ಪ್ರೇಮಿಗಳ ವಾರದ ಅಂಗವಾಗಿ ಪ್ರತಿ ವರ್ಷ ಫೆಬ್ರವರಿ 9ರಂದು ಚಾಕೊಲೇಟ್ ದಿನವನ್ನು (Chocolate Day) ಆಚರಿಸಲಾಗುತ್ತದೆ. ಪ್ರೇಮಿಗಳ ವಾರವಿಡೀ (Valentine’s Week) ಪ್ರೀತಿಯಲ್ಲಿರುವವರು ತಮ್ಮ ಸಂಗಾತಿಯನ್ನು ಮೆಚ್ಚಿಸಲು ಏನೇನೋ ಪ್ಲಾನ್ ಮಾಡುತ್ತಾರೆ. ಚಾಕೊಲೇಟ್ ವ್ಯಕ್ತಿಯ ಮನಸಿನ ಮೇಲೆ ಕೂಡ ಪರಿಣಾಮ ಬೀರುತ್ತದೆ. ಇದು ಅವರನ್ನು ಸಂತೋಷಗೊಳಿಸುತ್ತದೆ. ಕೋಕೋ ಬೀನ್ಸ್ ಚಾಕೊಲೇಟ್‌ಗಳನ್ನು ತಯಾರಿಸಲು ಬಳಸುವ ಪ್ರಾಥಮಿಕ ಘಟಕಾಂಶವಾಗಿದೆ. ಇದರಿಂದ ಆರೋಗ್ಯಕ್ಕೂ ಪ್ರಯೋಜನಗಳಿವೆ. ಚಾಕೊಲೇಟ್ ದಿನದಂದು ನಿಮ್ಮ ಪ್ರೇಮಿಗೆ ಯಾವ ರೀತಿಯ ಸರ್ಪ್ರೈಸ್ ಕೊಡಬಹುದು ಎಂಬ ಬಗ್ಗೆ ಸಲಹೆಗಳು ಇಲ್ಲಿವೆ.
ಚಾಕೊಲೇಟ್ ಜೊತೆ ಹೂಗುಚ್ಛ:
ನೀವು ಚಾಕೊಲೇಟ್‌ಗಳ ಜೊತೆ ಪುಷ್ಪಗುಚ್ಛವನ್ನು ಮಾಡಬಹುದು. ಅಥವಾ ಪ್ರತಿಯೊಂದರ ಒಳಗೆ ಚಾಕೊಲೇಟ್‌ಗಳೊಂದಿಗೆ ಬಲೂನ್‌ಗಳ ಪುಷ್ಪಗುಚ್ಛವನ್ನು ಮಾಡಬಹುದು. ಇದು ನಿಮ್ಮ ಸಂಗಾತಿಗೆ ಒಂದು ಮುದ್ದಾದ ಉಡುಗೊರೆಯಾಗುತ್ತದೆ.
ಇದನ್ನೂ ಓದಿ: Propose Day 2024 Date: ಪ್ರಪೋಸ್ ಡೇ ಯಾವಾಗ?; ಅದರ ಇತಿಹಾಸ, ಪ್ರಾಮುಖ್ಯತೆಯೇನು?
ಮನೆಯಲ್ಲಿ ತಯಾರಿಸಿದ ಚಾಕೊಲೇಟ್ ಮಡ್ಕೇಕ್:
ಕೈಯಿಂದ ಮಾಡಿದ ಉಡುಗೊರೆಯಂತೆ ‘ಐ ಲವ್ ಯೂ’ ಎಂದು ಯಾವುದೂ ಹೇಳುವುದಿಲ್ಲ. ನಾವೇ ಖುದ್ದಾಗಿ ಮಾಡಿದ ಉಡುಗೊರೆಗೆ ವಿಶೇಷತೆ ಜಾಸ್ತಿ. ಹೀಗಾಗಿ, ನಿಮ್ಮ ಸಂಗಾತಿಗೆ ನೀವೇ ಚಾಕೋಲೇಟ್ ಕೇಕ್ ಮಾಡಿಕೊಡಿ. ಅದರ ಖುಷಿಯೇ ಬೇರೆ.
ಕಪ್ಕೇಕ್:
ಇತ್ತೀಚಿನ ದಿನಗಳಲ್ಲಿ ಕಸ್ಟಮೈಸ್ ಮಾಡಿದ ಕಪ್‌ಕೇಕ್‌ಗಳು ಬೇಕರಿಗಳಲ್ಲಿ ಸುಲಭವಾಗಿ ಲಭ್ಯವಿವೆ. ಆನ್‌ಲೈನ್‌ನಲ್ಲಿ ಲಭ್ಯವಿರುವ ಸುಲಭವಾದ ಪಾಕವಿಧಾನಗಳೊಂದಿಗೆ ನೀವೇ ಕೂಡ ಈ ಕಪ್ಕೇಕ್ ಮಾಡಬಹುದು. ಈ ಚಾಕೊಲೇಟ್ ದಿನಕ್ಕೆ ಕೆಲವು ಮುದ್ದಾದ ಸಂದೇಶಗಳು, ಶುಭಾಶಯಗಳ ಜೊತೆ ಕಪ್ ಕೇಕ್ ನೀಡಿ.
ಇದನ್ನೂ ಓದಿ: Rose Day 2024: ಪ್ರತಿ ಬಣ್ಣದ ಗುಲಾಬಿಗೂ ಒಂದೊಂದು ಅರ್ಥ; ರೋಸ್ ಡೇ ವಿಶೇಷತೆಯಿದು
ಕಸ್ಟಮೈಸ್ ಮಾಡಿದ ಚಾಕೊಲೇಟ್ ಬಾಕ್ಸ್ ಕಮ್ ಕಾರ್ಡ್:
ಚಾಕೊಲೇಟ್ ಡೇಗಾಗಿ ಸರಳವಾದ ಆದರೆ ಹೃತ್ಪೂರ್ವಕ ಉಡುಗೊರೆಯ ಕಲ್ಪನೆ ಇಲ್ಲಿದೆ. ನಿಮ್ಮ ಸಂಗಾತಿಗಾಗಿ ನೀವು ಕಸ್ಟಮೈಸ್ ಮಾಡಿದ ಚಾಕೊಲೇಟ್ ಬಾಕ್ಸ್ ಅನ್ನು ನೀಡಬಹುದು. ಅದನ್ನು ಕೈಬರಹದ ಪತ್ರ ಅಥವಾ ಸಿಹಿ ಶುಭಾಶಯ ಪತ್ರದೊಂದಿಗೆ ನೀಡಿ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:34 am, Thu, 8 February 24