ಬೇಸಿಗೆಯಲ್ಲಿ ಬಟ್ಟೆ ಮೇಲಿನ ಬೆವರಿನ ಕಲೆ ಹೋಗಲಾಡಿಸುವುದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್

| Updated By: ಅಕ್ಷಯ್​ ಪಲ್ಲಮಜಲು​​

Updated on: Apr 23, 2024 | 6:09 PM

ಬೇಸಿಗೆ ಶುರುವಾಯಿತು ಎಂದರೆ ಕಿರಿಕಿರಿ ಅನುಭವ ಜೊತೆಗೆ ಆರೋಗ್ಯವನ್ನು ಹೇಗೆ ಕಾಪಾಡುವುದು ಎನ್ನುವ ಚಿಂತೆ. ಈ ಸಮಯದಲ್ಲಿ ಯಾವ ತೆರೆನಾದ ಬಟ್ಟೆ ಹಾಕಿದರೂ ಕೂಡ ಮೈಯಿಂದ ಬೆವರು ಇಳಿಯುತ್ತಲೇ ಇರುತ್ತದೆ. ಕೆಟ್ಟ ಬೆವರಿನ ವಾಸನೆಯೊಂದಿಗೆ ಬಟ್ಟೆಯ ತುಂಬಾ ಹಳದಿ ಬಣ್ಣದ ಬೆವರಿನ ಕಲೆಗಳು ತುಂಬಿಕೊಂಡಿರುತ್ತದೆ. ಕುತ್ತಿಗೆ ಹಾಗೂ ಕಂಕುಳಿನ ಭಾಗದಲ್ಲಿ ಕಾಣಿಸಿಕೊಳ್ಳುವ ಈ ಕಲೆಗಳಿಂದ ಬಟ್ಟೆಯ ಅಂದವೇ ಹಾಳಾಗುತ್ತದೆ. ಹಾಗಾದ್ರೆ ಮನೆಯಲ್ಲೇ ಕೆಲವು ಟಿಪ್ಸ್ ಗಳನ್ನು ಪಾಲಿಸಿದರೆ ಸುಲಭವಾಗಿ ಕಲೆಗಳನ್ನು ತೊಡೆದುಹಾಕಬಹುದು.

ಬೇಸಿಗೆಯಲ್ಲಿ ಬಟ್ಟೆ ಮೇಲಿನ ಬೆವರಿನ ಕಲೆ ಹೋಗಲಾಡಿಸುವುದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್
Follow us on

ಬೇಸಿಗೆಯೆಂದರೆ ಎಲ್ಲರಿಗೂ ಕಷ್ಟನೇ. ನೆತ್ತಿಯನ್ನು ಸುಡುವ ಸೂರ್ಯನ ಶಾಖದ ನಡುವೆ ಚರ್ಮ ಹಾಗೂ ಆರೋಗ್ಯವನ್ನು ರಕ್ಷಿಸಿಕೊಳ್ಳಲು ಹರಸಾಹಸ ಪಡಬೇಕಾಗುತ್ತದೆ. ಈ ಕೆಟ್ಟ ಬೆವರಿನ ವಾಸನೆಯ ಜೊತೆಗೆ ಬಟ್ಟೆಯ ಮೇಲಿನ ಬೆವರಿನ ಕಲೆಯನ್ನು ಹೋಗಿಸುವುದು ಸುಲಭದ ಮಾತಲ್ಲ. ಒತ್ತಡ ಹಾಕಿ ಬಟ್ಟೆಗಳನ್ನು ಉಜ್ಜಿದರೆ ಬಟ್ಟೆಯೇ ಹರಿದುಹೋಗುವ ಸಂಭವವೇ ಹೆಚ್ಚಾಗಿರುತ್ತದೆ. ಆದರೆ ಈ ಕಲೆಗಳನ್ನು ಮನೆಯಲ್ಲೇ ಸುಲಭವಾಗಿ ತೆಗೆದುಹಾಕಬಹುದು.

ಬೆವರಿಗೆ ಕಲೆಯನ್ನು ಹೋಗಲಾಡಿಸಲು ಸರಳ ಮನೆ ಮದ್ದುಗಳು

* ಬಟ್ಟೆಯನ್ನು 10 ನಿಮಿಷ ನಿಂಬೆರಸ ಬೆರೆಸಿದ ನೀರಿನಲ್ಲಿ ನೆನೆಸಿಟ್ಟು ತೊಳೆದರೆ ಬೆವರಿನ ಕಲೆಯು ಇಲ್ಲದಂತಾಗುತ್ತದೆ.

* ಮನೆಯಲ್ಲಿರುವ ಅಡುಗೆ ಸೋಡಾದಿಂದ ಈ ಕಲೆಗಳನ್ನು ಸುಲಭವಾಗಿ ತೆಗೆದುಹಾಕಬಹುದು. ಕಲೆ ಇರುವ ಜಾಗಕ್ಕೆ ಸ್ವಲ್ಪ ಅಡುಗೆ ಸೋಡಾವನ್ನು ಸಿಂಪಡಿಸಿ 30 ನಿಮಿಷಗಳ ಕಾಲ ಹಾಗೆ ಬಿಟ್ಟು ಉಜ್ಜಿ ತೊಳೆದರೆ ಕಲೆಯು ಹೋಗುತ್ತದೆ.

* ಬಟ್ಟೆಗಳು ಬೆವರಿನ ವಾಸನೆ ಕಲೆಯಿಂದ ಕೂಡಿದ್ದರೆ ಬಿಳಿ ವಿನೆಗರ್ ಬಳಸಿದರೆ ಉತ್ತಮ. ಸ್ಪ್ರೇ ಬಾಟಲಿಯಲ್ಲಿ ಅರ್ಧದಷ್ಟು ನೀರಿಗೆ ಬಿಳಿ ವಿನೆಗರ್‌ ಸೇರಿಸಿ, ಕಲೆಯಾದ ಜಾಗಕ್ಕೆ ಸ್ಪ್ರೇ ಮಾಡಿ ಸ್ವಲ್ಪ ಸಮಯದ ನಂತರ ತೊಳೆದರೆ ಬಟ್ಟೆಯು ಹಳದಿ ಕಲೆಯು ಮಾಯವಾಗುತ್ತದೆ.

* ಬಟ್ಟೆಗಳಲ್ಲಿ ಬೆವರಿನಿಂದ ಕಲೆಯಾಗಿದ್ದರೆ ಜೋಳದ ಹಿಟ್ಟನ್ನು ಸಿಂಪಡಿಸಿ, ಸ್ವಲ್ಪ ಸಮಯದ ನಂತರದಲ್ಲಿ ಬ್ರಷ್ ನಿಂದ ಉಜ್ಜಿದರೆ ಕಲೆಯು ಇಲ್ಲದಂತಾಗುತ್ತದೆ.

ಇದನ್ನೂ ಓದಿ: ಬೇಸಿಗೆಯಲ್ಲಿ ಈ ತಪ್ಪುಗಳನ್ನು ಅಪ್ಪಿ ತಪ್ಪಿಯೂ ಮಾಡಬೇಡಿ

* ಐಸ್ ಕ್ಯೂಬ್‌ಗಳು ಕಲೆಗಳನ್ನು ತ್ವರಿತವಾಗಿ ತೆಗೆದುಹಾಕಲು ಸಹಾಯ ಮಾಡುತ್ತದೆ. ಹೀಗಾಗಿ ಕಲೆಯಾದ ಜಾಗವನ್ನು ಐಸ್ ಕ್ಯೂಬ್‌ಗಳೊಂದಿಗೆ ಕಲೆಗಳನ್ನು ಉಜ್ಜಿ ತೊಳೆದರೆ ಕಲೆಗಳು ಬೇಗನೆ ನಿವಾರಣೆಯಾಗುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ