ಒಮ್ಮೆ ಶ್ರೀ ಕೃಷ್ಣ ಸುದರ್ಶನ ಚಕ್ರವನ್ನು ಪ್ರಯೋಗಿಸಿ ತನ್ನ ಕೈಗೆ ಗಾಯ ಮಾಡಿಕೊಂಡಾಗ ಅದನ್ನು ಕಂಡ ದ್ರೌಪದಿ ಅವಳ ಸೀರೆಯಿಂದ ಒಂದು ಪಟ್ಟಿಯನ್ನು ಹರಿದು ಶ್ರೀ ಕೃಷ್ಣನ ಕೈಗೆ ಕಟ್ಟುತ್ತಾಳೆ. ಆಗ ಶ್ರೀ ಕೃಷ್ಣ ದ್ರೌಪದಿಗೆ ‘ಈ ರಕ್ಷೆ ಕಷ್ಟದ ಸಮಯದಲ್ಲಿ ನಿನಗೆ ನೆರವಾಗುತ್ತದೆ’ ಎಂದು ಮಾತು ಕೊಡುತ್ತಾನೆ. ಮುಂದೆ ರಾಜಸಭೆಯಲ್ಲಿ ದ್ರೌಪದಿಯ ವಸ್ತ್ರಾಪಹರಣ ಮಾಡಿದ ಸಂದರ್ಭದಲ್ಲಿ ಕೃಷ್ಣ ತನ್ನ ಶಕ್ತಿಯನ್ನು ಉಪಯೋಗಿಸಿ ದ್ರೌಪದಿಯ ಮಾನ ಕಾಪಾಡುತ್ತಾನೆ. ಹೀಗೆ ರಕ್ಷಾಬಂಧನದ ಬಗ್ಗೆ ಹಲವಾರು ಪುರಾಣ ಕಥೆಗಳಿವೆ.
ರಕ್ಷಾ ಬಂಧನ ಎಂದಾಗ ನನಗೊಂದು ಘಟನೆ ಥಟ್ಟನೆ ನೆನಪಿಗೆ ಬಂತು ಅದೇನೆಂದರೆ ಅದು ಪದವಿಪೂರ್ವ ವಿದ್ಯಾಭ್ಯಾಸದ ಸಂದರ್ಭದಲ್ಲಿ ಒಂದು ದಿನ ನಾನು ಗೆಳೆಯರೊಂದಿಗೆ ಎಂದಿನಂತೆ ಮುಂಜಾನೆ ಕಾಲೇಜಿಗೆ ಹೋಗುತ್ತಿದ್ದೆ. ತರಗತಿಗೆ ತಲುಪುವಷ್ಟರಲ್ಲಿ ಹುಡುಗಿಯರು ರಕ್ಷಾಬಂಧನದ ಶುಭಾಶಯಗಳು ಎಂದು ಜೋರಾಗಿ ಕೂಗುತ್ತಿರುವುದು ಕಿವಿಗೆ ಬಿದ್ದಿದ್ದೆ ತಡ ಅಷ್ಟರಲ್ಲಿ ನನ್ನ ಇಬ್ಬರು ಸ್ನೇಹಿತರು ನಮಗೆ ಯಾರೂ ರಕ್ಷೆ ಕಟ್ಟುವುದು ಬೇಡ ಎಂದು ಎದ್ದು ಬಿದ್ದು ಓಡಿದರು. ಅದೊಂದೆಡೆಯಾದರೆ ಇತ್ತ ಹುಡುಗಿಯರು ನಮ್ಮ ಬರುವಿಕೆಯನ್ನೇ ಕಾದು ಕುಳಿತು ನಮಗೆ ರಕ್ಷೆ ಕಟ್ಟಲು ಪ್ರಾರಂಭಿಸಿದರು. ಕೇವಲ ರಕ್ಷೆ ಕಟ್ಟುವುದು ಮಾತ್ರವಲ್ಲದೆ ನಮ್ಮಿಂದ ಉಡುಗೊರೆಯನ್ನು ಕೇಳಿ ಕೇಳಿ ಪಡೆದುಕೊಂಡರು. ಆಗ ನಮಗೆ ತಿಳಿದಿದ್ದು ಹುಡುಗಿಯರು ರಕ್ಷೆ ಕಟ್ಟಿದ್ದು ಕೇವಲ ಈ ಉಡುಗೊರೆಗಷ್ಟೇ ಎಂದು. ಆದರೆ ಆ ದಿನ ನಾವೇನು ತಪ್ಪಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ ಅಲ್ಲವೇ. ನಂತರ ಓಡಿ ಹೋಗಿ ಬಚ್ಚಿಟ್ಟು ಕುಳಿತಿದ್ದ ಇಬ್ಬರು ಗೆಳೆಯರನ್ನು ಹುಡುಕಿ ಎಳೆದು ತಂದು ಆ ಹುಡುಗಿಯರ ಕೈಯಿಂದ ರಾಖಿ ಕಟ್ಟಿಸಿದವು. ಆ ದಿನಗಳ ಸಂಭ್ರಮವೇ ಅಂತದ್ದು. ಹೀಗೆ ನೆನಪುಗಳನ್ನು ಮೆಲುಕು ಹಾಕುತ್ತಾ ಹೋದರೆ ಅದೆಷ್ಟೋ ಇವೆ.
ಇದನ್ನೂ ಓದಿ:ಒಂದು ಬಾರಿ ಅಣ್ಣ ಎಂದು ಕರೆಯಲು ಅವಕಾಶ ನೀಡು, ನಿನ್ನ ಪ್ರೀತಿಗಾಗಿ ಚಡಪಡಿಸುತ್ತಿರುವ ತಂಗಿ
ಇನ್ನು ರಕ್ಷೆಯ ಬಗ್ಗೆ ಹೇಳುವುದಾದರೆ ರಕ್ಷಾ ಬಂಧನವು ಅಣ್ಣ ತಂಗಿಯರ ನಡುವಿನ ಅಮೂಲ್ಯವಾದ ಬಂಧನವಾಗಿದೆ. ರಕ್ಷೆಯನ್ನು ಕಟ್ಟುವ ಉದ್ದೇಶ ರಕ್ಷೆ ಕಟ್ಟಿಸಿಕೊಂಡವರು ತಂಗಿಗೆ ಅಣ್ಣನ ಸ್ಥಾನದಲ್ಲಿ ನಿಂತು ಸದಾ ರಕ್ಷಣೆಯನ್ನು ಕೊಡುವುದಾಗಿರುತ್ತದೆ. ಒಮ್ಮೆ ರಾಕಿಯನ್ನು ಧರಿಸಿದರೆ ಮುಂದಿನ ರಕ್ಷಾಬಂಧನದವರೆಗೆ ಅದು ನಮ್ಮ ಕೈಯಲ್ಲಿ ಜೋಪಾನವಾಗಿ ಇಟ್ಟುಕೊಳ್ಳಬೇಕು ಮಾತ್ರವಲ್ಲ ನಮ್ಮ ಜವಾಬ್ದಾರಿಯಾಗಿರುತ್ತದೆ.
ಜಿತೇಶ್ ಅಡ್ಡಂತ್ತಡ್ಕ
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: