ಮದುವೆಯೆನ್ನುವ ಬಂಧನಕ್ಕೆ ಒಳಪಟ್ಟ ಮೇಲೆ ಕೆಲವೇ ಭಾವನಾತ್ಮಕತೆ ಮಾತ್ರ ವಲ್ಲದೇ ದೈಹಿಕ ಸಂಬಂಧವು ಬಂಧವನ್ನು ಗಟ್ಟಿಗೊಳಿಸಲು ಸಹಾಯಕವಾಗಿದೆ. ಲೈಂಗಿಕ ಕ್ರಿಯೆಯೂ ಸಂಗಾತಿಗೆ ತೋರಲಿರುವ ಕಾಳಜಿ, ಆಕರ್ಷಣೆಯೇ ಆಗಿದ್ದು ಈ ಕಾಳಜಿಯನ್ನು ದೈಹಿಕರೂಪದಲ್ಲಿ ನಿರ್ವಹಿಸುವುದಾಗಿರುತ್ತದೆ. ಆದರೆ ಹೆಚ್ಚಿನವರು ಈ ದೈಹಿಕ ಕ್ರಿಯೆಯಲ್ಲಿ ತೊಡಗಿಕೊಂಡಾಗ ಪತ್ನಿಯನ್ನು ಖುಷಿ ಪಡಿಸಲು ವಿಫಲರಾಗುತ್ತಾರೆ. ಆದರೆ ಈ ಯೋಗಾಸನಗಳನ್ನು ಮಾಡುವ ಮೂಲಕ ಒತ್ತಡವನ್ನು ಕಡಿಮೆ ಮಾಡುವುದರೊಂದಿಗೆ ಲೈಂಗಿಕ ಸಾಮರ್ಥ್ಯವನ್ನು ಹೆಚ್ಚಿಸಬಹುದಾಗಿದೆ.
* ಸೇತು ಬಂಧ ಸರ್ವಾಸನ : ಈ ಆಸನದ ಭಂಗಿಯು ಸ್ನಾಯುಗಳು, ಮತ್ತು ಮಂಡಿಗಳನ್ನು ಬಲಪಡಿಸುತ್ತದೆ. ಹಾಗೂ ಲೈಂಗಿಕ ಚಟುವಟಿಕೆಯ ಸಮಯದಲ್ಲಿ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಸಹಕಾರಿಯಾಗಿದೆ.
* ಬದ್ಧ ಕೋನಾಸನ : ಚಿಟ್ಟೆ ಭಂಗಿಯ ಈ ಆಸನವು ಒಳ ತೊಡೆಗಳು ಮತ್ತು ಸೊಂಟವನ್ನು ವಿಸ್ತರಿಸುತ್ತದೆ. ದೇಹದಲ್ಲಿ ರಕ್ತದ ಹರಿವನ್ನು ಹೆಚ್ಚಿಸಿ ಲೈಂಗಿಕ ಸಮಸ್ಯೆಯನ್ನು ನಿವಾರಿಸುತ್ತದೆ.
* ಆನಂದ ಬಾಲಾಸನ : ಈ ಭಂಗಿಯು ಸೊಂಟ, ತೊಡೆಸಂದು ಮತ್ತು ಕೆಳ ಬೆನ್ನನ್ನು ವಿಸ್ತರಿಸುತ್ತದೆ. ದೇಹದ ಈ ಭಾಗಗಳಲ್ಲಿನ ಒತ್ತಡವನ್ನು ಕಡಿಮೆ ಮಾಡಿ ದೇಹದ ಸ್ಥಿರತೆಯನ್ನು ಕಾಪಾಡುತ್ತದೆ.
* ಫಲಕಾಸನ : ಈ ಆಸನವನ್ನು ದಿನನಿತ್ಯ ಮಾಡುವುದರಿಂದ ತೋಳುಗಳು ಮತ್ತು ಕಾಲುಗಳನ್ನು ಬಲಪಡಿಸುತ್ತದೆ. ಒಟ್ಟಾರೆ ದೇಹದ ಸ್ಥಿರತೆ ಹಾಗೂ ಶಕ್ತಿಯನ್ನು ಹೆಚ್ಚಿಸಲು ಸಹಕಾರಿಯಾಗಿದೆ.
* ನೌಕಾಸನ : ದೇಹವನ್ನು ದೋಣಿಯಾಕಾರದಲ್ಲಿ ಇರಿಸುವ ಆಸನವಾಗಿದ್ದು ಇದು ಒತ್ತಡವನ್ನು ನಿವಾರಿಸುತ್ತದೆ. ಆರೋಗ್ಯ ಸಮಸ್ಯೆಯನ್ನು ದೂರ ಮಾಡಿ ಹೊಟ್ಟೆಯ ಸ್ನಾಯುಗಳು ಮತ್ತು ಹಿಂಭಾಗದ ಸ್ನಾಯುಗಳನ್ನು ಬಲಗೊಳಿಸುತ್ತದೆ. ಜೀರ್ಣಕ್ರಿಯೆಯನ್ನು ಸುಧಾರಿಸಿ ದೇಹದ ಸ್ಥಿರತೆಯನ್ನು ಕಾಪಾಡಿಕೊಳ್ಳಬಹುದಾಗಿದೆ.
ಇದನ್ನೂ ಓದಿ: ಪ್ರೀ ವೆಡ್ಡಿಂಗ್ ಶೂಟ್ಗೆ ಬೆಂಗಳೂರಿನ ಹೇಳಿ ಮಾಡಿಸಿದ ಸ್ಥಳಗಳಿವು
* ಮಾರ್ಜರಿಯಾಸನ : ಈ ಆಸನವನ್ನು ದಿನನಿತ್ಯ ಮಾಡುವುದರಿಂದ ಬೆನ್ನುಮೂಳೆಯನ್ನು ಬೆಚ್ಚಗಾಗಿಸುತ್ತದೆ. ಹಾಗೂ ಉತ್ಸಾಹವನ್ನು ಉತ್ತೇಜಿಸುತ್ತದೆ.
* ವೀರಭದ್ರಾಸ : ದೇಹದ ಅಂಗಗಳಿಗೆ ಶಕ್ತಿ ಪೂರೈಸುವುದಲ್ಲದೆ, ಸೊಂಟ, ತೊಡೆಸಂದು ಮತ್ತು ಭುಜಗಳನ್ನು ವಿಸ್ತರಿಸುತ್ತದೆ. ಈ ಆಸನದಿಂದ ಎದೆ ಮತ್ತು ಶ್ವಾಸಕೋಶ ತೆರೆಯುವುದರೊಂದಿಗೆ ದೇಹಕ್ಕೆ ಸ್ಥಿರತೆಯನ್ನು ಒದಗಿಸುತ್ತದೆ.
ಹೆಚ್ಚಿನ ಜೀವನಶೈಲಿ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ