Narasimha Jayanti 2021: ನರಸಿಂಹ ಜಯಂತಿಯ ಮಹತ್ವ, ಶುಭ ಮುಹೂರ್ತ ಮತ್ತು ಪೂಜೆಯ ಸಮಯ

ಅರ್ಧ ಮನುಷ್ಯ ಮತ್ತು ಅರ್ಧ ಸಿಂಹನ ಅವತಾರದಲ್ಲಿ ಭಗವಾನ್​ ವಿಷ್ಣುವು ನರಸಿಂಹನಾಗಿ ಅವತಾರ ಪಡೆಯುತ್ತಾನೆ. ಈ ದಿನವನ್ನು ನರಸಿಂಹ ಜಯಂತಿ ಎಂದು ಆಚರಿಸಲಾಗುತ್ತದೆ.

Narasimha Jayanti 2021: ನರಸಿಂಹ ಜಯಂತಿಯ ಮಹತ್ವ, ಶುಭ ಮುಹೂರ್ತ ಮತ್ತು ಪೂಜೆಯ ಸಮಯ
Narasimha jayanti 2021
Follow us
shruti hegde
|

Updated on:May 25, 2021 | 10:01 AM

ನರಸಿಂಹ ಜಯಂತಿ ಆಚರಣೆಯನ್ನು ಇಂದು(ಮೇ 25) ಆಚರಿಸಲಾಗುತ್ತಿದೆ. ಪೂರ್ಣಿಮೆಗೆ ಒಂದು ದಿನ ಮೊದಲು ಶುಕ್ಲ ಪಕ್ಷದ ವೈಶಾಖ ಚತುರ್ಥಿಯಂದು ಆಚರಿಸಲಾಗುತ್ತದೆ. ಜಗತ್ತನ್ನು ರಕ್ಷಿಸಲು ಮತ್ತು ತನ್ನ ಭಕ್ತರನ್ನು ಕಾಪಾಡಲು ವಿಷ್ಣುವು 10 ರೂಪಗಳಲ್ಲಿ ಕಾಣಿಸಿಕೊಂಡಿದ್ದಾನೆ ಎಂಬುದನ್ನು ಪುರಾಣ ತಿಳಿಸುತ್ತದೆ. ಅವುಗಳಲ್ಲಿ ವಿಷ್ಣುವಿನ ನಾಲ್ಕನೇ ಅವತಾರ ನರಸಿಂಹನ ಅವತಾರವಾಗಿದೆ. ನರಸಿಂಹನ ಅವತಾರವನ್ನು ನಾವು ಪುರಾಣಗಳಲ್ಲಿ ತಿಳಿದುಕೊಳ್ಳಬಹುದು. ಅರ್ಧ ಮನುಷ್ಯ ಮತ್ತು ಅರ್ಧ ಸಿಂಹನ ಅವತಾರದಲ್ಲಿ ಭಗವಾನ್​ ವಿಷ್ಣುವು ನರಸಿಂಹನಾಗಿ ಅವತಾರ ಪಡೆಯುತ್ತಾನೆ. ಈ ದಿನವನ್ನು ನರಸಿಂಹ ಜಯಂತಿ ಎಂದು ಆಚರಿಸಲಾಗುತ್ತದೆ.

ಪುರಾಣ ಅಸುರರಾಜ ಹಿರಣ್ಯಕಶ್ಯಪು ತನ್ನನ್ನು ದೇವರು ಎಂದು ಭಾವಿಸಿ, ತಾನು ಹೇಳಿದಂತೆಯೇ ಕೇಳಬೇಕು, ನನ್ನನ್ನೇ ಆರಾಧಿಸಬೇಕು ಎಂದು ಪ್ರಜೆಗಳಿಗೆ ಹಿಂಸೆ ಕೊಡುತ್ತಿರುತ್ತಾನೆ. ಆದರೆ ಆತನ ಪುತ್ರ ಪ್ರಹ್ಲಾದ ವಿಷ್ಣುವಿನ ಭಕ್ತನಾದ್ದರಿಂದ ಎಂದಿಗೂ ತನ್ನ ತಂದೆಯ ಮಾತನ್ನು ಕೇಳದೇ ವಿಷ್ಣು ದೇವನನ್ನು ಪೂಜಿಸುತ್ತಿರುತ್ತಾನೆ. ಈ ಕಾರಣದಿಂದ ತನ್ನ ಮಗನನ್ನೇ ಹತ್ಯೆಗೈಯಲು ಯತ್ನಿಸುತ್ತಾನೆ. ಆದರೆ ವಿಷ್ಣುವಿನ ಮೇಲಿನ ಭಕ್ತಿಯು ಪ್ರಹ್ಲಾದನನ್ನು ರಕ್ಷಿಸುತ್ತದೆ. ದೇವರು ಎಲ್ಲೆಲ್ಲೂ ಇದ್ದಾನೆ ಎಂದು ಪ್ರಹ್ಲಾದ ತನ್ನ ತಂದೆ ಹಿರಣ್ಯಕಶ್ಯಪುವಿನಲ್ಲಿ ಕೇಳಿದಾಗ ಈ ಕಂಬದಲ್ಲಿದ್ದಾನೆಯೇ? ಎಂದು ಸಿಟ್ಟಿನಿಂದ ಕಂಬಕ್ಕೆ ಹೊಡೆಯುತ್ತಾನೆ. ಕಂಬದಿಂದ ನರಸಿಂಹನ ಅವತಾರದಲ್ಲಿ ಕಾಣಿಸಿಕೊಂಡ ವಿಷ್ಣುವು ತನ್ನ ಭಕ್ತ ಪ್ರಹ್ಲಾದನನ್ನು ರಕ್ಷಿಸುತ್ತಾನೆ. ಈ ದಿನ ವೈಶಾಖ ತಿಂಗಳ ಶುಕ್ಲ ಪಕ್ಷದ ಚತುರ್ಥಿಯ ದಿನವಾದ್ದರಿಂದ ಈ ದಿನದಂದು ನರಸಿಂಹ ಜಯಂತಿಯನ್ನು ಆಚರಿಸಲಾಗುತ್ತದೆ.

ಪೂಜಾ ಸಮಯ ನರಸಿಂಹ ಜಯಂತಿಯನ್ನು ಇಂದು ಸಂಜೆ 4:26 ರಿಂದ 07:11ರವರೆಗೆ ಆಚರಿಸಲಾಗುತ್ತದೆ. ಅಂದರೆ ದಿನದ ಸಾಯಂಕಾಲ ಪೂಜೆ ನೆರವೇರಿಸಲಾಗುತ್ತದೆ. ಚತುರ್ಥಿ ತಿಥಿ ಮೇ 25ರ ಬೆಳಿಗ್ಗೆ 12:11ಕ್ಕೆ ಪ್ರಾರಂಭವಾಗಲಿದ್ದು, ರಾತ್ರಿ 08:29ಕ್ಕೆ ಕೊನೆಗೊಳ್ಳುತ್ತದೆ. ಹಾಗೆಯೇ ಸಂಕಲ್ಪ ತಿಥಿ ಬೆಳಿಗ್ಗೆ 10:56ರಿಂದ ಮಧ್ಯಾಹ್ನ 01:41ರವರೆಗೆ ಇರುತ್ತದೆ.

ಆಚರಣೆ ನರಸಿಂಹ ಚತುರ್ಥಿ ಅಂಗವಾಗಿ ಭಕ್ತರು ಉಪವಾಸ ಕೈಗೊಳ್ಳುತ್ತಾರೆ. ಜತೆಗೆ ಮಧ್ಯಾಹ್ನದ ಸಮಯದಲ್ಲಿ ನರಸಿಂಹನ ಭಜನೆ ಮಾಡುವ ಮೂಲಕ ಪೂಜೆ ನೆವೇರಿಸುತ್ತಾರೆ. ಜೀವನಪೂರ್ತಿ ವಿಜಯವನ್ನೇ ಸಾಧಿಸಬೇಕು ಎಂಬ ಬೇಡಿಕೆಯೊಂದಿಗೆ ನರಸಿಂಹನಲ್ಲಿ ಭಕ್ತಿಯಿಂದ ಬೇಡಿಕೊಳ್ಳುತ್ತಾರೆ. ಮತ್ತು ಸಂಕಲ್ಪ(ಪ್ರತಿಜ್ಞೆ) ಮಾಡುವ ಮೂಲಕ ಬೇಡಿಕೆಯನ್ನು ನರಸಿಂಹನ ಮುಂದಿಡುವ ಆಚರಣೆ ಇಂದಿನವರೆಗೂ ನಡೆದುಕೊಂಡು ಬಂದಿದೆ.

ಬೆಳಿಗ್ಗೆ ಬೇಗ ಎದ್ದು ಬ್ರಹ್ಮ ಮುಹೂರ್ತ ಕಾಲದಲ್ಲಿ ಸ್ನಾನ ಮಾಡಿ, ಮಡಿ ವಸ್ತ್ರ(ಶುಭ್ರ ವಸ್ತ್ರ) ಧರಿಸಿ, ನರಸಿಂಹನ ವಿಗ್ರಹದ ಮುಂದೆ ಪೂಜೆ ಸಲ್ಲಿಸಲಾಗುತ್ತದೆ. ನರಸಿಂಹನಿಗೆ ಅರ್ಪಿಸಲು ನೈವೇದ್ಯಕ್ಕಾಗಿ ಸಿಹಿತಿಂಡಿಗಳನ್ನು ಮಾಡಲಾಗುತ್ತದೆ. ಜತೆಗೆ ಪೂಜಾ ಸಮಯದಲ್ಲಿ ಶ್ರೀಗಂಧವನ್ನು ನರಸಿಂಹನಿಗೆ ಹಚ್ಚಿ, ಹೂವುಗಳಿಂದ ಅಲಂಕರಿಸಿ ತೆಂಗಿನ ಕಾಯಿ ಒಡೆದು ಪೂಜೆಯನ್ನು ನೆರವೇರಿಸಲಾಗುತ್ತದೆ. ಕೆಲವರು ಈ ವಿಶೇಷ ಆಚರಣೆಯ ಅಂಗವಾಗಿ ತಮ್ಮ ಕೈಯಲ್ಲಾದಷ್ಟು ದಾನ ಧರ್ಮ ಮಾಡಿ ತಮ್ಮ ಜೀವನದ ಯಶಸ್ಸಿಗಾಗಿ ನರಸಿಂಹನಲ್ಲಿ ಬೇಡಿಕೊಳ್ಳುತ್ತಾರೆ.

ಇದನ್ನೂ ಓದಿ:  Paytm Mall Flagship Fest Sale 2021: ಪೇಟಿಎಂ ಮಾಲ್ ಹಬ್ಬದ ಮಾರಾಟದಲ್ಲಿ ಪ್ರೀಮಿಯಂ ಮೊಬೈಲ್​ ಫೋನ್​ಗಳು ಸಸ್ತಾ

Radhe Collection: ಈದ್ ಹಬ್ಬದಂದು ಸಲ್ಲುಗೆ ಸಿಹಿ; ರಾಧೆ ಚಿತ್ರದಿಂದ ಸಲ್ಮಾನ್ ಖಾನ್ ಗಳಿಸಿದ್ದೆಷ್ಟು?

Published On - 9:59 am, Tue, 25 May 21

New Year Party: ಕೋರಮಂಗಲದಲ್ಲಿ ಮದ್ಯದ ಮತ್ತಲ್ಲಿ ತೂರಾಡಿದ ಯುವಕ ಯುವತಿಯರು
New Year Party: ಕೋರಮಂಗಲದಲ್ಲಿ ಮದ್ಯದ ಮತ್ತಲ್ಲಿ ತೂರಾಡಿದ ಯುವಕ ಯುವತಿಯರು
ಹೊಸ ವರ್ಷಾಚರಣೆಗೆ ಮೈಸೂರಿನಲ್ಲಿ ಯುವತಿಯರ ಮಸ್ತ್ ಡ್ಯಾನ್ಸ್: ವಿಡಿಯೋ ನೋಡಿ
ಹೊಸ ವರ್ಷಾಚರಣೆಗೆ ಮೈಸೂರಿನಲ್ಲಿ ಯುವತಿಯರ ಮಸ್ತ್ ಡ್ಯಾನ್ಸ್: ವಿಡಿಯೋ ನೋಡಿ
ಮೂರು ತಿಂಗಳು ದೂರ ಇದ್ದ ಅಕ್ಕನ ಮರೆತ ತಮ್ಮ; ಮೋಕ್ಷಿತಾ ಕಣ್ಣೀರು ನೋಡಿ
ಮೂರು ತಿಂಗಳು ದೂರ ಇದ್ದ ಅಕ್ಕನ ಮರೆತ ತಮ್ಮ; ಮೋಕ್ಷಿತಾ ಕಣ್ಣೀರು ನೋಡಿ
ಹೊಸ ವರ್ಷದ ಮೊದಲ ದಿನ ಹೇಗಿದೆ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ಹೊಸ ವರ್ಷದ ಮೊದಲ ದಿನ ಹೇಗಿದೆ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ವೇಳೆ ಅಸಭ್ಯ ವರ್ತನೆ: ಜನರಿಂದ ಧರ್ಮದೇಟು
ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ವೇಳೆ ಅಸಭ್ಯ ವರ್ತನೆ: ಜನರಿಂದ ಧರ್ಮದೇಟು
ಗುಡ್​ಬೈ 2024: ವೆಲ್​ಕಮ್​ 2025, ಜನರ ಜೋಶ್ ನೋಡಿ
ಗುಡ್​ಬೈ 2024: ವೆಲ್​ಕಮ್​ 2025, ಜನರ ಜೋಶ್ ನೋಡಿ
ಹೊಸ ವರ್ಷಾಚರಣೆ: ಜಗಮಗಿಸುವ ವಾತಾವರಣದಲ್ಲಿ ಕಿಕ್ಕಿರಿದು ಸೇರಿದ ಜನಸಾಗರ
ಹೊಸ ವರ್ಷಾಚರಣೆ: ಜಗಮಗಿಸುವ ವಾತಾವರಣದಲ್ಲಿ ಕಿಕ್ಕಿರಿದು ಸೇರಿದ ಜನಸಾಗರ
ಕಾನೂನಿನ ಚೌಕಟ್ಟಿನಲ್ಲಿ ಹೊಸ ವರ್ಷಾಚರಣೆ ಮಾಡಿ; ಪೊಲೀಸ್ ಕಮಿಷನರ್ ಮನವಿ
ಕಾನೂನಿನ ಚೌಕಟ್ಟಿನಲ್ಲಿ ಹೊಸ ವರ್ಷಾಚರಣೆ ಮಾಡಿ; ಪೊಲೀಸ್ ಕಮಿಷನರ್ ಮನವಿ
ದೇಗುಲದಲ್ಲಿ ಭಕ್ತನಂತೆ ಕೈ ಮುಗಿದು ಕುಳಿತು ಆಂಜನೇಯನ ಕಿರೀಟವನ್ನೇ ಕದ್ದ ಕಳ್ಳ
ದೇಗುಲದಲ್ಲಿ ಭಕ್ತನಂತೆ ಕೈ ಮುಗಿದು ಕುಳಿತು ಆಂಜನೇಯನ ಕಿರೀಟವನ್ನೇ ಕದ್ದ ಕಳ್ಳ
ಹೊಸವರ್ಷದ ಆಗಮನಕ್ಕಾಗಿ ಎಲ್ಲೆಡೆ ಶುರುವಾಗಿದೆ ಕ್ಷಣಗಣನೆ
ಹೊಸವರ್ಷದ ಆಗಮನಕ್ಕಾಗಿ ಎಲ್ಲೆಡೆ ಶುರುವಾಗಿದೆ ಕ್ಷಣಗಣನೆ