ಆಯುರ್ವೇದದಲ್ಲಿ ತಿಳಿಸಿರುವಂತೆ ಕಾಯಿಲೆಗಳಿಗೆ ಅನುಗುಣವಾಗಿ ಅಡುಗೆ ಎಣ್ಣೆ ಆರಿಸಿಕೊಳ್ಳಿ

ದೇಹದ ಕಾಯಿಲೆಗಳಿಗೆ ಅನುಗುಣವಾಗಿ ಅಡುಗೆ ಎಣ್ಣೆಯನ್ನು ನಿಮ್ಮ ಆಹಾರದಲ್ಲಿ ಬಳಸಬೇಕು ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ. ಹಾಗಿದ್ದರೆ ಆಯುರ್ವೇದದ ಪ್ರಕಾರ ಜೀವನಶೈಲಿಯ ಕಾಯಿಲೆಗಳಿಗೆ ಅನುಗುಣವಾಗಿ ಯಾರು ಯಾವ ಅಡುಗೆ ಎಣ್ಣೆಯನ್ನು ಬಳಸಿದರೆ ಉತ್ತಮ ಎಂಬುದನ್ನು ನೋಡೋಣ.

ಆಯುರ್ವೇದದಲ್ಲಿ ತಿಳಿಸಿರುವಂತೆ ಕಾಯಿಲೆಗಳಿಗೆ ಅನುಗುಣವಾಗಿ ಅಡುಗೆ ಎಣ್ಣೆ ಆರಿಸಿಕೊಳ್ಳಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on: Aug 11, 2023 | 6:09 PM

ಇತ್ತೀಚಿನ ದಿನಗಳಲ್ಲಿ ಜನರು ಅಡುಗೆ ಎಣ್ಣೆಯ ಬಳಕೆಯ ಬಗ್ಗೆ ಹೆಚ್ಚು ಜಾಗೃತರಾಗಿದ್ದಾರೆ. ಯಾವುದೇ ಖಾದ್ಯಕ್ಕಾಗಲಿ ಹೆಚ್ಚು ಎಣ್ಣೆಯನ್ನು ಬಳಕೆ ಮಾಡುವುದಿಲ್ಲ. ಹೀಗಿದ್ದರೂ ಯಾವ ಅಡುಗೆ ಎಣ್ಣೆ ಆರೋಗ್ಯಕ್ಕೆ ಉತ್ತಮ ಎಂಬ ಪ್ರಶ್ನೆ ಅನೇಕರಲ್ಲಿದೆ. ಮಾರುಕಟ್ಟೆಯಲ್ಲಿ ಹಲವು ಬಗೆಯ ಅಡುಗೆ ಎಣ್ಣೆಗಳು ಲಭ್ಯವಿದೆ. ಮತ್ತು ಅವೆಲ್ಲವೂ ತನ್ನದೇ ಆದ ಸಾಧಕ-ಭಾದಕಗಳನ್ನು ಹೊಂದಿವೆ. ಅನೇಕ ಬಗೆಯ ಅಡುಗೆ ಎಣ್ಣೆಗಳು ಲಭ್ಯವಿದ್ದರೂ, ಅವುಗಳು ಎಲ್ಲರಿಗೂ ಸರಿ ಹೊಂದುವುದಿಲ್ಲ. ಕಾಯಿಲೆಗೆ ಅನುಗುಣವಾಗಿ ಎಣ್ಣೆಯನ್ನು ಆಯ್ಕೆ ಮಾಡಬೇಕು. ಇಲ್ಲದಿದ್ದರೆ ಆ ಕಾಯಿಲೆ ಉಲ್ಬಣಗೊಳ್ಳುವ ಸಾಧ್ಯತೆಯಿರುತ್ತವೆ. ಆಯುರ್ವೇದದಲ್ಲಿ ತಿಳಿಸಿರುವಂತೆ ಯಾವ ಕಾಯಿಲೆಗೆ ಯಾವ ಎಣ್ಣೆ ಸೂಕ್ತ ಎಂಬುದನ್ನು ತಿಳಿಯೋಣ.

ಆಯುರ್ವೇದದ ಪ್ರಕಾರ ಜೀವನಶೈಲಿಯ ಕಾಯಿಲೆಗಳಿಗೆ ಅನುಗುಣವಾಗಿ ಯಾವ ಅಡುಗೆ ಎಣ್ಣೆ ಸೇವಿಸಿದರೆ ಉತ್ತಮ:

ಸಾಸಿವೆ ಎಣ್ಣೆ:

ಸಾವಿವೆ ಎಣ್ಣೆಯು ದೇಹದಲ್ಲಿ ಹೆಚ್ಚಿನ ಶಾಖವನ್ನು ಉತ್ಪಾದಿಸುತ್ತದೆ. ಆದ್ದರಿಂದ ಇದನ್ನು ನೀವು ಚಳಿಗಾಲದಲ್ಲಿ ಬಳಸಬಹುದು. ಇದು ನಿಮ್ಮ ದೇಹವನ್ನು ಬೆಚ್ಚಗಿಡುವುದು ಮಾತ್ರವಲ್ಲದೆ ನಿಮ್ಮ ರೋಗನಿರೋಧಕ ವ್ಯವಸ್ಥೆಯನ್ನು ಆರೋಗ್ಯಕರವಾಗಿರಿಸುತ್ತದೆ. ಆಮ್ಲೀಯತೆ, ಉಸಿರಾಟದ ಅಸ್ವಸ್ಥತೆಯಿಂದ ಬಳಲುತ್ತಿರುವವರು ಈ ಎಣ್ಣೆಯನ್ನು ಅಡುಗೆಯಲ್ಲಿ ಬಳಸಬಾರದು. ಆದರೆ ಸಾಸಿವೆ ಎಣ್ಣೆ ಮಧುಮೇಹ ರೋಗಿಗಳಿಗೆ ಪ್ರಯೋಜನಕಾರಿಯಾಗಿದೆ.

ತೆಂಗಿನ ಎಣ್ಣೆ:

ತೆಂಗಿನ ಎಣ್ಣೆಯು ನಿಮ್ಮ ದೇಹದಲ್ಲಿನ ಪೋಷಕಾಂಶಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಬೇಗ ಸುಸ್ತಾಗುವ ಜನರು ತೆಂಗಿನ ಎಣ್ಣೆಯನ್ನು ಅಡುಗೆಯಲ್ಲಿ ಬಳಸಬಾರದು. ಮತ್ತೊಂದಡೆ ಗ್ಯಾಸ್, ಎದೆಯುರಿ ಮುಂತಾದ ಸಮಸ್ಯೆಗಳಿಂದ ನೀವು ತೊಂದರೆಗೊಳಗಾಗಿದ್ದರೆ, ನಿಮ್ಮ ಅಡುಗೆಗಳಲ್ಲಿ ತೆಂಗಿನ ಎಣ್ಣೆಯನ್ನು ಬಳಸಬಹುದು. ತೂಕ ಇಳಿಕೆಯ ಪಯಣದಲ್ಲಿರುವ ಜನರು ತೆಂಗಿನ ಎಣ್ಣೆಯನ್ನು ಬಳಸಬಾರದು ಏಕೆಂದರೆ ಇದರಲ್ಲಿ ಕೊಬ್ಬಿನಾಂಶ ಹೆಚ್ಚಿರುತ್ತದೆ. ತೂಕ ನಷ್ಟದ ಪಯಾಣದಲ್ಲಿದ್ದರೆ, ನಿಮ್ಮ ಆಹಾರದಲ್ಲಿ ಬಳಸಲು ಆಲಿವ್ ಎಣ್ಣೆ ಸೂಕ್ತವಾಗಿದೆ.

ಎಳ್ಳೆಣ್ಣೆ:

ಆಯುರ್ವೇದದ ಪ್ರಕಾರ ಎಳ್ಳೆಣ್ಣೆಯು ಅಡುಗೆಗೆ ಬಳಸಬಹುದಾದ ಅತ್ಯುತ್ತಮ ಎಣ್ಣೆಗಳಲ್ಲಿ ಒಂದಾಗಿದೆ. ಇದು ಕಫ ಮತ್ತು ವಾತಕ್ಕೆ ಉತ್ತಮ ಎಣ್ಣೆ. ಅಷ್ಟೇ ಅಲ್ಲ, ಇದು ಹೃದಯವನ್ನು ಆರೋಗ್ಯಕರವಾಗಿಡಲು ಸಹಕಾರಿ. ಆದರೆ ಈ ಎಣ್ಣೆಯು ದೇಹದ ಉಷ್ಣತೆಯನ್ನು ಹೆಚ್ಚಿಸುವುದರಿಂದ ಉಸಿರಾಟದ ತೊಂದರೆ ಇದ್ದರೆ ಈ ಎಣ್ಣೆಯನ್ನು ಬಳಕೆ ಮಾಡಬೇಡಿ. ಪೌಷ್ಟಿಕಾಂಶದ ಕೊರತೆ ಇರುವವರು ಅಡುಗೆಯಲ್ಲಿ ಎಳ್ಳೆಣ್ಣೆಯನ್ನು ಬಳಸಬೇಕು.

ಇದನ್ನೂ ಓದಿ: ಕೂದಲ ಆರೈಕೆಯಲ್ಲಿ ಆಯುರ್ವೇದದ ಸಲಹೆಗಳು

ದೇಸಿ ತುಪ್ಪ:

ಅಡುಗೆಗೆ ದೇಸಿ ಹಸುವಿನ ತುಪ್ಪ ಅತ್ಯುತ್ತಮ ಆಯ್ಕೆಯಾಗಿದೆ. ಇದು ಹೊಟ್ಟೆಯ ಅನೇಕ ಸಮಸ್ಯೆಗಳನ್ನು ಹೋಗಲಾಡಿಸಲು ಸಹಕಾರಿ. ರಕ್ತವನ್ನು ಉತ್ಪತ್ತಿ ಮಾಡುವಲ್ಲಿ ಮತ್ತು ರಕ್ತವನ್ನು ಶುದ್ಧಿಕರಿಸಲು ಸಹಾಯ ಮಾಡುತ್ತದೆ. ಆದರೆ ಅಜೀರ್ಣ ಮತ್ತು ಯಕೃತ್ತಿನ ಕಾಯಿಲೆಯ ಸಮಸ್ಯೆಯಿರುವವರು ತುಪ್ಪವನ್ನು ಬಳಸಬಾರದು. ಯಾವುದೇ ಅಡುಗೆ ಎಣ್ಣೆಯಾಗಲಿ ಅಥವಾ ತುಪ್ಪವಾಗಲಿ ಇದನ್ನು ಆದಷ್ಟು ಕಡಿಮೆ ಪ್ರಮಾಣದಲ್ಲಿ ಬಳಸಿ ಏಕೆಂದರೆ ಇದರ ಹೆಚ್ಚಿನ ಬಳಕೆಯು ಭವಿಷ್ಯದಲ್ಲಿ ಸ್ಥೂಲಕಾಯತೆಯನ್ನು ಉಂಟುಮಾಡಬಹುದು.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ: