ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವ ಮಾತಿದ್ದು, ಅದರಂತೆಯೇ ಈ ಏಲಕ್ಕಿಯ ಪ್ರಯೋಜನಗಳನ್ನು ಅರಿತವನೇ ಬಲ್ಲ. ಸಾಂಬಾರ್ ಗಳ ರಾಣಿ ಎನ್ನಲಾಗುವ ಈ ಏಲಕ್ಕಿಯು ಸಿಹಿ ತಿಂಡಿಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಏಲಕ್ಕಿಯನ್ನು ಕುಟ್ಟಿ ಪುಡಿ ಮಾಡಿದಾಗ ಅದರಿಂದ ಹೊರಹೊಮ್ಮವ ಘಮವನ್ನು ವಿವರಿಸಲು ಅಸಾಧ್ಯ. ಹೀಗಾಗಿ ಹೆಚ್ಚಿನವರು ಈ ಏಲಕ್ಕಿಯನ್ನು ಬಾಯಿಗೆ ಹಾಕಿಕೊಂಡು ಜಗಿಯುತ್ತಿರುತ್ತಾರೆ. ಅಡುಗೆಯ ರುಚಿಗೆ ಮಾತ್ರವಲ್ಲದೇ ಆರೋಗ್ಯಕ್ಕೂ ಪ್ರಯೋಜನಕಾರಿಯಾಗಿರುವ ಕಾರಣ ಮನೆ ಮದ್ದುಗಳಲ್ಲಿ ಈ ಏಲಕ್ಕಿಯನ್ನು ಹೆಚ್ಚಾಗಿ ಬಳಸಲಾಗುತ್ತದೆ.
* ಏಲಕ್ಕಿ ಪುಡಿಯನ್ನು ನೀರಿನಲ್ಲಿ ಬೆರೆಸಿ ಕುಡಿದರೆ ವಾಯು ಬಾಧೆಯು ನಿವಾರಣೆಯಾಗುತ್ತದೆ.
* ಏಲಕ್ಕಿಯನ್ನು ಕೆಂಡದ ಮೇಲೆ ಹಾಕಿ ಸುಟ್ಟು ಪುಡಿ ಮಾಡಿ, ಜೇನುತುಪ್ಪ ಬೆರೆಸಿ ತಿನ್ನುತ್ತಿದ್ದರೆ ವಾಕರಿಕೆ ಅಥವಾ ವಾಂತಿಯಾಗುತ್ತಿದ್ದರೆ ನಿಂತು ಹೋಗುತ್ತದೆ.
* ಏಲಕ್ಕಿ ಮತ್ತು ಕರಿಮೆಣಸುಗಳನ್ನು ಮಾಗಿದ ಟೊಮೆಟೊ ರಸದಲ್ಲಿ ಮಿಶ್ರಣ ಮಾಡಿ ಸೇವಿಸಿದರೆ ವಾಂತಿಯಾಗುವುದು ತಕ್ಷಣವೇ ನಿಲ್ಲುತ್ತದೆ.
* ಉರಿಮೂತ್ರ ಸಮಸ್ಯೆಯಿದ್ದವರು ಏಲಕ್ಕಿ ಪುಡಿ, ಹುರಿದ ಜೀರಿಗೆಯ ಪುಡಿ ಹಾಗೂ ಬೆಲ್ಲ ಈ ಮೂರನ್ನೂ ಬೆಣ್ಣೆಯಲ್ಲಿ ಬೆರೆಸಿ ಬೆಳಗ್ಗೆ ಮತ್ತು ರಾತ್ರಿ ಸೇವಿಸಿದರೆ ಪರಿಣಾಮಕಾರಿ ಮನೆ ಮದ್ದಾಗಿದೆ.
* ಏಲಕ್ಕಿ ಕಷಾಯದಿಂದ ಬಾಯಿ ಮುಕ್ಕಳಿಸುತ್ತಿದ್ದರೆ ಹಲ್ಲು ನೋವು ಗುಣಮುಖವಾಗುತ್ತದೆ.
* ಪ್ರತಿದಿನವು ಒಂದು ಅಥವಾ ಎರಡು ಹಸಿ ಏಲಕ್ಕಿಯನ್ನು ಜಗಿದು ತಿನ್ನುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ.
* ಏಲಕ್ಕಿಯನ್ನು ಕಷಾಯ ಮಾಡಿ ಬಾಯಿ ಮುಕ್ಕಳಿಸುವುದರಿಂದ ಇಲ್ಲವಾದರೆ ಈ ಕಷಾಯವಂನ್ನಿ ಸ್ವಲ್ಪ ಹೊತ್ತು ಬಾಯಿಯಲ್ಲಿ ಇಟ್ಟುಕೊಳ್ಳುವುದರಿಂದ ಬಾಯಿ ಹುಣ್ಣಿಗೆ ಪರಿಣಾಮಕಾರಿ ಔಷಧಿ.
ಇದನ್ನೂ ಓದಿ: ಅತಿಯಾದ ತೂಕದಿಂದ ಮುಜುಗರ ಅನುಭವಿಸುತ್ತಿದ್ದೀರಾ? ಈ ಸರಳ ಮನೆ ಮದ್ದು ಬಳಸಿ
*ಏಲಕ್ಕಿ ಪುಡಿಯನ್ನು ಬೇಲದ ಹಣ್ಣಿನ ತಿರುಳಿನೊಂದಿಗೆ ಬೆರೆಸಿ ತಿನ್ನುವುದರಿಂದ ಅಸಿಡಿಟಿ ಸಮಸ್ಯೆಯು ದೂರವಾಗುತ್ತದೆ.
* ಬಾಯಿಯು ದುರ್ವಾಸನೆ ಬರುತ್ತಿದ್ದರೆ ಏಲಕ್ಕಿ ತಿನ್ನುವುದು ಉತ್ತಮ.
* ಏಲಕ್ಕಿ, ದ್ರಾಕ್ಷಿ, ಸೊಗದೆ ಬೇರು ಇವು ಮೂರನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ಪುಡಿ ಮಾಡಿ, ಒಂದು ಲೋಟ ಹಾಲಿಗೆ ಸೇರಿಸಿ ಕಷಾಯ ಮಾಡಿಕೊಂಡು, ಪ್ರತಿದಿನ ರಾತ್ರಿ ಊಟವಾದ ಬಳಿಕ ಕುಡಿದರೆ ಬಾಯಿ ಹುಣ್ಣಿನ ಸಮಸಸ್ಯೆಯು ದೂರವಾಗುತ್ತದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ