ಸಾಂದರ್ಭಿಕ ಚಿತ್ರ
ಹಾಗಲಕಾಯಿ (Bitter Gourd) ಸಾಕಷ್ಟು ಜನರಿಗೆ ಇಷ್ಟವಿಲ್ಲದ ತರಕಾರಿಯಾಗಿದ್ದರು, ಇದು ಸಾಕಷ್ಟು ಅರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಕಹಿ ರುಚಿ ಕೊಡುವ ಈ ತರಕಾರಿಯಲ್ಲಿ ಹಲವಾರು ರುಚಿಕರ ಅಡುಗೆಯನ್ನು ಮಾಡಬಹುದು. ಇದು ತೂಕ ಕಳೆದುಕೊಳ್ಳಲು, ಮಧುಮೇಹ ನಿಯಂತ್ರದಲ್ಲಿಡಲು ಮತ್ತು ಒಟ್ಟಾರೆ ಆರೋಗ್ಯವನ್ನು ಕಾಪಾಡಿಕೊಳ್ಳುಲು ಸಹಾಯ ಮಾಡುತ್ತದೆ. ಹಾಗಲಕಾಯಿ ಟಿಕ್ಕಿ ರುಚಿಕರ ಮಾತ್ರವಲ್ಲದೆ ಕಹಿ ರುಚಿಯನ್ನು ತೆಗೆದು ಹಾಕುತ್ತದೆ. ಮಾಡುವ ವಿಧಾನ ತಿಳಿಯಲು ಈ ಲೇಖನವನ್ನು ಪರಿಶೀಲಿಸಿ.
ಆರೋಗ್ಯಕರ ಹಾಗಲಕಾಯಿ ಟಿಕ್ಕಿ ರೆಸಿಪಿ: ಈ ಟಿಕ್ಕಿಗೆ ಹಾಗಲಕಾಯಿ, ಈರುಳ್ಳಿ, ಕಡಲೆಹಿಟ್ಟು, ಪನೀರ್ ಮತ್ತು ಇತರ ಮಸಾಲೆಗಳು ಬೇಕಾಗುತ್ತದೆ. ಹಾಗಲಕಾಯಿ ಟಿಕ್ಕಿ ಒಂದು ಆರೋಗ್ಯಕರ ತಿಂಡಿಯಾಗಿದ್ದು, ತೂಕ ಇಳಿಸುವ ಆಹಾರದಲ್ಲಿ ಮತ್ತು ಮಧುಮೇಹಿಗಳು ಆನಂದಿಸಬಹುದು. ಈ ರುಚಿಕರವಾದ ಪ್ಯಾನ್-ಫ್ರೈಡ್ ಟಿಕ್ಕಿಯನ್ನು ನಿಮ್ಮ ನೆಚ್ಚಿನ ಚಟ್ನಿಯೊಂದಿಗೆ ಸವಿಯಬಹುದು.
ಬೇಕಾದುವ ಪದಾರ್ಥಗಳ ಪಟ್ಟಿ:
- 2 ಹಾಗಲಕಾಯಿ
- 1/2 ಕಪ್ ಕಡಿಮೆ ಕೊಬ್ಬಿನ ಪನೀರ್,
- 1 ತುರಿದ ಈರುಳ್ಳಿ
- 2 ಹಸಿ ಮೆಣಸಿನಕಾಯಿ
- 1-ಇಂಚಿನ ಶುಂಠಿ
- 4 ಬೆಳ್ಳುಳ್ಳಿ, ಲವಂಗ
- 1/2 ಕಪ್ ಕೊತ್ತಂಬರಿ ಸೊಪ್ಪು
- 1 ಕಪ್ ಕಡಲೆ ಹಿಟ್ಟು
- 1 ಟೀಸ್ಪೂನ್ ಆಮ್ಚೂರ್ ಪುಡಿ / ಚಾಟ್ ಮಸಾಲಾ
- 1 ಟೀಸ್ಪೂನ್ ಮೆಣಸಿನ ಪುಡಿ
- 1/2 ಟೀಸ್ಪೂನ್ ಅರಿಶಿನ
- 2 ಟೀಸ್ಪೂನ್ ಅಜ್ವೈನ್
- ಉಪ್ಪು ರುಚಿಗೆ ತಕ್ಕಷ್ಟು
- ಪ್ಯಾನ್-ಫ್ರೈ ಮಾಡಲು
ಇದನ್ನೂ ಓದಿ: ಬೆಳಗ್ಗಿನ ಉಪಹಾರಕ್ಕೆ ತಯಾರಿಸಿ ಆರೋಗ್ಯಕರ ಓಟ್ಸ್ ರೆಸಿಪಿ
ಮಾಡುವ ವಿಧಾನ:
- ಹಾಗಲಕಾಯಿಯನ್ನು ಚೆನ್ನಾಗಿ ತೊಳೆಯಿರಿ ಮತ್ತು ಹೊರಭಾಗವನ್ನು ಚೆನ್ನಾಗಿ ತುರಿಯಿರಿ. ತುರಿದ ಹಾಗಲಕಾಯಿಯನ್ನು ಮಿಕ್ಸರ್-ಗ್ರೈಂಡರ್ಗೆ ವರ್ಗಾಯಿಸಿ ಮತ್ತು ಒರಟಾದ ಮಿಶ್ರಣವನ್ನು ರೂಪಿಸಿ. ಈ ಮಿಶ್ರಣಕ್ಕೆ 1 ಟೀಸ್ಪೂನ್ ಉಪ್ಪನ್ನು ಸೇರಿಸಿ ಮತ್ತು 30 ನಿಮಿಷಗಳ ಕಾಲ ಪಕ್ಕಕ್ಕೆ ಇಡಿ.
- ಈರುಳ್ಳಿ, ಮೆಣಸಿನಕಾಯಿ, ಶುಂಠಿ, ಬೆಳ್ಳುಳ್ಳಿ ಮತ್ತು ಕೊತ್ತಂಬರಿ ಸೊಪ್ಪನ್ನು ನುಣ್ಣಗೆ ಕತ್ತರಿಸಿ. ದೊಡ್ಡ ಮಿಕ್ಸಿಂಗ್ ಬೌಲ್‌ನಲ್ಲಿ ಅವುಗಳನ್ನು ಸಿದ್ಧವಾಗಿಡಿ.
- ನಂತರ, ಹಾಗಲಕಾಯಿ ಮಿಶ್ರಣದಿಂದ ನೀರನ್ನು ಹಿಂಡಿ ಬಟ್ಟಲಿಗೆ ಸೇರಿಸಿ.
- ಪನೀರ್ ಮತ್ತು ಮೇಲೆ ಪಟ್ಟಿ ಮಾಡಲಾದ ಮಸಾಲಾಗಳನ್ನು ಸೇರಿಸಿ. ಪದಾರ್ಥಗಳನ್ನು ಮಿಶ್ರಣ ಮಾಡಿ ನಂತರ ಅಜ್ವೈನ್ ಬೀಜಗಳು ಮತ್ತು ಕಡಲೆ ಹಿಟ್ಟು ಸೇರಿಸಿ. ಚೆನ್ನಾಗಿ ಕಲಸಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ.
- ಗೋಲ್ಡನ್ ಬ್ರೌನ್ ಆಗುವ ವರೆಗೂ ಮಧ್ಯಮ ಉರಿಯಲ್ಲಿ ಟಿಕ್ಕಿಯನ್ನು ಪ್ಯಾನ್-ಫ್ರೈ ಮಾಡಿ. ಹಾಗಲಕಾಯಿ ಟಿಕ್ಕಿಗಳನ್ನು ಹಸಿರು ಚಟ್ನಿಯೊಂದಿಗೆ ಬಡಿಸಿ.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ