ಯುವಕರೇ ಇಲ್ಲಿ ಕೇಳಿ… ಒಬ್ಬ ಒಳ್ಳೆಯ ಮಗನಲ್ಲಿ ಈ ಎಲ್ಲಾ ಗುಣಗಳು ಇರುತ್ತಂತೆ

ತಂದೆ ತಾಯಿ ತಮ್ಮ ಮಕ್ಕಳಿಗೆ ಉತ್ತಮ ಪೋಷಕರಾಗಲು ಬಯಸಿದರೆ ಮಕ್ಕಳು ನಾನು ನನ್ನ ತಂದೆ ತಾಯಿಗೆ ಒಳ್ಳೆಯ ಮಗ ಅಥವಾ ಮಗಳಾಗಿರಬೇಕು ಎಂದು ಬಯಸುತ್ತಾರೆ. ನೀವು ಕೂಡ ಹೀಗೆ ನಿಮ್ಮ ಅಪ್ಪ ಅಮ್ಮ ಹೆಮ್ಮೆ ಪಡುವಂತಹ ಒಳ್ಳೆಯ ಮಗನಾಗಿರಲು ಬಯಸುತ್ತೀರಾ? ಹಾಗಿದ್ರೆ ನಿಮ್ಮಲ್ಲೂ ಈ ಕೆಲವು ಗುಣಗಳಿವೆಯೇ ಎಂಬುದನ್ನು ಚೆಕ್‌ ಮಾಡಿ. ಈ ಗುಣಗಳು ನಿಮ್ಮಲ್ಲಿದ್ದರೆ ಖಂಡಿತವಾಗಿಯೂ ನೀವು ಒಬ್ಬ ಒಳ್ಳೆಯ ಮಗ ಎಂದರ್ಥ.

ಯುವಕರೇ ಇಲ್ಲಿ ಕೇಳಿ… ಒಬ್ಬ ಒಳ್ಳೆಯ ಮಗನಲ್ಲಿ ಈ ಎಲ್ಲಾ ಗುಣಗಳು ಇರುತ್ತಂತೆ
ಸಾಂದರ್ಭಿಕ ಚಿತ್ರ
Image Credit source: Google

Updated on: Oct 05, 2025 | 7:53 PM

ಪ್ರತಿಯೊಬ್ಬ ತಂದೆ-ತಾಯಿಯೂ ನಮ್ಮ ಮಕ್ಕಳು ತುಂಬಾ ಒಳ್ಳೆಯ ವ್ಯಕ್ತಿಯಾಗಬೇಕು ಎಂದು ಬಯಸುತ್ತಾರೆ. ಅದರಲ್ಲೂ ತಮ್ಮ ಸುಪುತ್ರರ ವಿಷಯದಲ್ಲಂತೂ ನನ್ನ ಮಗ ಸಮಾಜದಲ್ಲಿ ಒಂದೊಳ್ಳೆ ವ್ಯಕ್ತಿಯಾಗಿ ನಿಲ್ಲುವುದು ಮಾತ್ರವಲ್ಲದೆ ಆತನಲ್ಲಿ ಸದ್ಗುಣಗಳು ತುಂಬಿ ತುಳುಕಬೇಕು, ಮನೆಗೆ ಒಬ್ಬ ಒಳ್ಳೆಯ ಮಗನಾಗಿರಬೇಕು (good son) ಎಂದು ಬಯಸುತ್ತಾರೆ.  ಹಾಗಾದ್ರೆ ಒಳ್ಳೆಯ ಮಗನಲ್ಲಿ ಇರಬೇಕಾದ ಗುಣಗಳೇನು? ತಂದೆ-ತಾಯಿಗೆ ಒಳ್ಳೆಯ ಮಗ ಎಣಿಸಿಕೊಳ್ಳಲು ಆ ಎಲ್ಲಾ ಗುಣಗಳು ಇರಬೇಕಂತೆ. ಆ ಸದ್ಗುಣಗಳು ಯಾವುವು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ. ನಿಮ್ಮಲ್ಲೂ ಈ ಕೆಲವು ಗುಣಗಳಿವೆಯೇ ಎಂಬುದನ್ನು ಚೆಕ್‌ ಮಾಡಿ ನೋಡಿ.

ಒಬ್ಬ ಒಳ್ಳೆಯ ಮಗನಲ್ಲಿ ಇರಬೇಕಾದ ಗುಣಗಳಿವು:

  • ಒಬ್ಬ ಒಳ್ಳೆಯ ಮಗನಾದವನು ಯಾವಾಗಲೂ ತನ್ನ ಹೆತ್ತವರ ಮಾತುಗಳನ್ನು ಕೇಳುತ್ತಾನೆ. ಮತ್ತು ಅವರ ಮಾತಿನಂತೆ ನಡೆದುಕೊಳ್ಳುತ್ತಾನೆ.
  • ಹೆತ್ತವರ ಆರೋಗ್ಯದ ಬಗ್ಗೆ ಗಮನವಹಿಸುವವನನ್ನು ಒಳ್ಳೆಯ ಮಗ ಎಂದು ಕರೆಯಬಹುದು.
  • ಕೆಲವರು ಮದುವೆಯಾದ ಬಳಿಕ ಅಥವಾ ಕೆಲಸಕ್ಕೆ ಸೇರಿದ ನಂತರ ಹೆತ್ತವರ ಬಗ್ಗೆ ಗಮನವೇ ಹರಿಸುವುದಿಲ್ಲ. ಹೀಗಿರುವಾಗ ತನಗೆ ಎಷ್ಟೇ ಜವಾಬ್ದಾರಿಗಳಿದ್ದರೂ ತನ್ನ ಹೆತ್ತವರ ಬೇಕು ಬೇಡಗಳ ಬಗ್ಗೆ ಗಮನಹರಿಸುತ್ತಾನೋ ಆತನೇ ಒಳ್ಳೆಯ ಮಗ.
  • ಹೆತ್ತವರಿಗೆ ಕಷ್ಟ, ನೋವು ಅಂತ ಬಂದ್ರೆ ಅವರ ಬಳಿಯಿಂದ ಓಡಿ ಹೋಗದೆ ಅಥವಾ ಕಡೆಗಣಿಸದೆ, ಅವರ ಕಷ್ಟಕ್ಕೆ ಬೆನ್ನೆಲುಬಾಗಿ ನಿಲ್ಲುವವನೇ ನಿಜವಾದ ಮಗ.
  • ನಾನು ಗಂಡು ಮಗ ನನ್ಯಾಕೆ ಮನೆಕೆಲಸ ಮಾಡಬೇಕು ಎಂಬ ಅಹಂಕಾರವನ್ನೆಲ್ಲಾ ಬದಿಗಿಟ್ಟು, ಹೆತ್ತವರಿಗೆ ಮನೆ ಕೆಲಸಗಳಲ್ಲಿ ಸಹಾಯ ಮಾಡುವ ಗುಣ ಒಬ್ಬ ಒಳ್ಳೆಯ ಮಗನಲ್ಲಿ ಇರುತ್ತಂತೆ.
  • ಒಬ್ಬ ಒಳ್ಳೆಯ ಮಗನಾದವನು ವಯಸ್ಸಾದ ತಂದೆ ತಾಯಿಯನ್ನು ವೃದ್ಧಾಶ್ರಮಕ್ಕೆ ತಳ್ಳದೆ ಆತ ತನ್ನ ಹೆತ್ತವರಿಗೆ ಆರ್ಥಿಕ ಬೆಂಬಲವನ್ನು ನೀಡುತ್ತಾನೆ.
  • ನೀವು ಕೂಡ ತಂದೆ ತಾಯಿಯ ದೃಷ್ಟಿಯಲ್ಲಿ ಒಬ್ಬ ಒಳ್ಳೆಯ ಮಗನಾಗಲು ಪ್ರಯತ್ನಿಸಿದರೆ ಹೆತ್ತವರು ಇಷ್ಟಪಡುವ ಸ್ಥಳಕ್ಕೆ ಅವರನ್ನು ಪ್ರವಾಸ ಕರೆದುಕೊಂಡು ಹೋಗಿ, ತೀರ್ಥಯಾತ್ರೆಗೆ ಕರೆದುಕೊಂಡು ಹೋಗಿ.

  ಇದನ್ನೂ ಓದಿ: ಈ ಗುಣಗಳು ನಿಮ್ಮಲ್ಲಿದ್ದರೆ, ಎಲ್ಲರೂ ನಿಮ್ಮತ್ತ ಆಕರ್ಷಿತರಾಗುತ್ತಾರಂತೆ

  • ಒಬ್ಬ ಒಳ್ಳೆಯ ಮಗನಾದವನು ತನ್ನ ಫ್ರೆಂಡ್ಸ್‌, ಹೆಂಡ್ತಿ ಮಕ್ಕಳೊಂದಿಗೆ ಮಾತ್ರವಲ್ಲದೆ ತನ್ನ ತಂದೆ-ತಾಯಿಯೊಂದಿಗೂ ಒಳ್ಳೆಯ ಸಮಯವನ್ನು ಕಳೆಯುತ್ತಾನಂತೆ. ನೀವು ಒಳ್ಳೆಯ ಮಗನಾಗಲು ಬಯಸಿದರೆ ಹೆತ್ತವರೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯಿರಿ. ಅವರ ಇಷ್ಟಕಷ್ಟಗಳನ್ನು ನೋಡಿಕೊಳ್ಳಿ.
  • ಒಬ್ಬ ಒಳ್ಳೆಯ ಮಗ ಸಭ್ಯ ರೀತಿಯಲ್ಲಿ ವರ್ತಿಸುತ್ತಾನೆ, ಹೆತ್ತವರಿಗೆ ಗೌರವವನ್ನು ನೀಡುತ್ತಾನೆ, ಅವರ ಭಾವನೆ ಮತ್ತು ಅಭಿಪ್ರಾಯಗಳನ್ನು ಗೌರವಿಸುತ್ತಾನೆ. ಕುಟುಂಬದ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತಾನೆ. ಈ ಎಲ್ಲಾ ಗುಣಗಳು ನಿಮ್ಮಲ್ಲಿದ್ದರೆ ಖಂಡಿತವಾಗಿಯೂ ನೀವು ಒಳ್ಳೆಯ ಮಗ ಎಂದರ್ಥ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ