ವೆಸ್ಟ್ ಇಂಡೀಸ್​ಗೆ ಸೋಲು: ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ರ್‍ಯಾಂಕಿಂಗ್​ನಲ್ಲಿ ಅಗ್ರಸ್ಥಾನಕ್ಕೇರಿದ ಭಾರತ

World Test Championship rankings: 2021 ರಿಂದ 2023 ರವರೆಗೆ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನಲ್ಲಿ ಪಂದ್ಯಾವಳಿಗು ನಡೆಯಲಿದ್ದು, ಈ ಬಾರಿ ಅಂಕಗಳ ಲೆಕ್ಕಚಾರದಲ್ಲಿ ಬದಲಾವಣೆ ಮಾಡಲಾಗಿದೆ. ಈ ಬಾರಿ ಗೆಲ್ಲುವ ಪಂದ್ಯಕ್ಕೆ 12 ಅಂಕ ನಿಗದಿಪಡಿಸಲಾಗಿದ್ದು, ಹಾಗೆಯೇ ಪಂದ್ಯ ಟೈ ಆದರೆ 6 ಅಂಕ ಹಾಗೂ ಡ್ರಾ ಆದರೆ 4 ಅಂಕ ನೀಡಲಾಗುತ್ತದೆ.

TV9 Web
| Updated By: ಝಾಹಿರ್ ಯೂಸುಫ್

Updated on: Aug 25, 2021 | 2:37 PM

ನೂತನ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ (ICC World Test Championship 2021–23) ರ್‍ಯಾಂಕಿಂಗ್​ ಪಟ್ಟಿಯಲ್ಲಿ ಟೀಮ್ ಇಂಡಿಯಾ (Team India) ಅಗ್ರಸ್ಥಾನಕ್ಕೇರಿದೆ. ಈ ಹಿಂದೆ ಅಗ್ರಸ್ಥಾನದಲ್ಲಿದ್ದ ವೆಸ್ಟ್ ಇಂಡೀಸ್ (West Indies) ಪಾಕಿಸ್ತಾನದ (Pakistan) ವಿರುದ್ದದ ಎರಡನೇ ಟೆಸ್ಟ್ ಪಂದ್ಯದಲ್ಲಿ ಸೋಲನುಭವಿಸಿ ಮೂರನೇ ಸ್ಥಾನಕ್ಕೆ ಕುಸಿದಿದೆ.

1 / 7
 ಇದಕ್ಕೂ ಮುನ್ನ ವಿಂಡೀಸ್ ತಂಡವು 12 ಅಂಕಗಳೊಂದಿಗೆ ಅಗ್ರಸ್ಥಾನ ಅಲಂಕರಿಸಿತ್ತು. ಇತ್ತ ಲಾರ್ಡ್ಸ್​ ಮೈದಾನದಲ್ಲಿ ಭರ್ಜರಿ ಪ್ರರ್ದಶನ ನೀಡಿ 14 ಅಂಕ ಸಂಪಾದಿಸಿದರೂ ಟೀಮ್ ಇಂಡಿಯಾಗೆ ಶ್ರೇಯಾಂಕ ಪಟ್ಟಿಯಲ್ಲಿ ಮೊದಲ ಸ್ಥಾನ ಸಿಕ್ಕಿರಲಿಲ್ಲ.

2 / 7
ಭಾರತ ಎರಡು ಪಂದ್ಯಗಳಿಂದ ಒಟ್ಟು 14 ಅಂಕ ಪಡೆದರೂ ಗೆಲುವಿನ ಶೇಕಡಾವಾರು (58.33%) ಲೆಕ್ಕಚಾರದಲ್ಲಿ ದ್ವಿತೀಯ ಸ್ಥಾನಕ್ಕೆ ದೂಡಲ್ಪಟ್ಟಿತ್ತು. ಇದಾಗ್ಯೂ ಮೊದಲ ಟೆಸ್ಟ್ ಪಂದ್ಯದ ವೇಳೆ ಭಾರತ ತಂಡ ಮಾಡಿದ ಎಡವಟ್ಟಿಗೂ ಇಲ್ಲಿ ಬೆಲೆ ತೆರಬೇಕಾಯಿತು.

3 / 7
ಇಂಗ್ಲೆಂಡ್ ವಿರುದ್ದದ ಮೊದಲ ಟೆಸ್ಟ್​ನಲ್ಲಿ ಭಾರತ ಡ್ರಾ ಸಾಧಿಸಿ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನಲ್ಲಿ 4 ಅಂಕಗಳನ್ನು ಪಡೆದುಕೊಂಡಿತು. ಆದರೆ ನಿಧಾನಗತಿಯ ಬೌಲಿಂಗ್ ಮಾಡಿದ್ದರ ಪರಿಣಾಮ ಐಸಿಸಿ (ICC) ನೀತಿ ಸಂಹಿತೆಯ ಕಾಯ್ದೆ 2.22 ರ ಪ್ರಕಾರ ಅಂಕ ಕಡಿತಗೊಳಿಸಲಾಗಿತ್ತು. ಅಂದರೆ ಸ್ಲೋ ಓವರ್-ರೇಟ್ ಬೌಲಿಂಗ್ ಶಿಕ್ಷೆಯ ಅನುಸಾರ 2 ಅಂಕಗಳನ್ನು ಕಡಿತಗೊಳಿಸಿದ್ದು, ಇದರಿಂದ ಒಟ್ಟು 16 ಅಂಕ ಪಡೆದರೂ ಭಾರತ ಇದೀಗ 2 ಅಂಕಗಳ ಕಡಿತದೊಂದಿಗೆ 14 ಪಾಯಿಂಟ್ ಪಡೆದು ದ್ವಿತೀಯ ಸ್ಥಾನ ಅಲಂಕರಿಸಿತ್ತು.

4 / 7
ಇನ್ನು ಪಾಕಿಸ್ತಾನದ ವಿರುದ್ದದ ಮೊದಲ ಟೆಸ್ಟ್​ನಲ್ಲಿ 1 ವಿಕೆಟ್​ಗಳ ರೋಚಕ ಜಯ ಸಾಧಿಸಿದ ವೆಸ್ಟ್ ಇಂಡೀಸ್ 12 ಅಂಕ ಪಡೆದು ಗೆಲುವಿನ ಶೇಕಡಾವಾರು ಲೆಕ್ಕಚಾರದಲ್ಲಿ 100% ಹೊಂದುವ ಮೂಲಕ ಅಗ್ರಸ್ಥಾನವನ್ನು ಅಲಂಕರಿಸಿತ್ತು. ಇದೀಗ ದ್ವಿತೀಯ ಟೆಸ್ಟ್​​ನಲ್ಲಿ ಸೋಲು ಕಾಣುವ ಮೂಲಕ ವಿಂಡೀಸ್ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಕುಸಿದಿದೆ.

5 / 7
ದ್ವಿತೀಯ ಸ್ಥಾನದಲ್ಲಿ ಪಾಕಿಸ್ತಾನ ಇದ್ದು, ಪಾಕ್​ ತಂಡ 2 ಟೆಸ್ಟ್ ಪಂದ್ಯಗಳಲ್ಲಿ ಒಂದನ್ನು ಗೆದ್ದು ಒಟ್ಟು 12 ಅಂಕ ಪಡೆದುಕೊಂಡಿದೆ. ಮೂರನೇ ಸ್ಥಾನದಲ್ಲಿ ವೆಸ್ಟ್ ಇಂಡೀಸ್ (12 ಅಂಕ) ಹಾಗೂ ನಾಲ್ಕನೇ ಸ್ಥಾನದಲ್ಲಿ ಇಂಗ್ಲೆಂಡ್ (4 ಅಂಕ) ತಂಡಗಳಿವೆ.

6 / 7
2021 ರಿಂದ 2023 ರವರೆಗೆ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನಲ್ಲಿ ಪಂದ್ಯಾವಳಿಗು ನಡೆಯಲಿದ್ದು, ಈ ಬಾರಿ ಅಂಕಗಳ ಲೆಕ್ಕಚಾರದಲ್ಲಿ ಬದಲಾವಣೆ ಮಾಡಲಾಗಿದೆ. ಈ ಬಾರಿ ಗೆಲ್ಲುವ ಪಂದ್ಯಕ್ಕೆ 12 ಅಂಕ ನಿಗದಿಪಡಿಸಲಾಗಿದ್ದು, ಹಾಗೆಯೇ ಪಂದ್ಯ ಟೈ ಆದರೆ 6 ಅಂಕ ಹಾಗೂ ಡ್ರಾ ಆದರೆ 4 ಅಂಕ ನೀಡಲಾಗುತ್ತದೆ.

7 / 7
Follow us
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ

ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ

ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ

ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ

‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ

ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ

ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ

ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್

ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್