AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Workouts After Long Break: ತಿಂಗಳುಗಳ ಕಾಲ ವಿರಾಮ ತೆಗೆದುಕೊಂಡು ಮತ್ತೆ ವ್ಯಾಯಾಮ ಮಾಡಲು ಈ ನಿಯಮಗಳನ್ನು ಪಾಲಿಸಿ

ನಿಯಮಿತವಾಗಿ ವ್ಯಾಯಾಮ ಮಾಡಲು ಆರಂಭಿಸಿದ ನಂತರ ಮಧ್ಯದಲ್ಲಿ ನಿಲ್ಲಿಸಲು ಮತ್ತು ಪುನಃ ಪ್ರಾರಂಭಿಸಲು ಬಯಸಿದರೆ ಈ ಕೆಲವು ನಿಯಮಗಳನ್ನು ಅನುಸರಿಸುವುದು ಉತ್ತಮ ಎಂದು ತಜ್ಞರು ಹೇಳುತ್ತಾರೆ.

Workouts After Long Break: ತಿಂಗಳುಗಳ ಕಾಲ ವಿರಾಮ ತೆಗೆದುಕೊಂಡು ಮತ್ತೆ ವ್ಯಾಯಾಮ ಮಾಡಲು ಈ ನಿಯಮಗಳನ್ನು ಪಾಲಿಸಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: shruti hegde

Updated on: Aug 19, 2021 | 8:59 AM

ಇತ್ತೀಚೆಗೆ ಎಲ್ಲರೂ ಬಿಜಿ ಲೈಫ್ ಲೀಡ್ ಮಾಡುತ್ತಿದ್ದಾರೆ. ಹೀಗಾಗಿ ನಿಗದಿತ ಸಮಯದಲ್ಲಿ ತಮಗಿಷ್ಟವಾದದ್ದನ್ನು ಮಾಡಲು ಇಷ್ಟ ಪಡುತ್ತಾರೆ. ಕಡಿಮೆ ಸಮಯದಲ್ಲಿ ತಮ್ಮ ದೇಹದ ಫಿಟ್​ನೆಸ್​ ಕಾಪಾಡಲು ಪ್ರಯತ್ನಿಸುತ್ತಾರೆ. ಹೀಗಾಗಿ ವ್ಯಾಯಾಮ, ಯೋಗದ ಮೊರೆ ಹೋಗುತ್ತಾರೆ. ವ್ಯಾಯಾಮ ಮಾಡುವುದರಿಂದ ಹಲವು ಪ್ರಯೋಜನಗಳಿವೆ ಎಂದು ಎಲ್ಲರಿಗೂ ತಿಳಿದಿದೆ. ಆದರೆ, ಸಮಯದ ಅಭಾವದಿಂದ ಇದನ್ನು ಮಾಡಲು ಸಾಧ್ಯವಿಲ್ಲ. ಹೀಗಾಗಿ ಸಮಯ ಸಿಕ್ಕಾಗ ವ್ಯಾಯಾಮ ಮಾಡುವ ಮತ್ತು ಸಿಗದಿದ್ದಾಗ ಅದರಿಂದ ದೂರವಿರುವ ಅಭ್ಯಾಸ ಹಲವರಲ್ಲಿ ಇದೆ.

ಒಂದು ಸಲ ವ್ಯಾಯಾಮದಿಂದ ದೂರವಾದರೆ, ಮತ್ತೆ ವ್ಯಾಯಾಮ ಮಾಡುವುದು ಕಷ್ಟವಾಗುತ್ತದೆ. ಇದರ ಜೊತೆಯಲ್ಲಿ, ನೀವು ವ್ಯಾಯಾಮವನ್ನು ನಿಲ್ಲಿಸಿ ಮತ್ತೆ ಪ್ರಾರಂಭ ಮಾಡುವುದರಿಂದ ದೈಹಿಕ ಸಮಸ್ಯೆಗಳನ್ನು ಉಂಟುಮಾಡಬಹುದು. ಹೀಗಾಗಿ ನಿಯಮಿತವಾಗಿ ವ್ಯಾಯಾಮ ಮಾಡಲು ಆರಂಭಿಸಿದ ನಂತರ ಮಧ್ಯದಲ್ಲಿ ನಿಲ್ಲಿಸಲು ಮತ್ತು ಪುನಃ ಪ್ರಾರಂಭಿಸಲು ಬಯಸಿದರೆ ಈ ಕೆಲವು ನಿಯಮಗಳನ್ನು ಅನುಸರಿಸುವುದು ಉತ್ತಮ ಎಂದು ತಜ್ಞರು ಹೇಳುತ್ತಾರೆ.

1. ಸೋಮಾರಿತನವನ್ನು ತೊಡೆದುಹಾಕಿ ಯಾವುದೇ ಕೆಲಸವನ್ನು ಮಾಡಿದ ನಂತರ ನಾವು ತೆಗೆದುಕೊಳ್ಳುವ ದೊಡ್ಡ ಅಂತರ ಅಥವಾ ಸ್ವಲ್ಪ ಸಮಯದ ಅಂತರ ಕೆಲಸವನ್ನು ಪುನರಾವರ್ತಿಸಲು ಕಷ್ಟಪಡುವಂತೆ ಮಾಡುತ್ತದೆ. ಆದರೆ, ನೀವು ಫಿಟ್ ಆಗಿರಲು ಬಯಸಿದರೆ, ನೀವು ಈ ಸೋಮಾರಿತನವನ್ನು ತೊಡೆದುಹಾಕಬೇಕು. ಆರಂಭದಲ್ಲಿ ವ್ಯಾಯಮ ಮಾಡುವುದು ಬೇಸರ ಸಂಗತಿ. ಆದರೆ, ಅಭ್ಯಾಸವಾಗುತ್ತಿದ್ದಂತೆ ಎಲ್ಲವೂ ಸರಿ ಹೋಗುತ್ತದೆ. ಆದ್ದರಿಂದ ಮತ್ತೆ ವ್ಯಾಯಾಮ ಆರಂಭಿಸಿದಾಗ, ನಿಧಾನವಾಗಿ ಅಥವಾ ಸರಳವಾದ ವ್ಯಾಯಾಮ ಮಾಡಲು ಪ್ರಾರಂಭಿಸಿ. ಇದು ನಿಮಗೆ ವ್ಯಾಯಾಮವನ್ನು ಮುಂದುವರಿಸಲು ಅನುವು ಮಾಡಿಕೊಡುತ್ತದೆ.

2. ಯೋಗದೊಂದಿಗೆ ಪ್ರಾರಂಭಿಸಿ ಯಾವುದೇ ವ್ಯಾಯಾಮವನ್ನು ಪ್ರಾರಂಭಿಸುವ ಮೊದಲು ಮಾನಸಿಕ ಸ್ಥಿರತೆಯನ್ನು ಹೊಂದಿರುವುದು ಮುಖ್ಯ. ಆದ್ದರಿಂದ ನೀವು ವ್ಯಾಯಾಮ ಆರಂಭಿಸುವ ಮೊದಲು 20 ನಿಮಿಷಗಳ ಕಾಲ ಯೋಗ ಮಾಡಿ. ಅಲ್ಲದೆ, ನೀವು ಆರಂಭದಲ್ಲಿ ಕಠಿಣ ವ್ಯಾಯಾಮ ಮಾಡಿದರೆ, ಅದು ನಿಮ್ಮ ದೇಹದಲ್ಲಿ ಒತ್ತಡವನ್ನು ಉಂಟುಮಾಡಬಹುದು. ಆದ್ದರಿಂದ ಸುಲಭ ಭಂಗಿಯ ಯೋಗಾಸನಗಳೊಂದಿಗೆ ಪ್ರಾರಂಭಿಸಿ. ಇದು ಉತ್ತಮ ಮನಸ್ಥಿತಿ ನೀಡುವುದಲ್ಲದೆ ವ್ಯಾಯಾಮನ ಮುಂದುವರಿಸಿಕೊಂಡು ಹೋಗಲು ಸಹಾಯ ಮಾಡುತ್ತದೆ.

3. ಆಹಾರ ಪದ್ಧತಿಯಲ್ಲಿನ ಬದಲಾವಣೆ ಸ್ವಲ್ಪ ಸಮಯ ವ್ಯಾಯಮದಿಂದ ದೂರವಿದ್ದು, ಮತ್ತೊಮ್ಮೆ ವ್ಯಾಯಾಮ ಮಾಡಲು ಆರಂಭಿಸಿದ ನಂತರ, ಆಹಾರದಲ್ಲಿ ಕೆಲವು ಬದಲಾವಣೆಗಳನ್ನು ಮಾಡಬೇಕಾಗುತ್ತದೆ. ನೀವು ಆರಂಭಿಕ ಫಿಟ್​ನೆಸ್​ ಫಲಿತಾಂಶಗಳನ್ನು ಬಯಸಿದರೆ, ನಿಮ್ಮ ಆಹಾರದಲ್ಲಿ ಜ್ಯೂಸ್ ಮತ್ತು ತರಕಾರಿಗಳನ್ನು ಸೇರಿಸಿಕೊಳ್ಳಲು ಪ್ರಾರಂಭಿಸಿ.

4. ತಾಳ್ಮೆ ಅಗತ್ಯ ಪವಾಡಗಳು ಒಂದೇ ರಾತ್ರಿಯಲ್ಲಿ ಸಂಭವಿಸುವುದಿಲ್ಲ. ನೀವು ವ್ಯಾಯಾಮ ಆರಂಭಿಸಿದ ತಕ್ಷಣ ಫಲಿತಾಂಶದ ಬಗ್ಗೆ ಯೋಚಿಸಬೇಡಿ. ಹಾಗಾಗಿ ಫಿಟ್ ಆಗಲು ಸ್ವಲ್ಪ ತಾಳ್ಮೆ ಇರಲಿ. ನೀವು ಒಂದು ದಿನ ವ್ಯಾಯಾಮ ಮಾಡಿದ ತಕ್ಷಣ ನೀವು ತೆಳ್ಳಗಾಗುವುದಿಲ್ಲ ಅಥವಾ ದಪ್ಪವಾಗುವುದಿಲ್ಲ. ನೀವು ಕೆಲವು ತಿಂಗಳುಗಳ ಕಾಲ ಕಷ್ಟಪಟ್ಟು ವ್ಯಾಯಾಮ ಮಾಡಬೇಕು. ಆಗ ಮಾತ್ರ ನೀವು ನಿರೀಕ್ಷಿಸಿದ ಫಲಿತಾಂಶ ಪಡೆಯಲು ಸಾಧ್ಯ.

ಇದನ್ನೂ ಓದಿ: Walking After Dinner: ರಾತ್ರಿ ಊಟದ ನಂತರ ವಾಕಿಂಗ್ ಮಾಡುವ ಅಭ್ಯಾಸ ಇರುವವರು ಈ ಬಗ್ಗೆ ಗಮನಹರಿಸಿ

ಕೊತ್ತಂಬರಿ ಸೊಪ್ಪು ರುಚಿಗಷ್ಟೇ ಎಂಬ ಭ್ರಮೆಯಲ್ಲಿದ್ದರೆ ಇಂದೇ ಹೊರ ಬನ್ನಿ; ಆರೋಗ್ಯಕರ ಅನುಕೂಲದ ಬಗ್ಗೆ ತಿಳಿಯಿರಿ

Daily horoscope: ಇಂದು ಮಿಥುನ ರಾಶಿಯವರಿಗೆ ಆರು ಗ್ರಹಗಳ ಶುಭಫಲ
Daily horoscope: ಇಂದು ಮಿಥುನ ರಾಶಿಯವರಿಗೆ ಆರು ಗ್ರಹಗಳ ಶುಭಫಲ
ಬೆಂಗಳೂರಿನ ಜಯನಗರದಲ್ಲಿ ಧರೆಗೆ ಉರುಳಿದ ಮರ
ಬೆಂಗಳೂರಿನ ಜಯನಗರದಲ್ಲಿ ಧರೆಗೆ ಉರುಳಿದ ಮರ
ನೆಲೆಮಂಗಲ: ಮನೆ ಮುಂದೆ ಕಟ್ಟಿದ್ದ ಹಸುಗಳನ್ನ ಕದ್ದು ಪರಾರಿ, ರೈತ ಕಂಗಾಲು
ನೆಲೆಮಂಗಲ: ಮನೆ ಮುಂದೆ ಕಟ್ಟಿದ್ದ ಹಸುಗಳನ್ನ ಕದ್ದು ಪರಾರಿ, ರೈತ ಕಂಗಾಲು
ಅಮೆರಿಕದ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದ ಅಪ್ಪು ಪುತ್ರಿ ಧ್ರುತಿ
ಅಮೆರಿಕದ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದ ಅಪ್ಪು ಪುತ್ರಿ ಧ್ರುತಿ
ಗಂಗಾವತಿ ಉಪ ಚುನಾವಣೆಗೆ ಅನ್ಸಾರಿ ಟಿಕೆಟ್ ಬಯಸಿದ್ದರೆ ತಪ್ಪಿಲ್ಲ: ಸಂಗಣ್ಣ
ಗಂಗಾವತಿ ಉಪ ಚುನಾವಣೆಗೆ ಅನ್ಸಾರಿ ಟಿಕೆಟ್ ಬಯಸಿದ್ದರೆ ತಪ್ಪಿಲ್ಲ: ಸಂಗಣ್ಣ
ಶಿವಣ್ಣನ ಮನೆಯ ಗೌಪ್ಯ ಸಭೆಯಲ್ಲಿ ಚರ್ಚೆಯಾದ ವಿಷಯಗಳೇನು: ನರಸಿಂಹಲು ಮಾಹಿತಿ
ಶಿವಣ್ಣನ ಮನೆಯ ಗೌಪ್ಯ ಸಭೆಯಲ್ಲಿ ಚರ್ಚೆಯಾದ ವಿಷಯಗಳೇನು: ನರಸಿಂಹಲು ಮಾಹಿತಿ
ದೇಶಕ್ಕಿಂತ ದೊಡ್ಡವರು ಯಾರೂ ಇಲ್ಲ, ದೇಶವುಳಿದರೆ ನಾವು ಉಳಿದಂತೆ: ಶಾಸಕ
ದೇಶಕ್ಕಿಂತ ದೊಡ್ಡವರು ಯಾರೂ ಇಲ್ಲ, ದೇಶವುಳಿದರೆ ನಾವು ಉಳಿದಂತೆ: ಶಾಸಕ
ತಿಂಗಳ ಅವಧಿಯಲ್ಲಿ ಭಕ್ತರಿಂದ ಹುಂಡಿಯಲ್ಲಿ ₹59, 28, 876 ಕಾಣಿಕೆ ಸಂಗ್ರಹ
ತಿಂಗಳ ಅವಧಿಯಲ್ಲಿ ಭಕ್ತರಿಂದ ಹುಂಡಿಯಲ್ಲಿ ₹59, 28, 876 ಕಾಣಿಕೆ ಸಂಗ್ರಹ
ಎರಡು ವರ್ಷಗಳಿಂದ ತಮ್ಮಯ್ಯ-ರವಿ ಮಧ್ಯೆ ಆಗಾಗ್ಗೆ ನಡೆಯುತ್ತಿದೆ ಮಾತಿನ ಕಲಹ
ಎರಡು ವರ್ಷಗಳಿಂದ ತಮ್ಮಯ್ಯ-ರವಿ ಮಧ್ಯೆ ಆಗಾಗ್ಗೆ ನಡೆಯುತ್ತಿದೆ ಮಾತಿನ ಕಲಹ
ಐಪಿಎಲ್: ಬೆಂಗಳೂರಿನ ಈ ರಸ್ತೆಗಳಲ್ಲಿ ಕಿಲೋಮೀಟರ್​ಗಟ್ಟಲೇ ಟ್ರಾಫಿಕ್ ಜಾಮ್
ಐಪಿಎಲ್: ಬೆಂಗಳೂರಿನ ಈ ರಸ್ತೆಗಳಲ್ಲಿ ಕಿಲೋಮೀಟರ್​ಗಟ್ಟಲೇ ಟ್ರಾಫಿಕ್ ಜಾಮ್