ಋತುಗಳು ಬದಲಾಗುತ್ತಿದ್ದಂತೆ, ತ್ವಚೆಯ ಕಾಳಜಿಯನ್ನು ವಹಿಸುವುದು ಅಗತ್ಯವಾಗಿದೆ. ತ್ವಚೆಯೂ ಅತ್ಯಂತ ಸೂಕ್ಷ್ಮವಾಗಿರುವುದರಿಂದ ವಿಶೇಷ ಕಾಳಜಿ ವಹಿಸುವುದು ಅತ್ಯಂತ ಅಗತ್ಯವಾಗಿದೆ. ಚರ್ಮವು ಋತುಗಳು ಬದಲಾಗುತ್ತಿದ್ದಂತೆ ತೇವಾಂಶವನ್ನು ಕಳೆದುಕೊಳ್ಳದಂತೆ ಹಾಗೂ ಬಿರುಕು ಬಿಡದಂತೆ ನೋಡಿಕೊಳ್ಳಬೇಕಾಗುತ್ತದೆ. ಮಾರ್ಚ್ನಲ್ಲಿ ಬಿಸಿಲಿನ ಶಾಖವು ಹೆಚ್ಚಾಗಿರುವುದರಿಂದ ನಿಮ್ಮ ತ್ವಚೆಯ ಬಗ್ಗೆ ಯಾವ ರೀತಿ ಕಾಳಜಿವಹಿಸಬೇಕು ಎಂದು ನೀವು ತಿಳಿದುಕೊಳ್ಳಲು ಸಲಹೆಗಳು ಇಲ್ಲಿವೆ.
ಚರ್ಮವನ್ನು ತೀವ್ರವಾಗಿ ಹಾನಿಗೊಳಿಸಬಹುದಾದ ತೀವ್ರವಾದ ಶಾಖದಿಂದ ಚರ್ಮವನ್ನು ರಕ್ಷಿಸುವುದು ತುಂಬಾ ಅಗತ್ಯವಾಗಿದೆ. ಇಲ್ಲದಿದ್ದರೆ ಇಲ್ಲದಿದ್ದರೆ ಚರ್ಮವು ವೇಗವಾಗಿ ವಯಸ್ಸಾಗಲು ಪ್ರಾರಂಭಿಸುತ್ತದೆ ಮತ್ತು ಚರ್ಮದ ಕ್ಯಾನ್ಸರ್ ಬೆಳವಣಿಗೆಯ ಅಪಾಯವನ್ನು ಅಭಿವೃದ್ಧಿಪಡಿಸುತ್ತದೆ. ಆದ್ದರಿಂದ ಹೊರಗಡೆ ಹೋಗುವಾಗ ಸನ್ ಸ್ಕ್ರೀನ್ ಬಳಸಿ.
ವಾರಕ್ಕೊಮ್ಮೆ ಅಥವಾ ಎರಡು ಬಾರಿ ಎಕ್ಸ್‌ಫೋಲಿಯೇಟ್ ಮಾಡುವುದು ಸಹ ಅಗತ್ಯ. ಇದು ಸತ್ತ ಚರ್ಮವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ ಮತ್ತು ರಂಧ್ರಗಳನ್ನು ಮುಚ್ಚುತ್ತದೆ.
ಅತಿಯಾದ ಬಿಸಿಲಿರುವಾಗ ಹೆಚ್ಚು ಮೇಕ್ ಅಪ್ ಪ್ರಾಡೆಕ್ಟ್ಗಳನ್ನು ಬಳಸಬೇಡಿ. ಇದು ನಿಮ್ಮ ಚರ್ಮವನ್ನು ಹಾನಿಗೊಳಿಸಬಹುದು. ಆದ್ದರಿಂದ ನಿಮ್ಮ ಚರ್ಮದ ಆರೋಗ್ಯವನ್ನು ಕಾಪಾಡಲು ಬೇಸಿಗೆಯಲ್ಲಿ ಆದಷ್ಟು ಮೇಕ್ಅಪ್ ಕಡಿಮೆ ಮಾಡಿ.
ಇದನ್ನೂ ಓದಿ: ತೂಕ ಇಳಿಸಲು ಇಲ್ಲಿವೆ 5 ಉತ್ತಮ ಡಯಟ್ ಪ್ಲಾನ್
ಬೇಸಿಗೆಯ ಅತಿಯಾದ ಶಾಖದಿಂದ ಅಂದರೆ ಹಾನಿಕಾರಕ ಯುವಿ ಕಿರಣಗಳಿಂದ ನಿಮ್ಮನ್ನು ರಕ್ಷಿಸಲು ಸರಿಯಾದ ಬಟ್ಟೆಯನ್ನು ಆಯ್ಕೆ ಮಾಡುವುದು ಅತ್ಯಂತ ಅಗತ್ಯವಾಗಿದೆ. ಉದ್ದ ತೋಳುಗಳಲ್ಲ ಬಟ್ಟೆ ಜೊತೆಗೆ ಸನ್ಗ್ಲಾಸ್ ಬಳಸುವುದು ಅತ್ಯಂತ ಅಗತ್ಯವಾಗಿದೆ.
ತೀವ್ರವಾದ ಬೇಸಿಗೆಯಲ್ಲಿ, ಬೆವರು ಮತ್ತು ಕೊಳೆಯನ್ನು ಸ್ವಚ್ಛಗೊಳಿಸಲು ನೀವು ಮುಖ ತೊಳೆಯುವುದು ಅಗತ್ಯವಾಗಿದೆ. ಆದರೆ ಪದೇ ಪದೇ ಮುಖ ತೊಳೆಯುವ ಆಭ್ಯಾಸ ಬೇಡ, ಏಕೆಂದರೆ ಇದು ನಿಮ್ಮ ತ್ವಚೆಯ ತೇವಾಂಶವನ್ನು ಕಳೆದುಕೊಳ್ಳಲು ಕಾರಣವಾಗಬಹುದು.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 3:57 pm, Wed, 1 March 23