Event Calendar September 2024 : ಸೆಪ್ಟೆಂಬರ್ನಲ್ಲಿ ಆಚರಿಸುವ ಪ್ರಮುಖ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ದಿನಾಚರಣೆಗಳಿವು
ಕಣ್ಣು ಮುಚ್ಚಿ ಬಿಡುವುದರೊಳಗೆ 2024 ರ ಒಂಬತ್ತನೇ ತಿಂಗಳು ಬಂದೇ ಬಿಟ್ಟಿತು. ಈ ಸಪ್ಟೆಂಬರ್ ತಿಂಗಳಲ್ಲಿ ಹಲವಾರು ವಿವಿಧ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಆಚರಣೆಗಳಿವೆ. ಈ ದಿನಾಚರಣೆಯನ್ನು ಒಂದು ನಿರ್ದಿಷ್ಟ ಉದ್ದೇಶಗಳಿಗಾಗಿ ಜನರಲ್ಲಿ ಜಾಗೃತಿ ಮೂಡಿಸಲು ಆಚರಿಸಲಾಗುತ್ತದೆ. ಹಾಗಾದ್ರೆ ವರ್ಷದ ಒಂಭತ್ತನೇ ತಿಂಗಳಾದ ಸೆಪ್ಟೆಂಬರ್ ನಲ್ಲಿ ಆಚರಿಸಲಾಗುವ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ದಿನಗಳ ಬಗೆಗಿನ ಸಂಪೂರ್ಣ ಮಾಹಿತಿಯೂ ಇಲ್ಲಿದೆ.
2024 ವರ್ಷದ ಒಂಭತ್ತನೇ ತಿಂಗಳಾದ ಸೆಪ್ಟೆಂಬರ್ ಗೆ ಇನ್ನೇನು ಕೆಲವೇ ಕೆಲವು ದಿನಗಳಷ್ಟೇ ಬಾಕಿಯಿವೆ. ಸಪ್ಟೆಂಬರ್ ತಿಂಗಳಲ್ಲಿ ಹಲವಾರುರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ದಿನಾಚರಣೆಯನ್ನು ಒಳಗೊಂಡಿದೆ. ಈ ತಿಂಗಳಿನಲ್ಲಿ ಶಿಕ್ಷಕರ ದಿನಾಚರಣೆ, ವಿಶ್ವ ಹೃದಯ ದಿನ, ವಿಶ್ವ ಓಝೋನ್ ದಿನ ಮುಂತಾದ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ದಿನವನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನಗಳ ಆಚರಣೆಯೂ ಜನರಲ್ಲಿ ಜಾಗೃತಿ ಮೂಡಿಸುವ ನಿರ್ದಿಷ್ಟ ಉದ್ದೇಶಗಳನ್ನು ಹೊಂದಿದೆ.
ಸಪ್ಟೆಂಬರ್ ತಿಂಗಳಲ್ಲಿನ ಪ್ರಮುಖ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ದಿನಾಚರಣೆಗಳು
ಸೆಪ್ಟೆಂಬರ್ 1ರಿಂದ ಸೆಪ್ಟೆಂಬರ್ 7 – ರಾಷ್ಟ್ರೀಯ ಪೌಷ್ಟಿಕಾಂಶ ವಾರ
ಸೆಪ್ಟೆಂಬರ್ 2 – ವಿಶ್ವ ತೆಂಗು ದಿನ
ಸೆಪ್ಟೆಂಬರ್ 3 – ಗಗನಚುಂಬಿ ಕಟ್ಟಡಗಳ ದಿನ
ಸೆಪ್ಟೆಂಬರ್ 5 – ಶಿಕ್ಷಕರ ದಿನಾಚರಣೆ
ಸೆಪ್ಟೆಂಬರ್ 7- ಬ್ರೆಜಿಲಿಯನ್ ಸ್ವಾತಂತ್ರ್ಯ ದಿನ
ಸೆಪ್ಟೆಂಬರ್ 8 – ಅಂತಾರಾಷ್ಟ್ರೀಯ ಸಾಕ್ಷರತಾ ದಿನ
ಸಪ್ಟೆಂಬರ್ 10 – ವಿಶ್ವ ಆತ್ಮಹತ್ಯೆ ತಡೆ ದಿನ
ಸೆಪ್ಟೆಂಬರ್ 11 – ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನ
ಸೆಪ್ಟೆಂಬರ್ 14- ಹಿಂದಿ ದಿವಸ
ಸೆಪ್ಟೆಂಬರ್ 14- ವಿಶ್ವ ಪ್ರಥಮ ಚಿಕಿತ್ಸಾ ದಿನ
ಸೆಪ್ಟೆಂಬರ್ 15 – ಇಂಜಿನಿಯರ್ಸ್ ದಿನ
ಸೆಪ್ಟೆಂಬರ್ 15 – ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ
ಸೆಪ್ಟೆಂಬರ್ 16 – ವಿಶ್ವ ಓಝೋನ್ ದಿನ
ಸಪ್ಟೆಂಬರ್ 18 – ವಿಶ್ವ ಬಿದಿರು ದಿನ
ಸೆಪ್ಟೆಂಬರ್ 21- ಅಂತಾರಾಷ್ಟ್ರೀಯ ಕೆಂಪು ಪಾಂಡಾ ದಿನ:
ಸೆಪ್ಟೆಂಬರ್ 21 – ಅಂತಾರಾಷ್ಟ್ರೀಯ ಶಾಂತಿ ದಿನ
ಸೆಪ್ಟೆಂಬರ್ 21 – ವಿಶ್ವ ಆಲ್ಝೈಮರ್ ದಿನ
ಸೆಪ್ಟೆಂಬರ್ 22 – ರೋಸ್ ಡೇ (ಕ್ಯಾನ್ಸರ್ ರೋಗಿಗಳ ಕಲ್ಯಾಣ ದಿನ)
ಸಪ್ಟೆಂಬರ್ 22 – ವಿಶ್ವ ಘೇಂಡಾಮೃಗ ದಿನ
ಸೆಪ್ಟೆಂಬರ್ 27 – ವಿಶ್ವ ಪ್ರವಾಸೋದ್ಯಮ ದಿನ
ಸೆಪ್ಟೆಂಬರ್ 28 – ವಿಶ್ವ ರೇಬೀಸ್ ದಿನ
ಸೆಪ್ಟೆಂಬರ್ 29 – ವಿಶ್ವ ನದಿಗಳ ದಿನ
ಸೆಪ್ಟೆಂಬರ್ 29 – ವಿಶ್ವ ಹೃದಯ ದಿನ
ಸಪ್ಟೆಂಬರ್ 30 – ಅಂತಾರಾಷ್ಟ್ರೀಯ ಅನುವಾದ ದಿನ
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ