Radhe Collection: ಈದ್ ಹಬ್ಬದಂದು ಸಲ್ಲುಗೆ ಸಿಹಿ; ರಾಧೆ ಚಿತ್ರದಿಂದ ಸಲ್ಮಾನ್ ಖಾನ್ ಗಳಿಸಿದ್ದೆಷ್ಟು?

Radhe Box Office Collection: ಕೊವಿಡ್​ ಹೆಚ್ಚುತ್ತಿರುವದರಿಂದ ದೇಶದ ಸಾಕಷ್ಟು ರಾಜ್ಯಗಳು ಲಾಕ್​ಡೌನ್​ ಘೋಷಣೆ ಮಾಡಿವೆ. ಹೀಗಾಗಿ, ದೇಶದ ಬಹುತೇಕ ಚಿತ್ರಮಂದಿರಗಳು ಮುಚ್ಚಿವೆ. ಈ ಕಾರಣಕ್ಕೆ ಒಟಿಟಿಯಲ್ಲಿ ಸಿನಿಮಾ ರಿಲೀಸ್​ ಮಾಡುವ ನಿರ್ಧಾರವನ್ನು ‘ರಾಧೆ’ ಚಿತ್ರತಂಡ ತೆಗೆದುಕೊಂಡಿತ್ತು.

Radhe Collection: ಈದ್ ಹಬ್ಬದಂದು ಸಲ್ಲುಗೆ ಸಿಹಿ; ರಾಧೆ ಚಿತ್ರದಿಂದ ಸಲ್ಮಾನ್ ಖಾನ್ ಗಳಿಸಿದ್ದೆಷ್ಟು?
ಸಲ್ಮಾನ್​ ಖಾನ್​
Follow us
ರಾಜೇಶ್ ದುಗ್ಗುಮನೆ
|

Updated on: May 21, 2021 | 5:50 PM

ಸಲ್ಮಾನ್​ ಖಾನ್​ ನಟನೆಯ ‘ರಾಧೆ: ಯುವರ್​ ಮೋಸ್ಟ್​ ವಾಂಟೆಡ್​ ಭಾಯ್​’ ಸಿನಿಮಾ ಜೀ5 ಒಡೆತನದ ಜೀ ಪ್ಲೆಕ್ಸ್​ನಲ್ಲಿ ರಿಲೀಸ್​ ಆಗಿತ್ತು. 249 ರೂಪಾಯಿ ಕೊಟ್ಟು ಈ ಸಿನಿಮಾ ವೀಕ್ಷಣೆ ಮಾಡುವ ಅವಕಾಶವನ್ನು ಮಾಡಿಕೊಡಲಾಗಿತ್ತು. ಈ ಸಿನಿಮಾ ಒಟಿಟಿಯಲ್ಲಿ ರಿಲೀಸ್​ ಆದರೂ ಒಳ್ಳೆಯ ಗಳಿಕೆ ಮಾಡಿದೆ. ಅಷ್ಟೇ ಅಲ್ಲ, ರಾಧೆ ಸಿನಿಮಾದಿಂದ ಚಿತ್ರತಂಡ ದೊಡ್ಡ ಮೊತ್ತದ ಕಮಾಯಿ ಮಾಡಿದೆ.

ಕೊವಿಡ್​ ಹೆಚ್ಚುತ್ತಿರುವದರಿಂದ ದೇಶದ ಸಾಕಷ್ಟು ರಾಜ್ಯಗಳು ಲಾಕ್​ಡೌನ್​ ಘೋಷಣೆ ಮಾಡಿವೆ. ಹೀಗಾಗಿ, ದೇಶದ ಬಹುತೇಕ ಚಿತ್ರಮಂದಿರಗಳು ಮುಚ್ಚಿವೆ. ಈ ಕಾರಣಕ್ಕೆ ಒಟಿಟಿಯಲ್ಲಿ ಸಿನಿಮಾ ರಿಲೀಸ್​ ಮಾಡುವ ನಿರ್ಧಾರವನ್ನು ‘ರಾಧೆ’ ಚಿತ್ರತಂಡ ತೆಗೆದುಕೊಂಡಿತ್ತು. ಚಿತ್ರಮಂದಿರದ ಜತೆಗೆ ಜೀ5 ಒಡೆತನದ ಜೀ ಪ್ಲೆಕ್ಸ್​​ನಲ್ಲೂ ‘ರಾಧೆ ರಿಲೀಸ್​ ಆಗಿತ್ತು. ರಿಲೀಸ್​ ಆದ ಒಂದೇ ದಿನಕ್ಕೆ ಈ ಸಿನಿಮಾ 42 ಲಕ್ಷ ಬಾರೀ ವೀಕ್ಷಣೆ ಕಂಡಿದೆ.

ಒಂದು ಬಾರಿ ಸಿನಿಮಾ ವೀಕ್ಷಿಸಬೇಕು ಎಂದರೆ 249 ರೂಪಾಯಿ ನೀಡಬೇಕು. ಅಂದರೆ, ಈ ಸಿನಿಮಾ ಮೊದಲ ದಿನ ಗಳಿಕೆ ಮಾಡಿದ್ದು 108 ಕೋಟಿ ರೂಪಾಯಿ! ನಂತರದ ಕೆಲ ದಿನವೂ ರಾಧೆ ಸಿನಿಮಾ ಹವಾ ಜೋರಿದ್ದರಿಂದ ಈ ಚಿತ್ರ ಒಳ್ಳೆಯ ಗಳಿಕೆಯನ್ನು ಮಾಡಿದೆ ಎನ್ನಲಾಗುತ್ತಿದೆ.

ರಾಧೆ ಸಿನಿಮಾದ ಬಜೆಟ್​ 80 ಕೋಟಿ ರೂಪಾಯಿ. ದೊಡ್ಡ ಮೊತ್ತದಲ್ಲಿ ಸಿದ್ಧವಾದ ಈ ಸಿನಿಮಾ ಸಾಕಷ್ಟು ಅದ್ಧೂರಿಯಾಗಿ ಮೂಡಿ ಬಂದಿತ್ತು. ಆದರೆ, ಪ್ರೇಕ್ಷಕರಿಗೆ ಚಿತ್ರ ಅಷ್ಟಾಗಿ ಇಷ್ಟವಾಗಿಲ್ಲ. ಈ ಸಿನಿಮಾವನ್ನು ಜೀ ಕಂಪೆನಿಯವರು ಬರೋಬ್ಬರಿ 190 ಕೋಟಿಗೆ ಖರೀದಿ ಮಾಡಿದ್ದಾರೆ ಎನ್ನಲಾಗಿದೆ. ಅಂದರೆ, ಈ ಚಿತ್ರದಿಂದ ಚಿತ್ರತಂಡಕ್ಕೆ 110 ಕೋಟಿ ರೂಪಾಯಿ ಲಾಭವಾಗಿದೆ.

ಸಲ್ಮಾನ್​ ಖಾನ್​ ನಟನೆಯ ಸಿನಿಮಾಗಳು ಮೊದಲ ದಿನ ಬಾಕ್ಸ್​ ಆಫೀಸ್​ನಲ್ಲಿ ಒಳ್ಳೆಯ ಗಳಿಕೆ ಮಾಡುತ್ತವೆ. ಆದರೆ, ಒಟಿಟಿಯಲ್ಲಿ ಈ ಚಿತ್ರ ಮೊದಲ ದಿನವೇ 100 ಕೋಟಿಗೂ ಹೆಚ್ಚಿನ ಕಲೆಕ್ಷನ್​ ಮಾಡಿ ಹೊಸ ದಾಖಲೆ ಸೃಷ್ಟಿಸಿದೆ.

‘ರಾಧೆ’ ಚಿತ್ರ ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ಪಡೆದಿಲ್ಲ. ಐಎಂಡಿಬಿ ‘ರಾಧೆ’ ಚಿತ್ರಕ್ಕೆ 10 ಅಂಕಕ್ಕೆ ಕೇವಲ 2.4 ರೇಟಿಂಗ್​ ನೀಡಿದೆ. ಇದರಿಂದ ಸಲ್ಮಾನ್​ ವೃತ್ತಿ ಜೀವನದ ಎರಡನೇ ಅತ್ಯಂತ ಕೆಟ್ಟ ಸಿನಿಮಾ ಎಂಬ ಹಣೆಪಟ್ಟಿ ‘ರಾಧೆ’ಗೆ ಸಿಕ್ಕಿದೆ. ರೇಸ್​ 3 ಚಿತ್ರಕ್ಕೆ ಐಎಂಡಿಬಿ 1.9 ರೇಟಿಂಗ್​ ನೀಡಿತ್ತು. ಇದು ಸಲ್ಲು ವೃತ್ತಿ ಜೀವನದ ಅತ್ಯಂತ ಕಳಪೆ ಚಿತ್ರವಾಗಿತ್ತು.

ಇದನ್ನೂ ಓದಿ: ಲಾಕ್​ಡೌನ್​ ನಿಯಮ ಮೀರಿದ್ರೆ ರಾಧೆ ಚಿತ್ರವನ್ನು ಪದೇಪದೇ ತೋರಿಸಲಾಗುತ್ತದೆ; ಬೆಂಗಳೂರು ಸಿಟಿ ಪೊಲೀಸ್​ ಹೀಗೆ ಟ್ವೀಟ್​ ಮಾಡಿದ್ದು ನಿಜವೇ?

ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ