ಆಧುನಿಕ ಜೀವನಶೈಲಿಯಲ್ಲಿ ಪರಿಸರವನ್ನು ಬಿಟ್ಟು ಮನುಷ್ಯ ಸಂಕುಲ ಉಳಿಯಲು ಸಾಧ್ಯವಿಲ್ಲ. ಏಕೆಂದರೆ ಪ್ರಕೃತಿ ಮತ್ತು ಮನುಷ್ಯನ ನಡುವಿನ ಅವಿನಾಭಾವ ಸಂಬಂಧವಿದೆ. ಇದನ್ನು ತಿಳಿದಿದ್ದರು ಪ್ರಕೃತಿಯನ್ನು ನಾಶದತ್ತ ಕೊಂಡೊಯ್ಯುತ್ತಿರುವುದು ನಿಜ ಸಂಗತಿ. ಹಸಿರು ಕ್ಷೀಣಿಸಿದಷ್ಟು ಮನುಷ್ಯ ಪ್ರಾಣಿ ಸಂಕುಲ ಎರಡಕ್ಕೂ ಸಮಸ್ಯೆಯಾಗುತ್ತಿದೆ. ಅಭಿವೃದ್ಧಿಯ ಹೆಸರಿನಿಂದಾಗಿ ಪ್ರಕೃತಿಯು ಅವನತಿಯತ್ತ ಸಾಗುತ್ತಿದೆ. ಸ್ವಚ್ಛ ಗಾಳಿ ನೀರು ನೆಲವನ್ನು ಪ್ರಕೃತಿ ಪೂರೈಸಿದರು ಅತಿ ಆಸೆಗೆ ಬಿದ್ದು ಮಾನವ ಪ್ರಕೃತಿಯ ಮಡಿಲಲ್ಲಿನ ಸಂಪನ್ಮೂಲಗಳನ್ನು ಬರುತ್ತಿದ್ದಾನೆ. ಹೊತ್ತು ಸಲಹಿದ ಭೂಮಿಯನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಜವಾಬ್ದಾರಿ ನಮ್ಮದೇ ಇತ್ತೀಚೆಗೆ ದಿನದಿಂದ ದಿನಕ್ಕೆ ಮಾಲಿನ್ಯ ಹೆಚ್ಚುತ್ತಿದೆ.
ಕಣ್ಣೆತ್ತಿ ನೋಡಿದರೆ ಪರ್ವತದಂತೆ ಎದ್ದುನಿಂತು ನಿಲ್ಲುತ್ತಿರುವ ಕಟ್ಟಡಗಳು, ಸಮುಚ್ಚಯ ರಸ್ತೆಯಲ್ಲಿ ತುಂಬಿದ ತ್ಯಾಜ್ಯದ ಗಾಳಿಯಲ್ಲಿ ಮಾಲಿನ್ಯದ ದಟ್ಟವಾಗಿ ಚರಂಡಿಗಳ ವ್ಯವಸ್ಥೆಯಿಂದ ನೀರಿನ ಪ್ರವಾಹ ವಾಹನಗಳ ಭರಾಟೆ ಕಿವಿಗಡಚಿಕ್ಕುವ ಶಬ್ದ ಇದರಿಂದ, ಕಲ್ಮಶವಾದ ಧೂಳಿನ ಕಣಗಳ ನಿರಂತರ ಸೇವೆಯಿಂದ ಕಾಯಿಲೆಗೆ ತುತ್ತಾಗುತ್ತಿರುವ ಮನುಷ್ಯ ಕಲುಷಿತಗೊಂಡ ನೀರು ಗಾಳಿ ಆಹಾರ ಸೇವನೆಗೆ ನಮ್ಮನ್ನು ನಾವೇ ಒಗ್ಗೂಡಿಸಿಕೊಂಡು ನಡೆಯುತ್ತಿರುವ ಸ್ಥಿತಿ, ಪ್ರತಿದಿನ ದೊಡ್ಡ ದೊಡ್ಡ ನಗರಿಯನ್ನು ಸೇರುತ್ತಿರುವ ಜನ ಇರುತ್ತಿದ್ದ ಮರಗಳನ್ನು ಕಡಿದು ಕಟ್ಟುತ್ತಿರುವ ವಾಣಿಜ್ಯ ಕಟ್ಟಡಗಳು ದಿನಪ್ರತಿ ವಾಹನಗಳ ಬಳಕೆಯು ಮುಂದುವರೆದರೆ ಮುಂದೊಂದಿನ ಮುಂದಿನ ಪೀಳಿಗೆಗಳಿಗೆ ಪರಿಸರ ಹಸಿರು ಎಂದರೇನು ಗೊತ್ತಾಗದ ಸ್ಥಿತಿ ತಲುಪುವ ಕಾಲ ದೂರವಿಲ್ಲ.
ಈ ಲೇಖನ ಓದಲು ಇಲ್ಲಿ ಕ್ಲಿಕ್ ಮಾಡಿ : ಭೂಲೋಕದ ಸ್ವರ್ಗ ಕೂಡ್ಲು ತೀರ್ಥ ಜಲಪಾತ
ಅಷ್ಟೊತ್ತಿಗೆ ಉಸಿರಾಟಕ್ಕೂ ನಿರ್ಮಲವಾದ ಗಾಳಿ ಇಲ್ಲದೆ ಮನುಷ್ಯ ಪರದಾಡುವ ಪರಿಸ್ಥಿತಿ ಬಂದರೆ ಆಶ್ಚರ್ಯವಿಲ್ಲ. ಪ್ರತಿಯೊಬ್ಬ ವ್ಯಕ್ತಿಯು ಪರಿಸರದ ಅಗತ್ಯತೆ ಕಾಳಜಿ ಅರಿವನ್ನು ಹೊಂದಿರುವುದರ ಜೊತೆಗೆ ಪರಿಸರಕ್ಕೆ ತಾನು ನೀಡುತ್ತಿರುವ ಕೊಡುಗೆಯಾದರೂ ಏನು ಎಂಬುದನ್ನು ಮನವರಿಕೆ ಮಾಡಿಕೊಂಡು ಪರಿಸರದ ಉಳಿವಿಗಾಗಿ ಜಾಗೃತರಾಗಬೇಕಾಗಿದೆ. ಇತ್ತೀಚಿನ ದಿನಗಳಲ್ಲಿ ಹಸಿರು ನ್ಯಾಯ ಮಂಡಳಿ ಆದಾನಿ ಕಂಪನಿಯು ಲಾಭಗಳಿಸುವ ಉದ್ದೇಶದಿಂದ ಮತ್ತು ಕಂಪನಿಯ ಮಾಲೀಕನ ಅತಿ ಆಸೆಯಿಂದ ಅನೇಕ ಸುತ್ತಮುತ್ತಲಿನ ಪರಿಸರವನ್ನು ನಾಶ ಮಾಡಿ ಗ್ರಾಮದ ಜನರ ಆರೋಗ್ಯಕ್ಕೆ ಹಾನಿ ಉಂಟು ಮಾಡಿದೆ.
ಇದಕ್ಕೆ ದಕ್ಷಿಣ ವಲಯದ ರಾಷ್ಟ್ರೀಯ ಹಸಿರುಪೀಠ ಹಸಿರು ಅದಾನಿ ಕಂಪನಿಗೆ 50 ಕೋಟಿ ರೂಪಾಯಿ ಪರಿಹಾರವನ್ನು ನೀಡಬೇಕು ಎಂದು ಆದೇಶೆ ನೀಡಿದೆ. ಆದರೆ ಕಂಪನಿ ಪರಿಹಾರ ಕೊಡುವುದರಿಂದ ಪರಿಸರ ಮರಳಿ ಬರುವುದಿಲ್ಲ ಅದರಿಂದ ಮುಂದೆ ಇತರದ ಪ್ರಕರಣಗಳು ನಡೆಯದ ಹಾಗೆ ನೋಡಿಕೊಳ್ಳಬೇಕು. ಮಾನವನ ಕೈಗಾರಿಕೆಯ ದುರಾಸೆಯಿಂದಾಗಿ ದಿನೇದಿನೇ ಪರಿಸರ ಕಡಿಮೆಯಾಗುತ್ತಿದೆ. ಜಲ ನೆಲ ಕಲುಷಿತಗೊಂಡು ಹಲವಾರು ಕಾಯಿಲೆಗಳನ್ನು ಹರಡಿದ್ದು ಜನರು ಎಚ್ಚೆತ್ತುಕೊಂಡಿಲ್ಲ.
ಅನ್ಯಾಯವನ್ನು ಸಹಿಸದೆ ಭೂಮಿ ಒಮ್ಮೆ ಮೈಕೊಡವಿದರೆ ಸಾಕು ಜೀವಸಂಕುಲವೇ ಉಳಿಯದು. ಪ್ರತಿಯೊಂದು ಪ್ರಕೃತಿಯ ವಿಕೋಪಕ್ಕೆ ನಾವೇ ಹೊಣೆ ನಮ್ಮ ವೈಜ್ಞಾನಿಕ ಕೃತ್ಯಗಳಿಂದ ಪ್ರಕೃತಿಗೆ ಮತ್ತೆ ಮತ್ತೆ ಹಾನಿಯಾಗುತ್ತಿದೆ. ಪರಿಸರ ಸಂರಕ್ಷಣೆಗೆ ಸರ್ಕಾರದ ಕಾನೂನುಗಳು ಇನ್ನೂ ಪರಿಣಾಮಕಾರಿಯಾಗಿ ಬೇಕು. ಈ ಪೃಥ್ವಿಯನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸಬೇಕು. ಮಕ್ಕಳಿಗೆ ಪಠ್ಯೆಯಲ್ಲಿ ಪರಿಸರ ಸಂರಕ್ಷಣೆ ಬಗ್ಗೆ ಬೋಧಿಸುವುದಷ್ಟೇ ಸಾಲದು ಪರಿಸರವನ್ನು ಪ್ರೀತಿಸುವಂತೆ ಮಾಡಬೇಕು ನಾವು ಪ್ರೀತಿಸಬೇಕು. ಇನ್ನಾದರೂ ಮನುಷ್ಯ ಜಾಗೃತನಾಗಿ ಪರಿಸರ ಸಂರಕ್ಷಣೆಗಾಗಿ ಕ್ರಮವನ್ನು ಕೈಗೊಂಡು ಹಸಿರು ಕ್ರಾಂತಿ ಮಾಡಬೇಕಾಗಿದೆ.
ಮಹಾಂತೇಶ ಚಿಲವಾಡಗಿ
ತಾಜಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ