Eye Care : ಈ ಸುಡು ಬಿಸಿಲಿನಲ್ಲಿ ಕಣ್ಣಿನ ಬಗ್ಗೆ ಇರಲಿ ಎಚ್ಚರ, ಈ ಸಿಂಪಲ್ ಟಿಪ್ಸ್ ಪಾಲಿಸಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Mar 06, 2024 | 5:19 PM

ಹವಾಮಾನ ಬದಲಾವಣೆಯಾಗುತ್ತಿದ್ದಂತೆ ತ್ವಚೆಯ ಆರೋಗ್ಯಕ್ಕೆ ಗಮನ ಕೊಡುವಷ್ಟು ಕಣ್ಣಿನ ಆರೈಕೆಗೆ ಗಮನ ಕೊಡುವುದು ಕಡಿಮೆ. ಮುಖದ ಅಂದವನ್ನು ಹೆಚ್ಚಿಸುವ ಕಣ್ಣುಗಳ ಪಾತ್ರ ದೊಡ್ಡದು. ಆದರೆ ಬೇಸಿಗೆಯಲ್ಲಿ ಬಿಸಿಲಿನ ಝಳಕ್ಕೆ ಮುಖದ ಅಂದವು ಹಾಳಾಗುತ್ತವೆ. ಅದಲ್ಲದೇ ಸೂಕ್ಷ್ಮವಾಗಿರುವ ಈ ಕಣ್ಣುಗಳ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ. ಹೀಗಾಗಿ ಬೇಸಿಗೆಯ ಸಮಯದಲ್ಲಿ ಬೇಸಿಗೆಯ ಬಿಸಿ ಗಾಳಿಯಿಂದ ಕಣ್ಣುಗಳಿಗೆ ಅನೇಕ ರೀತಿಯ ಸಮಸ್ಯೆಗಳನ್ನು ಉಂಟು ಮಾಡುತ್ತವೆ. ಹಾಗಾಗಿ ಕೆಲವು ಟಿಪ್ಸ್ ಗಳನ್ನು ಪಾಲಿಸುವ ಮೂಲಕ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

Eye Care : ಈ ಸುಡು ಬಿಸಿಲಿನಲ್ಲಿ ಕಣ್ಣಿನ ಬಗ್ಗೆ ಇರಲಿ ಎಚ್ಚರ,  ಈ ಸಿಂಪಲ್ ಟಿಪ್ಸ್ ಪಾಲಿಸಿ
ಸಾಂದರ್ಭಿಕ ಚಿತ್ರ
Follow us on

ಯಾಕಾದ್ರೂ ಈ ಬೇಸಿಗೆ ಬರುತ್ತದೆಯೋ ಎಂದು ಗೊಣಗುವವರೇ ಹೆಚ್ಚು. ಬಿಸಿ ಗಾಳಿ ಒಂದೆಡೆಯಾದರೆ ಆರೋಗ್ಯ ಸಮಸ್ಯೆಗಳು ಮತ್ತೊಂದೆಡೆ. ಚರ್ಮದ ಆರೋಗ್ಯದ ಜೊತೆಗೆ ಕಣ್ಣಿನ ಅಂದವನ್ನು ಹಾಳು ಮಾಡುತ್ತವೆ. ಈ ಸಮಯದಲ್ಲಿ ಕಣ್ಣಿನ ಉರಿ, ಕಣ್ಣು ಕೆಂಪಾಗುವುದು ಹೀಗೆ ನಾನಾ ಸಮಸ್ಯೆಗಳು ಕಂಡು ಬರುತ್ತವೆ. ಹೀಗಾಗಿ ಈ ಸುಡುವ ಬಿಸಿಲಿನ ಬೇಸಿಗೆಯಲ್ಲಿ ಕಣ್ಣುಗಳ ಆರೋಗ್ಯದ ಕಡೆಗೂ ಹೆಚ್ಚು ಕಾಳಜಿ ವಹಿಸಬೇಕಾಗುತ್ತದೆ.

ಬೇಸಿಗೆಯಲ್ಲಿ ಕಣ್ಣಿನ ಆರೈಕೆಗೆ ಇಲ್ಲಿದೆ ಸಲಹೆಗಳು

  • ಸುಡು ಬಿಸಿಲಿನ ನಡುವೆ ಹೊರಗಡೆ ಹೋಗಬೇಕಾದರೆ ನಿಮ್ಮ ಕಣ್ಣುಗಳನ್ನು ರಕ್ಷಿಸಿಕೊಳ್ಳಬೇಕಾಗುತ್ತದೆ. ಯುವಿ ವಿಕಿರಣಗಳಿಂದ ಕಣ್ಣುಗಳನ್ನು ರಕ್ಷಿಸಲು ಸನ್‌ಗ್ಲಾಸ್‌ ಬಳಸುವುದು ಮುಖ್ಯವಾಗುತ್ತದೆ.
  •  ಬೇಸಿಗೆಯ ಬಿಸಿ ತಾಪದ ನಡುವೆ ಹೆಚ್ಚಿನವರು ಈಜುಕೊಳದಲ್ಲಿಯೇ ಸಮಯವನ್ನು ಕಳೆಯುತ್ತಾರೆ. ಈಜುಕೊಳಗಳಲ್ಲಿರುವ ಕ್ಲೋರಿನ್ ನಿಮ್ಮ ಕಣ್ಣುಗಳ ಮೇಲೆ ಪರಿಣಾಮ ಬೀರಬಹುದು. ಕಣ್ಣುಗಳನ್ನು ಊತ, ಉರಿ ಮತ್ತು ತುರಿಕೆಯಿಂದ ರಕ್ಷಿಸಲು ಕನ್ನಡಕಗಳನ್ನು ಬಳಕೆ ಮಾಡಿ.
  • ಬಿಸಿಲಿನ ಝಳಕ್ಕೆ ಕಣ್ಣುಗಳಲ್ಲಿ ಉರಿ ಕಾಣಿಸಿಕೊಳ್ಳುವುದು ಸಹಜ. ಹೀಗಾಗಿ ಕಣ್ಣನ್ನು ತೇವಾಂಶಭರಿತವಾಗಿರಿಸಲು ನೀರು ಸೇವನೆ ಜೊತೆಗೆ ರೋಸ್ ವಾಟರ್ ಹನಿಗಳನ್ನು ಕಣ್ಣಿಗೆ ಬಿಡುವ ಮೂಲಕ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
  • ಕೈತೊಳೆಯದ ಪದೇ ಪದೇ ಕಣ್ಣುಗಳನ್ನು ಕೈಯಿಂದ ಉಜ್ಜಿಕೊಳ್ಳುವ ಅಭ್ಯಾಸವಿದ್ದರೆ ಅದನ್ನು ಇಂದೇ ನಿಲ್ಲಿಸಿ ಬಿಡಿ. ಕೈಯಲ್ಲಿರುವ ರೋಗಾಣುಗಳನ್ನು ಕಣ್ಣಿಗೆ ಹೋಗಿ ಸಮಸ್ಯೆಗಳನ್ನು ತಂದೊಡ್ಡಬಹುದು.
  • ಬೇಸಿಗೆಯಲ್ಲಿ ಮುಖ ತೊಳೆಯುತ್ತ ಇರಿ. ಈ ಅಭ್ಯಾಸವು ಮಾಡುವುದರಿಂದ ರಿಫ್ರೆಶ್ ಆಗುವುದಲ್ಲದೆ, ಕಣ್ಣುಗಳಲ್ಲಿರುವ ಧೂಳಿನ ಕಣಗಳು ನೀರಿನಿಂದ ಹೊರ ಬರುತ್ತದೆ.
  • ದಿನನಿತ್ಯವು ಮೂರರಿಂದ ಆರು ಲೀಟರ್ ನೀರು ಕುಡಿಯಿರಿ. ಬೇಸಿಗೆಯಲ್ಲಿ ದೇಹದ ತೇವಾಂಶವು ಕಡಿಮೆಯಿರುವ ಕಾರಣ ನೀರು ಸೇವನೆಯು ದೇಹವನ್ನು ತೇವಂಶಭರಿತವಾಗಿಟ್ಟುಕೊಳ್ಳುತ್ತದೆ. ಕಣ್ಣಿನ ಆರೋಗ್ಯಕ್ಕೂ ನೀರು ಬಹಳ ಮುಖ್ಯವಾಗಿದೆ.
  • ಬೇಸಿಗೆಯಲ್ಲಿ ರಾತ್ರಿಯ ವೇಳೆ ಚೆನ್ನಾಗಿ ನಿದ್ದೆ ಮಾಡುವ ಮೂಲಕ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಸಣ್ಣ ಪುಟ್ಟ ಕಣ್ಣಿನ ಸಮಸ್ಯೆಗಳು ಕಂಡು ಬಂದಲ್ಲಿ ವೈದ್ಯರನ್ನು ಭೇಟಿ ನೀಡಿ ಚಿಕಿತ್ಸೆ ಪಡೆದುಕೊಳ್ಳುವುದನ್ನು ಮರೆಯಬೇಡಿ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ