Pinwheel Samosa :ಪಿನ್‌ವೀಲ್ ಸಮೋಸಾದೊಂದಿಗೆ ಹಬ್ಬವನ್ನು ಇನಷ್ಟು ಸಂಭ್ರಮಿಸಿ

| Updated By: ಅಕ್ಷತಾ ವರ್ಕಾಡಿ

Updated on: Oct 25, 2022 | 4:36 PM

ಹಬ್ಬಗಳ ಸಂದರ್ಭದಲ್ಲಿ ಮನೆಯಲ್ಲೇ ಸುಲಭವಾಗಿ ಪಿನ್‌ವೀಲ್ ಸಮೋಸಾದ ಪಾಕ ವಿಧಾನವನ್ನು ಪಾಕ ತಜ್ಞರಾದ ರಣವೀರ್ ಬ್ರಾರ್ ಹಂಚಿಕೊಂಡಿರುವ ಮಾಹಿತಿ ಇಲ್ಲಿದೆ.

Pinwheel Samosa :ಪಿನ್‌ವೀಲ್ ಸಮೋಸಾದೊಂದಿಗೆ ಹಬ್ಬವನ್ನು ಇನಷ್ಟು ಸಂಭ್ರಮಿಸಿ
Pinwheel samosa
Follow us on

ವಿವಿಧ ಬಗೆಯ  ತಿಂಡಿ ತಿನಸುಗಳಿದ್ದರೇನೇ  ಹಬ್ಬಕ್ಕೊಂದು ಕಲೆ. ಆದ್ದರಿಂದ ಈ  ಹಬ್ಬದ ಸಮಯದಲ್ಲಿ ನಿಮ್ಮ ಸ್ನೇಹಿತರು ಮತ್ತು ಕುಟುಂಬದವರನ್ನು ಇನಷ್ಟು ಆನಂದದಿಂದಿಡಲು ಪಿನ್‌ವೀಲ್ ಸಮೋಸಾದ ಪಾಕ ವಿಧಾನವನ್ನು ಪಾಕ ತಜ್ಞರಾದ ರಣವೀರ್ ಬ್ರಾರ್ ಹಂಚಿಕೊಂಡಿರುವ ಮಾಹಿತಿಯನ್ನು  ಇಂಡಿಯನ್ ಎಕ್ಸ್ ಪ್ರೆಸ್ಸ್ ಅಲ್ಲಿ ಪ್ರಕಟಿಸಲಾಗಿದೆ.

ಪಿನ್‌ವೀಲ್ ಸಮೋಸಾ ಮಾಡುವ ವಿಧಾನ

  • ಒಂದು ಪ್ಯಾನ್‌ನಲ್ಲಿ, ಕೊತ್ತಂಬರಿ ಬೀಜಗಳು, ಜೀರಿಗೆ, ಕರಿಮೆಣಸು ಮತ್ತು ಕಪ್ಪು ಏಲಕ್ಕಿ ಬೀಜಗಳನ್ನು ಸೇರಿಸಿ ಮತ್ತು ಮಧ್ಯಮ ಉರಿಯಲ್ಲಿ ಒಣ ಹುರಿದುಕೊಳ್ಳಿ.
  • ನಂತರ ಒಂದು ಬಟ್ಟಲಿಗೆ ವರ್ಗಾಯಿಸಿ ಮತ್ತು ಅದು ಸಂಪೂರ್ಣವಾಗಿ ತಣ್ಣಗಾದ ನಂತರ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಇದನ್ನು ಗ್ರೈಂಡರ್ ಜಾರ್‌ಗೆ ವರ್ಗಾಯಿಸಿ ಮತ್ತು ಒರಟಾಗಿ ರುಬ್ಬಿ ಬದಿಗಿಡಿ.
  • ನಂತರ ಫಿಲ್ಲಿಂಗ್ಸ್ ಗಾಗಿ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಅದಕ್ಕೆ ಜೀರಿಗೆ ಹಾಕಿ, ಚೆನ್ನಾಗಿ ಉದುರಲು ಬಿಡಿ.
  • ಶುಂಠಿ, ಮತ್ತು ಹಸಿರು ಮೆಣಸಿನಕಾಯಿಯನ್ನು ಸೇರಿಸಿ ಚೆನ್ನಾಗಿ ಹುರಿಯಿರಿ.
  • ಬೇಯಿಸಿದ ಆಲೂಗಡ್ಡೆಯನ್ನು ಚೆನ್ನಾಗಿ ಹಿಸುಕಿ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಮಿಶ್ರಣ ಮಾಡಿ.
  • ಸಕ್ಕರೆ, ಮತ್ತು ಒಣ ಮಾವಿನ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಜೊತೆಗೆ ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಕಲಸಿ. ಅದನ್ನು ಒಂದು ಬಟ್ಟಲಿಗೆ ವರ್ಗಾಯಿಸಿ ಮತ್ತು ಮುಂದಿನ ಬಳಕೆಗಾಗಿ ಅದನ್ನು ಪಕ್ಕಕ್ಕೆ ಇರಿಸಿ.
  • ನಂತರ ಅರೆ ಮೃದುವಾದ ಹಿಟ್ಟಿಗೆ ನೀರು ಸೇರಿಸಿ ಮತ್ತು ಬೆರೆಸಿಕೊಳ್ಳಿ. 10 ನಿಮಿಷಗಳ ಕಾಲ ಒದ್ದೆ ಬಟ್ಟೆಯಿಂದ ಮುಚ್ಚಿಡಿ.
  • ನಂತರ ಈಗಾಗಲೇ ತಯಾರಿಸಿ ಇಟ್ಟಿದ್ದ ಹಿಟ್ಟಿನ್ನು ರೋಲಿಂಗ್ ಪಿನ್‌ನಿಂದ ಆಯತಾಕಾರದ ಆಕಾರಕ್ಕೆ ಸುತ್ತಿಕೊಳ್ಳಿ ಹಾಗು ಸಿದ್ಧಪಡಿಸಿದ ಆಲೂಗಡ್ಡೆ ಫಿಲ್ಲಿಂಗ್ಸ್ ಸಮವಾಗಿ ಹರಡಿ, ಸ್ವಲ್ಪ ನೀರು ಹಾಕಿ ಒತ್ತಿರಿ.
  • 10 ನಿಮಿಷಗಳ ಕಾಲ ರೆಫ್ರಿಜರೇಟರ್ನಲ್ಲಿ ಇರಿಸಿ ಇದರಿಂದ ಅದು ಅದರ ಆಕಾರವು ಗಟ್ಟಿಯಾಗಿ ನಿಲ್ಲುತ್ತದೆ.
  • ನಂತರ ಈ ರೋಲ್ ಅನ್ನು ಅರ್ಧ ಇಂಚಿನ ಸ್ಲೈಸ್‌ಗೆ ಕತ್ತರಿಸಿ ಸ್ವಲ್ಪ ಚಪ್ಪಟೆ ಮಾಡಿ.
  • ಒಂದು ಕಡಾಯಿಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ ಮತ್ತು ಪಿನ್‌ವೀಲ್‌ಗಳನ್ನು ಎರಡೂ ಬದಿಗಳು ಗೋಲ್ಡನ್ ಬ್ರೌನ್ ಆಗುವವರೆಗೆ ಹುರಿಯಿರಿ.
  • ಪಿನ್‌ವೀಲ್ ಸಮೋಸಾ ಸವಿಯಲು ಸಿದ್ಧ.

 


(ಈ ಮೇಲಿನ ಲೇಖನವು ಟಿವಿ9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ, ಸಾಮಾನ್ಯ ಮಾಹಿತಿಯನ್ನು ಒಳಗೊಂಡಿರುತ್ತದೆ.)

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ಧಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: