Health Care Tips in Kannada : ಬೇಸಿಗೆಯಲ್ಲಿ ಈ ತಪ್ಪುಗಳನ್ನು ಅಪ್ಪಿ ತಪ್ಪಿಯೂ ಮಾಡಬೇಡಿ

Summer Health: ಮೈಸುಡುವಂತಹ ಬಿಸಿಲು, ಯಾಕದ್ರೂ ಬೇಸಿಗೆಕಾಲ ಬರುತ್ತದೆಯೋ, ಸೆಕೆ ತಡೆಯುಕೊಳ್ಳಲು ಆಗುತ್ತಿಲ್ಲ ಎನ್ನುವ ಗೊಣಗಾಟ ಕೇಳಿರಬಹುದು. ಹೀಗಾಗಿ ಹೆಚ್ಚಿನವರು ಈ ಬಿಸಿಲಿನ ಧಗೆಯನ್ನು ಉಂಟು ಮಾಡುವ ಕಾಲವನ್ನು ಇಷ್ಟ ಪಡುವುದಿಲ್ಲ. ಆದರೆ ಬೇಸಿಗೆಯಲ್ಲಿ ಕೆಲಸದ ಜೊತೆಗೆ ಆರೋಗ್ಯವನ್ನು ರಕ್ಷಿಸಿಕೊಳ್ಳಬೇಕಿದೆ. ಈ ಸಮಯದಲ್ಲಿ ಅಪ್ಪಿ ತಪ್ಪಿಯೂ ಈ ಕೆಲವು ಮಾಡಲೇಬೇಡಿ. ಇದರಿಂದ ಆರೋಗ್ಯ ಸಮಸ್ಯೆಯು ಬರುವ ಸಂಭವವೇ ಹೆಚ್ಚಿರುತ್ತದೆ.

Health Care Tips in Kannada : ಬೇಸಿಗೆಯಲ್ಲಿ ಈ ತಪ್ಪುಗಳನ್ನು ಅಪ್ಪಿ ತಪ್ಪಿಯೂ ಮಾಡಬೇಡಿ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Apr 23, 2024 | 4:56 PM

ಬೇಸಿಗೆಯ ಸುಡುಬಿಸಿಲಿಗೆ ಜನರು ತತ್ತರಿಸಿಹೋಗಿದ್ದಾರೆ. ಈ ಬಾರಿ ಕರ್ನಾಟಕ ಸೇರಿದಂತೆ ಭಾರತದ ಹಲವು ರಾಜ್ಯಗಳಲ್ಲಿ ಬಿಸಿಲು ಹೆಚ್ಚಾಗಿದೆ. ಹೀಗಾಗಿ ಜನರು ಮನೆಯಿಂದ ಹೊರಗೆ ಹೋಗುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಹೆಚ್ಚಿನವರು ಬಿಸಿಲಿನ ಬೇಗೆಗೆ ಸುಸ್ತಾಗಿ ತಂಪು ಪಾನೀಯಗಳತ್ತ ಮೊರೆ ಹೋಗುತ್ತಿದ್ದಾರೆ. ಈ ಸಮಯದಲ್ಲಿ ಹವಾಮಾನಕ್ಕೆ ಯೋಗ್ಯವಾದ ಆಹಾರ, ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯುವ ಮೂಲಕ ಉತ್ತಮ ಆರೋಗ್ಯವನ್ನು ನಿಮ್ಮದಾಗಿಸಿಕೊಳ್ಳಬಹುದು.

ಬೇಸಿಗೆಯಲ್ಲಿ ಸುರಕ್ಷಿತವಾದ ಆರೋಗ್ಯಕ್ಕಾಗಿ ಇಲ್ಲಿದೆ ಟಿಪ್ಸ್

  • ಸುಡುವ ಬಿಸಿಲಿನಲ್ಲಿ ಅಂದರೆ ಮಧ್ಯಾಹ್ನ 12 ಗಂಟೆಯಿಂದ 3 ಗಂಟೆಯವರೆಗೆ ಹೊರಹೋಗುವುದನ್ನು ತಪ್ಪಿಸುವುದು ಒಳ್ಳೆಯದು.
  • ಈ ಬೇಸಿಗೆಯಲ್ಲಿ ಮಧ್ಯಪಾನ, ಟೀ, ಕಾಫಿ ಮತ್ತು ಕಾರ್ಬೋನೇಟೆಡ್ ಪಾನೀಯಗಳು ಅಥವಾ ಹೆಚ್ಚು ಸಕ್ಕರೆ ಅಂಶವನ್ನು ಹೊಂದಿರುವ ಪಾನೀಯಗಳನ್ನು ಸೇವಿಸಲೇಬೇಡಿ.
  • ಹೆಚ್ಚು ಪ್ರೊಟೀನ್ ಭರಿತವಾದ ಆಹಾರ ಪದಾರ್ಥಗಳನ್ನು ಆದಷ್ಟು ಕಡಿಮೆ ಸೇವಿಸಿ.
  • ಮಧ್ಯಾಹ್ನದ ಸಮಯದಲ್ಲಿ ದೇಹ ದಂಡಿಸುವಂತಹ ಕೆಲಸಗಳನ್ನು ಮಾಡಲೇಬೇಡಿ.
  • ಚಪ್ಪಲಿ ಧರಿಸದೆ ಹೊರಹೋಗುವ ಅಭ್ಯಾಸವಿದ್ದರೆ ಬದಲಾವಣೆ ಮಾಡಿಕೊಳ್ಳುವುದು ಆರೋಗ್ಯ ದೃಷ್ಟಿಯಿಂದ ಉತ್ತಮ.
  • ಮಧ್ಯಾಹ್ನದ ಸಮಯದಲ್ಲಿ ಅಡುಗೆ ಮಾಡಬೇಡಿ. ಆದಷ್ಟು ಬೇಗನೇ ಮಧ್ಯಾಹ್ನಕ್ಕೆ ಅಡುಗೆ ಸಿದ್ಧ ಪಡಿಸಿಕೊಳ್ಳಿ.
  • ಮಕ್ಕಳು ಅಥವಾ ಸಾಕು ಪ್ರಾಣಿಗಳನ್ನು ವಾಹನಗಳ ಪಕ್ಕದಲ್ಲಿ ಬಿಡುವುದು ಉತ್ತಮವಲ್ಲ.
  • ಬಾಯಾರಿಕೆಯಾಗದಿದ್ದರೂ ಆಗಾಗ ನೀರು ಕುಡಿಯುತ್ತ ಇರುವುದು ಒಳ್ಳೆಯದು.
  • ಸುಡು ಬಿಸಿಲಿನಲ್ಲಿ ಮಕ್ಕಳನ್ನು ಆಟವಾಡಲು ಹೊರಗೆ ಬಿಡಬೇಡಿ, ಸುಡು ಬಿಸಿಲಿಗೆ ಮಕ್ಕಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮಗಳಾಗಬಹುದು.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ