ಉದ್ಯೋಗದಲ್ಲಿರುವ ಮಹಿಳೆಯರು ಮನೆ ಹಾಗೂ ಉದ್ಯೋಗವನ್ನು ಎರಡನ್ನು ನಿಭಾಯಿಸುವುದು ಕಷ್ಟ. ಬೆಳಗ್ಗೆ ಎದ್ದು ತಿಂಡಿ ಹಾಗೂ ಊಟವನ್ನು ರೆಡಿ ಮಾಡಿಕೊಂಡು ಆಫೀಸ್ ಹೋಗುವಷ್ಟರಲ್ಲಿ ಸುಸ್ತಾಗಿರುತ್ತದೆ. ಈ ಮಹಿಳೆಯರ ಕೆಲಸವನ್ನು ಸುಲಭವಾಗಿಸಿ ಸಮಯವನ್ನು ಉಳಿತಾಯ ಮಾಡುವಲ್ಲಿ ಈ ಫ್ರೆಶರ್ ಕುಕ್ಕರ್ ಪಾತ್ರ ಬಹುದೊಡ್ಡದು. ಆದರೆ ಆಹಾರವನ್ನು ಆರೋಗ್ಯಕರವಾಗಿ ಬೇಯಿಸಿ ಸೇವಿಸಿದರೆ ಮಾತ್ರ ಪೋಷಕಾಂಶಗಳು ದೇಹಕ್ಕೆ ಸಂಪೂರ್ಣವಾಗಿ ದೊರೆಯುತ್ತದೆ. ಹೀಗಾಗಿ ಈ ಕೆಲವು ಆಹಾರಗಳನ್ನು ಫ್ರೆಶರ್ ಕುಕ್ಕರ್ ನಲ್ಲಿ ಬೇಯಿಸುವ ಸಾಹಸವಂತೂ ಮಾಡುವುದು ಆರೋಗ್ಯಕ್ಕೆ ಹಿತವಲ್ಲ.
- ಫ್ರೆಶರ್ ಕುಕ್ಕರ್ ನಲ್ಲಿ ಹೆಚ್ಚಿನವರು ಅನ್ನವನ್ನು ಮಾಡುತ್ತಾರೆ. ಆದರೆ ಅಕ್ಕಿ ತೊಳೆದು ಕುಕ್ಕರ್‌ನಲ್ಲಿಟ್ಟರೆ ಕ್ಷಣಾರ್ಧದಲ್ಲಿ ಅನ್ನವಾಗಿ ಬಿಡುತ್ತದೆ. ಆದರೆ ಈ ಕುಕ್ಕರ್ ನಲ್ಲಿ ಅನ್ನ ಮಾಡುವುದರಿಂದ ಅನ್ನದಲ್ಲಿರುವ ಸ್ಟಾರ್ಚ್ ಅಲ್ಲೇ ಇಂಗುತ್ತದೆ. ಇದು ದೇಹದ ಮೇಲೆ ನಾನಾ ರೀತಿಯ ಪರಿಣಾಮಗಳನ್ನು ಬೀರುವ ಸಾಧ್ಯತೆಯೇ ಅಧಿಕವಾಗಿದೆ.
- ಪಾಸ್ತಾವನ್ನು ಕೂಡಾ ಕುಕ್ಕರ್ ಒಳಗಿಟ್ಟು ಬೇಯಿಸಬೇಡಿ. ಇದರಲ್ಲಿ ಸ್ಟಾರ್ಚ್ ಹೆಚ್ಚಿದ್ದು, ಅಲ್ಲೇ ಇಂಗಿ ಹೋಗುತ್ತದೆ. ಕುಕ್ಕರ್ ನಲ್ಲಿ ಬೇಯಿಸಿದ ಈ ಆಹಾರವನ್ನು ತಿಂದರೆ ಆರೋಗ್ಯ ಸಮಸ್ಯೆಗಳು ಬರುವ ಸಾಧ್ಯತೆಯೇ ಅಧಿಕವಾಗಿದೆ.
- ಕುಕ್ಕರ್ ನಲ್ಲಿ ಆಲೂಗಡ್ಡೆ ಇಟ್ಟರೆ ಕೆಲವೇ ಕೆಲವು ನಿಮಿಷಗಳಲ್ಲಿ ಬೇಯುತ್ತದೆ. ಆದರೆ ಈ ಆಲೂಗಡ್ಡೆಯಲ್ಲೂ ಸ್ಟಾರ್ಚ್ ಇರುವುದರಿಂದ ಇದನ್ನು ಕುಕ್ಕರ್‌ನಲ್ಲಿಡುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ.
- ಕುಕ್ಕರ್‌ನಲ್ಲಿ ಡೈರಿ ಉತ್ಪನ್ನಗಳನ್ನು ಬೇಯಿಸುವುದು ಒಳ್ಳೆಯದಲ್ಲ. ಈ ಹಾಲು ಮತ್ತು ಇತರ ಡೈರಿ ಉತ್ಪನ್ನಗಳು ಕಡಿಮೆ ಸಮಯದಲ್ಲಿ ಬಿಸಿಯಾಗುತ್ತವೆ. ಹೀಗಾಗಿ ಇದನ್ನು ಕುಕ್ಕರ್ ನಲ್ಲಿ ಬೇಯಿಸಬಾರದು.
- ಮೀನನ್ನು ಕುಕ್ಕರಿನಲ್ಲಿ ಬೇಯಿಸುವುದರಿಂದ ಹೆಚ್ಚು ಬೆಂದು ಹೋಗುವ ಸಾಧ್ಯತೆಯೇ ಹೆಚ್ಚು. ಈ ಮೀನಿನಲ್ಲಿರುವ ಅಗತ್ಯ ಪೋಷಕಾಂಶಗಳು ನಷ್ಟವಾಗುತ್ತದೆ. ಹೀಗಾಗಿ ಮೀನನ್ನು ಬೇಯಿಸಲು ಕುಕ್ಕರ್ ಬದಲು ಪಾತ್ರೆಯನ್ನು ಬಳಸುವುದು ಉತ್ತಮ.
ಮತ್ತಷ್ಟು ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ