ಹಿಂದೂ ಮಹಾಕಾವ್ಯ ರಾಮಾಯಣವನ್ನು ರಚಿಸಿದ ಮಹರ್ಷಿ ವಾಲ್ಮೀಕಿ, ಆದಿ ಕವಿ ಅಥವಾ ಮೊದಲ ಕವಿ ಅವರ ಜನ್ಮ ಜಯಂತಿಯನ್ನು ಅಕ್ಟೋಬರ್ 20ರಂದು ಆಚರಿಸಲಾಗುತ್ತದೆ. ಅಶ್ವಿನಿ ಮಾಸದ ಶುಕ್ಲ ಪಕ್ಷದ 15 ನೇ ದಿನದಂದು ವಾಲ್ಮೀಕಿ ಜಯಂತಿಯನ್ನು ಆಚರಿಸಲಾಗುತ್ತದೆ. ಇದನ್ನು ಪ್ರತಿವರ್ಷವೂ ಹಿಂದೂ ಕ್ಯಾಲೆಂಡರ್ ಪ್ರಕಾರ, ಅಶ್ವಿನ್ ತಿಂಗಳಲ್ಲಿ ಶುಕ್ಲ ಪಕ್ಷದ ಹುಣ್ಣಿಮೆಯ ದಿನದಂದು ಆಚರಿಸಲಾಗುತ್ತದೆ.
ಮಹರ್ಷಿ ವಾಲ್ಮೀಕಿ ಹಿಂದೂ ಕ್ಯಾಲೆಂಡರ್ ಪ್ರಕಾರ ಅಶ್ವಿನ್ ಪೂರ್ಣಿಮೆಯಂದು ಜನಿಸಿದರು ಎಂದು ಹೇಳಲಾಗುತ್ತದೆ. ಆದ್ದರಿಂದ, ಈ ದಿನವು ಸಂಸ್ಕೃತದಲ್ಲಿ ರಾಮಾಯಣವನ್ನು ರಚಿಸಿದ ಮಹರ್ಷಿ ವಾಲ್ಮೀಕಿಯವರ ಜನ್ಮ ದಿನವಾಗಿ ನೆನಪಿಸಿಕೊಳ್ಳಲಾಗುತ್ತದೆ. ಈ ದಿನದಂದು ವಾಲ್ಮೀಕಿಯ ಭಕ್ತರು ಯಾತ್ರೆ ಅಥವಾ ಮೆರವಣಿಗೆಗಳನ್ನು ಮಾಡುವ ಮೂಲಕ ಭಕ್ತಿಗೀತೆ ಮತ್ತು ಭಜನೆ ಮಾಡುತ್ತಾ ವಾಲ್ಮೀಕಿಯವರನ್ನು ಸ್ಮರಿಸುತ್ತಾರೆ.
ಮಹರ್ಷಿ ವಾಲ್ಮೀಕಿಯವರನ್ನು ಆದಿ ಕವಿ ಅಥವಾ ಸಂಸ್ಕೃತ ಭಾಷೆಯ ಮೊದಲ ಕವಿ ಎಂದೂ ಕರೆಯುತ್ತಾರೆ. ತ್ರೇತಾಯುಗದಲ್ಲಿ ವಾಸಿಸುತ್ತಿದ್ದ ಮಹರ್ಷಿ ವಾಲ್ಮೀಕಿ, ಶ್ರೀರಾಮನ ಕಥೆಯನ್ನು ನಾರದ ಮುನಿಯಿಂದ ಕಲಿತನೆಂದು ನಂಬಲಾಗಿದೆ ಮತ್ತು ಅವರ ಮಾರ್ಗದರ್ಶನದಲ್ಲಿ ಅವರು ರಾಮಾಯಣ ಮಹಾಕಾವ್ಯವನ್ನು ಬರೆದರು ಎಂದು ಹೇಳಲಾಗುತ್ತದೆ.
ವಾಲ್ಮೀಕಿ ಜಯಂತಿಯ ಪೂಜೆಯ ಸಮಯ
ವಾಲ್ಮೀಕಿ ಜಯಂತಿಯನ್ನು ಇಂದು 20 ನೇ ಅಕ್ಟೋಬರ್ 2021 ರಂದು ಆಚರಿಸಲಾಗುತ್ತದೆ. ವಾಲ್ಮೀಕಿ ಜಯಂತಿಯ ಪೂಜಾ ಸಮಯ ಅಕ್ಟೋಬರ್ 19, 2021 ರಂದು ಸಂಜೆ 7.03 ಕ್ಕೆ ಆರಂಭವಾಗುತ್ತದೆ ಮತ್ತು ಅಕ್ಟೋಬರ್ 20, 2021 ರಂದು ರಾತ್ರಿ 8.26 ಕ್ಕೆ ಕೊನೆಗೊಳ್ಳುತ್ತದೆ.
ಇತಿಹಾಸ
ನಾರದ ಮುನಿಯ ಮಾತುಗಳನ್ನು ಕೇಳುತ್ತಾ ತನ್ನ ತಪ್ಪುಗಳನ್ನು ತಿದ್ದಿಕೊಂಡ ರತ್ನಾಕರ ಎನ್ನುವ ವ್ಯಕ್ತಿ ಕೊನೆಗೆ ಮಹರ್ಷಿ ವಾಲ್ಮೀಕಿಯಾಗಿ ಬದಲಾಗುತ್ತಾರೆ ಎಂದು ಉಲ್ಲೇಖವಾಗಿದೆ. ನಾರದ ಮುನಿಗಳು ರಾಮನ ಹೆಸರನ್ನು ಜಪಿಸುವಂತೆ ಸೂಚಿಸಿದ್ದು, ಅಂದಿನಿಂದ ರಾಮನನ್ನು ಭಜಿಸುತ್ತಾ ತಪಸ್ವಿಯಾದರು. ವಾಲ್ಮೀಕಿ ತಪಸ್ಸಿಗೆ ಮೆಚ್ಚಿದ ಬ್ರಹ್ಮ ದೇವ ಜ್ಞಾನ ಭಂಡಾರವನ್ನು ವರವಾಗಿ ನೀಡುತ್ತಾನೆ ಎಂದು ಹೇಳಲಾಗುತ್ತದೆ. ಕೊನೆಗೆ ಹಿಂದೂ ಧರ್ಮದ ಪವಿತ್ರ ಮಹಾಕಾವ್ಯ ರಾಮಾಯಣ ಬರೆದು ವಾಲ್ಮೀಕಿ ಮನ್ನಣೆಯನ್ನು ಪಡೆಯುತ್ತಾರೆ.
ಮಹತ್ವ
ಮಹರ್ಷಿ ವಾಲ್ಮೀಕಿ ಜಯಂತಿಯಂದು ಅನೇಕ ಧಾರ್ಮಿಕ ಕಾರ್ಯಗಳನ್ನು ನಡೆಸಲಾಗುತ್ತದೆ. ವಾಲ್ಮೀಕಿ, ರಾಮ ಸೀತೆಯನ್ನು ಕಾಡಿಗೆ ಕಳುಹಿಸಿದಾಗ ಆಶ್ರಯ ನೀಡಿದ್ದಾರೆ ಎಂದು ಹೇಳಲಾಗುತ್ತದೆ. ವಾಲ್ಮೀಕಿ ಅವರ ಆಶ್ರಮದಲ್ಲಿಯೇ ಸೀತೆ ವಾಸವಾಗಿದ್ದು, ಲವ, ಕುಶ ಕೂಡ ಇಲ್ಲಿಯೇ ಜನಿಸುತ್ತಾರೆ. ಅಲ್ಲದೇ ವಾಲ್ಮೀಕಿ ವಿಶ್ವದ ಮೊದಲ ಶ್ಲೋಕ ರಚಿಸಿದ್ದಾರೆ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದ್ದಾರೆ. ಈ ಎಲ್ಲಾ ಕಾರಣದಿಂದಾಗಿ ಮಹರ್ಷಿ ವಾಲ್ಮೀಕಿ ಜಯಂತಿ ವಿಶೇಷ ಮಹತ್ವ ಪಡೆದಿದೆ.
ವಾಲ್ಮೀಕಿ ಜಯಂತಿ: ಸಂದೇಶಗಳು
1. ಧರ್ಮದ ಮಾರ್ಗದಲ್ಲಿ ನಡೆಯುವವರೆಲ್ಲರೂ ತಮ್ಮ ಕರ್ಮದಲ್ಲಿ ಎಂದಿಗೂ ತಪ್ಪು ಮಾಡುವುದಿಲ್ಲ. ಅವರು ಶ್ರೀರಾಮನ ಆಶೀರ್ವಾದವನ್ನು ಗಳಿಸುತ್ತಾರೆ ಮತ್ತು ಸಂತೋಷದ ಜೀವನವನ್ನು ನಡೆಸುತ್ತಾರೆ.
2. ನಮ್ಮ ಕ್ರಿಯೆಗಳು ನಮ್ಮ ಪಾತ್ರ ಮತ್ತು ನಮ್ಮ ಜೀವನವನ್ನು ರೂಪಿಸುತ್ತವೆ. ಆ ಮೂಲಕ ನಮ್ಮ ಬದುಕನ್ನು ಉತ್ತಮವಾಗಿಡಲು ಅವಕಾಶ ಕಲ್ಪಿಸುತ್ತದೆ.
3. ನಾವು ಒಳ್ಳೆಯವರಾಗಿ ಅಥವಾ ಕೆಟ್ಟವರಾಗಿ ಹುಟ್ಟಿಲ್ಲ ಎಂಬುವುದನ್ನು ವಾಲ್ಮೀಕಿಯ ಜೀವನವು ನಮಗೆ ಕಲಿಸುತ್ತದೆ. ನಮ್ಮ ಶ್ರೇಷ್ಠತೆಯನ್ನು ನಿರ್ಧರಿಸುವುದು ನಮ್ಮ ಕಾರ್ಯಗಳು.
ಇದನ್ನೂ ಓದಿ:
World Ozone Day 2021: ವಿಶ್ವ ಓಜೋನ್ ದಿನ: ಇತಿಹಾಸ, ಮಹತ್ವದ ಜತೆಗೆ ಈ ವರ್ಷ ಥೀಮ್ ಏನು ಗೊತ್ತಾ?
Narasimha Jayanti 2021: ನರಸಿಂಹ ಜಯಂತಿಯ ಮಹತ್ವ, ಶುಭ ಮುಹೂರ್ತ ಮತ್ತು ಪೂಜೆಯ ಸಮಯ
Published On - 10:19 am, Wed, 20 October 21