India vs England 3rd Test: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್​ ಪಂದ್ಯವನ್ನು ಉಚಿತವಾಗಿ ಹೇಗೆ ನೋಡಬಹುದು?

ಭಾರತ ಮತ್ತು ಇಂಗ್ಲೆಂಡ್ ತಂಡದ ನಡುವೆ ನಡೆಯಲಿರುವ ಮೂರನೇ ಟೆಸ್ಟ್​ನ ಪ್ರಾರಂಭದ ಸಮಯ ಹಾಗೂ ಎಲ್ಲಿ ಪ್ರಸಾರವಾಗಲಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

India vs England 3rd Test: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್​ ಪಂದ್ಯವನ್ನು ಉಚಿತವಾಗಿ ಹೇಗೆ ನೋಡಬಹುದು?
ಭಾರತ ತಂಡ (ಸಾಂದರ್ಭಿಕಚಿತ್ರ)
Follow us
TV9 Web
| Updated By: shivaprasad.hs

Updated on: Aug 25, 2021 | 11:14 AM

ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ  ಟೆಸ್ಟ್ ಪಂದ್ಯ ಲೀಡ್ಸ್​​ನ ಹೆಡಿಂಗ್ಲೆ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯ ಉಭಯ ತಂಡಗಳಿಗೂ ಮುಖ್ಯವಾಗಿದ್ದು, ಭಾರತ ಸರಣಿಯ ಮುನ್ನಡೆಗಾಗಿ ಹಾಗೂ ಇಂಗ್ಲೆಂಡ್ ಸರಣಿಯ ಸಮಬಲಕ್ಕಾಗಿ ಹೋರಾಟ ನಡೆಸಲಿವೆ. ಇದರಿಂದಾಗಿ ಎರಡೂ ತಂಡಗಳ ನಡುವೆ ಜಿದ್ದಾಜಿದ್ದಿನ ಹಣಾಹಣಿ ನಡೆಯುವ ನಿರೀಕ್ಷೆ ಇದೆ. ಹೆಡಿಂಗ್ಲೆಯ ಹವಾಮಾನ ವರದಿಯೂ ಧನಾತ್ಮಕವಾಗಿದ್ದು, ಪಂದ್ಯದ ಮೊದಲೆರಡು ದಿನ ಮಳೆಯ ಸಾಧ್ಯತೆ ಕಡಿಮೆ ಇದೆ ಎಂದು ಹವಾಮಾನ ವರದಿ ತಿಳಿಸಿದೆ. ಕೊನೆಯ ಮೂರು ದಿನ ತುಸು ಮಳೆಯಾಗುವ ನಿರೀಕ್ಷೆ ಇದ್ದರೂ, ಪಂದ್ಯದ ಫಲಿತಾಂಶ ಹೊರಹೊಮ್ಮುವ ಸಾಧ್ಯತೆ ಅಧಿಕವಾಗಿದೆ. 

ಪಂದ್ಯದ ಪ್ರಾರಂಭದ ಸಮಯ:

ಪಂದ್ಯ ಇಂದು (ಆಗಸ್ಟ್ 25, ಬುಧವಾರ) ಭಾರತೀಯ ಕಾಲಮಾನ ಮಧ್ಯಾಹ್ನ 3.30ಕ್ಕೆ ಆರಂಭವಾಗಲಿದೆ.

ಪಂದ್ಯ ಎಲ್ಲಿ ವೀಕ್ಷಿಸಬಹುದು?:

ಸೋನಿ ಸಿಕ್ಸ್ ಚಾನಲ್​ನಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡದ ಮೂರನೇ ಟೆಸ್ಟ್ ಪಂದ್ಯ ಪ್ರಸಾರವಾಗಲಿದೆ.

ಮೊಬೈಲ್​ನಲ್ಲಿ ಪಂದ್ಯ ಎಲ್ಲಿ ವೀಕ್ಷಿಸಬಹುದು?:

ಮೊಬೈಲ್​ನಲ್ಲಿ ಸೋನಿ ಲಿವ್ ಆಪ್​ನಲ್ಲಿ ಪಂದ್ಯವನ್ನು ವೀಕ್ಷಿಸಬಹುದು. ಜಿಯೊ ಟಿವಿಯ ಸೋನಿ ಚಾನಲ್​ನಲ್ಲಿ ಪಂದ್ಯವನ್ನು ಉಚಿತವಾಗಿ ವೀಕ್ಷಿಸಬಹುದು. ಜೊತೆಗೆ ಟಿವಿ9 ಪಂದ್ಯದ ಲೈವ್ ಸ್ಕೋರ್​ಗಳನ್ನು ತಿಳಿಸಲಿದ್ದು, ಅಲ್ಲೂ ಕೂಡ ಪಂದ್ಯದ ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ.

ಭಾರತ ಮತ್ತು ಇಂಗ್ಲೆಂಡ್ ತಂಡಗಳಲ್ಲಿ ಬದಲಾವಣೆಯಾಗಲಿದೆಯೇ?

ಮೂರನೇ ಟೆಸ್ಟ್​ಗೆ ಇಂಗ್ಲೆಂಡ್ ತಂಡದಲ್ಲಿ ದೊಡ್ಡ ಬದಲಾವಣೆ ಆಗುವ ನಿರೀಕ್ಷೆ ಇದೆ. ಕಾರಣ, ಮೂರು ವರ್ಷಗಳ ಬಳಿಕ ಡೇವಿಡ್ ಮಲನ್ ಟೆಸ್ಟ್ ತಂಡ ಸೇರಿಕೊಂಡಿದ್ದಾರೆ. ಇಂಜುರಿಯಿಂದ ಸ್ಟಾರ್ ಬೌಲರ್ ಮಾರ್ಕ್​ ವುಡ್ ತಂಡದಿಂದ ಹೊರಬಿದ್ದಿದ್ದಾರೆ. ಹೀಗಾಗಿ ತಂಡದಲ್ಲಿ ಕನಿಷ್ಠ ಮೂರು ಬದಲಾವಣೆ ಆಗುವುದು ಖಚಿತ ಎಂಬ ಮಾಹಿತಿ ಇದೆ.

ಭಾರತ ತಂಡವು ಗೆಲುವಿನ ತಂಡವನ್ನೇ ಕಣಕ್ಕಿಳಿಸುವ ಸಾಧ್ಯತೆ ಇದೆ. ತಂಡದಲ್ಲಿ ನಿಜವಾಗಿ ಚರ್ಚೆಯಾಗುತ್ತಿರುವುದು ಹಿರಿಯ ಆಟಗಾರರಾದ ಚೇತೇಶ್ವರ ಪೂಜಾರ, ಅಜಿಂಕ್ಯಾ ರಹಾನೆ ಹಾಗೂ ನಾಯಕ ವಿರಾಟ್ ಕೊಹ್ಲಿಯ ಬಗ್ಗೆ. ಅವರ ಫಾರ್ಮ್ ಹಾಗೂ ಇತ್ತೀಚಿನ ಪ್ರದರ್ಶನದ ವಿರುದ್ಧ ಹಲವರು ಟೀಕೆ ವ್ಯಕ್ತಪಡಿಸಿದ್ದರೂ ಕೂಡಾ, ಈ ಮೂವರು ತಂಡದ ಬೆನ್ನೆಲಾಬಾಗಿದ್ದಾರೆ. ತಂಡದಲ್ಲಿ ಹಿರಿಯನ ಸ್ಥಾನ ತುಂಬಿರುವ ಚೇತೇಶ್ವರ ಪೂಜಾರ ಅವರನ್ನೂ ಹೊರಗಿಡುವ ಸಾಧ್ಯತೆ ಕಡಿಮೆ ಇದೆ. ಜೊತೆಗೆ ಲಾರ್ಡ್ಸ್ ಟೆಸ್ಟ್​ನಲ್ಲಿ ಅಜಿಂಕ್ಯಾ ರಹಾನೆ ಹಾಗೂ ಚೇತೇಶ್ವರ ಪೂಜಾರ ನಡುವಿನ ಸುಮಾರು ಮುನ್ನೂರು ಎಸೆತಗಳ ಜೊತೆಯಾಟ ಭಾರತದ ಜಯಕ್ಕೆ ಪ್ರಮುಖ ಕಾರಣವಾಗಿದೆ ಎಂದು ಕ್ರಿಕೆಟ್ ಪಂಡಿತರು ವಿಶ್ಲೇಷಿಸಿದ್ದಾರೆ. ಆದ್ದರಿಂದ ಭಾರತ ತಂಡದಲ್ಲಿ ಬದಲಾವಣೆಯ ಸಾಧ್ಯತೆ ಕಡಿಮೆ ಎನ್ನಲಾಗಿದೆ.

ಇದನ್ನೂ ಓದಿ:

India vs England 3rd Test: ಹೆಡಿಂಗ್ಲೆಯಲ್ಲಿ ನಡೆಯಲಿರುವ ಮೂರನೇ ಟೆಸ್ಟ್​ಗೆ ಮಳೆ ಅಡ್ಡಿಪಡಿಸಲಿದೆಯಾ?; ವರದಿ ಇಲ್ಲಿದೆ

India vs England: ಬರೋಬ್ಬರಿ 19 ವರ್ಷಗಳ ಬಳಿಕ ಲೀಡ್ಸ್​ನಲ್ಲಿ ಕಣಕ್ಕಿಳಿಯಲಿರುವ ಕೊಹ್ಲಿ ಪಡೆ: ಅಂಕಿ ಅಂಶ ಹೇಗಿದೆ?

(India vs England 3rd test when will start and where to watch details is here)