Relationship : ಈ ಕಾರಣದಿಂದಲೇ ಹುಡುಗಿಯರು ಪ್ರಪೋಸ್ ಮಾಡೋ ಧೈರ್ಯ ಮಾಡಲ್ಲ

| Updated By: ಅಕ್ಷಯ್​ ಪಲ್ಲಮಜಲು​​

Updated on: Aug 29, 2024 | 11:07 AM

ಪ್ರೀತಿ ಹೇಳಿ ಕೇಳಿ ಹುಟ್ಟಲ್ಲ, ಇದಕ್ಕೆ ಜಾತಿ, ಧರ್ಮ ಹಾಗೂ ವಯಸ್ಸಿನ ಹಂಗಿಲ್ಲ. ಆದರೆ ಹುಡುಗರು ತಾವು ಪ್ರೀತಿಸುತ್ತಿರುವ ವಿಷಯವನ್ನು ಹುಡುಗಿಯ ಮುಂದೆ ಪ್ರೇಮ ನಿವೇದನೆ ಮಾಡಿಕೊಳ್ಳುವುದನ್ನು ನೋಡಿರಬಹುದು. ಆದರೆ ಈ ಹುಡುಗಿಯರು ಎಷ್ಟೇ ಪ್ರೀತಿಯಿದ್ದರೂ ಪ್ರಪೋಸ್ ಮಾಡುವ ಧೈರ್ಯವಂತೂ ಮಾಡುವುದೇ ಇಲ್ಲ. ಈ ಹುಡುಗಿಯರು ತಮ್ಮ ಮನಸ್ಸಿನ ಭಾವನೆಯನ್ನು ಹೇಳಿಕೊಳ್ಳಲು ಹಿಂಜರಿಯುವುದಕ್ಕೆ ಇದೇ ಕಾರಣಗಳಂತೆ. ಹಾಗಾದ್ರೆ ಆ ಕುರಿತಾದ ಕುತೂಹಲಕಾರಿ ಮಾಹಿತಿ ಇಲ್ಲಿದೆ.

Relationship : ಈ ಕಾರಣದಿಂದಲೇ ಹುಡುಗಿಯರು ಪ್ರಪೋಸ್ ಮಾಡೋ ಧೈರ್ಯ ಮಾಡಲ್ಲ
ಸಾಂದರ್ಭಿಕ ಚಿತ್ರ
Follow us on

ಪ್ರೀತಿ ಎರಡು ಮನಸ್ಸುಗಳ ಮಿಲನ, ಈ ಪ್ರೀತಿಗೆ ಕಣ್ಣಿಲ್ಲ. ಯಾವಾಗ ಯಾರ ಮೇಲೆ ಪ್ರೀತಿ ಹುಟ್ಟುತ್ತೆ ಅನ್ನೋದು ಗೊತ್ತಿಲ್ಲ. ಪ್ರೀತಿಗೆ ಜಾತಿ, ಧರ್ಮ, ಅಂತಸ್ತು, ವಯಸ್ಸಿನ ಅಂತರವು ಬೇಕಾಗಿಲ್ಲ. ಈಗಿನ ಕಾಲದಲ್ಲಿ ಲವ್ ಗೆ ಗ್ಯಾರಂಟಿನೂ ಇಲ್ಲ, ವ್ಯಾರಂಟಿ ನೂ ಇಲ್ಲ. ಆದರೆ ಈ ತಮ್ಮ ಮನಸ್ಸಿನಲ್ಲಿ ಚಿಗುರೊಡೆದ ಪ್ರೀತಿಯನ್ನು ವ್ಯಕ್ತಪಡಿಸುವಲ್ಲಿ ಹುಡುಗರು ಮುಂದೆ ಇರುತ್ತಾರೆ. ಹುಡುಗಿಯರು ಮಾತ್ರ ಏನೇ ಆದರೂ ಪ್ರೇಮ ನಿವೇದನೆ ಮಾಡಿಕೊಳ್ಳುವುದು ಕಡಿಮೆಯೇ. ಈ ಬಗ್ಗೆ ನೀವು ಸಿನಿಮಾಗಳಲ್ಲಿಯೂ ನೋಡಿರಬಹುದು. ಆದರೆ ಹುಡುಗಿಯರು ಈ ಕಾರಣದಿಂದಲೇ ತಮ್ಮ ಪ್ರೀತಿಯನ್ನು ತನ್ನ ಮನಸ್ಸು ಕದ್ದ ಹುಡುಗನ ಬಳಿ ಹೇಳಿಕೊಳ್ಳುವುದಿಲ್ಲ.

  • ತಾನು ಮನಸಾರೆ ಪ್ರೀತಿಸುತ್ತಿರುವ ಹುಡುಗನು ತನ್ನ ಪ್ರೀತಿಯನ್ನು ನಿರಾಕರಿಸಿದರೆ ಎನ್ನುವ ಭಯವು ಇರುತ್ತದೆ. ಹಾರ್ಟ್ ಬ್ರೇಕ್ ಆಗುವ ಭಯದಿಂದಲೇ ಹೆಚ್ಚಿನ ಹುಡುಗಿಯರು ಹುಡುಗರಿಗೆ ಪ್ರಪೋಸ್ ಮಾಡಲು ನಿರ್ಧರಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ತಮ್ಮ ಮನಸ್ಸಿನಲ್ಲಿರುವ ಪ್ರೀತಿಯನ್ನು ತಮ್ಮೊಳಗೆ ಇಟ್ಟುಕೊಂಡು ಹುಡುಗನು ಪ್ರಪೋಸ್ ಮಾಡಲಿ ಎಂದು ಕಾಯುತ್ತಾರೆ.
  • ಒಬ್ಬ ಹುಡುಗ ತನ್ನ ನೆಚ್ಚಿನ ಹುಡುಗಿಗಾಗಿ ಹುಚ್ಚನಂತೆ ಪ್ರಯತ್ನಿಸಿದರೆ, ಅವನನ್ನು ರೋಮ್ಯಾಂಟಿಕ್, ಪ್ರೇಮಿ ಹೀಗೆ ನಾನಾ ಹೆಸರಿನಿಂದ ಹೊಗಳಾಗುತ್ತದೆ. ಆದರೆ ಈ ಹುಡುಗಿಯರು ಪ್ರೇಮ ನಿವೇದನೆ ಮಾಡಿಕೊಂಡರೆ ಆಕೆಯ ನಡತೆ ಸರಿಯಿಲ್ಲ ಎಂದೆಲ್ಲಾ ಎನ್ನುವ ಹಣೆಪಟ್ಟಿ ಕಟ್ಟಲಾಗುತ್ತದೆ. ಸಮಾಜದಲ್ಲಿ ಈ ರೀತಿ ಹೆಸರಿನಿಂದ ಗುರುತಿಸಿಕೊಳ್ಳಲು ಇಷ್ಟವಿಲ್ಲದ ಕಾರಣ ಹುಡುಗಿಯರು ಪ್ರಪೋಸ್ ಮಾಡಲು ಹಿಂದೇಟು ಹಾಕುತ್ತಾರೆ.
  • ಪ್ರೀತಿಗೆ ಧನಾತ್ಮಕ ಸಮ್ಮತಿಯೂ ಸಿಕ್ಕರೆ ಹೇಗೆ ಖುಷಿಯಾಗುತ್ತದೆಯೋ ಅದೇ ರೀತಿ ತಿರಸ್ಕರಿಸಿದರೆ ಮನಸ್ಸಿಗೆ ನೋವಾಗುವುದು ಸಹಜ. ಹೀಗಾಗಿ ಹುಡುಗಿಯ ಪ್ರೀತಿಗೆ ನೋ ಎನ್ನುವ ಉತ್ತರವು ಹುಡುಗನಿಂದ ಬಂದರೆ ಎನ್ನುವ ಭಯವಿರುತ್ತದೆ. ತಿರಸ್ಕಾರದ ಭಯವಿರುವ ಕಾರಣ ಹುಡುಗಿಯರು ಪ್ರೀತಿಯನ್ನು ನಿವೇದಿಸುವ ವಿಷಯದಲ್ಲಿ ಮುಂದೆ ಬರುವುದಿಲ್ಲ.
  • ಒಂದು ವೇಳೆ ಹುಡುಗಿಯೂ ಸಂಬಂಧಕ್ಕೆ ಕಮಿಟ್ ಆದರೆ ಅದನ್ನು ನಿಭಾಯಿಸಿಕೊಂಡು ಹೋಗಬೇಕು. ಆದರೆ ಹುಡುಗಿಯೂ ಈ ಕಮೀಟ್ ಮೆಂಟ್ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಬಯಸುವುದಿಲ್ಲ. ಮನಸ್ಸಿನಲ್ಲಿ ಪ್ರೀತಿಯಿದ್ದರೂ ಹುಡುಗಿಯರಲ್ಲಿ ಈ ಸಂಬಂಧಕ್ಕೆ ಬದ್ಧನಾಗಿರುತ್ತೇನಾ ಎನ್ನುವ ಭಯವಿರುವುದರಿಂದ ಪ್ರೀತಿ ಹೇಳಿಕೊಳ್ಳಲು ಮುಂದೆ ಬರುವುದಿಲ್ಲ.
  • ಹುಡುಗಿಯರು ಎಷ್ಟೇ ಬೋಲ್ಡ್ ಆಗಿದ್ದರೂ ಪ್ರೀತಿಯನ್ನು ವ್ಯಕ್ತಪಡಿಸುವ ವಿಚಾರದಲ್ಲಿ ಬೋಲ್ಡ್ ಆಗಿರಲು ಇಷ್ಟ ಪಡುವುದಿಲ್ಲ. ಪ್ರೇಮ ನಿವೇದನೆ ಮಾಡಿಕೊಂಡರೆ ಹುಡುಗನು ತನ್ನನ್ನು ಹೇಗೆ ನೋಡುತ್ತಾನೆ ಹಾಗೂ ಸಮಾಜವು ತನ್ನನು ಹೇಗೆ ಸ್ವೀಕರಿಸುತ್ತದೆ ಎನ್ನುವ ಅಳುಕು ಇರುತ್ತದೆ. ಹೀಗಾಗಿ ಪ್ರೀತಿಯ ವಿಷಯದಲ್ಲಿ ಸೈಲೆಂಟ್ ಆಗಿಯೇ ಇರಲು ಇಷ್ಟ ಪಡುತ್ತಾರೆ.
  • ಹುಡುಗಿಗೆ ಯಾವುದಾದರೂ ಹುಡುಗನ ಮೇಲೆ ಪ್ರೀತಿ ಚಿಗುರಿದ್ದರೆ ಅದನ್ನು ನೇರವಾಗಿ ಆತನ ಬಳಿ ಹೇಳಿಕೊಳ್ಳುವುದಿಲ್ಲ. ತಾನೇ ಪ್ರೇಮ ನಿವೇದನೆ ಮಾಡಿಕೊಂಡರೆ ತನ್ನ ಮೌಲ್ಯವು ಕಡಿಮೆಯಾಗುತ್ತದೆ ಎನ್ನುವುದಿರುತ್ತದೆ. ಹೀಗಾಗಿ ಪ್ರೀತಿಯನ್ನು ಹೇಳಿಕೊಳ್ಳುವ ವಿಷಯದಲ್ಲಿ ಸ್ವಲ್ಪ ಹಿಂದೇಟು ಹಾಕುತ್ತಾಳೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ