
ಟೈಪ್ 1 ಡಯಾಬಿಟಿಸ್ (Type-1 Diabetes) ಒಂದು ಸ್ವಯಂ ನಿರೋಧಕ (ಆಟೊಇಮ್ಯೂನ್) ಸ್ಥಿತಿಯಾಗಿದ್ದು, ಇದರಲ್ಲಿ ದೇಹದ ಪ್ರತಿರಕ್ಷಣಾ ವ್ಯವಸ್ಥೆಯು ಇನ್ಸುಲಿನ್ ಉತ್ಪಾದಿಸುವ ಕೋಶಗಳನ್ನು ನಾಶಪಡಿಸುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಲು ಕಾರಣವಾಗುತ್ತದೆ. ಇದು ಮಕ್ಕಳು, ಹದಿಹರೆಯದವರು ಮತ್ತು ಯುವಜನರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಹೆಚ್ಚಿನ ಜನರು ಇದರ ಲಕ್ಷಣಗಳನ್ನು ನಿರ್ಲಕ್ಷಿಸುತ್ತಾರೆ. ಆದರೆ ತಕ್ಷಣ ಚಿಕಿತ್ಸೆ ನೀಡಿದರೆ ಅದನ್ನು ನಿಯಂತ್ರಿಸಬಹುದು. ಈ ನಿಟ್ಟಿನಲ್ಲಿ ಪ್ರಮುಖ ಹಂತವೆಂದರೆ ಜೀವನಶೈಲಿಯ ಬದಲಾವಣೆ. ಉದಾಹರಣೆಗೆ ಪ್ರತಿದಿನ ಯೋಗಾಭ್ಯಾಸ ಮಾಡುವುದು ಮತ್ತು ಸರಿಯಾದ ಆಹಾರ ಕ್ರಮ ಅನುಸರಿಸುವುದು. ಟೈಪ್ 1 ಡಯಾಬಿಟಿಸ್ ಅನ್ನು ಹಿಮ್ಮೆಟ್ಟಿಸಲು ಸಹಾಯ ಮಾಡುವ ಕೆಲವು ಮಾರ್ಗಗಳನ್ನು ಬಾಬಾ ರಾಮದೇವ್ ವಿವರಿಸಿದ್ದಾರೆ.
ಟೈಪ್ 1 ಡಯಾಬಿಟಿಸ್ನ ಲಕ್ಷಣಗಳಲ್ಲಿ ಅತಿಯಾದ ಬಾಯಾರಿಕೆ, ಆಗಾಗ್ಗೆ ಮೂತ್ರ ವಿಸರ್ಜನೆ, ಆಗಾಗ್ಗೆ ಆಯಾಸ ಮತ್ತು ದೃಷ್ಟಿ ಮಂದವಾಗುವುದು ಸೇರಿವೆ. ಈ ಲಕ್ಷಣಗಳನ್ನು ನಿರ್ಲಕ್ಷಿಸಬಾರದು. ಮಧುಮೇಹವು ಯಾವುದೇ ಚಿಕಿತ್ಸೆ ಇಲ್ಲದ ಸಮಸ್ಯೆಯಾಗಿದೆ. ಇದನ್ನು ಪೂರ್ಣ ಗುಣಮುಖಗೊಳಿಸಲು ಔಷಧಗಳಿಲ್ಲ. ಆದರೆ, ಅದನ್ನು ತಗ್ಗಿಸಲು ಸಾಧ್ಯ. ರಕ್ತದಲ್ಲಿನ ಶುಗರ್ ಲೆವೆಲ್ ಅನ್ನು ನಿಯಂತ್ರಣದಲ್ಲಿ ಇಡಬಹುದು.
ಮಧುಮೇಹಕ್ಕೆ ಮೂರು ಪ್ರಮುಖ ಕಾರಣಗಳಿವೆ ಎಂದು ಬಾಬಾ ರಾಮದೇವ್ ಹೇಳುತ್ತಾರೆ. ಮೊದಲನೆಯದು ಮೇದೋಜ್ಜೀರಕ ಗ್ರಂಥಿಗೆ (ಪ್ಯಾಂಕ್ರಿಯಾಸ್) ಹಾನಿಯಾಗುವುದು. ಇದು ಇನ್ಸುಲಿನ್ ಉತ್ಪಾದನೆಯ ಮೇಲೆ ಪರಿಣಾಮ ಬೀರುತ್ತದೆ. ಸಿಂಥೆಟಿಕ್ ಔಷಧಗಳು ಇದರಲ್ಲಿ ಹೆಚ್ಚಿನ ಪಾತ್ರ ವಹಿಸುತ್ತವೆ. ಅದರಲ್ಲೂ ಮಕ್ಕಳಿಗೆ ಈ ಔಷಧಗಳಿಂದ ಹೆಚ್ಚಿನ ದುಷ್ಪರಿಣಾಮ ಇರುತ್ತದೆ. ಇದಲ್ಲದೆ, ವಿವಿಧ ರೀತಿಯ ಮಾಲಿನ್ಯ, ಕಳಪೆ ಆಹಾರ ಮತ್ತು ಅನಾರೋಗ್ಯಕರ ಜೀವನಶೈಲಿ ಕೂಡ ಇಂದಿನ ಮಧುಮೇಹಕ್ಕೆ ಪ್ರಮುಖ ಕಾರಣಗಳಾಗಿವೆ.
ಇದನ್ನೂ ಓದಿ: ಫೈಬರ್ ಸೇರಿ ಹೇರಳ ಪೌಷ್ಟಿಕಾಂಶಗಳಿರುವ ಸೋರೆಕಾಯಿಯಿಂದ ಪ್ರಯೋಜನಗಳೇನು? ಬಾಬಾ ರಾಮದೇವ್ ಮಾಹಿತಿ
ನಿಮ್ಮ ಆಹಾರದಲ್ಲಿ ಟೊಮೆಟೊ, ಟೊಮೆಟೊ ರಸ, ಸೌತೆಕಾಯಿ ಮತ್ತು ಹಾಗಲಕಾಯಿಯನ್ನು ಸೇರಿಸಿಕೊಳ್ಳಲು ಬಾಬಾ ರಾಮದೇವ್ ಸಲಹೆ ನೀಡುತ್ತಾರೆ. ಸೋರೆಕಾಯಿ, ಬ್ರೊಕೊಲಿ (ಹೂಕೋಸು), ಬೆಂಡೇಕಾಯಿ, ಟಿಂಡಾ, ಪಾಲಕ್ ಮತ್ತು ಬೀನ್ಸ್ ಕೂಡ ಆರೋಗ್ಯಕರ ತರಕಾರಿಗಳಾಗಿವೆ. ನಿಮ್ಮ ಆಹಾರವು ನಿಮ್ಮ ಒಟ್ಟಾರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ನಿಮಗೆ ಡಯಾಬಿಟಿಸ್ ಇದ್ದರೆ, ಸರಳ ಕಾರ್ಬೋಹೈಡ್ರೇಟ್‌ಗಳ ಸೇವನೆಯನ್ನು ಮಿತಿಗೊಳಿಸಿ ಮತ್ತು ಹೆಚ್ಚಿನ ಗ್ಲೈಸೆಮಿಕ್ ಸೂಚ್ಯಂಕವಿರುವ ಆಹಾರವನ್ನು ದೂರವಿರಿಸಿ. ನಿಮ್ಮ ದೈನಂದಿನ ಆಹಾರದಲ್ಲಿ ತರಕಾರಿಗಳು, ಧಾನ್ಯಗಳು, ಲೀನ್ ಪ್ರೋಟೀನ್, ಹೆಲ್ತಿ ಫ್ಯಾಟ್ಸ್ ಮತ್ತು ಕಾಳು ಇತ್ಯಾದಿ ಸೇರಿಸಿ. ಸಂಸ್ಕರಿಸಿದ ಆಹಾರಗಳು, ಸಕ್ಕರೆ ಮತ್ತು ಸ್ಯಾಚುರೇಟೆಡ್ ಫ್ಯಾಟ್ಗಳನ್ನು ತಪ್ಪಿಸಿ.
ಡಯಾಬಿಟಿಸ್ ಹಿಮ್ಮೆಟ್ಟಿಸಲು ಬಾಬಾ ರಾಮದೇವ್ ಒಂದು ಸರಳ ಚಿಕಿತ್ಸೆಯನ್ನು ಸೂಚಿಸಿದ್ದಾರೆ. ಇದರಲ್ಲಿ ಬೇವು ಮತ್ತು ಹಾಗಲಕಾಯಿಯನ್ನು ರುಬ್ಬುವುದು, ಅವುಗಳನ್ನು ಒಂದು ಚಪ್ಪಟೆ ತಳವಿರುವ ಪಾತ್ರೆಯಲ್ಲಿ ಇರಿಸಿ ಮತ್ತು ಪ್ರತಿದಿನ ಕೆಲವು ನಿಮಿಷಗಳ ಕಾಲ ಅದರ ಮೇಲೆ ನಡೆದಾಡಬೇಕು.
ಬಾಬಾ ರಾಮದೇವ್ ಅವರ ಸೋಷಿಯಲ್ ಮೀಡಿಯಾ ಪೋಸ್ಟ್
ಡಯಾಬಿಟಿಸ್ ಹಿಮ್ಮೆಟ್ಟಿಸಲು ಬಾಬಾ ರಾಮದೇವ್ ಕೆಲ ಯೋಗಾಸನಗಳನ್ನು ಸೂಚಿಸುತ್ತಾರೆ. ಮಂಡೂಕಾಸನ, ಯೋಗ ಮುದ್ರಾಸನ, ಪವನ ಮುಕ್ತಾಸನ, ಉತ್ಥಾನ ಪಾದಾಸನ, ವಜ್ರಾಸನ ಮತ್ತು ವಕ್ರಾಸನದಂತಹ ಐದರಿಂದ ಹತ್ತು ಆಸನಗಳನ್ನು ಅಭ್ಯಾಸ ಮಾಡಬೇಕು. ಇವು ಬಹಳ ಪ್ರಯೋಜನಕಾರಿ. ಅನಾರೋಗ್ಯದಿಂದ ಬಳಲುತ್ತಿರುವವರೂ ಸಹ ಯೋಗವನ್ನು ತಮ್ಮ ದಿನಚರಿಯಲ್ಲಿ ಸೇರಿಸಿಕೊಳ್ಳಬೇಕು ಎಂದು ಬಾಬಾ ಸಲಹೆ ನೀಡುತ್ತಾರೆ.
ಇದನ್ನೂ ಓದಿ: ರಕ್ತಹೀನತೆ ನಿವಾರಿಸುವ, ಮೈ ಬೆಚ್ಚಗಾಗಿಸುವ ನೈಸರ್ಗಿಕ ವಿಧಾನಗಳು: ಬಾಬಾ ರಾಮದೇವ್ ಶಿಫಾರಸು
ಪತಂಜಲಿ ಸಂಸ್ಥಾಪಕ ಮತ್ತು ಯೋಗ ಗುರು ಬಾಬಾ ರಾಮದೇವ್ ಅವರು ಭಾರತ ಮತ್ತು ವಿದೇಶಗಳಲ್ಲಿ ದೊಡ್ಡ ಯೋಗ ಶಿಬಿರಗಳನ್ನು ಆಯೋಜಿಸುತ್ತಾರೆ ಮತ್ತು ವಿವಿಧ ಮಾಧ್ಯಮಗಳ ಮೂಲಕ ಜನರಿಗೆ ಆರೋಗ್ಯಕರ ಜೀವನದ ಬಗ್ಗೆ ಶಿಕ್ಷಣ ನೀಡುತ್ತಿರುತ್ತಾರೆ. ವೇದ ಕಾಲದಿಂದಲೂ ಭಾರತದಲ್ಲಿ ಯೋಗವನ್ನು ಅಭ್ಯಾಸ ಮಾಡಲಾಗುತ್ತಿದೆ ಮತ್ತು ನೈಸರ್ಗಿಕ ಪದಾರ್ಥಗಳಿಗೆ ಹೆಚ್ಚಿನ ಮೌಲ್ಯವಿದೆ. ಈಗ, ವಿದೇಶಿಯರು ಸಹ ಈ ಜೀವನಶೈಲಿಯನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಆದರೆ ವಿಪರ್ಯಾಸವೆಂದರೆ ಭಾರತೀಯರು ಈ ಪ್ರಾಚೀನ ವಿದ್ಯೆ ಮತ್ತು ಆರೋಗ್ಯ ಪದ್ಧತಿಯನ್ನು ಮರೆಯುತ್ತಿದ್ದಾರೆ. ಇದರಿಂದಾಗಿ ಜನರು ಚಿಕ್ಕ ವಯಸ್ಸಿನಲ್ಲಿಯೇ ರೋಗಗಳಿಗೆ ಬಲಿಯಾಗುತ್ತಿದ್ದಾರೆ. ನಾವೆಲ್ಲರೂ ಯೋಗ ಮತ್ತು ವ್ಯಾಯಾಮವನ್ನು ಅಭ್ಯಾಸ ಮಾಡುವುದರ ಜೊತೆಗೆ ಆರೋಗ್ಯಕರ ಆಹಾರದತ್ತ ಗಮನ ಹರಿಸಬೇಕು.
ಇನ್ನಷ್ಟು ಲೈಫ್ಸ್ಟೈಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ