ಕೊಹ್ಲಿಯ ಅತ್ಯುತ್ತಮ ನಾಯಕತ್ವ ಹೊಂದಿರುವ ಇಂಡಿಯ ಎಲ್ಲ ಕಂಡೀಷನ್ಗಳಲ್ಲಿ ಟೆಸ್ಟ್ ಗೆಲ್ಲಬಲ್ಲದು: ದಾವಿದ್ ಮಲಾನ್
ಭಾರತ 2018 ರಲ್ಲಿ ಇಂಗ್ಲೆಂಡ್ ಪ್ರವಾಸ ಕೈಗೊಂಡಾಗ ಮಲಾನ್ ಬರ್ಮಿಂಗ್ ಹ್ಯಾಮ್ ಟೆಸ್ಟ್ನಲ್ಲಿ ಆಡಿದ್ದರು. ಭಾರತದ ವೇಗದ ಬೌಲರ್ ಮಹ್ಮದ್ ಸಿರಾಜ್ ಅವರ ಬೌಲಿಂಗ್ ಮಾರಕ ದಾಳಿಗೆ ತತ್ತರಿಸಿದ ಅತಿಥೇಯರು ಲಾರ್ಡ್ಸ್ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯವನ್ನು 151 ರನ್ಗಳಿಂದ ಸೋತು ಸೋತು 0-1 ಹಿನ್ನಡೆ ಸಾಧಿಸಿದ್ದಾರೆ.
ಟೀಮ್ ಇಂಡಿಯ ಕ್ಯಾಪ್ಟನ್ ವಿರಾಟ್ ಕೊಹ್ಲಿ ಅವರಿಗೆ ಇಂಗ್ಲೆಂಡ್ ತಂಡದಲ್ಲಿ ಮತ್ತೊಬ್ಬ ಅಭಿಮಾನಿ ಹುಟ್ಟಿಕೊಂಡಿದ್ದಾರೆ. ಸೀಮಿತ ಓವರ್ಗಳ ಕ್ರಿಕೆಟ್ನಲ್ಲಿ ಅತ್ಯುತ್ತಮ ಪ್ರದರ್ಶನಗಳನ್ನು ನೀಡಿದ ಬಳಿಕ ಟೆಸ್ಟ್ ಕ್ರಿಕೆಟ್ಗೆ ವಾಪಸ್ಸು ಬಂದಿರುವ ದಾವಿದ್ ಮಲಾನ್ ಅವರು ಕೊಹ್ಲಿಯ ಬ್ಯಾಟಿಂಗ್ ಮತ್ತು ನಾಯಕತ್ವವನ್ನು ಮನಸಾರೆ ಕೊಂಡಾಡಿದ್ದಾರೆ. ಅಪ್ರತಿಮ ನಾಯಕತ್ವದ ಇಂಡಿಯ ಟೀಮ್ ಎಲ್ಲ ಕಂಡೀಷನ್ಗಳಲ್ಲಿ ಟೆಸ್ಟ್ ಪಂದ್ಯಗಳನ್ನು ಗೆಲ್ಲುವ ಸಾಮರ್ಥ್ಯ ಹೊಂದಿದೆ ಎಂದು ಮಲಾನ್ ಮಂಗಳವಾರ ಹೇಳಿದರು. ಭಾರತ ಮತ್ತು ಇಂಗ್ಲೆಂಡ್ ನಡುವೆ 5- ಟೆಸ್ಟ್ ಸರಣಿಯ ಮೂರನೇ ಪಂದ್ಯ ಬುಧವಾರದಿಂದ ಲೀಡ್ಸ್, ಹೆಡಿಂಗ್ಲೇಯಲ್ಲಿ ಆರಂಭವಾಗಲಿದ್ದು ಭಾರತ ಸರಣಿಯಲ್ಲಿ 1-0 ಲೀಡ್ ಸಾಧಿಸಿದೆ.
‘ಟೀಮ್ ಇಂಡಿಯವನ್ನು ಅದ್ಭುತವಾಗಿ ಮುನ್ನಡೆಸಲಾಗುತ್ತಿದೆ. ವಿರಾಟ್ ಕೊಹ್ಲಿ ತನ್ನ ನಾಯಕತ್ವದ ಜವಾಬ್ದಾರಿಯನ್ನು ನಿಭಾಯಿಸುವ ರೀತಿ ಜನರನ್ನು ಅವರತ್ತ ಸೆಳೆಯುವಂತೆ ಮಾಡುತ್ತದೆ. ಜನ ಅವರಿಂದ ಆಕರ್ಷಣೆ ಒಳಗಾಗುತ್ತಿರುವುದರಲ್ಲಿ ಯಾವುದೇ ಅತಿಶಯೋಕ್ತಿ ಇಲ್ಲ,’ ಎಂದು ಟೆಸ್ಟ್ಗೆ ಮುನ್ನಾ ದಿನ ಲೀಡ್ಸ್ ನಲ್ಲಿ ನಡೆದ ಪ್ರೆಸ್ ಕಾನ್ಫರೆನ್ಸ್ನಲ್ಲಿ ಮಲಾನ್ ಹೇಳಿದರು.
‘ಅವರು (ಟೀಮ್ ಇಂಡಿಯ) ಕೇವಲ ಆಳವಾದ ಬ್ಯಾಟಿಂಗ್ ಲೈನಪ್ ಹೊಂದಿಲ್ಲ, ಅವರ ಬೌಲಿಂಗ್ ವಿಭಾಗವೂ ಆಳವಾಗಿದೆ. ಅವರ ತಂಡದಲ್ಲಿರುವ ಬೌಲರ್ಗಳು ಎಲ್ಲ ಕಂಡೀಷನ್ಗಳಲ್ಲಿ ಟೆಸ್ಟ್ ಗೆದ್ದುಕೊಡಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಮೈದಾನದಲ್ಲಿ ತೀವ್ರ ಸ್ವರೂಪದ ಪ್ರತಿಸ್ಫರ್ಧೆಯನ್ನು ಅವರು ಒಡ್ಡುತ್ತಾರೆ,’ ಎಂದು 33 ವರ್ಷ ವಯಸ್ಸಿನ ಎಡಗೈ ಆಟಗಾರ ಹೇಳಿದರು.
ಭಾರತ 2018 ರಲ್ಲಿ ಇಂಗ್ಲೆಂಡ್ ಪ್ರವಾಸ ಕೈಗೊಂಡಾಗ ಮಲಾನ್ ಬರ್ಮಿಂಗ್ ಹ್ಯಾಮ್ ಟೆಸ್ಟ್ನಲ್ಲಿ ಆಡಿದ್ದರು. ಭಾರತದ ವೇಗದ ಬೌಲರ್ ಮಹ್ಮದ್ ಸಿರಾಜ್ ಅವರ ಬೌಲಿಂಗ್ ಮಾರಕ ದಾಳಿಗೆ ತತ್ತರಿಸಿದ ಅತಿಥೇಯರು ಲಾರ್ಡ್ಸ್ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯವನ್ನು 151 ರನ್ಗಳಿಂದ ಸೋತು ಸೋತು 0-1 ಹಿನ್ನಡೆ ಸಾಧಿಸಿದ್ದಾರೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತಾಡಿದ ಇಂಗ್ಲೆಂಡ್ ನಾಯಕ ಜೋ ರೂಟ್ ಅವರು, ತಂಡಕ್ಕೆ ಮಲಾನ್ ಅವರ ಸೇರ್ಪಡೆ ಟಾಪ್ ಕ್ರಮಾಂಕವನ್ನು ಬಲಪಡಿಸಲಿದೆ ಮತ್ತು ಮಿಕ್ಕಿದ ಟೆಸ್ಟ್ಗಳಿಗೆ ಅದು ತಂಡಕ್ಕೆ ನೆರವಾಗಲಿದೆ ಎಂದು ಹೇಳಿದ್ದರು.
2017 ರಲ್ಲಿ ದಕ್ಷಿಣ ಆಫ್ರಿಕ ವಿರುದ್ಧ ಸಾಂಪ್ರದಾಯಿಕ ಕ್ರಿಕೆಟ್ ಆವೃತ್ತಿಗೆ ಪಾದಾರ್ಪಣೆ ಮಾಡಿದ ಮಲಾನ್ ಇದುವರೆಗೆ 15 ಟೆಸ್ಟ್ ಗಳನ್ನಾಡಿ 724 ರನ್ ಗಳಿಸಿದ್ದಾರೆ. ಒಂದು ಶತಕ ಮತ್ತು ಆರು ಅರ್ಧ ಶತಕಗಳನ್ನು ಅವರು ಬಾರಿಸಿದ್ದಾರೆ.
ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಸಾಮಾನ್ಯವಾಗಿ ನಾಲ್ಕನೇ ಕ್ರಮಾಂಕದಲ್ಲಾಡುವ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಬಿನ್ನವಾದ ಅಪ್ರೋಚ್ ಅಳವಡಿಸಲಿದ್ದಾರೆಯೇ ಮತ್ತು ಈ ಕ್ರಮಾಂಕದಲ್ಲಿ ಆಡುವಾಗ ಅವರು ಎದುರಿಸ ಬಹುದಾದ ಸವಾಲುಗಳ ಬಗ್ಗೆ ನಿರ್ದಿಷ್ಟವಾದ ಪ್ರಶ್ನೆ ಕೇಳಿದಾಗ ಮಲಾನ್, ‘ನನ್ನ ಕ್ರಿಕೆಟ್ ಕರೀಯರ್ ನೋಡಿದರೆ ರೆಡ್ ಬಾಲ್ ಕ್ರಿಕೆಟ್ನಲ್ಲಿ ಇದು ನನಗೆ ಹೊಸದು. 25 ಅಥವಾ 30 ಸಲ ನಾನು ಈ ಕ್ರಮಾಂಕದಲ್ಲಿ ಆಡಿರಬಹುದು. ನಾನು ಹಿಂದೆ ಆಡಿದಂತೆಯೇ ಈಗಲೂ ಆಡುತ್ತೇನೆ,’ ಎಂದು ಮಲಾನ್ ಹೇಳಿದರು.
‘ಅವರು (ಭಾರತೀಯ ಬೌಲರ್ಗಳು) 30 ಉತ್ತಮ ಎಸೆತಗಳನ್ನು ಬೌಲ್ ಮಾಡಿದರೆ ಮತ್ತು ಆ ಎಸೆತಗಳಲ್ಲಿ ನಾನು ಔಟಾಗದೆ ಉಳಿದೆನೆಂದರೆ ಮುಂದಿನ 30 ಎಸೆತಗಳಲ್ಲಿ ನನಗೆ ಕೆಟ್ಟ ಎಸೆತಗಳು ಸಿಗುತ್ತವೆ. ನಾನು ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುತ್ತಿದ್ದ ಹಾಗೆಯೇ ಮೂರನೇ ಕ್ರಮಾಂಕದಲ್ಲೂ ಆಡುತ್ತೇನೆ. ನನ್ನ ಕರೀಯರ್ ಉದ್ದ್ದಕ್ಕೂ ನಾನು 4ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ್ದೇನೆ. ನನ್ನಲ್ಲಿರುವ ಸಾಮರ್ಥ್ಯ ಮೂರನೇ ಕ್ರಮಾಂಕದಲ್ಲೂ ಯಶ ದೊರಕಿಸಿ ಕೊಡಬಲ್ಲದು ಎಂಬ ವಿಶ್ವಾಸ ನನಗಿದೆ,’ ಎಂದು ಮಲಾನ್ ಹೇಳಿದರು.