾವು ಈಗಾಗಲೇ ಮೂರನೇ ಟೆಸ್ಟ್ ಪಂದ್ಯಕ್ಕಾಗಿ 12 ಆಟಗಾರರನ್ನು ಆಯ್ಕೆ ಮಾಡಿದ್ದೇವೆ. ಹಾಗೆಯೇ ಪ್ಲೇಯಿಂಗ್ ಇಲೆವೆನ್ನಲ್ಲಿ ರವಿಚಂದ್ರನ್ ಅಶ್ವಿನ್ಗೆ (R. Ashwin) ಸ್ಥಾನ ನೀಡಲಿದ್ದೇವಾ? ಇಲ್ಲವಾ ಎಂಬುದನ್ನು ಪಂದ್ಯ ಆರಂಭಕ್ಕೂ ಮುನ್ನ ನಿರ್ಧರಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ಈ ಮೂಲಕ 12 ಆಟಗಾರರಲ್ಲಿ ಅಶ್ವಿನ್ ಇದ್ದು, ಕೊನೆ ಕ್ಷಣದಲ್ಲಿ ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್ ಬದಲಾಗಬಹುದು ಎಂಬ ಸುಳಿವು ನೀಡಿದ್ದಾರೆ ವಿರಾಟ್ ಕೊಹ್ಲಿ.
ಇದೇ ವೇಳೆ ತಂಡವು 4 ವೇಗದ ಬೌಲರುಗಳೊಂದಿಗೆ ಕಣಕ್ಕಿಳಿಯುವುದಾಗಿ ತಿಳಿಸಿರುವ ಕೊಹ್ಲಿ, ಈ ಸಂಯೋಜನೆಯಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ ಎಂದಿದ್ದಾರೆ. ಏಕೆಂದರೆ ಪ್ರಸ್ತುತ ತಂಡವನ್ನು ಬದಲಿಸಲು ಯಾವುದೇ ಕಾರಣವಿಲ್ಲ. ವಿಶೇಷವಾಗಿ ಕಳೆದ ಪಂದ್ಯದಲ್ಲಿ ಬೌಲರುಗಳು ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಹೀಗಾಗಿ ನಾವು ನಾಲ್ವರು ವೇಗಿ ಹಾಗೂ ಓರ್ವ ಆಲ್ರೌಂಡರ್ ಜೊತೆ ಕಣಕ್ಕಿಳಿಯುವುದಾಗಿ ತಿಳಿಸಿದ್ದಾರೆ.
ಕೊಹ್ಲಿ ಅವರ ಈ ಹೇಳಿಕೆ ಬೆನ್ನಲ್ಲೇ ಓರ್ವ ಆಲ್ರೌಂಡರ್ ಆಗಿ ಯಾರು ಆಯ್ಕೆಯಾಗಲಿದ್ದಾರೆ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಏಕೆಂದರೆ 12 ಆಟಗಾರರಲ್ಲಿ ಆರ್. ಅಶ್ವಿನ್ ಕೂಡ ಇದ್ದಾರೆ. ಇತ್ತ ಕಳೆದ ಪಂದ್ಯದಲ್ಲಿ ಬೌಲಿಂಗ್ನಲ್ಲಿ ರವೀಂದ್ರ ಜಡೇಜಾ ಅವರಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಹೀಗಾಗಿ ಅನುಭವಿ ಆಟಗಾರ ಅಶ್ವಿನ್ಗೆ ಅವಕಾಶ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಆರಂಭಿಕರನ್ನು ಹೊಗಳಿದ ಕಿಂಗ್ ಕೊಹ್ಲಿ: ವಿರಾಟ್ ಕೊಹ್ಲಿ ಟೀಮ್ ಇಂಡಿಯಾ ಆರಂಭಿಕರಾದ ಕೆಎಲ್ ರಾಹುಲ್ ಮತ್ತು ರೋಹಿತ್ ಶರ್ಮಾ ಅವರ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ‘ನಮ್ಮ ಉತ್ತಮ ಪ್ರದರ್ಶನಕ್ಕೆ ಆರಂಭಿಕರೇ ದೊಡ್ಡ ಕಾರಣ. ಕೆಎಲ್ ರಾಹುಲ್ ಮತ್ತು ರೋಹಿತ್ ಶರ್ಮಾ ಮಾಡಿದ ಬ್ಯಾಟಿಂಗ್ ನಿಜವಾಗಿಯೂ ಅದ್ಭುತವಾಗಿದೆ. ಅವರು ನಮಗೆ ಉತ್ತಮ ಆರಂಭ ನೀಡಿದರು. ಉತ್ತಮ ಬ್ಯಾಟಿಂಗ್‌ನಿಂದಾಗಿ ನಾವು ಎರಡೂ ಟೆಸ್ಟ್ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಯಿತು ಎಂದು ಕೆಎಲ್ಆರ್ ಹಾಗೂ ಹಿಟ್ಮ್ಯಾನ್ ಆರಂಭವನ್ನು ಶ್ಲಾಘಿಸಿದರು.
ಇದನ್ನೂ ಓದಿ: ಪೆಟ್ರೋಲ್, ಡಿಸೇಲ್ ಹಾಕಬೇಕಿಲ್ಲ, ಚಾರ್ಜ್ ಕೂಡ ಮಾಡಬೇಕಿಲ್ಲ: ಇದು ಮಾರುತಿ ಸುಜುಕಿ ಹೊಸ ಕಾರು
ಇದನ್ನೂ ಓದಿ: Video: ಒಂದೇ ಒಂದು ಬೌನ್ಸರ್ ಎಸೆದು ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದ!
ಇದನ್ನೂ ಓದಿ: Crime News: ಅಶ್ಲೀಲ ವೀಡಿಯೋ ಕಳುಹಿಸುತ್ತಿದ್ದ ಆಂಟಿ ಅರೆಸ್ಟ್..!
(India vs England 3rd Test: Virat Kohli surprised to see Leeds pitch, will Ashwin play or not?)