Zero Shadow Day 2024 : ಇಂದು ಬೆಂಗಳೂರಿನಲ್ಲಿ ಶೂನ್ಯ ನೆರಳಿನ ದಿನ, ಸಮಯ, ಇದು ಯಾಕೆ ಸಂಭವಿಸುತ್ತದೆ? ಇಲ್ಲಿದೆ ಮಾಹಿತಿ

ಯಾರು ನಮ್ಮನ್ನು ಬಿಟ್ಟು ಹೋದರು ನಮ್ಮ ನೆರಳು ನಮ್ಮನ್ನು ಬಿಡುವುದಿಲ್ಲ ಎನ್ನುವ ಮಾತನ್ನು ಕೇಳಿರಬಹುದು. ಸದಾ ನಮ್ಮನ್ನೇ ಹಿಂಬಾಲಿಸುವ ನೆರಳು ಕೂಡ ವರ್ಷದಲ್ಲಿ ಎರಡು ಬಾರಿ ನಮ್ಮ ಜೊತೆಗೆ ಇರುವುದಿಲ್ಲ. ಇಂತಹದೊಂದು ಅಪರೂಪದ ಘಟನೆಗೆ ನಾಳೆ ಮಾಯಾನಗರಿ ಬೆಂಗಳೂರು ಸಾಕ್ಷಿಯಾಗಲಿದೆ. ಏಪ್ರಿಲ್ 24 ರಂದು ಮಧ್ಯಾಹ್ನದ ವೇಳೆಗೆ ಶೂನ್ಯ ನೆರಳಿನ ದಿನ ಸಂಭವಿಸಲಿದೆ. ಹಾಗಾದ್ರೆ ಶೂನ್ಯ ನೆರಳಿನ ದಿನ ಎಂದರೇನು? ಹೇಗೆ ಸಂಭವಿಸುತ್ತದೆ ಎನ್ನುವುದರ ಕಂಪ್ಲೀಟ್ ಮಾಹಿತಿ ಇಲ್ಲಿದೆ.

Zero Shadow Day 2024 : ಇಂದು ಬೆಂಗಳೂರಿನಲ್ಲಿ ಶೂನ್ಯ ನೆರಳಿನ ದಿನ, ಸಮಯ, ಇದು ಯಾಕೆ ಸಂಭವಿಸುತ್ತದೆ? ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on:Apr 24, 2024 | 9:37 AM

ನಭೋ ಮಂಡಲದಲ್ಲಿ ವಿಸ್ಮಯಕಾರಿ ಘಟನೆಗಳು ನಡೆಯುತ್ತಿರುತ್ತದೆ. ಕೆಲವು ಘಟನೆಗಳು ನಂಬಲು ಅಸಾಧ್ಯವೆನಿಸಿದರೂ ನಂಬಬೇಕಾಗುತ್ತದೆ. ಆದರಂತೆ ಏಪ್ರಿಲ್ 24 ಬುಧವಾರದಂದು ಬೆಂಗಳೂರಿನಲ್ಲಿ ಇಂತಹದೊಂದು ಘಟನೆಯು ನಡೆಯಲಿದೆ. ಬೆಂಗಳೂರಿನಲ್ಲಿ ಮಧ್ಯಾಹ್ನ 12:17 ರಿಂದ 12:23 ರ ವೇಳೆಗೆ ನಿಮ್ಮ ನೆರಳು ನಿಮಗೆ ಕಾಣಿಸುವುದಿಲ್ಲ. ಅಂದರೆ ಶೂನ್ಯ ನೆರಳಿನ ದಿನ ಸಂಭವಿಸಲಿದೆ. ಈ ವಿದ್ಯಮಾನವನ್ನು ಕರ್ಕಾಟಕ ಸಂಕ್ರಾಂತಿ ಮತ್ತು ಮಕರ ಸಂಕ್ರಾಂತಿಯ ನಡುವೆ ಇರುವ ಪ್ರದೇಶಗಳಲ್ಲಿ ವರ್ಷಕ್ಕೆ ಎರಡು ಬಾರಿ ಗಮನಿಸಬಹುದು. ಈ ಬಾರಿ ಬೆಂಗಳೂರಿನಲ್ಲಿ ಏಪ್ರಿಲ್ 24 ಹಾಗೂ ಆಗಸ್ಟ್ 18 ರಂದು ಈ ಶೂನ್ಯ ನೆರಳಿನ ದಿನ ಸಂಭವಿಸಲಿದೆ ಎನ್ನಲಾಗಿದೆ.

ಶೂನ್ಯ ನೆರಳು ದಿನ ಸಂಭವಿಸುವುದೇಕೆ?

ಉಷ್ಣವಲಯದ ಸ್ಥಳಗಳಲ್ಲಿ (ಕರ್ಕಾಟಕ ಸಂಕ್ರಾಂತಿ ಮತ್ತು ಮಕರ ಸಂಕ್ರಾಂತಿಯ ನಡುವೆ) ವರ್ಷಕ್ಕೆ ಎರಡು ಬಾರಿ ಶೂನ್ಯ ನೆರಳು ದಿನ ಸಂಭವಿಸುತ್ತದೆ. ಸೂರ್ಯನ ಸುತ್ತ ಭೂಮಿಯ ಪರಿಭ್ರಮಣೆಯ ಅಕ್ಷವು ತನ್ನ ಸಮತಲದಿಂದ 23.5 ಡಿಗ್ರಿಗಳಷ್ಟು ಬಾಗಿದೆ. ಇದರಿಂದ ವಿವಿಧ ಋತುಗಳು ಸಂಭವಿಸುತ್ತವೆ. ಇದರಿಂದಾಗಿ ಸೂರ್ಯನು ದಿನದ ಅತ್ಯುನ್ನತ ಬಿಂದುವಿನಲ್ಲಿರುವಾಗ, ಉತ್ತರಾಯಣದಲ್ಲಿ ಆಕಾಶ ಸಮಭಾಜಕದ ದಕ್ಷಿಣದ 23.5 ಡಿಗ್ರಿಗಳಿಂದ ಸಮಭಾಜಕದ ಉತ್ತರಕ್ಕೆ 23.5 ಡಿಗ್ರಿಗಳಿಗೆ ಚಲಿಸುತ್ತಾನೆ ಹಾಗೂ ದಕ್ಷಿಣಾಯನದಲ್ಲಿ ಇದರ ವಿರುದ್ಧಕ್ಕೆ ಚಲಿಸುತ್ತಾನೆ. ಹೀಗಾಗಿ ವರ್ಷದಲ್ಲಿ ಎರಡು ಬಾರಿ ಶೂನ್ಯ ನೆರಳಿನ ದಿನ ಸಂಭವಿಸುತ್ತದೆ. ಈ ವೇಳೆಯಲ್ಲಿ ಯಾವುದೇ ವ್ಯಕ್ತಿ ಹಾಗೂ ವಸ್ತುವಿನ ನೆರಳು ಕೂಡ ಕಾಣಿಸುವುದಿಲ್ಲ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:12 pm, Tue, 23 April 24

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್